Asianet Suvarna News Asianet Suvarna News

'ದಕ್ಷಿಣ ಭಾರತೀಯ ಸಿನಿಮಾಗಳ ಕಮಾಲ್, ಹೆದರಿದೆ ಬಾಲಿವುಡ್?'

ಬಾಕ್ಸಾಫೀಸ್‌ನಲ್ಲಿ ಹಿಟ್(Box-office) ಆಗಬೇಕೆಂದರೆ ಒಳ್ಳೊಳ್ಳೆ ಸಿನಿಮಾ ಮಾಡಬೇಕು. ಜನರಿಗೆ ಇಷ್ಟವಾಗಬೇಕು. ಸೌತ್ ಇಂಡಿಯನ್ ಫಿಲ್ಮಂಗಳು(South indian film) ಹಿಟ್ ಆಗ್ತಿರೋದು ಕತೆ (script), ಮೇಕಿಂಗ್(making) ಚೆನ್ನಾಗಿರುವ ಕಾರಣಕ್ಕಾಗಿ. ಹಿಂದಿಯಲ್ಲಿ ಈ ರೀತಿಯ ಸಿನಿಮಾಗಳು ಬರ್ತಿಲ್ಲಾ. ಹಾಗಾಗಿ ಬಾಲಿವುಡ್ ಮುಚ್ಚಿಕೊಂಡು ಹೋಗುತ್ತದೆ ಎಂಬ ಭೀತಿಯಲ್ಲಿದೆ. ಅದಕ್ಕೆ ಬಾಲಿವುಡ್ ಉರ್ಕೊಂಡು ಭಾಷೆ ಮುಂದಿಟ್ಟು ಭಾರತೀಯ ಚಿತ್ರೋದ್ಯಮವನ್ನು(Indian cinima Industry) ಎರಡು ಮಾಡಲು ಹೊರಟಿರುವುದು ಸರಿಯಲ್ಲ ಎಂದು ಡೈರೆಕ್ಟರ್(director) ರೋಹಿತ್ ಶೆಟ್ಟಿ ಅಭಿಪ್ರಾಯಿಸಿದ್ದಾರೆ.

South films scared Bollywood: Rohith Shetty
Author
Bangalore, First Published May 29, 2022, 1:23 PM IST

ಒಳ್ಳೊಳ್ಳೆ ಫಿಲ್ಮಂಗಳು ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದ್ದಂತೆ ಒಂದೊAದು ಹೇಳಿಕೆ ಬರುವುದು ಸಹಜ. ಆದರೆ ಇದೀಗ್ ದಕ್ಷಿಣ ಭಾರತದ(South Indian) ಬಹುತೇಕ ಸಿನಿಮಾಗಳು ಬಾಲಿವುಡ್ ಸಿನಿಮಾಗಳನ್ನು ಹಿಂದಿಕ್ಕಿ ಅಂತರಾಷ್ಟಿçÃಯ ಮಟ್ಟದಲ್ಲಿ(International level) ಸದ್ದು ಮಾಡುತ್ತಿದೆ. ಒಂದೇ ನೆಲದವರಾಗಿ ಸಂತಸ ಪಡುವ ಬದಲು ಭಾಷೆ ವಿಷಯದಲ್ಲಿ ಸಿನಿ ಇಂಡಸ್ಟಿçಯನ್ನೇ(cinima Industry) ಎರಡು ಮಾಡುತ್ತಿರುವುದರ ಬಗ್ಗೆ ಬಾಲಿವುಡ್ ಡೈರೆಕ್ಟರ್(director) ರೋಹಿತ್ ಶೆಟ್ಟಿ ಹೇಳಿಕೆ ನೀಡಿದ್ದಾರೆ.

ಒಳ್ಳೆಯ ಸಿನಿಮಾಗಳು ಪ್ರೇಕ್ಷಕರ ಮನಸ್ಸು ಗೆದ್ದರೆ ಅದು ಬಾಕ್ಸಾಫೀಸ್ ಲೂಟಿ ಮಾಡುವುದು ಸಹಜ. ಜನಕ್ಕೆ ಯಾವ ರೀತಿಯ ಸಿನಿಮಾ ಬೇಕು ಎಂಬುದು ಸಿನಿಮಾ ಮಾಡುವವರು ಮೊದಲು ಅರ್ಥ ಮಾಡಿಕೊಳ್ಳಬೇಕು. ಅದು ಬಿಟ್ಟು ಸಾಲು ಸಿನಿಮಾಗಳು ಹಿಟ್ ಮೇಲೆ ಹಿಟ್ ಆಗಿವೆ ಎಂದು ಭಾಷೆಯ ವಿಷಯದಲ್ಲಿ ಭಾರತೀಯ ಚಿತ್ರೋದ್ಯಮವನ್ನೇ ಬೇರೆಯಾಗಿ ನೋಡುವುದು ಸರಿಯಲ್ಲ ಎಂದು ಬಾಲಿವುಡ್ ಡೈರೆಕ್ಟರ್ ರೋಹಿತ್ ಶೆಟ್ಟಿ ಹೇಳಿಕೆ ನೀಡಿದ್ದಾರೆ.

