MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Women
  • ಅಂಬಾನಿ ಕುಟುಂಬದ ಇಬ್ಬರು ಸೊಸೆಯರಲ್ಲಿ ಅಡುಗೆಮನೆ ಹಿಡಿತ ಯಾರ ಕೈಯಲ್ಲಿದೆ?

ಅಂಬಾನಿ ಕುಟುಂಬದ ಇಬ್ಬರು ಸೊಸೆಯರಲ್ಲಿ ಅಡುಗೆಮನೆ ಹಿಡಿತ ಯಾರ ಕೈಯಲ್ಲಿದೆ?

Mukesh Ambani's Antilia kitchen: ಭಾರತದ ಶ್ರೀಮಂತ ಅಂಬಾನಿ ಕುಟುಂಬದ ಅಡುಗೆಮನೆಯ ಜವಾಬ್ದಾರಿಯನ್ನು ಯಾರು ನಿಭಾಯಿಸುತ್ತಾರೆ ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ. ಕುಟುಂಬದ ಸಸ್ಯಹಾರಿ ಆಹಾರ ಪದ್ಧತಿ ಮತ್ತು ಮೆನುವನ್ನು ಯಾರು ನಿರ್ಧರಿಸುತ್ತಾರೆ?

2 Min read
Author : Mahmad Rafik
Published : Oct 15 2025, 02:23 PM IST
Share this Photo Gallery
  • FB
  • TW
  • Linkdin
  • Whatsapp
16
ಅಡುಗೆಮನೆ ಮತ್ತು ಅಂಬಾನಿ ಕುಟುಂಬದ ಸೊಸೆಯರು
Image Credit : FB

ಅಡುಗೆಮನೆ ಮತ್ತು ಅಂಬಾನಿ ಕುಟುಂಬದ ಸೊಸೆಯರು

ಭಾರತದ ಶ್ರೀಮಂತ ವ್ಯಕ್ತಿಯಾಗಿರುವ ಮುಕೇಶ್ ಅಂಬಾನಿ ಅವರ ಖಾಸಗಿ ವಿಷಯಗಳನ್ನು ತಿಳಿದುಕೊಳ್ಳಲು ಜನರು ಕುತೂಹಲ ಹೊಂದಿರುತ್ತಾರೆ. ಅಂಬಾನಿ ಕುಟುಂಬ ಮುಂಬೈನ ಅಂಟಿಲಿಯಾ ಬೃಹತ್ ಬಂಗ್ಲೆಯಲ್ಲಿ ವಾಸವಾಗಿದೆ. ಈ ಮನೆಯಲ್ಲಿ ದಿನಿತ್ಯದ ಕೆಲಸಕ್ಕಾಗಿ ನೂರಾರು ಜನರಿದ್ದಾರೆ. ಆದ್ರೆ ಅಡುಗೆಮನೆ ಮಹಿಳೆಯರಿಗೆ ಮನೆಯಲ್ಲಿನ ನೆಚ್ಚಿನ ಸ್ಥಳವಾಗಿದೆ.

26
ಅವಿಭಕ್ತ ಕುಟುಂಬ
Image Credit : Pinterest

ಅವಿಭಕ್ತ ಕುಟುಂಬ

ಸಾಮಾನ್ಯವಾಗಿ ಇಡೀ ಅಡಗೆಮನೆ ತಮ್ಮ ಹಿಡಿತದಲ್ಲಿರಬೇಕೆಂದು ಮಹಿಳೆಯರು ಬಯಸುತ್ತಾರೆ. ಅವಿಭಕ್ತ ಕುಟುಂಬವಾಗಿದ್ರೆ ಮನೆಯ ಮಹಿಳಾ ಸದಸ್ಯರ ನಡುವೆ ಕಿಚನ್ ಮೇಲೆ ಹಿಡಿತ ಸಾಧಿಸಲು ಪೈಪೋಟಿ ಇರುತ್ತದೆ. ಮುಕೇಶ್ ಅಂಬಾನಿ ಕುಟುಂಬದಲ್ಲಿ ಇಬ್ಬರು ಸೊಸೆಯರಿದ್ದಾರೆ. ಶ್ಲೋಕಾ ಮೆಹ್ತಾ ಹಿರಿಯ ಸೊಸೆಯಾದ್ರೆ, ರಾಧಿಕಾ ಮರ್ಚೆಂಟ್ ಕಿರಿಯ ಸೊಸೆ. ಇವರಿಬ್ಬರ ನಡುವೆ ಯಾರ ಬಳಿಯಲ್ಲಿ ಅಡುಗೆಮನೆ ಹಿಡಿತದಲ್ಲಿದೆ ಗೊತ್ತಾ?

