ಮೈಸೂರಿನಲ್ಲಿ ಬೆಂಗಳೂರನ್ನು ರೀಕ್ರಿಯೇಟ್ ಮಾಡಿದ ನಿರ್ದೇಶಕಿ; ಅಶ್ವಿನಿ ಪುನೀತ್‌ರನ್ನು ಭೇಟಿ ಮಾಡಿದ್ದು ಹೀಗೆ!
PRK ಬ್ಯಾನರ್‌ನಲ್ಲಿ ಬರ್ತಿದೆ ಆಚಾರ್ ಆಂಡ್ ಕೋ ಸಿನಿಮಾ. ನಿರ್ದೇಶಕಿ ಸಿಂಧು ಶ್ರೀನಿವಾಸಮೂರ್ತಿ ಜರ್ನಿ ಇದು...
ಅಶ್ವಿನಿ ಪುನೀತ್ ರಾಜ್‌ಕುಮಾರ್ ನಿರ್ಮಾಣ ಮಾಡುತ್ತಿರುವ ಆಚಾರ್ ಆಂಡ್ ಕೋ ಸಿನಿಮಾವನ್ನು ಸಿಂಧು ಶ್ರೀನಿವಾಸಮೂರ್ತಿ ನಿರ್ದೇಶಕ ಮಾಡುತ್ತಿದ್ದಾರೆ.
'ಆಚಾರ್ ಆಂಡ್ ಕೋ ಸಿನಿಮಾವನ್ನು 1960ರಲ್ಲಿ ಸೆಟ್ ಮಾಡಿರುವುದ. ಸಿನಿಮಾ ಬಹುತೇಕ ಚಿತ್ರೀಕರಣ ಮುಗಿದಿದೆ ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಶುರುವಾಗಿದೆ' ಎಂದು ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಸಿಂಧು ಮಾತನಾಡಿದ್ದಾರೆ.
'ಮೈಸೂರಿನ ಕೆಲವೊಂದು ಭಾಗಗಳಲ್ಲಿ ನಾವು 1960'sನಲ್ಲಿ ಬೆಂಗಳೂರು ಹೇಗಿತ್ತು, ಹಾಗೇ ಅಲ್ಲಿ ರೀ-ಕ್ರಿಯೇಟ್ ಮಾಡಲಾಗಿದೆ. ಫಸ್ಟ್ ಲುಕ್ ಮತ್ತು ಟೀಸರ್ ರಿಲೀಸ್ ಆಗುವವರೆಗೂ ಸಿನಿಮಾದ ಬಗ್ಗೆ ಮಾಹಿತಿ ರಿವೀಲ್ ಮಾಡುವುದಿಲ್ಲ' ಎಂದು ಸಿಂಧು ಹೇಳಿದ್ದಾರೆ.
'ಸಿನಿಮಾದಲ್ಲಿ ಬಹುತೇಕರು ಹೊಸಬರು. ಸುಧಾ ಬೆಳವಾಡಿ ಮತ್ತು ನಾನು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತೀವಿ. ಕಾನನ್ ಗಿಲ್ ಜೊತೆ ಸಿನಿಮಾ ಕಥೆ ಮಾಡಲಾಗಿದೆ' ಎಂದಿದ್ದಾರೆ ಸಿಂಧು.
'ಫ್ರೆಂಚ್ ಬಿರಿಯಾನಿ ಸಿನಿಮಾ ಚಿತ್ರೀಕರಣದಲ್ಲಿ ಅಶ್ವಿನಿ ಪುನೀತ್‌ರಾಜ್‌ಕುಮಾರ್‌ರನ್ನು ಭೇಟಿ ಮಾಡಿದ್ದು. ಆಗ ಆಚಾರ್ ಆಂಡ್ ಕೋ ಸಿನಿಮಾ ಬಗ್ಗೆ ಮಾತನಾಡಿ 6 ನಿಮಿಷ ವಿಡಿಯೋ ತೋರಿಸಿದೆ'
'ಪುನೀತ್ ಸರ್ ಮತ್ತು ಅಶ್ವಿನಿ ಮೇಡಂ ಸಿನಿಮಾ ಇಷ್ಟ ಪಟ್ಟರು ಹೀಗಾಗಿ ಪಿಆರ್‌ಕೆಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ನನ್ನ ಮೊದಲ ನಿರ್ದೇಶನ ಇಲ್ಲಿಂದ ಆರಂಭವಾಗುತ್ತಿರುವುದು ಖುಷಿ ಕೊಟ್ಟಿದೆ' ಎಂದು ಸಿಂಧು ಮಾತನಾಡಿದ್ದಾರೆ.