- Home
- Entertainment
- TV Talk
- ಮದುವೆ ಮೇಕಿಂಗ್ ವಿಡಿಯೋ ರಿಲೀಸ್ ಮಾಡಿ Karna ಸೀರಿಯಲ್ ವೀಕ್ಷಕರ ತಲೆಗೆ ಹುಳ ಬಿಟ್ಟ ನಿರ್ದೇಶಕರು
ಮದುವೆ ಮೇಕಿಂಗ್ ವಿಡಿಯೋ ರಿಲೀಸ್ ಮಾಡಿ Karna ಸೀರಿಯಲ್ ವೀಕ್ಷಕರ ತಲೆಗೆ ಹುಳ ಬಿಟ್ಟ ನಿರ್ದೇಶಕರು
Karna Serial Making Video: ಇಷ್ಟೆಲ್ಲಾ ಆದ್ರೂ ಇಂತಿಪ್ಪ ನಮ್ಮ ನಿರ್ದೇಶಕರು ಮದುವೆಯ ಮೇಕಿಂಗ್ ವಿಡಿಯೋ ರಿಲೀಸ್ ಮಾಡಿ, "ಮೊಮ್ಮಕ್ಕಳ ಮದುವೆ ಅಂತ ಅಜ್ಜಿಯರು ಫುಲ್ ಖುಷ್, ಕರ್ಣ ತಾಳಿ ಯಾರಿಗೆ ಕಟ್ತಾನೆ ಅನ್ನೋದೇ ಫುಲ್ ಸಸ್ಪೆನ್ಸ್!" ಅಂದಿದ್ದಾರೆ. ವೀಕ್ಷಕರಿಗೆ ಏನಪ್ಪಾ ಇದು ಹೊಸ ವರಸೆ ಅಂತೆನಿಸಿದೆ.

ಕರ್ಣ ಮದ್ವೆಯಾಗೋದು ಯಾರನ್ನ?
ಕೆಲವು ದಿನಗಳ ಹಿಂದೆಯಷ್ಟೇ ಕರ್ಣ ಮದ್ವೆ ಆಗೋದು ನಿತ್ಯಾಳನ್ನೇ ಅಂತ ಪ್ರೊಮೊ ಬಿಟ್ಟು ಇಷ್ಟು ದಿನ ವೀಕ್ಷಕರ ನಿದ್ದೆಗೆಡಿಸಿದ್ದ ನಿರ್ದೇಶಕರು, ಇದೀಗ ಮತ್ತೊಂದು ಹೊಸ ವಿಡಿಯೋ ರಿಲೀಸ್ ಮಾಡಿದ್ದಾರೆ. ಇದನ್ನ ನೋಡಿದರೆ ನಿಮಗೂ ಸಹ ಕರ್ಣ ಮದ್ವೆಯಾಗೋದು ಯಾರನ್ನ ಎಂಬ ಕುತೂಹಲ ಹೆಚ್ಚಾಗುತ್ತದೆ.
ಫುಲ್ ಸಸ್ಪೆನ್ಸ್!
