- Home
- Entertainment
- TV Talk
- ದೇವ್ರೇ ಅಮ್ಮ ಈ ವಿಡಿಯೋ ನೋಡದಿರಲಪ್ಪ ಎಂದು ಚಪ್ಪಲಿ ತೋರಿಸಿದ ನಮ್ರತಾ ಗೌಡ: ಅಂಥ ಗುಟ್ಟೇನಿದೆ ನೋಡಿ!
ದೇವ್ರೇ ಅಮ್ಮ ಈ ವಿಡಿಯೋ ನೋಡದಿರಲಪ್ಪ ಎಂದು ಚಪ್ಪಲಿ ತೋರಿಸಿದ ನಮ್ರತಾ ಗೌಡ: ಅಂಥ ಗುಟ್ಟೇನಿದೆ ನೋಡಿ!
'ಕರ್ಣ' ಸೀರಿಯಲ್ ಖ್ಯಾತಿಯ ನಟಿ ನಮ್ರತಾ ಗೌಡ ಅವರು ತಮ್ಮ ಹೊಸ ಚಪ್ಪಲಿಯ ವಿಡಿಯೋ ಹಂಚಿಕೊಂಡಿದ್ದಾರೆ. ಒಂದು ಫಂಕ್ಷನ್‌ಗಾಗಿ ದುಬಾರಿ ಚಪ್ಪಲಿ ಖರೀದಿಸಿದ್ದು, ಈ ವಿಷಯ ಅಮ್ಮನಿಗೆ ತಿಳಿದರೆ ಬೈಯ್ಯುತ್ತಾರೆ ಎಂದು ತಮಾಷೆಯಾಗಿ ಹೇಳಿಕೊಂಡಿದ್ದಾರೆ. ಎಷ್ಟು ಇದರ ಬೆಲೆ ನೋಡಿ!

ಕರ್ಣ ಸೀರಿಯಲ್ ನಿತ್ಯಾ
Bigg Boss ಖ್ಯಾತಿಯ ನಮ್ರತಾ ಗೌಡ (Namruta Gowda) ಸದ್ಯ ಕರ್ಣ ಸೀರಿಯಲ್ನಲ್ಲಿ ನಿತ್ಯಾ ಪಾತ್ರದ ಮೂಲಕ ಎಲ್ಲರನ್ನೂ ರಂಜಿಸುತ್ತಿದ್ದಾರೆ. ಆರಂಭದಲ್ಲಿ ಕರ್ಣನ ಮೇಲೆ ಕೋಪ ಮಾಡಿಕೊಳ್ಳುವ ಕಾರಣದಿಂದಾಗಿ ವೀಕ್ಷಕರಿಂದ ಸಾಕಷ್ಟು ಟ್ರೋಲ್ಗೆ ಒಳಗಾಗಿದ್ದ ನಮ್ರತಾ ಮೇಲೆ ಈಗ ಅಭಿಮಾನಿಗಳು ಪ್ರೀತಿಯ ಧಾರೆಯನ್ನೇ ಹರಿಸುತ್ತಿದ್ದಾರೆ.
ಅಮ್ಮ ನೋಡೋದು ಬೇಡಪ್ಪಾ...
ಇದೀಗ ನಟಿ ಒಂದು ವಿಡಿಯೋ ಶೇರ್ ಮಾಡಿದ್ದಾರೆ. ಬಾಕ್ಸ್ ಒಂದನ್ನು ತೋರಿಸಿರುವ ನಮ್ರತಾ ಗೌಡ, ಈ ವಿಡಿಯೋ ಅನ್ನು ನನ್ನ ಅಮ್ಮ ನೋಡದಿರಲಪ್ಪ ಎನ್ನುತ್ತಲೇ ಓಪನ್ ಮಾಡಿದ್ದಾರೆ.
ನಟಿ ಹಾಗೆ ಹೇಳಿದ್ದೇಕೆ?
