Asianet Suvarna News Asianet Suvarna News

ಡ್ರೋನ್​ ಪ್ರತಾಪ್​ ಕುರಿತು ನಟ ಜಗ್ಗೇಶ್​ ಹೊಸ ಪೋಸ್ಟ್​: ಅಭಿಮಾನಿಗಳು ಏನೆಂದ್ರು?

ಡ್ರೋನ್​ ಪ್ರತಾಪ್​ ಕುರಿತು ನಟ ಜಗ್ಗೇಶ್​ ಹೊಸ ಪೋಸ್ಟ್​ ಹಾಕಿದ್ದಾರೆ. ಇದಕ್ಕೆ ಅಭಿಮಾನಿಗಳು ಏನೆಂದ್ರು?
 

Actor Jaggesh posted a new post about Drone Pratap. What  fans says suc
Author
First Published Nov 8, 2023, 12:27 PM IST

 ಬಿಗ್​ಬಾಸ್​ ಪ್ರಿಯರ ಬಾಯಲ್ಲಿ ಸದ್ಯದ ಮಟ್ಟಿಗೆ ಸದಾ ಹರಿದಾಡುತ್ತಿರುವ ಹೆಸರು ಡ್ರೋನ್​ ಪ್ರತಾಪ್​.  ಕೆಲ ವರ್ಷಗಳ ಹಿಂದೆ ಡ್ರೋನ್​ ಪ್ರತಾಪ್​ ಎನ್ನುವ ಯುವಕ ಎಲ್ಲರಿಗೂ ಮಾದರಿಯಾಗಿದ್ದರು. ಇವರ ಹೆಸರು ಹೇಳಿಕೊಂಡು ತಮ್ಮ ಮನೆಯ ಮಕ್ಕಳನ್ನು ಬೈದವರು ಅದೆಷ್ಟೋ ಮಂದಿ. ಇವನನ್ನು ನೋಡಿ ಸ್ವಲ್ಪನಾದರೂ ಬುದ್ಧಿ ಕಲಿ ಎಂದು ಹೇಳಿಸಿಕೊಂಡ ಮಕ್ಕಳು ಇನ್ನೆಷ್ಟೋ. ಹೋದಲ್ಲಿ, ಬಂದಲ್ಲಿ ಈ ಯುವಕನ ಮಾತೇ ಮಾತು. ಪ್ರತಾಪ್​ ಅವರ ಮಾತಿನ ಪ್ರತಾಪಕ್ಕೆ ಮೋಡಿಯಾಗದವೇ ಇಲ್ಲ. ವಿಭಿನ್ನ ಕ್ಷೇತ್ರಗಳ ನುರಿತರು, ಮೇಧಾವಿಗಳು ಎನಿಸಿಕೊಂಡವರೂ ಪ್ರತಾಪ್​ ಮಾತಿಗೆ ತಲೆದೂಗಿದರು. ಎಷ್ಟೋ ವೇದಿಕೆಗಳಲ್ಲಿ ಇವರು ಮಾಡುತ್ತಿದ್ದ ಪ್ರೇರಣಾತ್ಮಕ ಭಾಷಣಕ್ಕೆ ತಲೆದೂಗಿದರು. ಕೇಳುವ ಪ್ರಶ್ನೆಗಳಿಗೆ ಅಷ್ಟೇ ಚೆನ್ನಾಗಿ ಉತ್ತರಿಸುವ ಮೇಧಾವಿ ಎನಿಸಿಕೊಂಡವರು ಡ್ರೋನ್​​. ಇವರ ಈ ಪ್ರತಿಭೆಗೆ ಮೆಚ್ಚಿ ಧನಸಹಾಯ ಮಾಡಿದವರೂ ಇದ್ದಾರೆ. 

