- Home
- Entertainment
- TV Talk
- ಟೈಟ್ ಆಗಿದ್ದಕ್ಕೆ ಹಾಗೆ ಹೇಳಿದೆ, ಗಿಲ್ಲಿ ಬಗ್ಗೆ ಕೇಳಿದ್ರೆ ಒಳಗೆ ಹಾಕಿಸ್ತೀನಿ ಅಷ್ಟೇ: Bigg Boss ಡಾಗ್ ಸತೀಶ್ ಧಮ್ಕಿ!
ಟೈಟ್ ಆಗಿದ್ದಕ್ಕೆ ಹಾಗೆ ಹೇಳಿದೆ, ಗಿಲ್ಲಿ ಬಗ್ಗೆ ಕೇಳಿದ್ರೆ ಒಳಗೆ ಹಾಕಿಸ್ತೀನಿ ಅಷ್ಟೇ: Bigg Boss ಡಾಗ್ ಸತೀಶ್ ಧಮ್ಕಿ!
ಬಿಗ್ಬಾಸ್ ಸೀಸನ್ 12 ಅನ್ನು ಗಿಲ್ಲಿ ನಟ ಗೆದ್ದಿದ್ದಾರೆ. ಈ ಹಿಂದೆ ಗಿಲ್ಲಿ ಗೆದ್ದರೆ ಅವರ ಕಾಲ ಕೆಳಗೆ ನುಸುಳುತ್ತೇನೆ ಎಂದಿದ್ದ ಡಾಗ್ ಸತೀಶ್, ಇದೀಗ ಮಾತನ್ನು ಬದಲಿಸಿದ್ದು, ಪ್ರಶ್ನಿಸಿದರೆ ಎಫ್ಐಆರ್ ದಾಖಲಿಸುವುದಾಗಿ ಬೆದರಿಸಿದ್ದಾರೆ.

ಗೆದ್ದು ಬೀಗಿದ ಗಿಲ್ಲಿ
ಬಿಗ್ಬಾಸ್ ಸೀಸನ್ 12 (Bigg Boss Season 12) ಅನ್ನು ಗಿಲ್ಲಿ ನಟ ಗೆದ್ದು ಬೀಗಿ ಆಗಿದೆ. ಕೋಟ್ಯಂತರ ಮಂದಿಯ ಹಾರೈಕೆ ಈಡೇರಿದೆ. 50 ಲಕ್ಷ ರೂಪಾಯಿ ನಗದು ಬಹುಮಾನ ಸೇರಿದಂತೆ ಹಲವಾರು ಉಡುಗೊರೆ, ಬಹುಮಾನಗಳನ್ನು ಪಡೆದುಕೊಂಡಿದ್ದಾರೆ ಗಿಲ್ಲಿ.
ಡಾಗ್ ಸತೀಶ್ ಮೇಲೆ ಕಣ್ಣು!
ಇದರ ನಡುವೆಯೇ ಇದೀಗ ಬಿಗ್ಬಾಸ್ನ ಸ್ಪರ್ಧಿಯಾಗಿದ್ದ ಡಾಗ್ ಸತೀಶ್ ಅವರ ಮೇಲೆ ಗಿಲ್ಲಿ ನಟನ ಅಭಿಮಾನಿಗಳ ಕಣ್ಣು ನೆಟ್ಟಿದೆ. ಅಷ್ಟಕ್ಕೂ ಮೊದಲಿನಿಂದಲೂ ಗಿಲ್ಲಿಯ ಮೇಲೆ ಕೆಂಡಕಾರುತ್ತಲೇ ಬಂದಿದ್ದಾರೆ ಡಾಗ್ ಸತೀಶ್ (Dog Satish). ಗಿಲ್ಲಿ ನಟ ವಿನ್ ಆಗುವುದಿಲ್ಲ ಎನ್ನುತ್ತಲೇ ಬಂದವರು ಇವರು.
ಕಾಲ ಕೆಳಗೆ ನುಸುಳುವೆ
ಮಾಧ್ಯಮಗಳ ಮುಂದೆ ಸಂದರ್ಶನ ನೀಡುವ ಸಮಯದಲ್ಲಿ, ನಾನು ಭವಿಷ್ಯ ನುಡಿದು ಆಗಿದೆ. ಗಿಲ್ಲಿ ನಟ ಈ ಬಾರಿ ಗೆಲ್ಲುವುದಿಲ್ಲ. ಒಂದು ವೇಳೆ ಗೆದ್ದರೆ ಅವರ ಕಾಲಿನ ಕೆಳಗೆ ನುಸುಳುತ್ತೇನೆ ಎಂದಿದ್ದರು.
ಕೊಟ್ಟ ಮಾತು ಉಳಿಸಿಕೊಳ್ತಾರಾ?
ಇದೀಗ ಅವರಿಗೆ ಇದೇ ಪ್ರಶ್ನೆಯನ್ನು ಕೇಳಲಾಗಿದೆ. ನೀವು ಗಿಲ್ಲಿ ವಿನ್ ಆದ್ರೆ ಅವರ ಕಾಲ ಕೆಳಗೆ ನುಸುಳುತ್ತೇನೆ ಎಂದಿದ್ರಿ, ಯಾವಾಗ ಮಾಡ್ತೀರಿ ಎಂದಾಗ, ಕೆಂಡಾಮಂಡಲವಾದ ಡಾಗ್ ಸತೀಶ್, ಅದು ನನ್ನ ವೈಯಕ್ತಿಕ. ನನ್ನ ಇಷ್ಟ. ಏನು ಬೇಕಾದ್ರೂ ಹೇಳ್ತೀನಿ ಎಂದಿದ್ದಾರೆ.
ಹೇಳಿದ್ಯಾಕೆ ಹಾಗಿದ್ರೆ?
ಮತ್ತೆ ಯಾಕೆ ಹೇಳಿದ್ದು ಎಂದು ಪ್ರಶ್ನಿಸಿದಾಗ, ಆಗ ಟೈಟ್ ಆಗಿದ್ದೆ, ಹೇಳಿದೆ. ಈ ಬಗ್ಗೆ ಯಾರಾದ್ರೂ ಪ್ರಶ್ನೆ ಮಾಡಿದರೆ ಎಫ್ಐಆರ್ ದಾಖಲು ಮಾಡಿ ಒಳಗೆ ಹಾಕ್ತೇನೆ. ನನ್ನ ಬಗ್ಗೆ ಕೇಳೋಕೆ ಅವರಿಗೆ ಎಷ್ಟು ಧೈರ್ಯ ಎಂದು ಪ್ರಶ್ನಿಸಿದ್ದಾರೆ!
ಪಾರ್ಟಿ ಅರೇಂಜ್
ಇದಾಗಲೇ ಗಿಲ್ಲಿ ನಟ ಹೊರಕ್ಕೆ ಬಂದ ಎಂದು ಹೇಳಿ ಸತೀಶ್ ಪಾರ್ಟಿ ಕೂಡ ಅರೇಂಜ್ ಮಾಡಿದ್ದರು. ಆದರೆ ಇದೀಗ ಗಿಲ್ಲಿ ಗೆದ್ದಿರೋ ಹಿನ್ನೆಲೆಯಲ್ಲಿ ಅವರ ಕಾಲಿಗೆ ಬೀಳಲು ತಾವೇ ಮುಹೂರ್ತ ಫಿಕ್ಸ್ ಮಾಡುವುದಾಗಿ ಫ್ಯಾನ್ಸ್ ಹೇಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