ದಕ್ಷಿಣ ಭಾರತದಲ್ಲಿ ಹಲವು ಒಳ್ಳೆಯ ಸಿನಿಮಾಗಳು ಬರುತ್ತಿವೆ. ಇದಕ್ಕೆ ಕಾರಣ ಕತೆ(script) ಮತ್ತು ಮೇಕಿಂಗ್(making). ಇದನ್ನು ಅಲ್ಲಿನ ಜನರು ಮೆಚ್ಚುತ್ತಿದ್ದಾರೆ. ಪ್ರೇಕ್ಷಕರಿಗೆ ಇಷ್ಟವಾದರೆ ಆ ಸಿನಿಮಾ ಸಕ್ಸಸ್(success) ಆಗುವುದು ಸಹಜ. ಬಾಲಿವುಡ್‌ಗೆ ಇದು ಸಹಿಸಲಾಗುತ್ತಿಲ್ಲ. ಹೊಟ್ಟೆಗೆ ಕಿಚ್ಚು ಹಚ್ಚಿದಂತಾಗಿದೆ. ಬಾಲಿವುಡ್‌ಗೆ ಕೊನೆಗಾಲದ ಸಮಯ ಎಂದೆನಿಸಿರಬೇಕು. ಅದಕ್ಕಾಗಿ ಉತ್ತರ ದಕ್ಷಿಣ ಎಂದು ಬ್ರಿಟೀಷರಂತೆ(british) ಭಾಷೆಯನ್ನಿಟ್ಟುಕೊಂಡು ತಾರತಮ್ಯ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಬ್ರಿಟಿಷರು ನಮ್ಮನ್ನು ಆಳಿದ್ದು ಒಡೆದು ಆಳುವ ನೀತಿಯಿಂದ: ಅಕ್ಷಯ್ ಕುಮಾರ್

ದಕ್ಷಿಣ ಭಾರತದಿಂದ ಹಲವು ಕಲಾವಿದರು(artists) ಬಾಲಿವುಡ್‌ಗೆ ಬಂದಿದ್ದಾರೆ. ಬಾಲಿವುಡ್ ಈ ಹಂತಕ್ಕೆ ಬಂದು ನಿಂತಿರಲು ಕಾರಣ ಅಲ್ಲಿನ ಕಲಾವಿದರು. ಕಮಲ್ ಹಾಸನ್(Kamal Hassan), ಶ್ರೀದೇವಿ, ಜಯಪ್ರದಾ ಸೇರಿದಂತೆ ಬಹುತೇಕ ನಟ ನಟಿಯರು ದಕ್ಷಿಣದಿಂದ ಬಂದು ಬಾಲಿವುಡ್‌ನ್ನು ಗೆಲ್ಲಿಸಿಕೊಟ್ಟಿದ್ದಾರೆ. ಅಲ್ಲದೆ ಅಲ್ಲಿನ ಬಹುತೇಕ ಸಿನಿಮಾಗಳು ಹಿಂದಿಗೆ ರಿಮೇಕ್(remake) ಸಹ ಮಾಡಲಾಗಿದೆ. ಇದು ಈಗಿನದ್ದಲ್ಲ, ದಶಗಳಿಂದ ನಡೆದು ಬಂದ ಕತೆಯಾಗಿದೆ ಎಂದು ಅಭಿಪ್ರಾಯಿಸಿದ್ದಾರೆ.

