Rashmika Mandanna - Malaika dance : ರಶ್ಮಿಕಾ ಮಂದಣ್ಣ ಹಾಗೂ ಮಲೈಕಾ ಅರೋರಾ ಡಾನ್ಸ್ ವಿಡಿಯೋ ವೈರಲ್ ಆಗಿದೆ. ಮಲೈಕಾ ಬಳುಕೊ ಸೊಂಟ ನೋಡಿದ ಫ್ಯಾನ್ಸ್, ರಶ್ಮಿಕಾ ಮಾರ್ಕ್ಸ್ ಕಟ್ ಮಾಡಿ, ಮಲೈಕಾಗೆ ಶಹಬ್ಬಾಸ್ ಎಂದಿದ್ದಾರೆ. 

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (National Crush Rashmika Mandanna) ಅದೆಷ್ಟೆ ಪ್ರಸಿದ್ಧಿ ಪಡೆದಿರಲಿ, ಆಂಟಿ ಮುಂದೆ ಸೋಲುವ ಸ್ಥಿತಿ ಬಂದಿದೆ. ಸೂಪರ್ ಸ್ಟಾರ್ ಗಳ ಜೊತೆ ಸಿನಿಮಾ ಮಾಡಿ, ಇಡೀ ದೇಶ ಮಾತ್ರವಲ್ಲ ವಿದೇಶದಲ್ಲೂ ಸಿಕ್ಕಾಪಟ್ಟೆ ಫ್ಯಾನ್ಸ್ ಹೊಂದಿರುವ ರಶ್ಮಿಕಾ ಮಂದಣ್ಣ, ಐಟಂ ಸಾಂಗ್ ಗೆ ಹೆಜ್ಜೆ ಹಾಕೋದ್ರಲ್ಲಿ ಹಿಂದೆ ಬಿದ್ದಿದ್ದಾರೆ. ಐಟಂ ಸಾಂಗ್ ಗೆ ಹೆಸರಾಗಿರುವ, ದೇಹದ ಪ್ರತಿ ಭಾಗವನ್ನು ಬಳ್ಳಿಯಂತೆ ಬಳುಕಿಸ್ತಾ, ಹುಡುಗ್ರನ್ನು ಈಗ್ಲೂ ತಮ್ಮ ಸೌಂದರ್ಯದಿಂದ ಸೆಳೆಯುತ್ತಿರುವ ಮಲೈಕಾ ಅರೋರಾ ಮುಂದೆ ರಶ್ಮಿಕಾ ಏನೂ ಅಲ್ಲ ಎನ್ನುವ ಅಭಿಪ್ರಾಯ ಎಲ್ಲೆಡೆ ಕೇಳಿ ಬರ್ತಿದೆ. ಸಿನಿಮಾದಲ್ಲಿ ಮಲೈಕಾ ಅರೋರಾ (Malaika Arora) ಜೊತೆ ಕೊಡಗಿನ ಬೆಡಗಿ ರಶ್ಮಿಕಾ ಡಾನ್ಸ್ ಮಾಡಿದ್ದು, ವಿಡಿಯೋ ವೈರಲ್ ಆಗಿದೆ.

ಮಲೈಕಾ ಅರೋರಾ ಜೊತೆ ರಶ್ಮಿಕಾ ಐಟಂ ಸಾಂಗ್ : 

