Asianet Suvarna News Asianet Suvarna News

ಶತ್ರಗಳು ಮಿತ್ರರಾಗಬಹುದು, ಮಿತ್ರರು ಏನೋ ಮಾಡಬಹುದು; ಕಿಚ್ಚನ ಪಂಚಾಯಿತಿಗೆ ಕ್ಷಣ ಗಣನೆ!

ನೋಡನೋಡುತ್ತಲೇ ಬಿಗ್ ಬಾಸ್ ಮನೆಯಿಂದ ಒಬ್ಬೊಬ್ಬರಾಗಿ ಎಲಿಮಿನೇಟ್ ಆಗುತ್ತಿದ್ದಾರೆ, ಮಿಕ್ಕವರು ಗೇಮ್ ಆಡುತ್ತಿದ್ದಾರೆ. ಈ ವಾರ ಯಾರು ಎಲಿಮಿನೇಟ್ ಆಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ನೀತು, ಸ್ನೇಹಿತ್, ಸಿರಿ ಈ ಮೂರೂ ಹೆಸರುಗಳು ಸೋಷಿಯಲ್ ಮೀಡಿಯಾಗಳಲ್ಲಿ ಕೇಳಿ ಬರುತ್ತಿವೆಯಾದರೂ ಯಾರು ಹೊರಹೋಗಲಿದ್ದಾರೆ ಎಂಬುದನ್ನು ಊಹಿಸುವುದು ಕಷ್ಟ.

Colors kannada Bigg Boss kannada season 10 weekend episode with kichcha sudeep srb
Author
First Published Nov 25, 2023, 3:22 PM IST

ಬಿಗ್ ಬಾಸ್ ಕನ್ನಡ ಸೀಸನ್ 10, ಇದೀಗ 7ನೇ ವಾರದ ಕೊನೆಗೆ ಬಂದು ತಲುಪಿದೆ. ಇಂದು ಕಲರ್ಸ್ ಕನ್ನಡದ ಅಧಿಕೃತ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಹಂಚಿಕೊಂಡಿರುವ ಪ್ರೋಮೋದಲ್ಲಿ ಸ್ವತಃ ಹೋಸ್ಟ್ ಕಿಚ್ಚ ಸುದೀಪ್ ಈ ವಾರ ಆಗಿರುವ ಭಾರೀ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ. 'ಸ್ನೇಹಿತರು ಶತ್ರುಗಳಾಗಬಹುದು, ಶತ್ರುಗಳು ಬದಲಾಗಿ ಮಿತ್ರರಾಗಬಹುದು, ಒಂದೇ ವಾರದಲ್ಲಿ ಬಹಳಷ್ಟು ಬದಲಾಗಬಹುದು. ಇದಕ್ಕೆಲ್ಲಾ ಈ ವಾರವೇ ಸಾಕ್ಷಿ' ಎಂದಿದ್ದಾರೆ ನಿರೂಪಕ ಕಿಚ್ಚ ಸುದೀಪ್. ಸ್ಪರ್ಧಿಗಳಲ್ಲಿ ಮಿತ್ರರಾಗಿದ್ದವರು ಶತ್ರುಗಳಾಗಿರುವವರು ಎಂದರೆ ಅದು ಸಂಗೀತಾ ಶೃಂಗೇರಿ ಹಾಗೂ ಕಾರ್ತಿಕ್. ಶತ್ರುಗಳು ಮಿತ್ರರಾಗಿದ್ದು ಸಂಗೀತಾ-ನಮ್ರತಾ ಹಾಗೂ ಸಂಗೀತಾವಿನಯ್. 

ಆದರೆ, ಈ ವಾರ ಬಿಗ್ ಬಾಸ್ ಮನೆಯಲ್ಲಿ ಇನ್ನೊಂದು ಬದಲಾವಣೆ ಆಗಿದೆ. ಅದೇನೆಂದರೆ, ಈ ಮೊದಲು ಜಸ್ಟ್ ಸ್ನೇಹಿತರಾಗಿದ್ದ ತನಿಷಾ ಮತ್ತು ಕಾರ್ತಿಕ್, ಈ ವಾರ ಜಾಸ್ತಿ ಕ್ಲೋಸ್ ಆಗಿದ್ದಾರೆ ಎನ್ನಬಹುದು. ಕಾರ್ತಿಕ್ ಬಳಿಯೇ ಇರುತ್ತಿದ್ದ ಸಂಗೀತಾ ಈಗ ಹೆಚ್ಚಾಗಿ ನಮ್ರತಾ ಅಥವಾ ವಿನಯ್ ಬಳಿ ಸುತ್ತತ್ತಿರುತ್ತಾರೆ. ಆದರೆ, ಕಾರ್ತಿಕ್ ಪಕ್ಕ ಇರೋದು ಈಗ ತನಿಷಾ ಮಾತ್ರ ಎನ್ನಬಹುದು. ಸದ್ಯಕ್ಕೆ ಸಂಗೀತಾ ಸ್ನೇಹ ಕಳೆದುಕೊಂಡು ಒಂಟಿ ಆಗಿರುವ ಕಾರ್ತಿಕ್‌ಗೆ ಜಂಟಿಯಾಗಿರುವ ತನಿಷಾ, ಕಾರ್ತಿಕ್ ಅವರನ್ನು ಲವ್ ಮಾಡುತ್ತಿಲ್ಲ. ಆದರೆ, ಅವರಿಬ್ಬರೂ ಒಳ್ಳೇ ಫ್ರೆಂಡ್ಸ್‌ ತರ ಇದ್ದಾರೆ ಎನ್ನಬಹುದು. 

