ಹೂ ಹಾರ ಹಾಕಲು ಕೊರಳೊಡ್ಡದ ವಧು: ವರನ ಟ್ರಿಕ್ಸ್‌ಗೆ ಕ್ಲೀನ್‌ ಬೌಲ್ಡ್‌

ಹೂ ಹಾರ ಹಾಕುವ ವೇಳೆ ನೂತನ ವಧುವರರ ತುಂಟಾಟದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
 

Bride Refuses To Wear flower wreath Groom Uses Trick To Convince Her akb

ಭಾರತೀಯ  ಮದುವೆಗಳಲ್ಲಿ ಇರುವ ತಮಾಷೆಗಳಿಗೆ ಲೆಕ್ಕವೇ ಇರುವುದಿಲ್ಲ. ದಿನವೀಡಿ ನಡೆಯುವ ಹಲವು ಸಂಪ್ರದಾಯಗಳ ಜೊತೆ ಹಲವು ತಮಾಷೆಯ 
ಕ್ಷಣಗಳು ಮದುವೆಯ ದಿನವನ್ನು ಮತ್ತಷ್ಟು ಮಧುರವಾಗಿಸುತ್ತವೆ. ಹಾಗೆಯೇ ವಧು ಹಾಗೂ ವರರ ನಡುವಿನ ತುಂಟಾಟಗಳಿಗೆ ಲೆಕ್ಕವೇ ಇರುವುದಿಲ್ಲ. ನವ ಜೋಡಿಯನ್ನು ಒಂದು ಮಾಡಲು ಸೇರುವ ವಧು ಹಾಗೂ ವರ ಸ್ನೇಹಿತರು ಸಿಕ್ಕಿದ್ದೇ ಛಾನ್ಸ್‌ ಎಂದು ಇಲ್ಲದ ಕೀಟಲೆಗಳನ್ನೆಲ್ಲಾ ವಧು ವರರ ಮೇಲೆ ಪ್ರಯೋಗ ಮಾಡುತ್ತಾರೆ. ಮದುವೆಯ ಇಂತಹ ಮೋಜು ಮಸ್ತಿನಿಂದ ಕೂಡಿದ ಹಲವು ವಿಡಿಯೋಗಳನ್ನು ನಾವು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಈಗ ಅಂತಹದ್ದೇ ಮತ್ತೊಂದು ವಿಡಿಯೋ ವೈರಲ್ ಆಗಿದೆ.

ಮದುವೆಯಲ್ಲಿ ಪ್ರಮುಖ ಘಟ್ಟ ಹಾರಗಳನ್ನು ಪರಸ್ಪರ ಬದಲಾಯಿಸುವುದು. ಆದರೆ ವಧು ಹಾಗೂ ವರ ಪರಸ್ಪರ ಹಾರ ಬದಲಾಯಿಸುವ ವೇಳೆ ಸಾಕಷ್ಟು ಮೋಜು ಮಸ್ತಿ ಎಲ್ಲಾ ಮದುವೆಗಳಲ್ಲಿ ನಡೆಯುತ್ತವೆ. ಕೆಲವೊಮ್ಮ ವರ ಸಾಧಾರಣಕ್ಕಿಂತ ಎತ್ತರವಿದ್ದಾಗ ವಧು ಆತನ ಕೊರಳಿಗೆ ಹಾರ ಹಾಕಲು ಹೆಣಗಾಡುವ ವಿಡಿಯೋಗಳನ್ನು ನಾವು ನೋಡಿದ್ದೇವೆ. ಅಲ್ಲದೇ ವರನ ಸಂಬಂಧಿಗಳು ವರನನ್ನು ಇನ್ನಷ್ಟು ಮೇಲೆ ಎತ್ತರಿಸಿ ವಧುವಿನ ಕೈಗೆ ವರ ಸಿಗದಂತೆ ಮಾಡುತ್ತಾರೆ. ಹಾಗೆಯೇ ವಧು ಕೂಡ ಈ ಸಂದರ್ಭದಲ್ಲಿ ತುಂಟಾಟ ತೋರುತ್ತಾಳೆ. ವಧುವಿನ ಕಡೆಯವರು ಕೂಡ ತಮ್ಮ ಮಗಳನ್ನು ವರನ ಕೈಗೆ ಸಿಗದಷ್ಟು ಎತ್ತರಕ್ಕೆ ಎತ್ತಿ ನಿಲ್ಲಿಸಿ ಭಾವಿ ಅಳಿಯನಿಗೆ ಸಖತ್ ಆಗಿ ಕಾಡುತ್ತಾರೆ. 

Divorce Fight ಮದ್ವೆಯಾಗಿ 6 ವರ್ಷವಾದ್ರೂ ನಡೆದಿಲ್ಲ ಫಸ್ಟ್ ನೈಟ್, ಬೀದಿಜಗಳವಾದ ಸೆಲೆಬ್ರೆಟಿ ಡಿವೋರ್ಸ್!


