ಆರು ವಾರಗಳ ಕಾಲ ಇದ್ದಂತಹ ಒಪಿನಿಯನ್ ಒಂದು ನೈಟ್‌ನಲ್ಲಿ ಚೇಂಜ್ ಆಗ್ಬಿಡುತ್ತಾ; ಕಿಚ್ಚನ ಪ್ರಶ್ನೆಗೆ ಸಂಗೀತಾ ಶಾಕ್!
ಪ್ರೊಮೋದಲ್ಲಿ ಕಿಚ್ಚ ಸುದೀಪ್ 'ಆರು ವಾರದಲ್ಲಿ ಇದ್ದಂತಹ ಒಪಿನಿಯನ್ ಒಂದು ನೈಟ್‌ನಲ್ಲಿ ಚೇಂಜ್ ಆಗೋಗುತ್ತಾ? ಎನ್ನುತ್ತಾರೆ. ಬಳಿಕ ಸಂಗೀತಾ ಅವರನ್ನೇ ನೋಡಿ, 'ಸಂಗೀತಾ ಅವ್ರೇ, ಆರು ವಾರಗಳ ಕಾಲ ನೀವು ಕಾರ್ತಿಕ್ ಜತೆ ಇದ್ರಿ, ಈಗ ವಿನಯ್ ಜತೆ ಇದ್ದೀರಾ. ಏನು ಡಿಫ್ರೆನ್ಸ್ ಕಾಣಿಸ್ತಿದೆ ಸಂಗೀತಾ?' ಕಿಚ್ಚನ ಪ್ರಶ್ನೆಗೆ ಸಂಗೀತಾ ಒಮ್ಮೆ ತಬ್ಬಿಬ್ಬಾದಂತೆ ಕಂಡುಬಂತು.
ವಾರಗಳು ಉರುಳಿದಂತೆ, ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಏರಿಳಿತಗಳು, ಅಚ್ಚರಿಗಳು ಮೂಡಿ ಬರುತ್ತಿವೆ. ಇಂದು 7ನೇ ವಾರದ ವೀಕೆಂಡ್ ಸಂಚಿಕೆ ಪ್ರಸಾರವಾಗಲಿದೆ. ಇಂದು ನಡೆಯಲಿರುವ ಕಿಚ್ಚನ ಪಂಚಾಯಿತಿ ಎಪಿಸೋಡ್‌ನಲ್ಲಿ ಹಲವಾರು ಹೊಸ ಅಚ್ಚರಿಗಳನ್ನು ನೋಡಬಹುದು ಎಂಬ ಊಹೆ ಮಾಡಬಹುದು. ಕಾರಣ, ಇದೀಗ ಕಲರ್ಸ್ ಕನ್ನಡದ ಸೋಷಿಯಲ್ ಮೀಡಿಯಾ ಪೇಜ್‌ಗಳಲ್ಲಿ ಬಿಡುಗಡೆಯಾಗಿರುವ ಪ್ರೋಮೋ. ಹೌದು, ಇಂದು ಬಿಡುಗಡೆಯಾಗಿರುವ ಪ್ರೊಮೋಗಳಲ್ಲಿ ಸುದೀಪ್ ಸ್ಪರ್ಧಿಗಳ ಬಳಿ ಕೇಳಿರುವ ಪ್ರಶ್ನೆಗಳು ಮತ್ತು ಉತ್ತರಗಳು ವಿಶೇಷ ಎನಿಸುವಂತಿವೆ.
ಪ್ರೊಮೋದಲ್ಲಿ ಕಿಚ್ಚ ಸುದೀಪ್ 'ಆರು ವಾರದಲ್ಲಿ ಇದ್ದಂತಹ ಒಪಿನಿಯನ್ ಒಂದು ನೈಟ್‌ನಲ್ಲಿ ಚೇಂಜ್ ಆಗೋಗುತ್ತಾ? ಎನ್ನುತ್ತಾರೆ. ಬಳಿಕ ಸಂಗೀತಾ ಅವರನ್ನೇ ನೋಡಿ, 'ಸಂಗೀತಾ ಅವ್ರೇ, ಆರು ವಾರಗಳ ಕಾಲ ನೀವು ಕಾರ್ತಿಕ್ ಜತೆ ಇದ್ರಿ, ಈಗ ವಿನಯ್ ಜತೆ ಇದ್ದೀರಾ. ಏನು ಡಿಫ್ರೆನ್ಸ್ ಕಾಣಿಸ್ತಿದೆ ಸಂಗೀತಾ?' ಕಿಚ್ಚನ ಪ್ರಶ್ನೆಗೆ ಸಂಗೀತಾ ಒಮ್ಮೆ ತಬ್ಬಿಬ್ಬಾದಂತೆ ಕಂಡುಬಂತು. ಆದರೆ, ಉತ್ತರ ಕೊಟ್ಟ ಸಂಗೀತಾ 'ಕಾರ್ತಿಕ್ ಬಳಿ ನಾನು ಹೋದ್ರೆ ಜಗಳ ಆಡೋಕೇ ಬರ್ತಿನಿ ಅಂದ್ಕೋತಾ ಇದ್ರು ಅವ್ರು. ಆದ್ರೆ ವಿನಯ್ ಬಳಿ ನಾನು ಕಾಮ್ ಅಂಡ್ ಕೋಲ್ ಫೀಲ್ ಅನುಭವಿಸಿದೆ' ಎಂದಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಸಂಗೀತಾ; ಊಸರವಳ್ಳಿ ಆಗಿದ್ದು ಇದಕ್ಕೇನಾ?
