Bigg Boss Kannada Season 12: ಬಿಗ್ ಬಾಸ್ ಮನೆಯಲ್ಲಿ ಮಧ್ಯರಾತ್ರಿ ಗೆಜ್ಜೆ ಶಬ್ಧ ಕೇಳಿಸಿದೆ. ಗಾಢ ನಿದ್ರೆಯಲ್ಲಿದ್ದ ಸ್ಪರ್ಧಿಗಳು ಆತಂಕಗೊಂಡಿದ್ದಾರೆ. ಮನೆಯಿಂದ ಹೊರ ಬಂದು ಹುಡುಕಾಟ ನಡೆಸಿದ್ದಾರೆ. 

ಆಟ ಮುಗಿಸಿ ಸುಸ್ತಾಗಿ ಬೆಚ್ಚಗೆ ಮಲಗಿದ್ದ ಬಿಗ್ ಬಾಸ್ (Bigg Boss) ಸ್ಪರ್ಧಿಗಳು ಮಧ್ಯರಾತ್ರಿ ತಲೆಗೆ ಹುಳು ಬಿಟ್ಕೊಳ್ಳುವಂತಾಗಿದೆ. ಬಿಗ್ ಬಾಸ್ ಮನೆಯಲ್ಲಿ ಮಧ್ಯರಾತ್ರಿ ಗೆಜ್ಜೆ ಶಬ್ಧ ಕೇಳ್ತಿದೆ. ಶಬ್ಧಕ್ಕೆ ಕೆಲ ಸ್ಪರ್ಧಿಗಳು ಎಚ್ಚರಗೊಂಡಿದ್ದು, ಯಾವ ಶಬ್ದ, ಎಲ್ಲಿಂದ ಬರ್ತಿದೆ ಎನ್ನುವ ಹುಡುಕಾಟ ಶುರು ಮಾಡಿದ್ದಾರೆ. ತರ್ಲೆ ರಕ್ಷಿತಾ ಶೆಟ್ಟಿ ಮೇಲೆ ಕೆಲವರು ಅನುಮಾನ ವ್ಯಕ್ತಪಡಿಸಿದ್ರೆ ಮತ್ತೆ ಕೆಲವರು ವೈಲ್ಡ್ ಕಾರ್ಡ್ ಎಂಟ್ರಿ ಸೂಚನೆ ಅಂತಿದ್ದಾರೆ.

ಈ ಗೆಜ್ಜೆ ಹಿಂದಿರುವ ಹೆಜ್ಜೆ ಯಾರದ್ದು? : 

ಕಲರ್ಸ್ ಕನ್ನಡ (Colors Kannada)ದಲ್ಲಿ ಪ್ರಸಾರ ಆಗ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಈಗ ರಿಯಲ್ ಆಟ ಶುರುವಾಗಿದೆ. ಫೈನಲ್ ಗೇರಲು ಸ್ಪರ್ಧಿಗಳು ಕಷ್ಟಪಟ್ಟು, ಬುದ್ಧಿ ಉಪಯೋಗಿಸಿ ಆಟ ಆಡ್ತಿದ್ದಾರೆ. ನಿನ್ನೆ ನಡೆದ ಟಾಸ್ಕ್ ನಲ್ಲಿ ಕಾವ್ಯಾ, ರಾಶಿಕಾ ಮತ್ತು ಗಿಲ್ಲಿ ಆಟ ಮುಂದುವರೆಸಿದ್ರು. ತೂಕವನ್ನು ಹಿಡಿದು ತುಂಬಾ ಸಮಯ ನಿಂತಿದ್ದ ಧನುಷ್ ಹಾಗೂ ಅಭಿಷೇಕ್ ಆಟ ಕೈಚೆಲ್ಲಬೇಕಾಯ್ತು. ಇಂದು ಭಾರ ತಡೆಯಲಾರದೆ ಗಿಲ್ಲಿ ಫೈನಲ್ ಹೋರಾಟದಿಂದ ಹೊರಗುಳಿಯಲಿದ್ದಾರೆ. ಕಾವ್ಯಾ ಮತ್ತು ರಾಶಿಕಾ ಮಧ್ಯೆ ಫೈಟ್ ನಡೆಯಲಿದೆ. ಇದನ್ನು ಈಗಾಗಲೇ ಕಲರ್ಸ್ ಕನ್ನಡ ತನ್ನ ಪ್ರೋಮೋದಲ್ಲಿ ತೋರಿಸಿದೆ. ಇಡೀ ಮನೆ ಕಾವ್ಯಾಗೆ ಬೆಂಬಲ ನೀಡ್ತಿದೆ. ಆದ್ರೆ ಕಾವ್ಯಾ ಮಾಡಿದ ಕೆಲ್ಸ ಧ್ರುವಂತ್ ಕೆಣಕಿದೆ. ಎಷ್ಟೇ ಬೆಂಬಲ ಸಿಕ್ಕಿದ್ರೂ ಕಾವ್ಯಾ ಮುಂದಿನ ಹಂತಕ್ಕೆ ಹೋಗೋದು ಅನುಮಾನ. ಯಾರು ಫೈನಲಿಸ್ಟ್ ಆಗ್ತಾರೆ ಅನ್ನೋದನ್ನು ವೀಕ್ಷಕರು ಎಪಿಸೋಡ್ ನೋಡಿ ತಿಳಿದ್ಕೊಳ್ಬೇಕು.