ಡ್ರೋನ್​ ​ ತಯಾರಿಸಲು ತಾನು ಪಟ್ಟಿರುವ ಕಷ್ಟಗಳನ್ನು, ಬೀದಿ ಬದಿಯಲ್ಲಿ ಮಲಗಿ ತುತ್ತು ಅನ್ನಕ್ಕಾಗಿ ಪರದಾಡಿದ ದಿನಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಾ ಕೇಳುಗರ ಕಣ್ಣಲ್ಲಿ ನೀರು ತರಿಸಿದ್ದ ಪ್ರತಾಪ್​ ನಿಜ ಬಣ್ಣ ಬದಲಾಗಲು ಹಲವಾರು ವರ್ಷಗಳೇ ಬೇಕಾದವು. ಕೊನೆಗೂ ಇಷ್ಟು ವರ್ಷ ಹೇಳಿದ್ದು, ಮಾತನಾಡಿದ್ದು, ತಮ್ಮ ಬಗ್ಗೆ ಹೇಳಿಕೊಂಡಿದ್ದು, ಡ್ರೋನ್​ ​ ತಯಾರಿಕೆ ಕುರಿತು ವಿವರಣೆ ನೀಡಿದ್ದು ಎಲ್ಲವೂ ಹಸಿಹಸಿ ಸುಳ್ಳು ಎಂದು ತಿಳಿದು ಹಲವು ಕೇಸ್​ಗಳು ದಾಖಲಾದವು. ಇದಾದ ಬಳಿಕ ಕಥೆ ಕಟ್ಟಿ ತಮ್ಮಿಂದ ಲಕ್ಷಾಂತರ ರೂಪಾಯಿ ಪಡೆದುಕೊಂಡಿರುವುದಾಗಿ ಹಲವರು ಆರೋಪ ಮಾಡಿದ್ದೂ ಇದೆ. ನಟ ಜಗ್ಗೇಶ್​ ಕೂಡ ಡ್ರೋನ್​ ಪ್ರತಾಪ್​ ತಮಗೆ ಹೇಗೆ ಮೋಸ ಮಾಡಿದ್ದ ಎನ್ನುವುದನ್ನು ಹೇಳಿಕೊಂಡಿದ್ದರು. ಈತನ ಮಾತನ್ನು ನಂಬಿ ಕೆಟ್ಟೆ, ನನ್ನ ಬುದ್ಧಿಗೆ ಏನೆನ್ನಬೇಕು ಎಂದೂ ಬೇಸರ ವ್ಯಕ್ತಪಡಿಸಿದ್ದರು. ಸ್ವಲ್ಪ ಸಮಯ ತಲೆ ಮರೆಸಿಕೊಂಡು ಮತ್ತೆ ಈಗ ಬಿಗ್​ಬಾಸ್​ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ ಪ್ರತಾಪ್​. 

ನಾನು ನಂದಿನಿ ಖ್ಯಾತಿಯ ವಿಕ್ಕಿ 'ಬಿಗ್​ಬಾಸ್​'​ ಮನೆಯೊಳಕ್ಕೆ! ಆದ್ರೆ ಇಲ್ಲಿದೆ ಬಹು ದೊಡ್ಡ ಟ್ವಿಸ್ಟ್​...

ಇದೀಗ ಡ್ರೋನ್​ ಪ್ರತಾಪ್​ ಬೆಂಬಲಕ್ಕೆ ಹಲವರು ನಿಂತಿದ್ದರೆ, ಇನ್ನು ಕೆಲವರು ಇನ್ನೂ ಟ್ರೋಲ್​ ಮಾಡುತ್ತಲೇ ಇದ್ದಾರೆ. ಆದರೆ ಟ್ರೋಲ್​ ಮಾಡುವವರು ಸುಮ್ಮನೇ ಟ್ರೋಲ್​ ಮಾಡದೇ ಹಿಂದೆ ಜಗ್ಗೇಶ್​ ಅವರು ಬರೆದಿದ್ದ ಮಾತುಗಳನ್ನೇ ಈಗ ಮತ್ತೊಮ್ಮೆ ಬರೆದಂತೆ ಸೃಷ್ಟಿಸಿ, ಅದಕ್ಕೆ ತಮ್ಮದೊಂದಿಷ್ಟು ಕೆಟ್ಟ ಶಬ್ದಗಳನ್ನು ಬಳಸಿ ಶೇರ್​ ಮಾಡುತ್ತಿದ್ದಾರೆ. ನೋಡಿದವರಿಗೆ ಈ ಮಾತುಗಳನ್ನು ಖುದ್ದು ಜಗ್ಗೇಶ್​ ಅವರೇ ಬರೆದಂತೆ ಕಾಣುತ್ತಿದೆ. ಇದರಿಂದ ಜಗ್ಗೇಶ್​ ಬೇಸರ ವ್ಯಕ್ತಪಡಿಸಿದ್ದು, ಈ ಕುರಿತು ಇನ್​ಸ್ಟಾಗ್ರಾಮ್​ನಲ್ಲಿ ಪ್ರತಾಪ್​ ಹೆಸರು ಹೇಳದೇ ಪೋಸ್ಟ್​ ಒಂದನ್ನು ಶೇರ್​ ಮಾಡಿದ್ದಾರೆ. 

 

