Physical Attraction, ಪ್ರೀತಿ, ಮದುವೆ ಬಗ್ಗೆ ಬೋಲ್ಡ್ ಹೇಳಿಕೆ ಕೊಟ್ಟ ನಟಿ ಪಾಯಲ್

ಲವ್, ಅಟ್ರ್ಯಾಕ್ಷನ್ ಮತ್ತು ಮದುವೆ ಬಗ್ಗೆ ಬೋಲ್ಡ್‌ ಆಗಿ ಮಾತನಾಡಿದ ಪಾಯಲ್ ಮತ್ತು ಸಂಗ್ರಾಮ ಸಿಂಗ್....

Bollywood Payal Rohatgi Sangram Singh talks about love desire marriage vcs

ಹಿಂದಿ ಕಿರುತೆರೆ ಜನಪ್ರಿಯ ಜೋಡಿ ಪಾಯಲ್ ರೋಹಟಗಿ ಮತ್ತು ಸಂಗ್ರಾಮ್ ಸಿಂಗ್ ಜುಲೈ 9ರಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಪ್ರೀತಿ, ದೈಹಿಕ ಆಕರ್ಷಣೆ, ಆಸೆ ಮತ್ತು ಮದುವೆ ಬಗ್ಗೆ ಸಖತ್ ಬೋಲ್ಡ್‌ ಆಗಿ ಮಾತನಾಡಿದ್ದಾರೆ. ಅಲ್ಲದೆ ಭಾವಿ ಪತಿ ಆಗುವವರಿಗೆ ಕಾಫಿ ಮತ್ತು ಟೀ ಮಾಡಲು ಬರುವುದಿಲ್ಲ ಎಂದು ಕಂಪ್ಲೇಂಟ್‌ ಹೇಳಿದ್ದಾರೆ. 

ಅಟ್ರ್ಯಾಕ್ಷನ್:

'ಸರ್ವೈವರ್‌' ಸಮಯದಲ್ಲಿ ನಾನು ಸಂಗ್ರಾಮ್‌ಗೆ ಅಟ್ರ್ಯಾಕ್ಷನ್ ಆದೆ. ಮರಳಿನ ಮೇಲೆ ನಾವಿಬ್ಬರು ಮಲಗಿಕೊಂಡಿದ್ದೆವು. ಆಗ ನಾನು ನಿದ್ರೆ ಮಾಡಲು ಅವರನ್ನು ಹಿಡಿದುಕೊಳ್ಳಬೇಕು. ಅವರು ನನ್ನ ಪಕ್ಕ ಇದ್ದರೆ ಒಳ್ಳೆ ನಿದ್ರೆ ಬರುತ್ತದೆ, ಇಲ್ಲದಿದ್ದರೆ ನಿದ್ರೆ ಬರುವುದಿಲ್ಲ' ಎಂದು ಪಾಯಲ್ ಇಟೈಮ್ಸ್‌ ಸಂದರ್ಶನದಲ್ಲಿ ಮಾತನಾಡಿದ್ದಾರೆ.

'ದಕ್ಷಿಣ ಭಾರತೀಯ ಸಿನಿಮಾಗಳ ಕಮಾಲ್, ಹೆದರಿದೆ ಬಾಲಿವುಡ್?'

'ಆಗ್ರಾ-ಮಥುರಾ ಹೆದ್ದಾರಿಯಲ್ಲಿ ನಾನು ಪಾಯಲ್‌ನ ಮೊದಲು ಭೇಟಿ ಮಾಡಿದ್ದು, ನಾನು ಅಟ್ರ್ಯಾಕ್ಟ್‌ ಆಗಿರಲಿಲ್ಲ. ಆಗ ನಾನು ಆಕೆಯನ್ನು ಅಷ್ಟು ಕ್ಲಿಯರ್ ಆಗಿ ನೋಡಿರಲಿಲ್ಲ. ಓಡೋಡಿ ಕಾರಿನಲ್ಲಿ ಕುಳಿತುಕೊಳ್ಳುತ್ತಿದ್ದರು. ಸರ್ವೈವರ್‌ನಿಂದ ನನಗೆ ಆಕೆ ಇಷ್ಟವಾದಳು. ನಾನು ಲೈಫ್‌ ಪಾರ್ಟನರ್‌ ಪ್ರಾಮಾಣಿಕ ವ್ಯಕ್ತಿ ಆಗಿರಬೇಕು ಎಂದು ಹುಡುಕುತ್ತಿದ್ದೆ. ಸರಿಯಾದ ಸಮಯಕ್ಕೆ ಪಾಯಲ್ ಸಿಕ್ಕಳು. ದಿನ ಕಳೆಯುತ್ತಿದ್ದಂತೆ ಪಾಯಲ್‌ಗೆ ನನ್ನ ಹೃದಯ ಕೊಟ್ಟೆ. ಆಕೆಯ ಹುಚ್ಚುತನ ಇಷ್ಟ, ಆಕೆಯಲ್ಲಿರುವ ಫಯರ್ ಇಷ್ಟ. ಲೈಫಲ್ಲಿ ಏನಾದರೂ ಸಾಧನೆ ಮಾಡಬೇಕು ಅನ್ನೋ ಗುರು ಇದೆ' ಎಂದು ಸಂಗ್ರಾಮ ಹೇಳಿದ್ದಾರೆ. 