Related Articles

Related image1
ತನ್ನ ಹೆಂಡ್ತಿಗಿಂತಲೂ ತಮ್ಮನ ಹೆಂಡ್ತಿ ಕೇರ್ ಮಾಡಿದ ಆಕಾಶ್ ಅಂಬಾನಿ, ಇದು ಬೇಕಾ ಕೇಳ್ತಿದ್ದಾರೆ ನೆಟ್ಟಿಗರು!
Related image2
ಗಯಾದಲ್ಲಿ ಪಿಂಡದಾನ ಮಾಡಿದ ಮುಖೇಶ್ ಅಂಬಾನಿ ಪುರೋಹಿತರಿಗೆ ನೀಡಿದ್ದೇನು?
36
ಸಸ್ಯಹಾರಿ ಕುಟುಂಬ
Image Credit : Getty

ಸಸ್ಯಹಾರಿ ಕುಟುಂಬ

ಅಂಬಾನಿ ಅವರದ್ದು ಸಾಮಾನ್ಯ ಕುಟುಂಬವೇನಲ್ಲ. ಇಲ್ಲಿ ಎಲ್ಲದಕ್ಕೂ ಕೆಲಸಗಾರರಿದ್ದಾರೆ. ಇನ್ನು ಅಂಟಿಲಿಯಾ ನಿವಾಸಕ್ಕೆ ಹೋಟೆಲ್‌ಗಳಿಂದಲೂ ಆಹಾರ ಬರುತ್ತಿರುತ್ತದೆ. ಅಂಟಿಲಿಯಾ ನಿವಾಸದಲ್ಲಿ ಅಡುಗೆ ತಯಾರಿಸಲು ಶೆಫ್‌ಗಳು ಇಲ್ಲಿದ್ದಾರೆ. ಅಂಬಾನಿ ಕುಟುಂಬ ಸಸ್ಯಹಾರಿಗಳಾಗಿದ್ದಾರೆ. ಯಾವ ದಿನ, ಯಾವ ಆಹಾರ ಸಿದ್ಧವಾಗಬೇಕು ಎಂಬುದರ ಕುರಿತು ಅಂಬಾನಿ ಕುಟುಂಬದ ಹಿರಿಯ ಸೊಸೆ ಶ್ಲೋಕಾ ಮೆಹ್ತಾ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ವರದಿಯಾಗಿದೆ.

46
ಅಡುಗೆಮನೆ ಹಿಡಿತ
Image Credit : instagram

ಅಡುಗೆಮನೆ ಹಿಡಿತ

ಹಿರಿಯ ಸೊಸೆಯಾಗಿರುವ ಕಾರಣ ಶ್ಲೋಕಾ ಮೆಹ್ತಾರಿಗೆ ಕುಟುಂಬದ ಆಚರಣೆ ಸೇರಿದಂತೆ ಸದಸ್ಯರ ಬೇಕು ಬೇಡಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಕುಟುಂಬದ ಸಂಪ್ರದಾಯ ಮತ್ತು ಆಹಾರ ಪದ್ಧತಿ ಅರ್ಥ ಮಾಡಿಕೊಂಡಿರುವ ಶ್ಲೋಕಾ ಮೆಹ್ತಾ, ಅಡುಗೆಮನೆ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಹೊಂದಿದ್ದಾರೆ. ಕುಟುಂಬ ಸದಸ್ಯರು, ಅತಿಥಿಗಳಿಗೆ ಮತ್ತು ಹಬ್ಬ ಸೇರಿದಂತೆ ವಿಶೇಷ ದಿನಗಳಲ್ಲಿ ಯಾವ ರೀತಿಯ ಭಕ್ಷ್ಯ ತಯಾರಿಸಬೇಕು ಎಂಬುದರ ಬಗ್ಗೆ ಶ್ಲೋಕಾ ಮೆಹ್ತಾ ಸೂಚನೆ ನೀಡುತ್ತಾರಂತೆ.

56
ಕಿರಿಯ ಸೊಸೆ ರಾಧಿಕಾ ಮರ್ಚೆಂಟ್
Image Credit : instagram

ಕಿರಿಯ ಸೊಸೆ ರಾಧಿಕಾ ಮರ್ಚೆಂಟ್

ರಾಧಿಕಾ ಮರ್ಚೆಂಟ್ ಇತ್ತೀಚೆಗಷ್ಟೇ ಅಂಬಾನಿ ಕುಟುಂಬಕ್ಕೆ ಸೇರ್ಪಡೆಯಾಗಿದ್ರಿಂದ ಇಲ್ಲಿ ಸಂಪ್ರದಾಯದ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿಲ್ಲ. ಕಳೆದ ಕೆಲವು ತಿಂಗಳಿನಿಂದ ಕುಟುಂಬ ಕಾರ್ಯಕ್ರಮದ ಹೊರತಾಗಿಯೂ ವಿವಿಧ ಸಾರ್ವಜನಿಕ ಸಮಾರಂಭಗಳಲ್ಲಿಯೂ ರಾಧಿಕಾ ಮರ್ಚೆಂಟ್ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Radhika Merchant vs Shloka Mehta, ಮುಖೇಶ್ ಅಂಬಾನಿ ಸೊಸೆಯಂದಿರಲ್ಲಿ ಯಾರು ಸಿರಿವಂತೆ ?

