Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರು, ಅತಿರೇಕದ ಮಾತುಗಳನ್ನು ಆಡಿದ್ದ ಓರ್ವ ಸ್ಪರ್ಧಿಯ ಮಂಗಳಾರತಿ ತೆಗೆದಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಗ್ರ್ಯಾಂಡ್ ಫಿನಾಲೆಗೆ ( Bigg Boss Kannada Season 12 Grand Finale ) ಎಲ್ಲ ಸ್ಪರ್ಧಿಗಳು ಬಂದಿದ್ದರು. ಆ ವೇಳೆ ಕಿಚ್ಚ ಸುದೀಪ್ ಓರ್ವ ಬಿಗ್ ಬಾಸ್ ಸ್ಪರ್ಧಿಯ ಮಂಗಳಾರತಿ ತೆಗೆದಿದ್ದಾರೆ. ಇದಕ್ಕೂ ಹಿಂದೆ ಒಂದು ಕಥೆಯಿದೆ.
ಮಿಮಿಕ್ರಿ ಮಾಡಿದ ಗಿಚ್ಚಿ ಗಿಲಿಗಿಲಿ ಸ್ಪರ್ಧಿಗಳು
ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಡಾಗ್ ಸತೀಶ್ ಕೂಡ ಬಂದಿದ್ದರು. ಆ ವೇಳೆ ಗಿಚ್ಚಿ ಗಿಲಿಗಿಲಿ ಸ್ಪರ್ಧಿಗಳು ಸೀಸನ್ 12 ಸ್ಪರ್ಧಿಗಳ ಮಿಮಿಕ್ರಿ ಮಾಡಿದ್ದಾರೆ. ಅದಾದ ಬಳಿಕ ಕಿಚ್ಚ ಸುದೀಪ್ ಅವರು ಡಾಗ್ ಸತೀಶ್ ಮರ್ಯಾದೆ ತೆಗೆದಿದ್ದಾರೆ.
ತುಕಾಲಿ ಸ್ಟಾರ್ ಸಂತು ಮಿಮಿಕ್ರಿ
ಸತೀಶ್ ಅವರು ಹೋದಲ್ಲಿ ಬಂದಲ್ಲಿ ನಾನು ಅಷ್ಟು ಲಕ್ಷದ ಶರ್ಟ್ ಹಾಕ್ತೀನಿ, ಇಷ್ಟು ಶರ್ಟ್ ಹಾಕ್ತೀನಿ, ನನ್ನಿಂದ ಅಷ್ಟು ವ್ಯೂಸ್ ಬಂತು ಅಂತೆಲ್ಲ ಹೇಳುತ್ತಿದ್ದರು. ಇದಕ್ಕೆ ಸುದೀಪ್ ತಿರುಗೇಟು ಕೊಟ್ಟಿದ್ದಾರೆ. ಹೌದು, ತುಕಾಲಿ ಸ್ಟಾರ್ ಸಂತು ಅವರು ಡಾಗ್ ಸತೀಶ್ ಡೈಲಾಗ್ ಮಿಮಿಕ್ರಿ ಮಾಡಿದ್ದರು. ಈ ಸ್ಕಿಟ್ ಮುಗಿದ ಬಳಿಕ ಸುದೀಪ್ ಅವರು ತುಕಾಲಿ ಜೊತೆ ಮಾತನಾಡಿದ್ದಾರೆ.
13 ಮಿಲಿಯನ್ ವೀಕ್ಷಣೆ
ಡಾಗ್ ಸತೀಶ್ ಈ ವೇದಿಕೆಗೆ ಬಂದಮೇಲೆ, ನನಗೆ ಹ್ಯಾಂಡ್‌ಶೇಕ್ ಮಾಡಿದಮೇಲೆ ಜನರು ನನ್ನ ಗುರುತಿಸಿದರು. ನಾನು ಆಮೇಲೆ ಕೈ ತೊಳೆದಿಲ್ಲ. ಕಲರ್ಸ್ ಕನ್ನಡಗೆ ಇವರು 13 ಮಿಲಿಯನ್ ವೀಕ್ಷಣೆ ಕೊಟ್ಟಿದ್ದಾರೆ. ಇವರ ವಿಡಿಯೋಗಳು ಸಿಕ್ಕಾಪಟ್ಟೆ ಓಡುತ್ತವೆ. ನನಗೆ
ಡಾಗ್ ಸತೀಶ್ ಅವರ ಸನ್‌ಗ್ಲಾಸ್ ಚೆನ್ನಾಗಿದೆ, ಅವರು ಕೇಳಿದ್ದೆಲ್ಲ ಕೊಡ್ತಾರೆ, ಇಸ್ಕೊಳ್ಳಿ ಎಂದಿದ್ದಾರೆ. ಆಗ ಡಾಗ್ ಸತೀಶ್ ಅವರು ಟ್ಯಾಗ್ ಹಾಗೆ ಇರುವ ಶರ್ಟ್ ಇದೆ, ಅದನ್ನು ಕೊಡ್ತೀನಿ ಎಂದಿದ್ದಾರೆ. ಡಾಗ್ ಸತೀಶ್ ಅವರು ಶರ್ಟ್ ಕೊಡ್ತೀನಿ ಎಂದತಕ್ಷಣ, ಕಿಚ್ಚ ಸುದೀಪ್ ಅವರು, “ತುಕಾಲಿ ಸ್ಟಾರ್ ಸಂತು ಅವರು ಸಿಂಪಲ್ ಆಗಿ ವ್ಯಕ್ತಿತ್ವದಿಂದಲೇ ಎಲ್ಲರ ಮನಸ್ಸು ಗೆದ್ದಿದ್ದಾರೆ, ಯಾವ ಶರ್ಟ್ ಬೇಡ” ಎಂದಿದ್ದಾರೆ.
ಗಿಲ್ಲಿ ನಟ ಅವರು ಬಿಗ್ ಬಾಸ್ ಗೆಲ್ಲೋದಿಲ್ಲ, ಅವರು ಸೋತ ತಕ್ಷಣ ನಾನು ಪಾರ್ಟಿ ಕೊಡ್ತೀನಿ ಎಂದು ಸತೀಶ್ ಹೇಳಿದ್ದರು. ಅದರ ಜೊತೆಗೆ ಅವರು ಗಿಲ್ಲಿ ನಟನ ವಿರುದ್ಧ ಒಂದಿಷ್ಟು ಆರೋಪ ಮಾಡಿದ್ದರು.