 

ಹಾಗೆಯೇ ಈ ವಿಡಿಯೋದಲ್ಲಿ ವರ ಹಾರ ಹಾಕಲು ಬಂದಾಗ ವಧು ಆತನಿಗೆ ಕೊರಳಿಗೆ ಹಾರ ಹಾಕಲಾಗದಂತೆ ಕಾಡುತ್ತಾಳೆ. ಆದರೆ ಬುದ್ಧಿವಂತ ವರ ಸೋತು ಗೆಲ್ಲುವ ಆಟವಾಡಿ ವಧುವೇ ಬಂದು ಕೊರಳೊಡ್ಡುವಂತೆ ಮಾಡಿದ್ದಾನೆ. ವರ ಹಾಕಲು ಹೋದಾಗ ವಧು ದೂರ ದೂರ ಓಡುತ್ತಿದ್ದರೆ, ವರ ಹೂ ಹಾರ ಹಿಡಿದು ಅಲ್ಲೇ ಮಂಡಿಯೂರಿ ಕುಳಿತುಕೊಳ್ಳುತ್ತಾನೆ. ಮಂಡಿವರೆಗೆ ಬಾಗಿದ ಬಾಳ ಸಹ ಪಯಣಿಗನಿಗೆ ಇಲ್ಲ ಎಂದು ಹೇಳಲು ವಧುವಿಗಾದರೂ ಹೇಗೆ ಮನಸ್ಸು ಬರುವುದು ಹೇಳಿ? ಕೂಡಲೇ ಆಕೆ ತಲೆಬಾಗಿಸಿ ಹಾರಕ್ಕೆ ಕೊರಳೊಡ್ಡುತ್ತಾಳೆ. ಈ ವಿಡಿಯೋ ಇನ್ಸ್ಟಾಗ್ರಾಮ್‌ನಲ್ಲಿ ಸಾಕಷ್ಟು ವೈರಲ್ ಆಗಿದೆ. 

ಮದ್ವೆ ವೇಳೆ ಜಾರಿಬಿದ್ದ ವರನ ಪ್ಯಾಂಟ್: ಮುಸಿಮುಸಿ ನಕ್ಕ ವಧು: ವಿಡಿಯೋ ವೈರಲ್
ಕೆಲದಿನಗಳ ಹಿಂದೆ ಇಂತಹದ್ದೇ ಮತ್ತೊಂದು ವಿಡಿಯೋ ವೈರಲ್ ಆಗಿತ್ತು. ವಧು ಹಾರ ಹಾಕಲು ಬರುತ್ತಿದ್ದಂತೆ ವರನ ಕಡೆಯ ಹುಡುಗರು ವರನನ್ನು ಆಕೆಯ ಕೈಗೆ ಎಟುಕದಷ್ಟು ಎತ್ತರಕ್ಕೆ ಮೇಲೆತ್ತುತ್ತಾರೆ. ಆದರೆ ಆತನನ್ನು ಕೆಳಗಿಳಿಸಿ ಎಂದು ವಧು ಒಮ್ಮೆ ಕೇಳುತ್ತಾಳೆ. ಆದರೆ ಸ್ನೇಹಿತರು ಮಾತ್ರ ವರನನ್ನು ಕೆಳಗಿಳಿಸಲು ಮುಂದಾಗುವುದಿಲ್ಲ. ಆದರೆ ಇದಕ್ಕೆ ತಲೆಕೆಡಿಸಿಕೊಳ್ಳದ ವಧು ಕೆಲವು ಸೆಕೆಂಡ್‌ಗಳ ಕಾಲ ಕಾದು ಕೆಳಗಿಳಿಸದಿದ್ದರೆ ಕತ್ತೆ ಬಾಲ ಎಂಬಂತೆ ರಿಯಾಕ್ಷನ್ ನೀಡಿ ಸೀದಾ ಹೋಗಿ ಚೇರೊಂದರ ಮೇಲೆ ಕೂರುತ್ತಾಳೆ. ಈ ತಮಾಷೆಯ ಕ್ಷಣದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ವಧು ಹಾರ ಹಾಕಲು ಬರುತ್ತಿದ್ದಂತೆ ವರನ ಕಡೆಯ ಹುಡುಗರು ವರನನ್ನು ಆಕೆಯ ಕೈಗೆ ಎಟುಕದಷ್ಟು ಎತ್ತರಕ್ಕೆ ವರನನ್ನು ಮೇಲೆತ್ತುತ್ತಾರೆ. ಆದರೆ ಆತನನ್ನು ಕೆಳಗಿಳಿಸಿ ಎಂದು ವಧು ಒಮ್ಮೆ ಕೇಳುತ್ತಾಳೆ. ಆದರೆ ಸ್ನೇಹಿತರು ಮಾತ್ರ ವರನನ್ನು ಕೆಳಗಿಳಿಸಲು ಮುಂದಾಗುವುದಿಲ್ಲ. ಆದರೆ ಇದಕ್ಕೆ ತಲೆಕೆಡಿಸಿಕೊಳ್ಳದ ವಧು ಕೆಲವು ಸೆಕೆಂಡ್‌ಗಳ ಕಾಲ ಕಾದು ಕೆಳಗಿಳಿಸದಿದ್ದರೆ ಕತ್ತೆ ಬಾಲ ಎಂಬಂತೆ ರಿಯಾಕ್ಷನ್ ನೀಡಿ ಸೀದಾ ಹೋಗಿ ಚೇರೊಂದರ ಮೇಲೆ ಕೂರುತ್ತಾಳೆ. ಈ ತಮಾಷೆಯ ಕ್ಷಣದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
 

Latest Videos
Follow Us:
Download App:
  • android
  • ios