ಮ್ಯಾಡಾಕ್ ಯೂನಿವರ್ಸ್ನ ಮುಂಬರುವ ಹಾರರ್- ಕಾಮಿಡಿ ಸಿನಿಮಾ ಥಮ್ಮಾ. ಸಿನಿಮಾದ ಹೊಸ ಐಟಂ ಸಾಂಗ್ ರಿಲೀಸ್ ಆಗಿದೆ. ಮುಂಬೈನಲ್ಲಿ ಸಾಂಗ್ ರಿಲೀಸ್ ಮಾಡಲಾಗಿದೆ. ಈ ಡಾನ್ಸ್ ನಲ್ಲಿ ಕಾಣಿಸಿಕೊಂಡಿರುವ ಮಲೈಕಾ ಅರೋರಾ ಸದ್ಯ ಸುದ್ದಿಯಲ್ಲಿದ್ದಾರೆ. ಮಲೈಕಾ ಡಾನ್ಸ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ರಶ್ಮಿಕಾ ಮಂದಣ್ಣ ಹಾಗೂ ಮಲೈಕಾ ಅರೋರಾ ಈ ಸಿನಿಮಾದ ಪಾಯ್ಸನ್ ಬೇಬಿ ಹಾಡಿಗೆ ಡಾನ್ಸ್ ಮಾಡಿದ್ದು, ಮಲೈಕಾ ಮುಂದೆ ರಶ್ಮಿಕಾ ಡಲ್ಲಾಗಿ ಕಾಣ್ತಾರೆ.

ಹಾಸ್ಯ ನಟ ಬ್ರಹ್ಮಾನಂದಂರನ್ನು ಕಡೆಗಣಿಸಿ ದೊಡ್ಡ ಹೊಡೆತ ತಿಂದ ವಿಜಯಶಾಂತಿ.. ಯಾವುದು ಆ ಸಿನಿಮಾ?

ವೇದಿಕೆ ಮೇಲೂ ಮಿಂಚಿದ ಮಲೈಕಾ ಅರೋರಾ : 

ಮುಂಬೈನಲ್ಲಿ ಸಾಂಗ್ ರಿಲೀಸ್ ಕಾರ್ಯಕ್ರಮಕ್ಕೆ ಬಂದಿದ್ದ 51 ವರ್ಷದ ಮಲೈಕಾ ಹಾಗೂ 29 ವರ್ಷದ ರಶ್ಮಿಕಾ ವೇದಿಕೆ ಮೇಲೆ ಡಾನ್ಸ್ ಮಾಡಿದ್ದಾರೆ. ಸಾಂಗ್ ಕೇಳ್ತಿದ್ದಂತೆ ಮಲೈಕಾ ಕುಣಿಯೋಕೆ ಶುರು ಮಾಡಿದ್ದಾರೆ. ಆದ್ರೆ ಮಲೈಕಾ ಸಮ ಡಾನ್ಸ್ ಮಾಡಲು ರಶ್ಮಿಕಾಗೆ ಸಾಧ್ಯ ಆಗ್ತಿಲ್ಲ. ಇದನ್ನು ನೋಡಿದ ಫ್ಯಾನ್ಸ್ ಕಮೆಂಟ್ ಶುರು ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗ್ತಿದ್ದಂತೆ, ಜನರು ಮಲೈಕಾ ಡಾನ್ಸ್ ಹೊಗಳಿದ್ದಲ್ದೆ ರಶ್ಮಿಕಾ ಕಾಲೆಳೆದಿದ್ದಾರೆ.

ಸೋಶಿಯಲ್ ಮೀಡಿಯಾ ಕಮೆಂಟ್ : 