ಮದುವೆ ಮೇಕಿಂಗ್ ವಿಡಿಯೋ ರಿಲೀಸ್‌ ಮಾಡಿ Karna ಸೀರಿಯಲ್ ವೀಕ್ಷಕರ ತಲೆಗೆ ಹುಳ ಬಿಟ್ಟ ನಿರ್ದೇಶಕರು

ಇದು ಟಾಸ್ಕ್ ಕಥೆಯಾದ್ರೆ ಇನ್ನು ಬಿಗ್ ಬಾಸ್ ಮನೆಯಲ್ಲಿ ವಿಚಿತ್ರ ಘಟನೆ ನಡೆದಿದೆ. ಎಲ್ಲರೂ ಮಲಗಿದ್ದ ಟೈಂನಲ್ಲಿ ಗೆಜ್ಜೆ ಶಬ್ಧ ಕೇಳಿಸಿದೆ. ಗೆಜ್ಜೆ ಶಬ್ಧಕ್ಕೆ ಅಶ್ವಿನಿ, ಜಾಹ್ನವಿ, ಗಿಲ್ಲಿ, ಚಂದ್ರಪ್ರಭ, ಧ್ರುವಂತ್, ಮಲ್ಲಮ್ಮಗೆ ಎಚ್ಚರವಾಗಿದೆ. ಎಲ್ಲಿಂದ ಗೆಜ್ಜೆ ಶಬ್ಧ ಬರ್ತಿದೆ ಅಂತ ಎಲ್ಲರೂ ಹುಡುಕ್ತಿದ್ದಾರೆ. ಗೆಜ್ಜೆ ಶಬ್ಧ ಬರ್ತಿದ್ದಂತೆ ಲೈಟ್ ಕೂಡ ಆನ್ ಆಫ್ ಆಗ್ತಿದೆ. ಇದು ಸ್ಪರ್ಧಿಗಳ ಟೆನ್ಷನ್ ಹೆಚ್ಚಿಸಿದೆ. ಈ ಮಧ್ಯೆ ಬಿಗ್ ಬಾಸ್ ಮನೆ ಬಾಗಿಲು ತೆರೆದಿದ್ದು, ಜಾಹ್ನವಿ ಸೇರಿದಂತೆ ಸ್ಪರ್ಧಿಗಳು ಸ್ವಲ್ಪ ಭಯಗೊಂಡಿದ್ದಾರೆ. ಮೇನ್ ಡೋರ್ ಬಂದ್ ಮಾಡಿ ಅಂತ ರಿಕ್ವೆಸ್ಟ್ ಮಾಡಿದ್ದಾರೆ. ಪ್ರೋಮೋದಲ್ಲಿ ರಕ್ಷಿತಾ ವರ್ತನೆ ಸ್ವಲ್ಪ ಭಿನ್ನವಾಗಿದೆ. ಎದ್ದು, ಬೆಡ್ ಮೇಲೆ ಏನೇನೋ ಮಾಡುವ ರಕ್ಷಿತಾ ನಂತ್ರ ನಗ್ತಿದ್ದಾರೆ.

ಲಕ್ಷ್ಮೀ ನಿವಾಸ, ಅಣ್ಣಯ್ಯ ಸೀರಿಯಲ್‌ನಲ್ಲಿ ಚಮತ್ಕಾರ; ಒಂದು ಬದಲಾವಣೆಗೆ ವೀಕ್ಷಕರು ಫುಲ್ ಖುಷ್!

ಪ್ರೋಮೋ ನೋಡಿದ ಫ್ಯಾನ್ಸ್, ಇದೆಲ್ಲ ರಕ್ಷಿತಾ ಕಿತಾಪತಿ ಎನ್ನುತ್ತಿದ್ದಾರೆ. ಗೆಜ್ಜೆ ಶಬ್ಧ ಮಾಡಿ ರಕ್ಷಿತಾ ಎಲ್ಲರನ್ನು ಎಚ್ಚರಗೊಳಿಸಿದ್ದಾರೆ ಎನ್ನುವ ಕಮೆಂಟ್ ಗಳು ಬಂದಿವೆ. ಆಟಕ್ಕೂ ಸೈ, ತಮಾಷೆಗೂ ಸೈ ರಕ್ಷಿತಾ ಎಂಬುದು ಕೆಲವರ ಅಭಿಪ್ರಾಯ. ಮತ್ತೆ ಕೆಲವರು ಇದು ಮಿಡ್ ವೀಕ್ ನಾಮಿನೇಷನ್ ಎನ್ನುತ್ತಿದ್ದಾರೆ. ವೀಕ್ಷಕರಿಗೆ ಇದು ವೈಲ್ಡ್ ಕಾರ್ಡ್ ಎಂಟ್ರಿ ಸೂಚನೆ ಎನ್ನುವ ಅನುಮಾನ ಬಂದಿದೆ. ಬಿಗ್ ಬಾಸ್ ಮನೆಯಲ್ಲಿ ನಾಗವಲ್ಲಿ ಎನ್ನುವ ತಮಾಷೆ ಕಮೆಂಟ್ ಕೂಡ ಜನರು ಮಾಡ್ತಿದ್ದಾರೆ. ಆದ್ರೆ ಬಿಗ್ ಬಾಸ್ ಮನೆಯಲ್ಲಿ ನಿಜಕ್ಕೂ ಆಗಿದ್ದು ಏನು? ವೈಲ್ಡ್ ಕಾರ್ಡ್ ಎಂಟ್ರಿ ಆಗ್ತಿದೆಯಾ? ಈ ಎಲ್ಲ ಪ್ರಶ್ನೆಗೆ ಇಂದಿನ ಎಪಿಸೋಡ್ ನಲ್ಲಿ ಉತ್ತರ ಸಿಗ್ಬೇಕಿದೆ.

View post on Instagram