'ನಾನು ಇದುವರೆಗೂ ಅಷ್ಟು ಸೂಕ್ಷ್ಮವಾಗಿ ಗಮನಿಸಿಲ್ಲ ಆದರೆ ಈಗ ಹೇಳಬೇಕು ಅಂದ್ರೆ ಸಂಗ್ರಾಮ್ ಅವರ ಕಣ್ಣು ಮತ್ತು ಮೈಬಣ್ಣ ನನಗೆ ತುಂಬಾ ಇಷ್ಟವಾಗುತ್ತದೆ' ಎಂದು ಪಾಯಲ್ ಹೇಳಿದರೆ 'ನನ್ನ ಕಣ್ಣುಗಳನ್ನು ನೀನು ಮೊದಲು ಹೇಳಬೇಕು ಏಕೆಂದರೆ ಅದೇ ನನ್ನ ಪರ್ಸನಾಲಿಟಿ ಹೈಲೈಟ್‌' ಎಂದಿದ್ದಾರೆ ಸಂಗ್ರಾಮ್.

ಹೂ ಹಾರ ಹಾಕಲು ಕೊರಳೊಡ್ಡದ ವಧು: ವರನ ಟ್ರಿಕ್ಸ್‌ಗೆ ಕ್ಲೀನ್‌ ಬೌಲ್ಡ್‌

'ಸಂಗ್ರಾಮ್ ಒಂದು ಚೂರು ರೊಮ್ಯಾಂಟಿಕ್ ಅಗಿಲ್ಲ. ಸೆಕ್ಸ್‌ ವಿಚಾರವಾಗಿ ನಾನು ಮಾತನಾಡುವುದಿಲ್ಲ ಆದರೆ ಸಂಗ್ರಾಮ್ ನನ್ನ ಸುತ್ತ ಇದ್ದರೆ ಅಥವಾ ಮನೆಯಲ್ಲಿ ಇದ್ದಾರೆ ಅಂತ ಗೊತ್ತಾದರೆ ಸಾಕು ನಾನು ನೆಮ್ಮದಿಯಾಗಿ ನಿದ್ರೆ ಮಾಡ್ತಿದ್ದೀನಿ' ಎಂದು ಪಾಯಲ್ ಹೇಳಿದ್ದಾರೆ.

ಪೋಷಕರ ಸಪೋರ್ಟ್:

'ನನ್ನ ಪೋಷಕರಿಗೆ ನಾನು ಸಿಂಪಲ್ ಆಗಿರುವ ಹುಡುಗಿಯರನ್ನು ಮದುವೆ ಆಗಬೇಕು ಎಂದು ಹೇಳುತ್ತಿದ್ದರು. ಹಾಗೆ ಹುಡುಕುಕೊಂಡಿದ್ದೇನೆ' ಎಂದು ಸಂಗ್ರಾಮ್ ಹೇಳಿದ್ದಾರೆ. 'ಪೋಷಕರಿಗೆ ಯಾವ ರೀತಿ ರಿಜೆಕ್ಷನ್ ಬಂದಿಲ್ಲ ನಮಗೆ. ಸಂಗ್ರಾಮ್ ಸಹೋದರಿ ನನಗೆ ತುಂಬಾನೇ ಇಷ್ಟ. ಸಂಗ್ರಾಮ್‌ ಮನೆಯಲ್ಲಿ ಕೆಲಸ ಮಾಡುತ್ತಾರೆ ಅನ್ನೋ ವಿಚಾರ ನನ್ನ ಭಾವಿ ಅತ್ತೆಗೆ ಒಪ್ಪಿಕೊಳ್ಳಲು ಆಗಲಿಲ್ಲ. ಟೀ ಮಾಡುತ್ತಾನೆ, ಮನೆ ಕೆಲಸ ಮಾಡುತ್ತಾನೆ ಎಂದು ಹೇಳುತ್ತಿರುತ್ತಾರೆ. ಇದೆಲ್ಲಾ ಪಕ್ಕಕಿಟ್ಟು ನೋಡಿದರೆ ಅವರಿಗೆ ನಾನೆಂದರೆ ಇಷ್ಟ' ಎಂದು ಪಾಯಲ್ ಹೇಳಿದ್ದಾರೆ.

