ಬಿಗ್ ಬಾಸ್ ಖ್ಯಾತಿಯ ನಮ್ರತಾ ಗೌಡ 'ಕರ್ಣ' ಧಾರಾವಾಹಿಯಲ್ಲಿ ನಿತ್ಯಾ ಪಾತ್ರದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ಕೂರ್ಗ್ ಶೈಲಿಯ ಸೀರೆಯುಟ್ಟು ಮಿಂಚಿರುವ ಅವರು, ತಮ್ಮ ಬದುಕಿನ ಹೊಸ ಅಧ್ಯಾಯದ ಬಗ್ಗೆ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಅಭಿಮಾನಿಗಳಲ್ಲಿ ಮದುವೆಯ ಕುತೂಹಲ ಮೂಡಿಸಿದ್ದಾರೆ.

ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಕರ್ಣ ಸೀರಿಯಲ್​ (Karna Serial )ಸಕತ್​ ಇಂಟರೆಸ್ಟಿಂಗ್​ ಆಗಿದ್ದು, ಇದು ವೀಕ್ಷಕರ ಮನಸ್ಸನ್ನು ಗೆದ್ದಿದೆ. Bigg Boss ಖ್ಯಾತಿಯ ನಮ್ರತಾ ಗೌಡ (Namruta Gowda) ಸದ್ಯ ಕರ್ಣ ಸೀರಿಯಲ್​ನಲ್ಲಿ ನಿತ್ಯಾ ಪಾತ್ರದ ಮೂಲಕ ಎಲ್ಲರನ್ನೂ ರಂಜಿಸುತ್ತಿದ್ದಾರೆ. ಆರಂಭದಲ್ಲಿ ಕರ್ಣನ ಮೇಲೆ ಕೋಪ ಮಾಡಿಕೊಳ್ಳುವ ಕಾರಣದಿಂದಾಗಿ ವೀಕ್ಷಕರಿಂದ ಸಾಕಷ್ಟು ಟ್ರೋಲ್​ಗೆ ಒಳಗಾಗಿದ್ದ ನಮ್ರತಾ ಮೇಲೆ ಈಗ ಅಭಿಮಾನಿಗಳು ಪ್ರೀತಿಯ ಧಾರೆಯನ್ನೇ ಹರಿಸುತ್ತಿದ್ದಾರೆ. ಬಿಗ್​ಬಾಸ್​ ಮೂಲಕವೇ ಫೇಮಸ್​ ಆಗಿರೊ ನಟಿ ನಮ್ರತಾ ಗೌಡ ಅವರ ಬಗ್ಗೆ ಅಭಿಮಾನಿಗಳಿಗೆ ಗೊತ್ತಿದ್ದದ್ದೇ. ನಟಿ ನಮ್ರತಾ ಗೌಡ ಹೆಸರು ಕಿರುತೆರೆ ವೀಕ್ಷಕರಿಗೆ ಚಿರಪರಿಚಿತ. ಅದರಲ್ಲಿಯೂ ಬಿಗ್​ಬಾಸ್​ ವೀಕ್ಷಕರಿಗಂತೂ ತುಂಬಾ ಹತ್ತಿರವಾಗಿದ್ದಾರೆ ನಟಿ.

ಕೂರ್ಗ್​ ಲೇಡಿ

ಇದೀಗ ಕೂರ್ಗ್​ನಲ್ಲಿ ಕಾಣಿಸಿಕೊಂಡಿರುವ ನಮ್ರತಾ ಗೌಡ, ಮಾಡರ್ನ್​ ಗರ್ಲ್​ನಿಂದ ಕೂರ್ಗ್​ ಲೇಡಿಯಾಗಿ ಮಾರ್ಪಟ್ಟಿದ್ದಾರೆ. ವಿಡಿಯೋ ಮಾಡುತ್ತಾ ಅವರು ತಾವು ಕೂರ್ಗ್​ನಲ್ಲಿ ಇದ್ದು, ಅಲ್ಲಿ ಹಬ್ಬ ನಡೆಯುತ್ತಿದೆ. ಆದ್ದರಿಂದ ನಾನೂ ಕೂರ್ಗ್​ ಸ್ಟೈಲ್​ನಲ್ಲಿ ಸೀರೆ ಉಟ್ಟುಕೊಳ್ಳುವೆ ಎಂದು, ಕ್ಯಾಮೆರಾ ಎದುರು ಮೇಕಪ್​ ಮಾಡಿಕೊಂಡಿದ್ದಾರೆ. ಬಳಿಕ ಅವರು ಕೂರ್ಗ್​ ಸ್ಟೈಲ್​ನಲ್ಲಿ ಸೀರೆ ಉಡಿಸಿಕೊಂಡು, ಚೆಂದುಳ್ಳಿ ಚೆಲುವೆಯಾಗಿ ಕಂಗೊಳಿಸುತ್ತಿದ್ದಾರೆ. ಇದರ ವಿಡಿಯೋ ಅನ್ನು ಶೇರ್​ ಮಾಡಿಕೊಂಡಿದ್ದಾರೆ.

