Asianet Suvarna News Asianet Suvarna News

ತಲೆ ತಗ್ಗಿಸಿದ ಕಾರ್ತಿಕ್; ಗೇಮ್ ನೆಪದಲ್ಲಿ ವೈಯಕ್ತಿಕ ತೇಜೋವಧೆಗೆ ಇಳಿದರಾ ವಿನಯ್ ಅಂಡ್ ಟೀಮ್?

ಕಾರ್ತಿಕ್ ಸೋತು ಸುಣ್ಣವಾಗಿರುವಂತೆ ಕಾಣಿಸುತ್ತಿದೆ. ಅವರ ಬಾಯಿಂದ ಮಾತು ಹೊರಡುವದಿರಲಿ, ಮುಖವನ್ನೇ ಎತ್ತುತ್ತಿಲ್ಲ. ಯಾವತ್ತೂ ಸಪೋರ್ಟ್‌ ಗೆ ನಿಲ್ಲುತ್ತಿದ್ದ ಸಂಗೀತಾ ಕೂಡ ಕಾರ್ತಿಕ್ ಪರವಾಗಿ ನಿಲ್ಲುತ್ತಿಲ್ಲವೇ? ವಿನಯ್, ಸ್ನೇಹಿತ್ ಹಾಗೂ ನಮ್ರತಾ ಈ ಮೂವರೂ ಬೇತಾಳದಂತೆ ಬಿಗ್ ಬಾಸ್ ಮನೆಯಲ್ಲಿ ಕಾರ್ತಿಕ್ ಅವರನ್ನು ಕಾಡುತ್ತಿದ್ದಾರೆ ಎನ್ನಬಹುದು. 

Bigg Boss contestants targets karthik mahesh in bigg boss kannada 10 srb
Author
First Published Nov 8, 2023, 12:53 PM IST

ಬಿಗ್ ಬಾಸ್ ಕನ್ನಡ ಸೀಸನ್ 10 ದಿನಗಳೆದಂತೆ ರಂಗೇರುತ್ತಿದೆ. ಆದರೆ, ಬರಬರುತ್ತಾ ಕೆಟ್ಟ ಮಾತುಗಳು ಹೆಚ್ಚಾಗುತ್ತಿದ್ದು, ಆಟದ ನೆಪದಲ್ಲಿ ಮನಸ್ಸಿನ ಆಳದಲ್ಲಿರುವ ಹಲವು ಮಾತುಗಳು ಹೊರಬರುತ್ತಿವೆ. ನಮ್ರತಾ, ಸ್ನೇಹಿತ್ ಸೇರಿದಂತೆ ಹಲವರು ಗೆಲ್ಲುವ ಆಸೆಗೆ ಕಟ್ಟುಬಿದ್ದು ಮಾನವೀಯತೆ, ಶಿಸ್ತು, ಸಂಯಮ ಎಂಬ ಶಬ್ಧಗಳನ್ನೇ ಮರೆತಿದ್ದಾರೆ ಎನ್ನಬಹುದೇ? ಕಾರ್ತಿಕ್ ಸೋತಿರುವ ಕಾರಣಕ್ಕೆ, ಸಂಗೀತಾ ಕಾರ್ತಿಕ್ ಮಧ್ಯೆ ಸ್ವಲ್ಪ ಅಂತರ ಸದ್ಯಕ್ಕೆ ಕಾಣುತ್ತಿರುವ ಕಾರಣಕ್ಕೆ ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಈಗ ಕಾರ್ತಿಕ್ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆಯೇ?