ತನಿಷಾ ಮಾತು ಯಾವ ಪ್ರಶ್ನೆಗೆ ಉತ್ತರ ಎಂಬುದು ಪ್ರೊಮೋದಲ್ಲಿ ತಿಳಿಯಲು ಸಾಧ್ಯವಿಲ್ಲ. ಆದರೆ, 'ಅವ್ರು ಎಲ್ಲಿ ಇರ್ತಾರೋ ಅಪೋಸಿಟ್ಟಲ್ಲಿ ಇರೋವ್ರನ್ನ ಕಮ್ಮಿ ತರದಲ್ಲಿ ನೋಡ್ತಾರೆ' ಎಂದಿದ್ದಾರೆ ತನಿಷಾ. ಬಹುಶಃ ಈ ಮಾತು ಸಂಗೀತಾ ಬಗ್ಗೆಯೇ ತನಿಷಾ ಹೇಳಿರುವುದು ಎಂಬಂತಿದೆ. ಆದರೆ, ಸಂಚಿಕೆ ನೋಡಿದ ಮೇಲೆ ಯಾವ ಪ್ರಶ್ನೆಗೆ, ಯಾರಿಗೆ ಸಂಬಂಧಿಸಿ ತನಿಷಾ ಈ ಉತ್ತರ ಕೊಟ್ಟರು ಎಂಬುದು ತಿಳಿದು ಬರಲಿದೆ. ಕಾರ್ತಿಕ್ ಹೆಡ್ ಶೇವ್ ಮಾಡುವಾಗ ಒಬ್ರು ಫ್ರೆಂಡ್ ಆಗಿ ನೀವು ಬೇಡ ಅಂತ ಹೇಳ್ಬಹುದಿತ್ತಲ್ಲಾ' ಎಂದ ಕಿಚ್ಚ ಸುದೀಪ್ ಪ್ರಶ್ನೆಗೆ ಸಂಗೀತಾ ಮೌನವಾಗಿದ್ದು ಕಂಡು ಬಂತು. ಒಟ್ಟಿನಲ್ಲಿ ಇಂದಿನ ಸಂಚಿಕೆ ತೀವ್ರ ಕುತೂಹಲ ಕೆರಳಿಸುತ್ತಿರುವುದಂತೂ ಸುಳ್ಳಲ್ಲ.
ಶತ್ರಗಳು ಮಿತ್ರರಾಗಬಹುದು, ಮಿತ್ರರು ಏನೋ ಮಾಡಬಹುದು; ಕಿಚ್ಚನ ಪಂಚಾಯಿತಿಗೆ ಕ್ಷಣ ಗಣನೆ!
ಅಂದಹಾಗೆ, ಬಿಗ್ ಬಾಸ್ ಮನೆಯಲ್ಲಿ ಎಲ್ಲವನ್ನೂ ತಿಳಿಯಬೇಕಾದರೆ, JioCinemaದಲ್ಲಿ ಪ್ರಕಟವಾಗುತ್ತಿರುವ ಬಿಗ್‌ಬಾಸ್ ಕನ್ನಡ ನೇರಪ್ರಸಾರ ವೀಕ್ಷಿಸಿ. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ. ಪ್ರತಿದಿನದ ಎಪಿಸೋಡ್‌ಗಳನ್ನು Colors Kannadaದಲ್ಲಿ ರಾತ್ರಿ 9.30ಕ್ಕೆ, ವಾರಾಂತ್ಯದ (ಶನಿವಾರ-ಭಾನುವಾರ) ಸಂಚಿಕೆಗಳನ್ನು ರಾತ್ರಿ 9.00ಕ್ಕೆ ವೀಕ್ಷಿಸಬಹುದು.