ಯಾಕೋ ಚಮಚಾಗೆ ಚಮಚಾ ಆಗ್ತಾವನಲ್ಲ?; ಸ್ನೇಹಿತ್ ವಿರುದ್ಧ ನಿಂತ ನೆಟ್ಟಿಗರು!
ಚಾಕೊಲೇಟ್ ಬಾಯ್ ರೀತಿ ಇದ್ದ ಸ್ನೇಹಿತ್ ಹಿಗ್ಗಾಮುಗ್ಗಾ ಟ್ರೋಲ್. ಗುಂಪುಗಾರಿಕೆ ಒಪ್ಪದ ನೆಟ್ಟಿಗರು.....
ಕನ್ನಡ ಕಿರುತೆರೆ ನಟ ಸ್ನೇಹಿತ್ ಬಿಗ್ ಬಾಸ್ ಸೀಸನ್ 10ರಲ್ಲಿ ಮಿಂಚುತ್ತಿದ್ದಾರೆ. ಮೊದಲ ವಾರವೇ ಕ್ಯಾಪ್ಟನ್ ಸ್ಥಾನ ಪಡೆದುಕೊಂಡಿದ್ದರು.
ಕ್ಯಾಪ್ಟನ್ ಸ್ಥಾನಕ್ಕೆ ನ್ಯಾಯ ಕೊಟ್ಟಿಲ್ಲ ಅನ್ನೋ ಮಾತುಗಳು ಕೇಳಿ ಬರುತ್ತಿದ್ದರೂ ಸ್ನೇಹಿತ್ ಚಲ ಬಿಡದೆ ಇನ್ನಿತ್ತರ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದರು.
ಕಳೆದ ಎರಡು ಮೂರು ವಾರಗಳಿಂದ ಸ್ನೇಹಿತ್ ಮತ್ತು ನಮ್ರತಾ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದಾರೆ. ಇಬ್ಬರು ಸದಾ ಗುಸು ಗುಸು ಅಂತಾ ನಗುತ್ತಿರುತ್ತಾರೆ.
ಹೀಗಾಗಿ ಇವರಿಬ್ಬರ ನಡುವೆ ಏನೋ ಇದೆ ಎನ್ನುವ ಹಾಗೆ ಮನೆ ಮಂದಿ ವರ್ತಿಸುತ್ತಾರೆ. ವೀಕ್ಷಕರು ಅದನ್ನು ನಂಬುತ್ತಿದ್ದಾರೆ. ನಮ್ರತಾ ಅಲ್ಲದಿದ್ದರೂ ಸ್ನೇಹಿತ್ ಹೌದು ಎನ್ನುತ್ತಾರೆ.
ಇನ್ನು ನಮ್ರತಾ ಈಗಾಗಲೆ ಚಮಚ ಎನ್ನುವ ಅಡ್ಡ ಹೆಸರು ಪಡೆದುಕೊಂಡಿದ್ದಾರೆ. ಸ್ನೇಹಿತ್ ಕೂಡ ನಮ್ರತಾ ಜೊತೆಗಿರುವ ಕಾರಣ ನೆಟ್ಟಿಗರು ಟೀಕೆ ಮಾಡುತ್ತಿದ್ದಾರೆ.
ಇಡೀ ಕರ್ನಾಟಕವೇ ಒಬ್ಬರಿಗೆ ಚಮಚ ಎಂದು ಕರೆದಿದೆ ಆದರೆ ಈಗ ಸ್ನೇಹಿತ್ ಆ ಚಮಚಗೆ ಚಮಚ ಆಗಿಬಿಟ್ಟಿದ್ದಾನೆ. ಒಂಟಿಯಾಗಿ ಆಡಲು ಬರುವುದಿಲ್ಲ ಎಂದು ಟ್ರೋಲ್ ಮಾಡುತ್ತಿದ್ದಾರೆ.