Actor Jaggesh posted a new post about Drone Pratap. What  fans says suc

ಅದರಲ್ಲಿ ಅವರು, ಮಿತ್ರರೆ ನನ್ನ ಇನ್ಸ್ಟಗ್ರಾಮ್ ಹಿಂದಿನ ಮುಖಪುಟ photoshot ಬಳಸಿ ಯಾರೋ ಒಬ್ಬ ವ್ಯಕ್ತಿಯ ಬಗ್ಗೆ ನಾನು negative post ಹಾಕಿದಂತೆ ಮಾಡಿದ್ದಾರೆ. ಕ್ಷಣಿಕ ಖುಷಿ ಅವರಿಗೆ ಸಿಗಬಹುದು ನೆನಪಿಡಿ ಸಿಕ್ಕಿಬಿದ್ದರೆ ನಿಮ್ಮ ಜನ್ಮ ಸಾಕು ಎನ್ನುವಂತೆ ಮಾಡುತ್ತದೆ ಇಂದಿನ ಕಾನೂನು! ಸ್ನೇಹಿತರೆ ನನ್ನ ಬದುಕಲ್ಲಿ ನಾನು ಯಾರನ್ನು ನೋಯಿಸುವಂತ ಗುಣವಿಲ್ಲಾ! ನನ್ನ ದ್ವೇಷಿಸುವವರನ್ನು ಗೌರವಿಸುವೆ ಒಂದುವೇಳೆ ಇಷ್ಟವಾಗದಿದ್ದರೆ ಅವರಿಂದ ದೂರ ಉಳಿಯುವೆ!ನನಗೀಗ 61 ನಾನ್ಯಾಕೆ ನನ್ನ ಮಕ್ಕಳ ವಯಸ್ಸಿನವರೊಂದಿಗೆ ತರ್ಕ ಮಾಡುವೆ? ನನ್ನ ಮೇಲೆ ನಂಬಿಕೆಯಿರಲಿ. ಅಂಥ post ಗಳು ಬಂದರೆ share ಮಾಡಿ. I will handle thankyou ಎಂದು ಬರೆದುಕೊಂಡಿದ್ದಾರೆ.

ಇದಕ್ಕೆ ಅವರ ಫ್ಯಾನ್ಸ್​ ಪ್ರತಿಕ್ರಿಯಿಸಿದ್ದಾರೆ. ಸಾರ್ ನೀವು ನಾ ಕಂಡ ಒಳ್ಳೆ ಕಲಾವಿದ. ಡ್ರೋನ್ ಪ್ರತಾಪ್ ಅವರು ನಿಮಗೆ ಮಾಡಿದ್ದು ತಪ್ಪು ನಾನು ಖಂಡಿಸುತ್ತೇನೆ. ಒಬ್ಬ ಒಳ್ಳೆಯದ್ದನ್ನು ಮಾಡಿದವರಿಗೆ ಡ್ರೋನ್​ ಪ್ರತಾಪಸ್​ ಕೆಟ್ಟದಾಗಿ ನಡೆದುಕೊಂಡಿದ್ದಾರೆ.   ಆದರೂ ನೀವು ಅವರಿಗೆ ಒಳ್ಳೇದ್ದನ್ನೇ ಬಯಸಿದ್ದೀರಿ. ನೀವು ತುಂಬಾ ಹೃದಯವಂತರು. ಕನ್ನಡ ಇಂಡಸ್ಟ್ರಿಗೆ ಒಬ್ಬರೇ ಜಗ್ಗೇಶ್ ಇನ್ನು 10 ತಾತಮಾನಗಳು ಕಳೆದು ಬಂದರು ನಿಮ್ಮಂಥ ಒಬ್ಬ ಕಲಾವಿದ ಅಂದರೆ ಜಗ್ಗೇಶ್ ಅವತಾರದಲ್ಲಿ ನವರಸ ನಾಯಕನಾಗಿ ಯಾರು ಬರಲ್ಲ ji ಜೈ ಜಗ್ಗೇಶ್ ಎಂದು ಓರ್ವ ಅಭಿಮಾನಿ ಬರೆದಿದ್ದರೆ, ಇನ್ನೊಬ್ಬರು, ನಿಜ ಜಗ್ಗಣ್ಣ.ನಿಮ್ಮ ಬಗ್ಗೆ ಮತ್ತು ನಿಮ್ಮ ಮಾತಿನ ನಡಾವಳಿಯ ನಮಗೆ ನಂಬಿಕೆ ಇದೆ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಲು ಆ ದೇವರಿದ್ದಾನೆ. ನೀವು ತಲೆ ಕೆಡಿಸಿಕೊಳ್ಳದೆ ನಿಮ್ಮ ಕೆಲಸ ಮುಂದುವರೆಸಿ. ನಾಯಿಗಳು ಬೊಗಳಿದರೆ ದೇವಲೋಕ ಹಾಳಾಗುವುದಿಲ್ಲ.ಸದಾ ನಿಮ್ಮೊಂದಿಗೆ ಸ್ವಚ್ಛ ಮನಸ್ಸುಗಳಿವೆ.ನಿಮಗೆ ಶುಭವಾಗಲಿ ಎಂದಿದ್ದಾರೆ. ಇನ್ನು ಕೆಲವರು ಹೀಗೆ ಇರಿ ಅಣ್ಣಾ, ಆ ರಾಘವೇಂದ್ರ ಸ್ವಾಮಿ ಒಳ್ಳೇದು ಮಾಡಲಿ ಎಂದಿದ್ದಾರೆ.

ಬಲೂನು ಹಿಡಿದು 'ಜಸ್ಟ್​ ವ್ಹಾವ್ಹ್'​ ಎಂದ ನಿವೇದಿತಾ: ಮಕ್ಳು ಮಾಡ್ಕೊ ಸರಿಯಾಗತ್ತೆ ಅಂದ್ರು ನೆಟ್ಟಿಗರು!

 

Follow Us:
Download App:
  • android
  • ios