ಹುಡುಗಿ ಡುಮ್ಮಿ ಬೇಡ ಅನ್ನೋ ನೀವು, ಮದ್ವೆಯಾದ್ಮೇಲೆ ಹೆಂಡ್ತಿ ಊದಿಕೊಂಡ್ರೆ ಬಿಟ್ಟು ಬಿಡ್ತೀರಾ?

ಹುಡುಗಿ ದಪ್ಪ, ಹುಡುಗಿ ಸಣ್ಣ, ಬೆಳ್ಳಗಿದ್ದಾಳೆ, ಕಪ್ಪಗಿದ್ದಾಳೆ ಅಂತ ಬಾಡಿ ಶೇಮಿಂಗ್ ಮಾಡುವವರ ಸಂಖ್ಯೆ ಸಾಕಷ್ಟಿದೆ. ಜೀ ಕನ್ನಡದ ಅಣ್ಣಯ್ಯ ಸೀರಿಯಲ್ ನಲ್ಲಿ ಪಾರ್ವತಿ ಅಂಥವರಿಗೆ ಕಿವಿ ಮಾತು ಹೇಳಿದ್ದಾಳೆ. 
 

Annayya Serial Parvati gives advice to those who body Shaming roo

ಜೀ ಕನ್ನಡ (Zee Kannada) ದಲ್ಲಿ ಪ್ರಸಾರವಾಗ್ತಿರುವ ಅಣ್ಣಯ್ಯ ಸೀರಿಯಲ್ (Annayya Serial) ಅಭಿಮಾನಿಗಳ ಮನಸ್ಸು ಕದಿಯುತ್ತಿದೆ. ಮೊದಲು ಶಿವು ಮತ್ತು ಪಾರ್ವತಿ ಮದುವೆ ಈಗ ಅಣ್ಣಯ್ಯನ ತಂಗಿಯರ ಮದುವೆ ವೀಕ್ಷಕರಿಗೆ ಸಾಕಷ್ಟು ಮಾಹಿತಿ ರವಾನೆ ಮಾಡ್ತಿದೆ. ಹೆಣ್ಣು ನೋಡಲು ಬಂದವರಿಗೆ ಪಾರ್ವತಿ ಬುದ್ಧಿವಾದ ಹೇಳಿದ್ದಾಳೆ. ಬಾಡಿ ಶೇಮಿಂಗ್ (Body Shaming) ಮಾಡುವ ಜನರಿಗೆ ಮಾತಲ್ಲೇ ಚುರುಕು ಮುಟ್ಟಿಸಿದ್ದಾಳೆ ಪಾರ್ವತಿ. ಆಕೆ ಮಾತು ಕೇವಲ ಸೀರಿಯಲ್ ಗೆ ಸೀಮಿತವಾಗಿಲ್ಲ, ಹುಡುಗಿ ದಪ್ಪ, ಹುಡುಗಿ ತೆಳ್ಳಗಿದ್ದಾಳೆ ಎಂಬ ಕಾರಣ ಹೇಳಿ ಮದುವೆ ಮುರಿದುಕೊಳ್ಳುವ ಪ್ರತಿಯೊಬ್ಬರೂ ಪಾರ್ವತಿ ಮಾತನ್ನು ಕೇಳುವ ಹಾಗೂ ಅದರ ಒಳಾರ್ಥವನ್ನು ಅರಿತುಕೊಳ್ಳುವ ಅವಶ್ಯಕತೆ ಇದೆ.