ಕಾರ್ತಿಕ್ ಸೋತು ಸುಣ್ಣವಾಗಿರುವಂತೆ ಕಾಣಿಸುತ್ತಿದೆ. ಅವರ ಬಾಯಿಂದ ಮಾತು ಹೊರಡುವದಿರಲಿ, ಮುಖವನ್ನೇ ಎತ್ತುತ್ತಿಲ್ಲ. ಯಾವತ್ತೂ ಸಪೋರ್ಟ್‌ ಗೆ ನಿಲ್ಲುತ್ತಿದ್ದ ಸಂಗೀತಾ ಕೂಡ ಕಾರ್ತಿಕ್ ಪರವಾಗಿ ನಿಲ್ಲುತ್ತಿಲ್ಲವೇ? ವಿನಯ್, ಸ್ನೇಹಿತ್ ಹಾಗೂ ನಮ್ರತಾ ಈ ಮೂವರೂ ಬೇತಾಳದಂತೆ ಬಿಗ್ ಬಾಸ್ ಮನೆಯಲ್ಲಿ ಕಾರ್ತಿಕ್ ಅವರನ್ನು ಕಾಡುತ್ತಿದ್ದಾರೆ ಎನ್ನಬಹುದು. ಕೋಟ್ಯಾಂತರ ವೀಕ್ಷಕರು ನೋಡುತ್ತಿರುವ ಗೇಮ್‌ ಶೋದಲ್ಲಿ ವೈಯಕ್ತಿಕ ತೇಜೋವಧೆ ಕಾಣಿಸುತ್ತಿದೆ. ಗಂಡಸು, ಗಂಡಸ್ತನ ಮುಂತಾದ ಶಬ್ಧಗಳೇ ಹೆಚ್ಚು ಸದ್ದು ಮಾಡುತ್ತಿವೆ. 

ಯಾಕೆ ಹೀಗೆ? ಕಾರಣಗಳು ಹಲವು ಇರಬಹುದು. ಆದರೆ. ರಿಯಾಲಿಟಿ ಶೋ, ಗೇಮ್ ಶೋ ಎಂಬ ಹೆಸರಿನ ಮೂಲಕ ಗೆಲ್ಲವ ಕಾರಣಕ್ಕೇ ಆಡುವ ಸ್ಪರ್ಧಿಗಳು, ತಾವು ಎಲ್ಲಿಂದ ಬಂದಿದ್ದೇವೆ, ಶೋ ಮುಗಿದ ಮೇಲೆ ವಾಪಸ್ ಎಲ್ಲಿಗೆ ಹೋಗುತ್ತೇವೆ ಎಂಬುದನ್ನೂ ಮರೆತಂತಿದೆ. ಒಟ್ಟಿನಲ್ಲಿ, ಯಾರಾದರೂ ಒಬ್ಬರು ಸ್ಪರ್ಧಿಯನ್ನು ಟಾರ್ಗೆಟ್ ಮಾಡಿ ಅವರನ್ನು ಮಾನಸಿಕವಾಗಿ ಹಿಂಸಿಸಿ ಮನರಂಜನೆ ತೆಗೆದುಕೊಳ್ಳುವ, ಕೊಡುವ ಮಟ್ಟಿಗೆ ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳ ಮೆಂಟಾಲಿಟಿ ಕುಸಿದಿದೆಯೇ? ಉತ್ತರಕ್ಕೆ ಸಂಚಿಕೆಗಳನ್ನು ನೋಡಬೇಕು. 

ಯಾಕೋ ಚಮಚಾಗೆ ಚಮಚಾ ಆಗ್ತಾವನಲ್ಲ?; ಸ್ನೇಹಿತ್ ವಿರುದ್ಧ ನಿಂತ ನೆಟ್ಟಿಗರು!

ಅಂದಹಾಗೆ, ಬಿಗ್ ಬಾಸ್ ಮನೆಯಲ್ಲಿ ಏನೇನೆಲ್ಲ ನಡೆಯುತ್ತಿದೆ, ಎಲ್ಲವನ್ನೂ ತಿಳಿದುಕೊಳ್ಳಲು JioCinemaದಲ್ಲಿ ಬಿಗ್‌ಬಾಸ್‌ ಕನ್ನಡ ನೇರಪ್ರಸಾರ ನೋಡಿ. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ. ಪ್ರತಿದಿನದ ಎಪಿಸೋಡ್‌ಗಳನ್ನು Colors Kannadaದಲ್ಲಿ ರಾತ್ರಿ 9.30ಕ್ಕೆ ಹಾಗೂ ಶನಿವಾರ-ಭಾನುವಾರ ರಾತ್ರಿ 9.00ಕ್ಕೆ ವೀಕ್ಷಿಸಬಹುದು.

ಡ್ರೋನ್​ ಪ್ರತಾಪ್​ ಕುರಿತು ನಟ ಜಗ್ಗೇಶ್​ ಹೊಸ ಪೋಸ್ಟ್​: ಅಭಿಮಾನಿಗಳು ಏನೆಂದ್ರು?

Follow Us:
Download App:
  • android
  • ios