ಶ್ರೀದೇವಿ ಜತೆ ಡಿಂಗ್ ಡಾಂಗ್; ಮಧ್ಯೆ ವಿಲನ್ ಆಗಿದ್ದವರ ಗುಟ್ಟು ಬಿಚ್ಚಿಟ್ಟ ನಟ ಮಿಥುನ್ ಚಕ್ರವರ್ತಿ

ಇಂದು ವೀಕೆಂಡ್ ಪಂಚಾಯಿತಿ ನಡೆಯಲಿದೆ. 'ಕಿಚ್ಚನ ಪಂಚಾಯಿತಿ' ಹೆಸರಿನ ಇಂದಿನ ಸಂಚಿಕೆಯಲ್ಲಿ ಯಾವೆಲ್ಲ ಅಚ್ಚರಿಗಳು ಕಾದಿವೆಯೋ ಏನೋ ಎಂದು ಬಿಗ್ ಬಾಸ್ ಪ್ರಿಯ ವೀಕ್ಷಕರು ಕಾಯುತ್ತಿದ್ದಾರೆ. ಸಂಗೀತ ಕೊಟ್ಟ ಶಿಕ್ಷೆಯಂತೆ ನಟ ಕಾರ್ತಿಕ್ ತಮ್ಮ ತಲೆಯನ್ನು ಬೋಳಿಸಲಾಗಿದೆ. ಇತ್ತ ನಮ್ರತಾ ಮತ್ತು ಸಂಗೀತಾ ಸೇರಿಕೊಂಡು ಇನ್ನೊಂದು ಟೀಮ್‌ನಲ್ಲಿರುವ ತನಿಷಾ-ಕಾರ್ತಿಕ್ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ. ಈ ಸಂಗತಿ ಬಿಡುಗಡೆಯಾಗಿರುವ ಪ್ರೊಮೋದಲ್ಲಿ ಕಂಡುಬರುತ್ತಿದೆ, ಆದರೆ, ಇಂದಿನ ಸಂಚಿಕೆಯಲ್ಲಿ ಉಳಿದ ಎಲ್ಲ ಸ್ಪರ್ಧಿಗಳ ಕತೆ ಏನು, ಕಿಚ್ಚ ಸುದೀಪ್ ಎಲ್ಲರ ಬಳಿ ಏನು ಮಾತನಾಡಬಹುದು ಎಂಬ ಕುತೂಹಲವಂತೂ ಇದ್ದೇ ಇದೆ. 

ನಮ್ಮದು ಹಿಂದೂ-ಕ್ರಿಶ್ಚಿಯನ್ ಲವ್ & ಡಬ್ಬಲ್ ಮ್ಯಾರೇಜ್; ನಟಿ ಪ್ರಿಯಾಂಕಾ ಚೋಪ್ರಾ ಹೇಳಿಕೆ ಭಾರೀ ವೈರಲ್!

ಒಟ್ಟಿನಲ್ಲಿ, ನೋಡನೋಡುತ್ತಲೇ ಬಿಗ್ ಬಾಸ್ ಮನೆಯಿಂದ ಒಬ್ಬೊಬ್ಬರಾಗಿ ಎಲಿಮಿನೇಟ್ ಆಗುತ್ತಿದ್ದಾರೆ, ಮಿಕ್ಕವರು ಗೇಮ್ ಆಡುತ್ತಿದ್ದಾರೆ. ಈ ವಾರ ಯಾರು ಎಲಿಮಿನೇಟ್ ಆಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ನೀತು, ಸ್ನೇಹಿತ್, ಸಿರಿ ಈ ಮೂರೂ ಹೆಸರುಗಳು ಸೋಷಿಯಲ್ ಮೀಡಿಯಾಗಳಲ್ಲಿ ಕೇಳಿ ಬರುತ್ತಿವೆಯಾದರೂ ಯಾರು ಹೊರಹೋಗಲಿದ್ದಾರೆ ಎಂಬುದನ್ನು ಊಹಿಸುವುದು ಕಷ್ಟವೇ. ಕೆಲವೊಮ್ಮೆ ಅನಿರೀಕ್ಷಿತ ಎನಿಸುವಂತೆ ಕೆಲವೊಬ್ಬರು ಎಲಿಮಿನೇಟ್ ಆಗುತ್ತಾರೆ. ಒಟ್ಟಿನಲ್ಲಿ, ನಾಳೆಯ ಸಂಚಿಕೆಯಲ್ಲಿ ಬಿಗ್ ಬಾಸ್ ಮನೆಯಲ್ಲಿ ಮುಂದಿನ ವಾರ ಇರದ ಸ್ಪರ್ಧಿ ಯಾರು ಎಂಬ ಗುಟ್ಟು ರಟ್ಟಾಗಲಿದೆ. 

ಅಂದಹಾಗೆ, ಬಿಗ್ ಬಾಸ್‌ನಲ್ಲಿ ನಡೆಯುವ ಎಲ್ಲವನ್ನೂ ತಿಳಿಯಬೇಕಾದರೆ, JioCinemaದಲ್ಲಿ ಪ್ರಕಟವಾಗುತ್ತಿರುವ ಬಿಗ್‌ಬಾಸ್ ಕನ್ನಡ ನೇರಪ್ರಸಾರ ವೀಕ್ಷಿಸಿ. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ. ಪ್ರತಿದಿನದ ಎಪಿಸೋಡ್‌ಗಳನ್ನು Colors Kannadaದಲ್ಲಿ ರಾತ್ರಿ 9.30ಕ್ಕೆ, ವಾರಾಂತ್ಯದ (ಶನಿವಾರ-ಭಾನುವಾರ) ಸಂಚಿಕೆಗಳನ್ನು ರಾತ್ರಿ 9.00ಕ್ಕೆ ವೀಕ್ಷಿಸಬಹುದು. 

Follow Us:
Download App:
  • android
  • ios