ಕರಿಮಣಿ ಧಾರಾವಾಹಿಯ ತುಣುಕೊಂದು ವೈರಲ್ ಆಗಿದ್ದು, ಪತ್ನಿ ದೆವ್ವದ ರೂಪದಲ್ಲಿ ಕಾಣಿಸಿಕೊಂಡು ಗಂಡನಿಗೆ ಬೆದರಿಕೆ ಹಾಕುವುದನ್ನು ತೋರಿಸುತ್ತದೆ. ಹೆಂಡತಿಯ ಬೇಡಿಕೆಗಳನ್ನು ಈಡೇರಿಸದ ಗಂಡಂದಿರಿಗೆ ಎಚ್ಚರಿಕೆ ಎಂಬಂತೆ ಈ ವಿಡಿಯೋ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಕೆಲವರು ತಮಾಷೆಯೆಂದರೆ, ಇನ್ನು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.

ಇನ್ನು ಗಂಡ- ಹೆಂಡತಿಯ ಸಂಬಂಧದ ಕುರಿತು ಮಾಡುವ ಜೋಕ್ಸ್​, ಮೀಮ್ಸ್​ಗಳಿಗೆ ಲೆಕ್ಕವೇ ಇಲ್ಲ. ಅದರಲ್ಲಿಯೂ ಹೆಚ್ಚಾಗಿ ಹೆಂಡತಿಯರ ಮೇಲಿನ ಜೋಕ್ಸ್​ಗಳೇ ಹೆಚ್ಚು ಎಂದರೂ ತಪ್ಪಾಗಲಿಕ್ಕಿಲ್ಲ. ದಂಪತಿ ನಡುವಿನ ಜೋಕ್ಸ್​ಗಳನ್ನು ಯಾರೂ ಹೆಚ್ಚಾಗಿ ಸೀರಿಯಸ್​ ತೆಗೆದುಕೊಳ್ಳದೇ ತಮ್ಮ ಮನೆಯಲ್ಲಿಯೂ ಹೀಗೆಯೇ ಎಂದು ಅಂದುಕೊಳ್ಳುವವರೇ ಹೆಚ್ಚು. ಅದಕ್ಕಾಗಿಯೇ ಇವುಗಳ ಜೋಕ್ಸ್​, ಮೀಮ್ಸ್​ಗಳು ಸಕತ್​ ವೈರಲ್​ ಆಗುತ್ತವೆ. ಇದೀಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ. ಇದು ಕಲರ್ಸ್ ಕನ್ನಡದ ಕರಿಮಣಿ ಸೀರಿಯಲ್​ನ ತುಣುಕು. ಆದರೆ ಇದಕ್ಕೆ ಹೆಂಡ್ತಿ ಏನಾದ್ರೂ ಕೇಳಿದ್ರೆ ಈ ತಿಂಗಳು ಆಗಲ್ಲ ಅನ್ನೋ ಗಂಡಂದಿರು ನೋಡಬೇಕಾದ ವಿಡಿಯೋ ಇದು ಎನ್ನುವ ಶೀರ್ಷಿಕೆ ನೀಡಲಾಗಿದೆ.

ಅಷ್ಟಕ್ಕೂ ಇದರಲ್ಲಿ ಪತ್ನಿ, ದೆವ್ವದ ರೂಪದಲ್ಲಿ ನಾಯಕನಿಗೆ ಕಾಣಿಸಿಕೊಳ್ಳುತ್ತಾಳೆ. ಅದನ್ನು ನೋಡಿ ನಾಯಕ ದಂಗು ಬಡಿದು ಹೋಗುತ್ತಾನೆ. ಹೇಳಿದ್ದನ್ನು ಕೊಡಿಸಿಲ್ಲ ಎಂದರೆ, ಹೆಂಡತಿ ಈ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ ಎನ್ನುವ ತಮಾಷೆಯಾಗಿ ಇದನ್ನು ತಿಳಿಸಲಾಗಿದೆ. ಗಂಡ ಹೆಂಡತಿಯ ಅವತಾರವನ್ನು ನೋಡಿ ಕೈಮುಗಿದು ಬೇಡಿಕೊಳ್ಳುತ್ತಾನೆ. ಇದು ತಮಾಷೆ ಎನ್ನಿಸಿದರೂ ಕೆಲವರು ನಮ್ಮ ಮನೆಯಲ್ಲಿಯೂ ಇದೇ ಸ್ಥಿತಿ ಎಂದು ಬರೆದಿದ್ದರೆ, ಮತ್ತೆ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆಭರಣ ಹೇಳಿದಾಗಲೆಲ್ಲಾ ಕೊಡಿಸಲು ಅದೇನು ತರಕಾರಿನಾ ಎಂದು ಕೆಲವರು ಪ್ರಶ್ನಿಸಿದ್ದರೆ, ನನ್ನ ಹೆಂಡ್ತಿ ಹೀಗೇನಾದ್ರೂ ಮಾಡಿದ್ರೆ ಬಾರಿಸಿ ತವರಿಗೆ ಕಳಿಸ್ತೇನೆ ಎಂದು ಮತ್ತೊಬ್ಬರು ಕಮೆಂಟ್​ ಮಾಡಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಹಲ್​ಚಲ್​ ಸೃಷ್ಟಿಸುತ್ತಿದೆ. 

ಗರ್ಭಿಣಿಯಾದ್ರೂ ಹೊಟ್ಟೆ ಬರಿಸಿಕೊಳ್ಳದೇ ಮಗು ಮಾಡಿಕೊಳ್ಳಲು ಸಾಧ್ಯನಾ? ಸಾಧ್ಯ ಅಂತಿದ್ದಾರೆ ಈ ನಟಿಯರು!