ರತ್ನಗೆ ಹೆಣ್ಣು ನೋಡುವ ಶಾಸ್ತ್ರ ನಡೆಯಬೇಕಿತ್ತು. ಆದ್ರೆ ಮೊದಲನೇಯ ಹುಡುಗಿ ರತ್ನ ಬೇಡ ಎನ್ನುತ್ತಿದ್ದಂತೆ ಗುಂಡಮ್ಮ ರಶ್ಮಿಯನ್ನು ಗಂಡಿಗೆ ತೋರಿಸುವ ಶಾಸ್ತ್ರ ನಡೆಯುತ್ತದೆ. ಈ ವೇಳೆ ಸುಂದರವಾಗಿರುವ ಹುಡುಗನಿಗೆ, ದಪ್ಪಗಿರುವ ಹುಡುಗಿ ತೋರಿಸ್ತಿದ್ದೀರಲ್ಲ ಎಂದು ಹುಡುಗನ ಪಾಲಕರು ಬಾಡಿ ಶೇಮಿಂಗ್ ಮಾಡ್ತಾರೆ. ಆರಂಭದಲ್ಲಿ ರತ್ನ ಇದನ್ನು ವಿರೋಧಿಸ್ತಾಳೆ. ನಂತ್ರ ಪಾರ್ವತಿ ಸರದಿ. ಯಾವುದಕ್ಕೂ ಭಯಗೊಳ್ಳದ ಪಾರ್ವತಿ, ಹುಡುಗನ ಕಡೆಯವರಿಗೆ ಬಾಡಿಂಗ್ ಶೇಮಿಂಗ್ ಮಾಡ್ಬೇಡಿ ಎಂದು ವಿನಂತಿ ಮಾಡ್ತಾಳೆ. ಹಾಗೆಯೇ ಇದಕ್ಕೆ ಕಾರಣ ಹಾಗೂ ಪರಿಣಾಮಗಳ ಬಗ್ಗೆ ಮಾಹಿತಿ ನೀಡ್ತಾಳೆ. 

ಸೀರಿಯಲ್ ವಿಷ್ಯ ಅಲ್ಲ, ಸೀರಿಯಸ್ ವಿಷ್ಯ ಎನ್ನುತ್ತಾ ಪ್ರೀತಿಸುವ ಹುಡುಗಿಯ ಗುಟ್ಟು ಬಿಚ್ಚಿಟ್ಟ ಅಣ್ಣಯ್ಯ 

ಮನುಷ್ಯನ ದೇಹದಲ್ಲಿ ಹಾರ್ಮೋನ್ ಇರುತ್ತೆ ಎಂದು ಮಾತು ಶುರು ಮಾಡುವ ಪಾರ್ವತಿ, ದೇಹದಲ್ಲಾಗುವ ಬದಲಾವಣೆಯನ್ನು ವಿವರವಾಗಿ ಹೇಳಿದ್ದಾಳೆ. ಹಾರ್ಮೋನ್ ಏರುಪೇರಿನಿಂದ ಅನೇಕರು ದಪ್ಪಗಾಗ್ತಾರೆ. ಥೈರಾಯ್ಡ್, ಪಿಸಿಒಎಸ್, ಜೆನೆಟಿಕ್, ಆಹಾರ ಪದಾರ್ಥ, ಮೆಡಿಸಿನ್  ಹೀಗೆ ನಾನಾ ಕಾರಣಗಳಿಂದ ಮನುಷ್ಯ ದಪ್ಪಗೆ, ತೆಳ್ಳಗೆ ಆಗ್ತಾರೆ. ಸಣ್ಣಗಿದ್ರೆ, ಈ ವ್ಯಕ್ತಿ ಆಹಾರ ತಿನ್ನಲ್ಲ, ಖಾಯಿಲೆ ಬಂದಿದೆ ಎನ್ನುತ್ತಾರೆ. ದಪ್ಪ ಇದ್ರೆ ತಿಂದು ತಿಂದು ದಪ್ಪಗಾಗಿದ್ದಾನೆ, ಸೋಮಾರಿ ಎನ್ನುತ್ತಾರೆ. ತಿಂದ್ರೆ ಯಾವುದೇ ವ್ಯಕ್ತಿ ದಪ್ಪ ಆಗಲ್ಲ. ಮದುವೆ ಆದ್ಮೇಲೆ ಹುಡುಗಿಯರು ಮೂರು ಹೊತ್ತು ಕೆಲಸ ಮಾಡ್ತಾರೆ. ತಾನು ತಿಂದಿಲ್ಲ ಅಂದ್ರೂ ಮಕ್ಕಳಿಗೆ, ಮನೆಯವರಿಗೆ ತಿನ್ನಿಸ್ತಾರೆ. ಕೆಲ ಬಾರಿ ಊಟ ಸ್ಕಿಪ್ ಮಾಡ್ತಾರೆ. ಆದ್ರೂ ಅನೇಕ ಮಹಿಳೆಯರು ದಪ್ಪ ಆಗ್ತಾರೆ. ಈಗ ಹುಡುಗಿ ತೆಳ್ಳಗಿರಬೇಕು ಎನ್ನುವ ನೀವು, ಮದುವೆ ಆದ್ಮೇಲೆ ಹುಡುಗಿ ದಪ್ಪ ಆದ್ರೆ, ದಪ್ಪ ಆಗಿದ್ದಾಳೆ, ಅವಮಾನ ಅಂತ ಆಕೆಯನ್ನು ಮನೆಯಿಂದ ಹೊರಗೆ ಹಾಕ್ತೀರಾ ಎಂದು ಪಾರು ಪ್ರಶ್ನೆ ಮಾಡಿದ್ದಾಳೆ. 

ಮನೆ ಕಟ್ಟುವಾಗ ಗೋಡೆ ದಪ್ಪಗಿರಬೇಕು, ಹುಡುಗನಿಗೆ ಹಾಕುವ ಬಂಗಾರದ ಸರ ದಪ್ಪ ಇರಬೇಕು, ಮಾರುಕಟ್ಟೆಯಿಂದ ತರುವ ಎಲ್ಲ ಹಣ್ಣು ತರಕಾರಿ ದಪ್ಪಗಿರಬೇಕು. ತೆಂಗಿನ ಕಾಯಿ ದಪ್ಪಗಿರಬೇಕು. ಆದ್ರೆ ಯಾವುದೇ ಕಾರಣಕ್ಕೂ ಮದುವೆ ಹೆಣ್ಣು ದಪ್ಪಗಿರಬಾರದು. ಇದು ಯಾವ ನ್ಯಾಯ. ಕೂದಲು ಬೆಳ್ಳಗಿದೆ, ಕೂದಲಿಲ್ಲ, ನೋಡಲು ಸಣ್ಣ, ದಪ್ಪ, ಕಪ್ಪು ಹೀಗೆ ನಾನಾ ಕಾರಣ ಹೇಳಿ ಬಾಡಿ ಶೇಮಿಂಗ್ ಮಾಡ್ಬೇಡಿ ಎಂದು ಪಾರು ಎಲ್ಲರ ಮುಂದೆ ವಿನಂತಿ ಮಾಡ್ಕೊಂಡಿದ್ದಾಳೆ.

ಒಂದು ನಿಮಿಷವೂ ಯೋಚಿಸದೇ ತಲೆ ಬೋಳಿಸಿದ ರಾಮಾಚಾರಿ ಚಾರುಲತಾ; ಫೋಟೋ ವೈರಲ್

ಪಾರ್ವತಿ ಈ ಬಾಡಿ ಶೇಮಿಂಗ್ ವಿಷ್ಯ ವೀಕ್ಷಕರಿಗೆ ಇಷ್ಟವಾಗಿದೆ. ಮದುವೆ ಆದ್ಮೇಲೆ ದಪ್ಪಗಾದ್ರೆ ಅವರನ್ನು ಬಿಟ್ಟು ಬಿಡ್ತೀರಾ ಎಂಬ ಪಾರು ಮಾತನ್ನು ವೀಕ್ಷಕರು ಮೆಚ್ಚಿದ್ದಾರೆ. ನಿಮ್ಮ ಮಾತು ನೂರಕ್ಕೆ ನೂರು ಸತ್ಯ. ಒಳ್ಳೆಯ ಸಂದೇಶ ನೀಡಿದ್ದೀರಿ, ಬಾಡಿ ಶೇಮಿಂಗ್ ಮಾಡೋರು ಉದ್ಧಾರ ಆಗಿಲ್ಲ. ಕೊನೆಯಲ್ಲಿ ಅವರೇ ತೊಂದರೆಗೆ ಸಿಕ್ಕಿಕೊಳ್ತಾರೆ ಎಂದು ವೀಕ್ಷಕರು ಕಮೆಂಟ್ ಮಾಡಿದ್ದಾರೆ.
 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Latest Videos
Follow Us:
Download App:
  • android
  • ios