ಮಂಗಳವಾರ ಸಂಚಿಕೆಯಲ್ಲಿ ನಿತ್ಯಾ ಮದುವೆಯಾಗುತ್ತಿರುವ ಹುಡುಗ ಕಾಣೆಯಾಗಿದ್ದಾನೆ. ಮನೆಯ ಸದಸ್ಯರೆಲ್ಲರೂ ಎಲ್ಲೆಡೆ ಹುಡುಕಿದರೂ ಪತ್ತೆಯಿಲ್ಲ. ಕೊನೆಗೆ ನಿತ್ಯಾಳೇ ಹುಡುಗನ ಮನೆಯ ಹತ್ತಿರ ಹೋದಾಗ ಅವರು ಮನೆ ಕ್ಲೋಸ್ ಮಾಡಿಕೊಂಡು ಹೋಗಿರುವುದು ಗೊತ್ತಾಗುತ್ತದೆ. ಇಂದಿನ ಸಂಚಿಕೆಯಲ್ಲಿ ಕರ್ಣನ ಅಜ್ಜಿ ನಿತ್ಯಾಳನ್ನು ಕರ್ಣ ಮದ್ವೆಯಾಗ್ತಾನೆ ಎಂದು ಘೋಷಿಸಿದ್ದಾಳೆ. ಇದರಿಂದ ನಿತ್ಯಾ, ನಿಧಿ, ಕರ್ಣ ಮೂರು ಜನರ ಹೃದಯ ಒಡೆದುಹೋಗಿದೆ. ಇಷ್ಟೆಲ್ಲಾ ಆದ್ರೂ ಇಂತಿಪ್ಪ ನಮ್ಮ ನಿರ್ದೇಶಕರು ಅದೇ ಮದುವೆಯ ಮೇಕಿಂಗ್ ವಿಡಿಯೋ ರಿಲೀಸ್ ಮಾಡಿ, "ಮೊಮ್ಮಕ್ಕಳ ಮದುವೆ ಅಂತ ಅಜ್ಜಿಯರು ಫುಲ್ ಖುಷ್, ಕರ್ಣ ತಾಳಿ ಯಾರಿಗೆ ಕಟ್ತಾನೆ ಅನ್ನೋದೇ ಫುಲ್ ಸಸ್ಪೆನ್ಸ್!" ಅಂದಿದ್ದಾರೆ. ಇದನ್ನ ಕೇಳಿದ ವೀಕ್ಷಕರಿಗೆ ಏನಪ್ಪಾ ಇದು ಹೊಸ ವರಸೆ ಅಂತೆನಿಸಿದೆ.
ಸುಳಿವು ಬಿಟ್ಟುಕೊಟ್ಟಿಲ್ಲ
ಹೌದು, ಈ ಹೊಸ ವಿಡಿಯೋದಲ್ಲಿ ಧಾರಾವಾಹಿ ತಂಡದ ಸದಸ್ಯರೆಲ್ಲರೂ ಮಾತನಾಡಿದ್ದಾರೆ. ಇದು ಮದುವೆಯ ಮೇಕಿಂಗ್ ವಿಡಿಯೋ ಆಗಿದೆ. ಪ್ರತಿಯೊಬ್ಬರು ಧಾರಾವಾಹಿ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡಿರುವುದನ್ನು ನೋಡಿದರೆ, ಯಾರೊಬ್ಬರು ಇಲ್ಲಿ ಕರ್ಣ ಯಾರನ್ನು ಮದುವೆಯಾಗುತ್ತಾನೆ ಎಂಬ ಸುಳಿವು ಬಿಟ್ಟುಕೊಟ್ಟಿಲ್ಲ. ಸ್ವತಃ ಧಾರಾವಾಹಿ ತಂಡದವರೇ ಖುಷಿ ಖುಷಿಯಾಗಿ ಮಾತನಾಡಿರುವುದನ್ನ ನೋಡಿದರೆ ಧಾರಾವಾಹಿಯಲ್ಲಿ ಮತ್ತೊಂದು ತಿರುವು ಕಾದಿದೆ ಎಂಬುದು ಅರ್ಥವಾಗುತ್ತದೆ.
ಮಾತುಗಳ ಅರ್ಥ ನಿಗೂಢ
ಸದ್ಯ ರಿಲೀಸ್ ಮಾಡಿರುವ ಮೇಕಿಂಗ್ ವಿಡಿಯೋದಲ್ಲಿ ಅಜ್ಜಿಯಂದಿರು, ಕರ್ಣನ ತಾಯಿ, ನಿತ್ಯಾ-ನಿಧಿ ಮಾತುಗಳಲ್ಲಿ ಏನೂ ಹೊಸತು ಕಾಣಿಸದಿದ್ದರೂ ಕರ್ಣ ಹಾಗೂ ತಂದೆ ರಮೇಶ್ ಮಾತುಗಳ ಅರ್ಥ ನಿಗೂಢವಾಗಿದೆ.