ಇನ್ನು ಈ ಸೀರಿಯಲ್​ ಕುರಿತು ಹೇಳುವುದಾದರೆ, ಈ ಧಾರಾವಾಹಿಯಲ್ಲಿ ಪ್ರೀತಿ, ದ್ರೋಹ ಮತ್ತು ಆಳವಾಗಿ ಬೇರೂರಿರುವ ಸಂಪ್ರದಾಯಗಳು ಹೆಣೆದುಕೊಂಡಿರುವ ಮೋಹಕ ಪ್ರಯಾಣವಿದೆ. ನಾಯಕಿ ಸಾಹಿತ್ಯ ತಾಯಿ ಇಲ್ಲದ ತಬ್ಬಲಿ. ಆದರೆ, ಭವಿಷ್ಯದ ಕನಸು ಹೊತ್ತಿದ್ದಾಳೆ. ಆಗರ್ಭ ಶ್ರೀಮಂತ ಕರ್ಣ, ಸಾಹಿತ್ಯ ಭೇಟಿಯಾದಾಗ ಅವಳ ಜೀವನ ಕುತೂಹಲದ ತಿರುವು ಪಡೆಯುತ್ತದೆ. ಅನಿರೀಕ್ಷಿತವಾಗಿ ಹಚ್ಚಿದ ಕಿಡಿಯಿಂದ ಸಾಹಿತ್ಯ ಬದುಕು ಸಂಪೂರ್ಣ ಬದಲಾಗುತ್ತದೆ. ಅಷ್ಟೇ ಅಲ್ಲದೆ ಕೆಲವೊಂದು ರಹಸ್ಯ ವಿಚಾರಗಳು ಹೊರಬೀಳುತ್ತವೆ. ಇದರಿಂದಲೇ ಧಾರಾವಾಹಿಯ ಕಥೆಯ ಎಳೆಗಳು ತೆರೆದುಕೊಳ್ಳಲು ಶುರುವಾಗುತ್ತವೆ. ತನ್ನ ಸ್ನೇಹಿತನ ಬದುಕನ್ನು ಉಳಿಸಬೇಕು ಅಂತ ಕರ್ಣ ಗಟ್ಟಿ ಮನಸ್ಸು ಮಾಡುತ್ತಾನೆ. ಆದರೆ ಅವನು ಸಾಹಿತ್ಯಾಳೇ ತನ್ನ ಸ್ನೇಹಿತನಿಗೆ ಮೋಸ ಮಾಡಿದ್ದು ಅಂತ ಕರ್ಣ ತಪ್ಪು ತಿಳಿದುಕೊಂಡಿದ್ದನು. ಹೀಗಾಗಿ ಸಾಹಿತ್ಯ ಮದುವೆಯ ದಿನದಂದು “ನಮ್ಮಿಬ್ಬರಿಗೂ ಮದುವೆ ಆಗಿದೆ, ವಿಚ್ಛೇದನ ಪತ್ರಕ್ಕೆ ಸಹಿ ಹಾಕು” ಅಂತ ಹೇಳುತ್ತಾನೆ. ಈ ಮಾತಿನಿಂದ ಸಾಹಿತ್ಯ ಬದುಕು ಬದಲಾಗುತ್ತದೆ.

ಸಾಹಿತ್ಯ ಪಾತ್ರದಲ್ಲಿ ಸ್ಪಂದನಾ ಸೋಮಣ್ಣ ನಟಿಸಿದ್ದಾರೆ. ಕರ್ಣ ಪಾತ್ರಕ್ಕೆ ಅಶ್ವಿನಿ ಯಾದವ್ ಜೀವ ತುಂಬಿದ್ದಾರೆ. ಕರ್ಣನ ಮುಂದೆ ಮುಖಾಮುಖಿಯಾದ ಸಾಹಿತ್ಯ ಅವನು ನಿಜಕ್ಕೂ ಏನು? ಅವನ ಕುಟುಂಬ ಹೇಗಿದೆ? ಅವನ ಕುಟುಂಬದಲ್ಲಿ ಇರುವ ಸಮಸ್ಯೆ ಏನು? ಕರ್ಣ ಯಾಕೆ ಹೀಗಿದ್ದಾನೆ ಎನ್ನೋದನ್ನು ಕೂಡ ಅರಿತುಕೊಳ್ಳುತ್ತಾಳೆ. ಸುಚೇಂದ್ರ ಪ್ರಸಾದ್ ಅವರು ಸಾಹಿತ್ಯಳ ತಂದೆ ವಿಶ್ವನಾಥ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವಿಶ್ವನಾಥ್‌ಗೆ ತಮ್ಮ ಮಗಳ ಸಂತೋಷವೇ ಮುಖ್ಯ. ಅನುಷಾ ರಾವ್ ಅವರು ಕರ್ಣನ ಮಲತಾಯಿ ಅರುಂಧತಿಯಾಗಿ ಮಿಂಚುತ್ತಿದ್ದಾರೆ. ಇದರ ಜೊತೆಗೆ ಇನ್ನೂ ದೊಡ್ಡ ತಾರಾಗಣ ಈ ಧಾರಾವಾಹಿಯಲ್ಲಿದೆ.

ಜಯಂತೂ ಅಲ್ಲ, ವಿಶ್ವನೂ ಅಲ್ಲ... ರುದ್ರನ ಜೊತೆ ಲಕ್ಷ್ಮೀ ನಿವಾಸ ಚಿನ್ನುಮರಿ ರೊಮಾನ್ಸ್​!

View post on Instagram