ಸಿನಿ ಇತಿಹಾಸವನ್ನು ಗಮನಿಸಿದರೆ 50-60ರ ದಶಕದಲ್ಲಿ ಶಶಿ ಕಪೂರ್ ನಟನೆಯ ಪ್ಯಾರ್ ಕಿಯಾ ಜಾ(Pyar kiya ja) ಚಿತ್ರವು ದಕ್ಷಿಣದಿಂದ ರಿಮೇಕ್ ಆದ ಸಿನಿಮಾ. ಹಾಗೆಯೇ 80ರ ದಶಕದಲ್ಲಿ ಕಮಲ್ ಹಾಸನ್ ಅವರು ಇಕ್ ದುಜೆ ಕೆ ಲಿಯೇ(Ek duje ke liye) ಸಿನಿಮಾ ಮಾಡಿದ್ದು ಅದು ಹಿಟ್ ಆಯಿತು. ಆಗ ಅಮಿತಾಬ್ ಬಚ್ಚನ್ ಮತ್ತು ವಿನೋದ್ ಖನ್ನಾ÷್ಹ ಸಿನಿಮಾಗಳು ಪೀಕ್‌ನಲ್ಲಿದ್ದವು(peak). 80 ಹಾಗೂ 90ರ ದಶಕದಲ್ಲಿ ಎಲ್ಲರ ಗಮನ ಸೆಳೆದಿದ್ದ ಶ್ರೀದೇವಿ ಹಾಗೂ ಜಯಪ್ರದಾ ಅವರು ತಮ್ಮ ಸಿನಿ ಜರ್ನಿ ಆರಂಭಿಸಿದ್ದು ದಕ್ಷಿಣದಿಂದ. ನಂತರ ಬಾಲಿವುಡ್ ಪ್ರವೇಶಿಸಿದವರು. ಭಾರತೀಯ ಚಿತ್ರೋದ್ಯಮಕ್ಕೆ ಸೌತ್ ಇಂಡಿಯನ್ ಸಿನಿಮಾಗಳ ಕೊಡುಗೆ(contribution) ಬಹಳಷ್ಟಿದೆ. ಈ ವಿಚಾರವನ್ನು ಬಾಲಿವುಡ್ ಮರೆಯಬಾರದು ಎಂದಿದ್ದಾರೆ.

ದಕ್ಷಿಣದ ಚಿತ್ರರಂಗಕ್ಕೆ ಅವಮಾನ: ಮೆಗಾಸ್ಟಾರ್ ಬಿಚ್ಚಿಟ್ಟ ಕಹಿ ಸತ್ಯ

ಪ್ಯಾನ್ ಇಂಡಿಯಾ(Pan India) ಹಾಗೂ ಓಟಿಟಿ(OTT) ಗಮನ ಸೆಳೆದು ಇತ್ತೀಚೆಗೆ ಯಶಸ್ಸುಕಂಡ ಆರ್‌ಆರ್‌ಆರ್(RRR), ಪುಪ್ಪಾ ದಿ ಪ್ರೆöÊಡ್(Pushpa the Rise), ಕೆಜಿಎಫ್ ಚಾಪ್ಟರ್ 2 (KGF Chapter 2) ಸಿನಿಮಾಗಳ ಕುರಿತು ರೋಹಿತ್ ಸಂತಸ ವ್ಯಕ್ತಪಡಿಸಿದ್ದಾರೆ. ರೋಹಿತ್ ಅವರ ಮುಂದಿನ ಚಿತ್ರ "ಇಂಡಿಯನ್ ಪೊಲೀಸ್ ಫೋರ್ಸ್"(Indian Police Force) ತೆರೆಗೆ ಬರಲಿದ್ದು ಇದರಲ್ಲಿ ಸಿದ್ಧಾರ್ಥ ಮಲ್ಹೋತ್ರ ನಟಿಸುತ್ತಿದ್ದಾರೆ. ಜೊತೆಗೆ ರನ್ವೀರ್ ಸಿಂಗ್ ಅಭಿನಯದ ಸರ್ಕ್ಸ್(Cirkus) ಚಿತ್ರ ಡಿಸೆಂಬರ್‌ನಲ್ಲಿ(December) ತೆರೆಕಾಣಲಿದೆ.

ಬಾಲಿವುಡ್‌ನ ಈ ನಡವಳಿಕೆ ಬಗ್ಗೆ ಅಕ್ಷಯ್ ಕುಮಾರ್, ಕರಣ್ ಜೋಹರ್, ಕನ್ನಡದ ಸುದೀಪ್, ಹಿರಿಯ ನಟ ಕಮಲ್ ಹಸನ್ ಸೇರಿ ಹಲವು ಗಣ್ಯರು ಮಾತನಾಡಿದ್ದಾರೆ.

Follow Us:
Download App:
  • android
  • ios