ರಶ್ಮಿಕಾ ಹಾಗೂ ಮಲೈಕಾ ಡಾನ್ಸ್ ನೋಡಿದ ಬಳಕೆದಾರರು, ಇದು ರಶ್ಮಿಕಾ ಸಾಮರ್ಥ್ಯಕ್ಕೆ ಮೀರಿದ್ದು ಎಂದಿದ್ದಾರೆ. ವಯಸ್ಸು ಕೇವಲ ಒಂದು ಸಂಖ್ಯೆ,ಅತ್ಯುತ್ತಮ ನಟಿಯರೂ ಮಲೈಕಾ ಸೋಲಿಸೋಕೆ ಕಷ್ಟಪಡ್ತಿದ್ದಾರೆ ಅಂತ ಕಮೆಂಟ್ ಮಾಡಿದ್ದಾರೆ. ಆಂಟಿ, ರಶ್ಮಿಕಾರನ್ನು ಹಿಂದಿಕ್ಕಿದ್ದಾರೆ ಎನ್ನುವ ಕಮೆಂಟ್ ಕೂಡ ಬಮದಿದೆ. ಮಲೈಕಾ ರಶ್ಮಿಕಾರನ್ನು ನುಂಗ್ತಾರೆ, ಮಲೈಕಾ ಬೆಂಕಿ, ರಶ್ಮಿಕಾ, ನೀನು ಟಾಲಿವುಡ್ಗೆ ಸರಿ, ಬಾಲಿವುಡ್ಗೆ ಬರಬೇಡ, ರಶ್ಮಿಕಾ ನಿಮ್ಗೆ ಇದೆಲ್ಲ ಬೇಡ ಎನ್ನುವ ಕಮೆಂಟ್ ಗಳು ಬಂದಿವೆ.

ನೀವು ಹೀರೋ ಮೆಟಿರಿಯಲ್ ಅಲ್ಲ ಎಂದು ಅವಮಾನಿಸಿದ ಪತ್ರಕರ್ತೆ: ತಕ್ಕ ಉತ್ತರ ನೀಡಿ ಹೀರೋ ಆದ ನಟ ಶರತ್‌ಕುಮಾರ್

ಇನ್ನು ರಶ್ಮಿಕಾ ಅಭಿಯನದ ಥಮ್ಮಾ ಸಿನಿಮಾ ಅಕ್ಟೋಬರ್ 21 ರಂದು ತೆರೆಗೆ ಬರಲಿದೆ. ಪಾಯ್ಸನ್ ಬೇಬಿ ಹಾಡನ್ನು ಜಾಸ್ಮಿನ್ ಸ್ಯಾಂಡ್ಲಾಸ್, ಸಚಿನ್-ಜಿಗರ್ ಮತ್ತು ದಿವ್ಯಾ ಕುಮಾರ್ ಹಾಡಿದ್ದಾರೆ. ಇದು ಈ ವರ್ಷದ ಅತಿದೊಡ್ಡ ಬಾಕ್ಸ್ ಆಫೀಸ್ ಹಿಟ್ಗಳಲ್ಲಿ ಒಂದಾಗುವ ನಿರೀಕ್ಷೆಯಿದೆ. ರಶ್ಮಿಕಾ ಮಂದಣ್ಣ ಸದ್ಯ ಸಿಕ್ಕಾಪಟ್ಟೆ ಬ್ಯುಸಿ ಇರುವ ನಟಿ. ತೆಲುಗು, ತಮಿಳು, ಹಿಂದೆ ಸೇರಿದಂತೆ 8 ಸಿನಿಮಾಗಳು ಅವ್ರ ಕೈನಲ್ಲಿದೆ. ಥಮ್ಮಾ, ದಿ ಗರ್ಲ್ ಫ್ರೆಂಡ್, ಪುಷ್ಪಾ 3 ಸೇರಿದಂತೆ ಅನೇಕ ಸಿನಿಮಾಗಳಲ್ಲಿ ರಶ್ಮಿಕಾ ನಟಿಸುತ್ತಿದ್ದು, ಈ ಮಧ್ಯೆ ಅವ್ರ ಎಂಗೇಜ್ ಮೆಂಟ್ ರಿಂಗ್ ಎಲ್ಲರ ಗಮನ ಸೆಳೆಯುತ್ತಿದೆ. 51ನೇ ವಯಸ್ಸಿನಲ್ಲೂ ಯಂಗ್ ಆಗಿರುವ ಮಲೈಕಾ ಅರೋರಾ, ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿವಹಿಸಿದ್ದು, ಐಟಂ ಸಾಂಗ್ ಗಳಲ್ಲಿ ಮಿಂಚಿತ್ತಿದ್ದಾರೆ.

View post on Instagram