ಮಿಶ್ರ ಪ್ರತಿಕ್ರಿಯೆ
ವಿಡಿಯೋದಲ್ಲಿ ಕರ್ಣ, ಕಣ್ಣಿಗೆ ಕಾಣದೆ ಇರುವ ಸತ್ಯ ಇನ್ನೊಂದು ಅಂದಿದ್ದಾನೆ. ಕರ್ಣನ ಮಾತನ್ನು ಕೇಳಿ ಇದೀಗ ಕೆಲವರು ಮುಂದೇನಾಗಬಹುದು ಅಂದುಕೊಂಡರೆ, ಮತ್ತೆ ಕೆಲವರು ನಿತ್ಯಾ ಮದುವೆಯಾಗುವುದು ಕರ್ಣನನ್ನೇ ಅಂತ ಗೊತ್ತಾದ ಮೇಲೆ ಇದೆಲ್ಲಾ ಬೇಕಿತ್ತಾ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಒಂದು ಲೆಕ್ಕದಲ್ಲಿ ನಾವಿಲ್ಲಿ ವೀಕ್ಷಕರ ಕಾಮೆಂಟ್ಸ್ ಅನ್ನು ಅಲ್ಲಗಳೆಯುವಂತಿಲ್ಲ. ಯಾಕಂದ್ರೆ ಕೆಲವೊಮ್ಮೆ ವೀಕ್ಷಕರ ಅನಿಸಿಕೆಯೇ ನಿಜವಾಗಿದೆ. ಹಾಗಾದರೆ ಕರ್ಣ ಧಾರಾವಾಹಿ ಫ್ಯಾನ್ಸ್ ಹೇಳ್ತಿರೋದೇನು, ಯಾವುದು ನಿಜವಾಗುತ್ತೆ ಇವೆಲ್ಲವನ್ನೂ ಮುಂದಿನ ಸಂಚಿಕೆಯಲ್ಲಿ ಕಾದು ನೋಡಬೇಕಿದ್ದು, ನೆಟ್ಟಿಗರು ಹೇಳ್ತಿರೋದೇನು ನೋಡೋಣ..
ನೆಟ್ಟಿಗರು ಹೇಳ್ತಿರೋದೇನು?
*ಈ ಬಿಲ್ಡಪ್‌ಗೆ ಕಮ್ಮಿ ಇಲ್ಲ, ಈ ತರ ಎಷ್ಟು ಸ್ಟಾರ್ಟಿಂಗ್‌ನಿಂದ ಬಿಲ್ಡಪ್ ಕೊಟ್ಟು ಕೊನೆಗೆ ಬಾವಿಲಿ ನೊಕೋದು ಅಲ್ವಾ.
*ನೀವು ಇಷ್ಟು ಕಷ್ಟ ಪಟ್ಟು, ಇಷ್ಟ ಪಟ್ಟು ಮಾಡ್ತಿರೋ ಈ ಒಂದು ಸಂಭ್ರಮಕ್ಕೆ ಸಾರ್ಥಕತೆ ಸಿಗ್ಬೇಕು ಅಂದ್ರೆ ನಿಧಿ ಕರ್ಣ ನ ಮದ್ವೆ ಆಗ್ಲೇಬೇಕು.
*ನೀವೆಷ್ಟು ಖುಷಿ ಪಟ್ಟಿದ್ದೀರೋ ಅಷ್ಟೇ ಖುಷಿ ನಮಗೆ ಇದೆ. ಆದ್ರೆ ನಿಧಿನಾ ಬಿಟ್ಟು ನಿತ್ಯ ಜೊತೆ ಮದುವೆ ಮಾಡಿಸುತ್ತಿದ್ದೀರಾ? ಅದೇ ಬೇಜಾರು. ನಿತ್ಯ ಜೊತೆ ಮದುವೆ ಮಾಡಿಸಿದ್ರೆ ನಾವು ಯಾರು ಸೀರಿಯಲ್ ನೋಡಲ್ಲ.
*ಈ ಇಬ್ಬರು ಅಜ್ಜಿ ಇಂದ ಮೂರು ಜನರ ಜೀವನ ಹಾಳಾಯ್ತು.
*ಕಣ್ಣಿಗೆ ಕಾಣದೆ ಇರುವ ಸತ್ಯ ಇನ್ನೊಂದು. ಕರ್ಣ ಮಾತಿನಲ್ಲಿ ಎಲ್ಲದಕ್ಕೂ ಉತ್ತರ ಇದೆ ಅನ್ಸುತ್ತೆ.
*ನಿಧಿ-ಕರ್ಣ ನಿತ್ಯಾ-ಸಂಜು ಮದ್ವೆ ಆದ್ರೆ ಚೆನ್ನಾಗಿರ್ತಿತ್ತು.