ಅಡುಗೆ ವಿಚಾರ:

'ಸಂಗ್ರಾಮ್‌ಗೆ ಅಡುಗೆ ಮಾಡಲು ಬರುವುದಿಲ್ಲ. ಕಾಫಿ ಟೀ ಕೂಡ ಬರೋಲ್ಲ. ಈಗಿನ ಕಾಲದಲ್ಲಿ ಅನೇಕರು ತಮ್ಮ ಪಾರ್ಟನರ್‌ಗೆ ಕಾಫಿ ಟೀ ಮಾಡಿಕೊಡುವುದನ್ನು ನಾನು ನೋಡಿದ್ದೀನಿ. ಈಗ ಸ್ವಲ್ಪ ಬದಲಾವಣೆಗಳು ಆಗಿದೆ ಆದರೆ ಏರ್‌ಪೋರ್ಟ್‌ನಲ್ಲಿ ಪ್ರಯಾಣ ಮಾಡುವಾಗ ನನ್ನ ಕೈಯಲ್ಲಿ ಎಷ್ಟೇ ಲಗೇಜ್‌ ಇದ್ದರು ಸಹಾಯ ಮಾತ್ರ ಮಾಡುವುದಿಲ್ಲ' ಎಂದು ಪಾಯಲ್ ಕಂಪ್ಲೇಂಟ್ ಹೇಳಿದ್ದಾರೆ. 

'ಈಗೀಗ ನಾನು ಕಾಫಿ ಟೀ ಮಾಡುವುದು ಕಲಿತಿರುವೆ. ಏರ್‌ಪೋರ್ಟ್‌ ವಿಚಾರದಲ್ಲಿ ನಾನು ಹೇಳುವುದು ಒಂದೇ ದೂರ ನಡೆಯಬೇಕು ಅಂದ್ರೆ ಯಾಕೆ 5 ಇಂಚ್‌ ಹೀಲ್ಸ್‌ ಧರಿಸಬೇಕು?ಎಂದು ಸಂಗ್ರಾಮ್‌ ಉತ್ತರಿಸಿದ್ದಾರೆ.

ಮೈಸೂರಿನಲ್ಲಿ ಬೆಂಗಳೂರನ್ನು ರೀಕ್ರಿಯೇಟ್ ಮಾಡಿದ ನಿರ್ದೇಶಕಿ; ಅಶ್ವಿನಿ ಪುನೀತ್‌ರನ್ನು ಭೇಟಿ ಮಾಡಿದ್ದು ಹೀಗೆ!

ಜಗಳ:

ನಮ್ಮಿಬ್ಬರದು ಒನ್ ಸೈಡ್‌ ಜಗಳ ಎಂದು ಸಂಗ್ರಾಮ್ ಹೇಳಿದ್ದರೆ 'ಇಲ್ಲ ಇಲ್ಲ ನಮ್ಮಿಬ್ಬರ ನಡುವೆ ಜಗಳ ಆಗುತ್ತದೆ ಆಗ ಜೋರಾಗಿ ಮಾತನಾಡುತ್ತೀವಿ ಆದರೆ ನಾನು ಮರು ದಿನಕ್ಕೆ ಜಗಳ ಎಳೆಯುವುದಿಲ್ಲ ಅಲ್ಲಿಗೆ ನಿಲ್ಲಿಸುತ್ತೀನಿ. ಮಲಗುವುದಕ್ಕೂ ಮುನ್ನ ಏನೇ ಇದ್ದರೂ ಅಲ್ಲಿಗೆ ಸ್ಟಾಪ್ ಮಾಡುತ್ತೇವೆ' ಎಂದರು ಪಾಯಲ್.

Latest Videos
Follow Us:
Download App:
  • android
  • ios