ಅದರಲ್ಲಿ ಇರುವುದು ಒಂದು ಚಪ್ಪಲು. ಚಪ್ಪಲು ತೆಗೆದುಕೊಂಡರೆ ಅಮ್ಮ ಬೈತಾರಾ ಎಂದು ಕೇಳಬಹುದು. ಅಷ್ಟಕ್ಕೂ ಸೆಲೆಬ್ರಿಟಿಗಳಿಗೆ ದುಬಾರಿ ಬಟ್ಟೆ, ಚಪ್ಪಲಿ, ಮೇಕಪ್ ಇಂಥ ಸಾಮಗ್ರಿಗಳೇ ಪ್ರಪಂಚ, ಅದು ಅವರಿಗೆ ಅನಿವಾರ್ಯವೂ ಹೌದು. ಆದರೆ ಹೀಗೆ ನಟಿ ಹೇಳುವ ಹಿಂದೆ ಒಂದು ಕಾರಣವೂ ಇದೆ.
ಇಷ್ಟೊಂದು ದುಬಾರಿನಾ?
ಅದೇನೆಂದರೆ, ಈ ಚಪ್ಪಲಿಗೆ 15 ಸಾವಿರ ರೂಪಾಯಿಗಳಂತೆ! ಅಷ್ಟೊಂದು ದುಬಾರಿ ಬೆಲೆಯ ಚಪ್ಪಲಿ ಲೈಫ್ನಲ್ಲಿ ಇದೇ ಮೊದಲು ಕೊಂಡಿದ್ದು, ಒಂದು ಫಂಕ್ಷನ್ಗೆ ಹೋಗಲು ಚಪ್ಪಲಿ ಬೇಕಿತ್ತು. ಆದರೆ ಯಾವುದೂ ಸೂಟ್ ಆಗಲಿಲ್ಲ. ಕೊನೆಗೆ ಇದನ್ನು ತೆಗೆದುಕೊಂಡೆ ಎಂದು ನಮ್ರತಾ ಹೇಳಿದ್ದಾರೆ.
ಕಮೆಂಟಿಗರು ಏನಂದ್ರು?
ಹಾಗೆ ಮೇಲಿಂದ ನೋಡಿದರೆ ಈ ಚಪ್ಪಲಿಗೆ ಅಷ್ಟೊಂದು ದುಬಾರಿ ಬೆಲೆ ಎಂದು ಎನ್ನಿಸುವುದಿಲ್ಲ ಎಂದು ಹಲವರು ಕಮೆಂಟ್ನಲ್ಲಿ ಹಾಕಿದ್ದಾರೆ. ಇದಕ್ಕೆ 200-300 ರೂಪಾಯಿ ಕೊಟ್ಟರೆ ಹೆಚ್ಚು ಎಂದಿದ್ದಾರೆ.
ಸಿಂಪಲ್ ಆದ್ರೂ ದುಬಾರಿ
ಆದರೆ ಕಂಪೆನಿಗಳ ಚಪ್ಪಲಿ ನೋಡಲು ಸಿಂಪಲ್ ಆಗಿದ್ದರೂ ದುಬಾರಿ ಇರುವುದು ಎಲ್ಲರಿಗೂ ತಿಳಿದದ್ದೇ. ಆದ್ದರಿಂದ ಇಷ್ಟೊಂದು ದುಬಾರಿಯ ಚಪ್ಪಲಿ ಕೊಂಡದ್ದು ಅಮ್ಮನಿಗೆ ತಿಳಿಯುವುದು ಬೇಡ ಎನ್ನುವುದು ನಟಿಯ ಆಸೆ.
ವೈರಲ್ ಆಗ್ತಿವೆ ಚಪ್ಪಲಿ
ಒಟ್ಟಿನಲ್ಲಿ ನಮ್ರತಾ ಗೌಡ ಅವರ ಈ ಹೊಸ ಚಪ್ಪಲಿ ತಹರೇವಾರಿ ಕಮೆಂಟ್ಸ್ಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

