Bigg Boss Kannada Season 12 Grand Finale Winner: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಟಾಪ್‌ 6 ಇದ್ದವರು ಟಾಪ್‌ 5 ಆಗುವ ಸಮಯ ಬಂದಿದೆ. ಮೊದಲ ಎಲಿಮಿನೇಶನ್‌ ಯಾರಾಗಲಿದ್ದಾರೆ? ಮೊದಲು ಹೊರಗಡೆ ಬಂದವರು ಯಾರು? ಈ ಬಗ್ಗೆ ಮಾಹಿತಿ ಇಲ್ಲಿದೆ. 

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಗ್ರ್ಯಾಂಡ್‌ ಫಿನಾಲೆ ಇಂದು ಸಂಜೆ ಆರು ಗಂಟೆಗೆ ನಡೆಯಲಿದೆ.ವಾಹಿನಿಯು ಹೊಸ ಪ್ರೋಮೋ ರಿಲೀಸ್‌ ಮಾಡಿದೆ. ಅಂದಹಾಗೆ ಮೊದಲು ಎಲಿಮಿನೇಟ್‌ ಆದವರು ಯಾರು?

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಈ ಬಾರಿ ಯಾರು ವಿನ್ನರ್‌ ಆಗ್ತಾರೆ? ಯಾರು ರನ್ನರ್‌ ಅಪ್‌ ಆಗ್ತಾರೆ ಎಂಬ ಪ್ರಶ್ನೆ ಇದೆ. ವಾಹಿನಿಯು ಪ್ರೋಮೋ ರಿಲೀಸ್‌ ಮಾಡಿ, ಕುತೂಹಲವನ್ನು ಹೆಚ್ಚಿಸಿದೆ.

ಪ್ರೋಮೋದಲ್ಲಿ ಏನಿದೆ?

ಕಿಚ್ಚ ಸುದೀಪ್‌ ಅವರು 24 ಸ್ಪರ್ಧಿಗಳಲ್ಲಿ ಯಾರು ಹೊರಗಡೆ ಹೋಗಬೇಕು? ಎಂದು ಮಾತನಾಡಿದ್ದಾರೆ. ಆಗ ಸ್ಪರ್ಧಿಗಳು ತಮ್ಮ ಬಗ್ಗೆ ಮಾತನಾಡಿಕೊಂಡಿದ್ದಾರೆ.

ಧನುಷ್‌ ಗೌಡ ಅವರು “ನಾನು ಇನ್ನು ಮುಂದಕ್ಕೆ ಹೋಗಬೇಕು ಎಂಬ ಆಸೆ ಇದೆ” ಎಂದು ಹೇಳುತ್ತಾರೆ.

“ಈ ಟ್ರೋಫಿ ಸಿಕ್ಕಿಲ್ಲ ಅಂದ್ರೆ ವಿನ್‌ ಅನ್ನೋದು ನನ್ನ ಹಣೆಯಲ್ಲಿ ಬರೆದಿಲ್ಲ ಎಂದು ಅಂದುಕೊಳ್ಳಬೇಕು” ಎಂದು ಗಿಲ್ಲಿ ನಟ ಹೇಳಿದ್ದಾರೆ.

“ತುಂಬ ನೋವಾಗುತ್ತದೆ” ಎಂದು ರಘು ಅವರು ಹೇಳಿದ್ದಾರೆ.

“ನನ್ನನ್ನು ನಾನು ಈ ಮನೆಗೆ ಕೊಟ್ಟಿದ್ದೀನಿ” ಎಂದು ಅಶ್ವಿನಿ ಗೌಡ ಹೇಳಿದ್ದಾರೆ.

ಯಾರು ಎಲಿಮಿನೇಟ್‌ ಆಗ್ತಾರೆ?

ಧನುಷ್‌ ಗೌಡ ಅವರು ಎಲಿಮಿನೇಟ್‌ ಆಗಿದ್ದಾರೆ ಎಂಬ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ಗಳು ಕಾಣುತ್ತಿವೆ. ಆದರೆ ರಾಶಿಕಾ ಶೆಟ್ಟಿ ಬದಲು ಕಾವ್ಯ ಎಲಿಮಿನೇಟ್‌ ಆಗಬೇಕಿತ್ತು ಎಂದು ಅನೇಕರು ಹೇಳಿದ್ದರು. ಆದರೆ ಕಾವ್ಯ ಇನ್ನೂ ಆ ಮನೆಯಲ್ಲಿ ಉಳಿದುಕೊಂಡಿದ್ದು, ಅದರಲ್ಲಿಯೂ ಧನುಷ್‌ ಔಟ್‌ ಆಗಿ, ಕಾವ್ಯ ಅಲ್ಲಿದ್ದರೆ ಸರಿಯಲ್ಲ ಎಂದು ಅನೇಕರು ಕಾಮೆಂಟ್‌ ಮಾಡುತ್ತಿದ್ದಾರೆ. ಬಹುತೇಕರು ಗಿಲ್ಲಿ ನಟ ವಿನ್ನರ್‌ ಎಂದು ಹೇಳಿದ್ದಾರೆ, ಇನ್ನು ಅವರ ತವರೂರಿನಲ್ಲಿ ಗಿಲ್ಲಿ ನಟನ ಸಂಭ್ರಮವನ್ನು ಸಂಭ್ರಮಿಸಲು ಈಗಾಗಲೇ ಪಟಾಕಿಗಳನ್ನು ತಂದಿಡಲಾಗಿದೆಯಂತೆ.

ಓಟದಲ್ಲಿ ಇರುವವರು ಯಾರು?

ರಘು, ಕಾವ್ಯ ಶೈವ, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಗಿಲ್ಲಿ ನಟ, ಧನುಷ್‌ ಗೌಡ ಅವರು ಟಾಪ್‌ 6 ಸ್ಥಾನದಲ್ಲಿದ್ದಾರೆ. ಇವರಲ್ಲಿ ಒಬ್ಬರು ವಿನ್ನರ್‌, ಇನ್ನೊಬ್ಬರು ರನ್ನರ್‌ ಅಪ್‌, ಮೂರನೇ ಸ್ಥಾನ ಸಿಗಬೇಕಿದೆ. ಒಟ್ಟಿನಲ್ಲಿ ಗಿಲ್ಲಿ ನಟ ಗೆಲ್ಲುತ್ತಾರೆ ಎಂದು ಹೇಳಿರುವವರ ಸಂಖ್ಯೆ ಜಾಸ್ತಿ ಇದೆ. ಅಧಿಕೃತಾಗಿ ಯಾರು ಗೆಲ್ಲುತ್ತಾರೆ ಎಂದು ಕಾದು ನೋಡಬೇಕಿದೆ.