66
ಅಂಬಾನಿ ಕುಟುಂಬದ ಆಹಾರ ಪದ್ಧತಿ
Image Credit : Instagram

ಅಂಬಾನಿ ಕುಟುಂಬದ ಆಹಾರ ಪದ್ಧತಿ

ಕೆಲ ವರದಿಗಳ ಪ್ರಕಾರ, ಅಂಬಾನಿ ಕುಟುಂಬ ಸಾಂಪ್ರದಾಯಿಕ ಮತ್ತು ಆರೋಗ್ಯಕರ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡಿದೆ. ಮುಕೇಶ್ ಅಂಬಾನಿಯವರು ಶುದ್ಧ ಸಸ್ಯಹಾರಿಗಳಾಗಿದ್ದು, ಮನೆಯಲ್ಲಿ ತಯಾರಿಸಿದ ಆಹಾರಕ್ಕೆ ಆದ್ಯತೆ ನೀಡುತ್ತಾರೆ. ಶೇಷ ಸಂದರ್ಭಗಳಲ್ಲಿ ಸಾಂಪ್ರದಾಯಿಕ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಮುಂಬೈನ ವಿವಿಧ ರೆಸ್ಟೋರೆಂಟ್‌ಗಳಿಂದಲೂ ಆಹಾರವನ್ನು ತರಿಸಿಕೊಳ್ಳುತ್ತಾರೆ. ಪ್ರತಿ ಭಾನುವಾರ ಅಂಬಾನಿ ಕುಟುಂಬಕ್ಕೆ 'ಮೈಸೂರು ಕೆಫೆ'ಯಿಂದ ಆಹಾರ ಸರಬರಾಜು ಆಗುತ್ತದೆ.

ಇದನ್ನೂ ಓದಿ: 15 ಕೋಟಿಯ ಬ್ಯಾಗ್ ಹಿಡ್ಕೊಂಡು ಓಡಾಡಿದ ನೀತಾ ಅಂಬಾನಿ: ಅಂಥಾ ವಿಶೇಷತೆ ಏನಿದೆ ಈ ಬ್ಯಾಗಲ್ಲಿ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಮುಕೇಶ್ ಅಂಬಾನಿ
ಅಡುಗೆಮನೆ ಸಲಹೆಗಳು
ಮಹಿಳೆಯರು

Latest Videos
Recommended Stories
Recommended image1
ತಾಮ್ರದ ಪಾತ್ರೆ ಕಪ್ಪಾಗೋ ಚಿಂತೆನಾ? ಇನ್ಮುಂದೆ ಟೆನ್ಷನ್​ ಬಿಡಿ- ಫಳಫಳ ಹೊಳಪಿಗೆ ಇಲ್ಲಿದೆ ಸೂಪರ್​ ಟಿಪ್ಸ್​
Recommended image2
ಮನೆ ಬಿಟ್ಟು ಹೋಗುವಾಗ ಕಳ್ಳರ ಭಯವಿದ್ದರೆ ಚಿನ್ನವನ್ನು ಹೀಗೂ ಮುಚ್ಚಿಡಬಹುದು
Recommended image3
ಪ್ರಾಣಕ್ಕೆ ಕುತ್ತು ತರ್ಬಹುದು ಮೂಗು ಬೊಟ್ಟು, ಧರಿಸಿದ್ಮೇಲೆ ಈ ಕೆಲ್ಸ ಮರಿಬೇಡಿ
Related Stories
Recommended image1
ತನ್ನ ಹೆಂಡ್ತಿಗಿಂತಲೂ ತಮ್ಮನ ಹೆಂಡ್ತಿ ಕೇರ್ ಮಾಡಿದ ಆಕಾಶ್ ಅಂಬಾನಿ, ಇದು ಬೇಕಾ ಕೇಳ್ತಿದ್ದಾರೆ ನೆಟ್ಟಿಗರು!
Recommended image2
ಗಯಾದಲ್ಲಿ ಪಿಂಡದಾನ ಮಾಡಿದ ಮುಖೇಶ್ ಅಂಬಾನಿ ಪುರೋಹಿತರಿಗೆ ನೀಡಿದ್ದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved