"ಕರಿಮಣಿ"ಯಲ್ಲಿ ಪ್ರಸನ್ನನೇ ಬ್ಲ್ಯಾಕ್‌ರೋಜ್ ಎಂದು ಕರ್ಣನಿಗೆ ತಿಳಿದಿದೆ. ಸಾಹಿತ್ಯಗೂ ಅರುಂಧತಿಯೇ ಬ್ಲ್ಯಾಕ್‌ರೋಜ್ ಎಂಬ ಸತ್ಯ ತಿಳಿಯಲಿದೆ. "ನಿನಗಾಗಿ"ಯಲ್ಲಿ ಜೀವನ ನಿಜವಾದ ಗುರುತು ಸಂಜೀವ್ ಎಂದು ಬಹಿರಂಗವಾಗಿದೆ. ತಂದೆಯ ಆಸೆ ಈಡೇರಿಸಲು ರಚನಾ ಜೊತೆ ಹೊಸ ಹಾದಿ ಹಿಡಿದಿದ್ದಾನೆ. ಶ್ರೀನಿವಾಸ ಪ್ರಭು, ಪ್ರದೀಪ್ ಮತ್ತೆ ಕಿರುತೆರೆಗೆ ಮರಳಿದ್ದಾರೆ.
'ಕರಿಮಣಿ' ಹಾಗೂ ʼನಿನಗಾಗಿʼ ಧಾರಾವಾಹಿಯಲ್ಲಿ ಈಗ ರೋಚಕ ತಿರುವು ಸಿಕ್ಕಿದೆ. ʼಕರಿಮಣಿʼ ಧಾರಾವಾಹಿಯಲ್ಲಿ ಬ್ಲ್ಯಾಕ್ ರೋಜ್ ಯಾರು ಎನ್ನೋದು ರಿವೀಲ್ ಆಗಿದ್ರೂ ಕೂಡ, ಮನೆಯವರಿಗೆ ಯಾರಿಗೂ ಗೊತ್ತಾಗಿರಲಿಲ್ಲ. ಈಗ ಸಾಹಿತ್ಯ ಕರ್ಣನಿಗೆ ಭಯಾನಕ ವಿಷಯಗಳು ಗೊತ್ತಾಗಿದೆ.
ಈಗ ಧಾರಾವಾಹಿ ಕಥೆ ಎಲ್ಲಿಗೆ ಬಂತು?
ಬ್ಲ್ಯಾಕ್‌ರೋಜ್‌ನಿಂದ ಕರ್ಣನಿಗೆ, ಸಾಹಿತ್ಯಗೆ ತುಂಬ ತೊಂದರೆ ಆಗಿತ್ತು. ನನ್ನ ಕುಟುಂಬಕ್ಕೆ ತೊಂದರೆ ಕೊಡ್ತಿರೋರು ಯಾರು ಅಂತ ಕರ್ಣ ಹುಡುಕಾಟದಲ್ಲಿದ್ದನು. ಈಗ ಕರ್ಣನಿಗೆ ತನ್ನ ಮನೆಯಲ್ಲಿರುವ ಪ್ರಸನ್ನ ಬಾವನೇ ಬ್ಲ್ಯಾಕ್‌ರೋಜ್ ಎನ್ನೋದು ಗೊತ್ತಾಗಿದೆ. ಈಗ ಅವನು ಏನು ಮಾಡ್ತಾನೆ ಅಂತ ಕಾದು ನೋಡಬೇಕಿದೆ. ಇನ್ನೊಂದು ಕಡೆ ರಾಧಾ ಮೇಡಂನಿಂದ ಬ್ಲ್ಯಾಕ್‌ರೋಜ್ ಹಾಗೂ ಅವಳು ಒಂದೇ ಎನ್ನೋದು ಗೊತ್ತಾಗಿದೆ. ಈಗ ಸಾಹಿತ್ಯ ಸತ್ಯದ ಹುಡುಕಾಟದಲ್ಲಿದ್ದಾಳೆ. ಅವಳು ಏನು ಮಾಡ್ತಾಳೆ ಅಂತ ಕಾದು ನೋಡಬೇಕಿದೆ.
ಮುಂದೆ ಏನಾಗುವುದು?
ಒಟ್ಟಿನಲ್ಲಿ ಸಾಹಿತ್ಯಗೂ ಕೂಡ ತನ್ನ ಅತ್ತೆ ಅರುಂಧತಿಯೇ ಬ್ಲ್ಯಾಕ್‌ರೋಜ್ ಎನ್ನೋದು ಗೊತ್ತಾಗುವುದು. ಆಗ ಅವಳು ಏನು ಮಾಡ್ತಾಳೆ. ಅರುಂಧತಿಯನ್ನು ದೇವಿ ಎನ್ನೋ ಥರ ಕರ್ಣ ಪೂಜೆ ಮಾಡ್ತಿದ್ದಾನೆ. ಈಗ ಅವಳ ಅಸಲಿ ವಿಷಯ ಗೊತ್ತಾದರೆ ನಂಬುತ್ತಾನಾ ಎನ್ನುವ ಪ್ರಶ್ನೆ ಇದೆ. ಇದರಿಂದ ಕರ್ಣ ಮತ್ತು ಸಾಹಿತ್ಯ ಜೀವನದಲ್ಲಿ, ಸಂಬಂಧಗಳಲ್ಲಿ ಏನೆಲ್ಲ ಬದಲಾವಣೆಗಳು ಆಗಲಿವೆ ಎನ್ನುವುದು ಆಸಕ್ತಿಕರ ವಿಷಯವಾಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ವಾರದ ಏಳೂ ದಿವಸ ಪ್ರತಿ ಸಂಜೆ 6ಕ್ಕೆ 'ಕರಿಮಣಿ' ಧಾರಾವಾಹಿ ಪ್ರಸಾರ ಆಗುವುದು.
ಪಾತ್ರಧಾರಿಗಳು
ಕರ್ಣ ಪಾತ್ರದಲ್ಲಿ ಅಶ್ವಿನ್ ಎಚ್, ಸಾಹಿತ್ಯ ಪಾತ್ರದಲ್ಲಿ ಸ್ಪಂದನಾ ಸೋಮಣ್ಣ, ಅರುಂಧತಿ ಪಾತ್ರದಲ್ಲಿ ಅನುಷಾ ಹೆಗಡೆ ಅವರು ನಟಿಸುತ್ತಿದ್ದಾರೆ.
'ನಿನಗಾಗಿ' ಧಾರಾವಾಹಿಯಲ್ಲಿ ಇಷ್ಟುದಿನದ ಕಥೆಯೇ ಬೇರೆ, ಇನ್ನು ಮುಂದೆ ನಡೆಯುವ ಕಥೆಯೇ ಬೇರೆ. ಇಷ್ಟುದಿನ ಫುಡ್ ಟ್ರಕ್ ನಡೆಸುತ್ತಿದ್ದ ಜೀವ ಈಗ ಸಂಜೀವ ಎನ್ನೋದು ಎಲ್ಲರಿಗೂ ಗೊತ್ತಾಗಿದೆ. ಆಗರ್ಭ ಶ್ರೀಮಂತ ಜಗದೀಶ್ ಚಂದ್ರ ಅವರ ಹಿರಿಯ ಮಗ ಸಂಜೀವ್ ಯಾಕೆ ಎಲ್ಲರಿಂದ ದೂರ ಆಗಿ ಬಡವನ ಥರ ಜೀವನ ಮಾಡುತ್ತಿದ್ದಾನೆ? ಅವನ ಬದುಕಿನಲ್ಲಿ ಏನೆಲ್ಲ ನಡೆದಿದೆ? ಇನ್ನು ಮುಂದಿನ ದಿನಗಳಲ್ಲಿ ಮಲಸಹೋದರನ ಜೊತೆ ಅವನು ಹೇಗೆ ಹೋರಾಡ್ತಾನೆ ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.
ಸದ್ಯ ರಿಲೀಸ್ ಆಗುವ ಪ್ರೋಮೋ ನೋಡಿದಾಗ ಧಾರಾವಾಹಿ ಬೇರೊಂದು ಹೊಸ ಕತೆಯನ್ನು ಹೇಳುತ್ತಿದೆಯೇನೋ ಅನ್ನುವಂತೆ ಭಾಸವಾಗುತ್ತದೆ. ಇದುವರೆಗೆ ಜೀವಾ - ರಚನಾ - ವಜ್ರೇಶ್ವರಿ ಕತೆಯನ್ನು ಹೇಳುತ್ತಿದ್ದ 'ನಿನಗಾಗಿ' ಹೊಸತೊಂದು ಮಾರ್ಗ ಹಿಡಿದಂತೆ ಅನ್ನಿಸುವುದು. ಜೀವನ ತಂದೆ ಶ್ರೀಮಂತ ಆಭರಣದ ವ್ಯಾಪಾರಿಯಾಗಿದ್ದು ಆ ಕುಟುಂಬದ ಕತೆಯನ್ನು ಇದು ಹೇಳುತ್ತಿದೆ. ಪ್ರೋಮೋದಲ್ಲಿ ಜೀವಾ ತನ್ನ ತಂದೆಯ ಆಸೆಯನ್ನು ಈಡೇರಿಸುವ ಶಪಥ ಮಾಡುತ್ತಿರುವಾಗ ರಚನಾ ಕೂಡಾ ಜೊತೆಯಾಗುತ್ತಾಳೆ.
ಹೀಗೆ ಅವರಿಬ್ಬರ ಹೊಸ ಪ್ರಪಂಚ, ಹೊಸ ಸವಾಲುಗಳ ಸಾಧ್ಯತೆಯನ್ನು ಪ್ರೋಮೋ ಹೇಳುತ್ತಿದೆ. ಕುತೂಹಲದ ವಿಷಯವೆಂದರೆ ನಟ ಶ್ರೀನಿವಾಸ ಪ್ರಭು ಬಹಳ ದಿನಗಳ ನಂತರ ಜೀವನ ತಂದೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೆಯೇ, 'ಇಂಡಿಯನ್' ರಿಯಾಲಿಟಿ ಶೋ ಮತ್ತು 'ಮೇಘ ಮಯೂರಿ' ಧಾರಾವಾಹಿಯಲ್ಲಿ ಮಿಂಚಿದ್ದ ಪ್ರದೀಪ ಅವರು 'ನಿನಗಾಗಿ' ಧಾರಾವಾಹಿಯಿಂದ ಮತ್ತೆ ಕಿರುತೆರೆಗೆ ಮರಳಿದ್ದಾರೆ. ವಾರದ ಏಳೂ ದಿನ ಪ್ರತಿರಾತ್ರಿ ಎಂಟು ಗಂಟೆಗೆ 'ನಿನಗಾಗಿ' ಧಾರಾವಾಹಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತದೆ.
ಪಾತ್ರಧಾರಿಗಳು
ಜೀವ ಪಾತ್ರದಲ್ಲಿ ರಿತ್ವಿಕ್ ಮಠದ್, ರಚನಾ ಪಾತ್ರದಲ್ಲಿ ದಿವ್ಯಾ ಉರುಡುಗ, ಕೃಷ್ಣ ಪಾತ್ರದಲ್ಲಿ ಸಿರಿ ಸಿಂಚನಾ ನಟಿಸುತ್ತಿದ್ದಾರೆ.