ಬಾಲನಟಿಯಾಗಿ ಎಂಟ್ರಿ

ಇನ್ನು ನಮ್ರತಾ ಗೌಡ ಕುರಿತು ಹೇಳುವುದಾದರೆ, ಬಾಲನಟಿಯಾಗಿ ಕನ್ನಡ ಸಿನಿಮಾಗಳಲ್ಲಿ ಎಂಟ್ರಿ ಕೊಟ್ಟಿದ್ದ ನಮ್ರತಾಗೆ ಹೆಚ್ಚು ಹೆಸರು ತಂದುಕೊಟ್ಟಿದ್ದು, ಸೀರಿಯಲ್​ಗಳು. ಅದರಲ್ಲಿಯೂ ನಾಗಿಣಿ ಸೀರಿಯಲ್​ ಅವರಿಗೆ ದೊಡ್ಡ ಖ್ಯಾತಿಯನ್ನೇ ಕೊಟ್ಟಿತು. ಅದಕ್ಕಿಂತ ಅವರ ಜೀವನದಲ್ಲಿ ದೊಡ್ಡ ಬ್ರೇಕ್​ ಸಿಕ್ಕಿದ್ದು, ಬಿಗ್‌ ಬಾಸ್‌ ಕನ್ನಡ ಸೀಸನ್‌ 10. ಅಲ್ಲಿಂದ ಬಂದ ಮೇಲೆ ಒಂದಷ್ಟು ಷೋಗಳಲ್ಲಿ ಅವಕಾಶ ಸಿಕ್ಕಿತು. ಜೊತೆಗೆ ಸೋಷಿಯಲ್​ ಮೀಡಿಯಾದಲ್ಲಿಯೂ ಆ್ಯಕ್ಟೀವ್​ ಆಗಿದ್ದಾರೆ. ನಮ್ರತಾ ಗೌಡ ಅವರು ಹಲವಾರು ಸೆಲೆಬ್ರಿಟಿಗಳಂತೆಯೇ ಪುನೀತ್​ ರಾಜ್​ಕುಮಾರ್​ (Puneet Rajkumar) ಅವರ ಅಭಿಮಾನಿ ಕೂಡ. ತಮ್ಮ ಕೈಮೇಲೆ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಗೌರವ ಸಲ್ಲಿಸಿದ್ದರು.

ನಮ್ರತಾ ಗೌಡ ಗುಡ್​ನ್ಯೂಸ್​

ಇನ್ನು ನಮ್ರತಾ ಗೌಡ ಅವರು ಗುಡ್​ನ್ಯೂಸ್​ ಕೊಡೋದು ಯಾವಾಗ ಎಂದು ಫ್ಯಾನ್ಸ್​ ಕೇಳುತ್ತಲೇ ಇರುತ್ತಾರೆ. ಕೆಲವು ದಿನಗಳ ಹಿಂದೆ ನಟಿ, ಐವರಿ ಮತ್ತು ಕೆಂಪು ಬಣ್ಣದ ಜರತಾರಿ ಸೀರೆ ಧರಿಸಿ, ಕೈತುಂಬ ಬಳೆ, ಮುಡಿ ತುಂಬಾ ಹೂವು, ಜ್ಯುವೆಲ್ಲರಿ ಧರಿಸಿ ಪೋಸ್ ಕೊಟ್ಟಿದ್ದು, ಇದರ ಜೊತೆಗೆ ನಟಿ ಕೊಟ್ಟಿರುವ ಕ್ಯಾಪ್ಶನ್ ಇದೀಗ ಸದ್ದು ಮಾಡಿತ್ತು. ನಟಿಯ ಈ ಮುದ್ದಾದ ಲುಕ್, ಕೊಂಚ ನಾಚಿಕೆ ಮದುಮಗಳ ಕಳೆಯನ್ನು ಹೆಚ್ಚಿಸಿತ್ತು. ಅದಕ್ಕೆ ನಮ್ರತಾ This next chapter is called “Answered Prayers” ಎಂದು ಕ್ಯಾಪ್ಶನ್ ಕೊಟ್ಟಿದ್ದರು. ಅಂದರೆ ನಮ್ರತಾ ಕಂಡಿದ್ದ ಕನಸು ನನಸಾಗಿದೆ ಎಂದು ಅರ್ಥ. ಅವರ ಪ್ರಾರ್ಥನೆಯನ್ನು ದೇವರು ಕೇಳಿಕೊಂಡಿದ್ದಾನೆ, ಅದಕ್ಕೆ ಕೊನೆಗೂ ಉತ್ತರ ಸಿಕ್ಕಿದೆ ಅನ್ನೋದನ್ನು ಸೂಚಿಸುವ ಕ್ಯಾಪ್ಶನ್ ಇದಾಗಿದೆ. ಇದನ್ನು ನೋಡಿ ಅಭಿಮಾನಿಗಳು ಮದುವೆಯ ಸುದ್ದಿ ಎಂದುಕೊಂಡಿದ್ದಾರೆ. ಈ ಬಗ್ಗೆ ನಟಿ ಇನ್ನಷ್ಟೇ ಮಾಹಿತಿ ಕೊಡಬೇಕಿದೆ.

View post on Instagram