ಬಿಗ್‌ಬಾಸ್ 11ರಲ್ಲಿ 50ನೇ ದಿನದಂದು ಹೊರಬಿದ್ದ ಅನುಷಾ ರೈ, ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಎರಡು ದಿನದ ನೋಟೀಸ್‌ನಲ್ಲಿ ಬಿಗ್‌ಬಾಸ್‌ಗೆ ಪ್ರವೇಶಿಸಿದ್ದ ಅವರಿಗೆ ಷಾಪಿಂಗ್ ಮಾಡಲು ಸಮಯ ಸಿಕ್ಕಿರಲಿಲ್ಲ. ತಾಯಿ ಒಂದೂವರೆ ಲಕ್ಷದ ಬಟ್ಟೆ ಕೊಂಡುಕೊಟ್ಟರೂ, ಅದು ತಲುಪುವಷ್ಟರಲ್ಲಿ ಅನುಷಾ ಹೊರಬಿದ್ದಿದ್ದರು. ದುಬಾರಿ ಬಟ್ಟೆಗಳಿಂದಲೇ ಗುರುತಿಸಿಕೊಂಡಿದ್ದ ಅವರಿಗೆ ಹೊಸ ಬಟ್ಟೆಗಳನ್ನು ಪ್ರದರ್ಶಿಸಲಾಗದ ಕೊರಗು.

ಬಿಗ್​ಬಾಸ್​ 11ನೇ ಸೀಸನ್​ನ ವಿನ್ನರ್​ ಘೋಷಣೆಗೆ ಇನ್ನೇನು ಕೆಲವೇ ಕ್ಷಣಗಳು ಬಾಕಿ ಇವೆ. ಇದಾಗಲೇ ಬಿಗ್​ಬಾಸ್​ನಿಂದ ಎಲಿಮಿನೇಟ್​ ಆದವರು ಕೂಡ ಈ ಅಂತಿಮ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ. ಇದರ ನಡುವೆಯೇ, ತಮ್ಮ ಬಿಗ್​ಬಾಸ್​ ಪಯಣದ ಕುರಿತು ಕೆಲವರು ಮೆಲುಕು ಹಾಕುತ್ತಿದ್ದಾರೆ. ಅವರಲ್ಲಿ ಒಬ್ಬರು ಅನುಷಾ ರೈ. ಅನುಷಾ ಅವರು 5ನೇ ಸ್ಪರ್ಧಿಯಾಗಿ ಪ್ರವೇಶ ಮಾಡಿದ್ದರು. ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು. ನರಕದ ಮೂಲಕ ಇವರು ಪ್ರಯಾಣ ಆರಂಭಿಸಿದ್ದರು. ಕೊನೆಗೆ 50ನೇ ದಿನಕ್ಕೆ ಬಿಗ್ ಬಾಸ್ ಪಯಣ ಮುಗಿಸಿ ನಟಿ ಅನುಷಾ ರೈ ಹೊರಬಂದರು. ಇದೀಗ ಅವರು ಅಂದು ನಡೆದ ಘಟನೆಯ ಬಗ್ಗೆ ಮಾತನಾಡಿದ್ದಾರೆ.

ಬಿಗ್​ಬಾಸ್​ಗೆ ಸೆಲೆಕ್ಟ್​ ಆಗಿದ್ದು ಗೊತ್ತಾಗಿದ್ದೇ ಅಲ್ಲಿಗೆ ಹೋಗುವ ಎರಡು ದಿನಗಳ ಮೊದಲು. ಅದಕ್ಕಾಗಿ ಷಾಪಿಂಗ್​ ಮಾಡಲು ಆಗಿರಲಿಲ್ಲ. ಬಿಗ್​ಬಾಸ್​ ಮನೆಯೊಳಕ್ಕೆ ನನ್ನ ಬಳಿ ಇದ್ದ ಬಟ್ಟೆಗಳ ಜೊತೆ ಹೋದೆ. ಕೆಲ ದಿನ ಬಿಟ್ಟು ನನ್ನಮ್ಮ ನನಗಾಗಿ ಸುಮಾರು ಒಂದೂವರೆ ಲಕ್ಷದಷ್ಟು ಬಟ್ಟೆ ಪರ್ಚೇಸ್​ ಮಾಡಿದರು. ಆದರೆ ಅದು ನನಗೆ ತಲುಪುವಷ್ಟರಲ್ಲಿಯೇ ನಾನು ಎಲಿಮಿನೇಟ್​ ಆಗಿ ಹೋಗಿದ್ದೆ ಎಂದು ನೋವು ತೋಡಿಕೊಂಡಿದ್ದಾರೆ. ಅಷ್ಟಕ್ಕೂ ಅನುಷಾ ಅವರು ಗ್ರ್ಯಾಂಡ್​ ಬಟ್ಟೆಗಳಿಂದಲೇ ಬಿಗ್​ಬಾಸ್ ಮನೆಯಲ್ಲಿ ಗುರುತಿಸಿಕೊಂಡವರು. ಅವರ ಬಟ್ಟೆಯ ಬಗ್ಗೆಯೂ ಅಲ್ಲಿ ಇತರ ಸ್ಪರ್ಧಿಗಳು ಸಾಕಷ್ಟು ಚರ್ಚೆ ಮಾಡುತ್ತಿದ್ದರು. ಸಾಮಾನ್ಯವಾಗಿ ವೀಕೆಂಡ್​ಗಳಲ್ಲಿ ಸ್ಪರ್ಧಿಗಳು ಗ್ರ್ಯಾಂಡ್​ ಬಟ್ಟೆ ಹಾಕಿಕೊಂಡರೆ, ಅವರು ವೀಕೆಂಡ್​ಗಳಲ್ಲಿ ಹಾಕಿಕೊಳ್ಳುತ್ತಿದ್ದ ಬಟ್ಟೆಗಳನ್ನು ವೀಕ್​ ಡೇಸ್​ನಲ್ಲಿಯೇ ಹಾಕಿಕೊಳ್ತಿದ್ದವರು ಅನುಷಾ. ಅಂದರೆ ವೀಕೆಂಡ್​ ಬಟ್ಟೆ ಸಕತ್​ ದುಬಾರಿಯಾಗಿರುತ್ತಿತ್ತು.

ಬಿಗ್​ಬಾಸ್​ನಲ್ಲಿ ಇನ್ಮುಂದೆ ಕೇಳಲ್ಲ ಆ ಸುಮಧುರ ದನಿ? ಬೆಂಗಳೂರು ಬಿಡಲು ನಿರ್ಧರಿಸಿದ ಪ್ರದೀಪ್​: ಅಷ್ಟಕ್ಕೂ ಆಗಿದ್ದೇನು?

ಆದರೆ, ಇನ್ನಷ್ಟು ಬಟ್ಟೆ ಕೊಂಡ ಕ್ಷಣದಲ್ಲಿಯೇ ಎಲಿಮಿನೇಟ್​ ಆಗಿರುವ ಕಾರಣ ಬಟ್ಟೆ ವೀಕ್ಷಕರಿಗೆ ತೋರಿಸಲು ಆಗಲಿಲ್ಲ ಎನ್ನುವ ಕೊರಗು ಅನುಷಾ ಅವರಿಗೆ ಇದೆ. ಇನ್ನು ನಟಿ 27 ವರ್ಷ ವಯಸ್ಸಿನ ಅನುಷಾ ರೈ ಕುರಿತು ಹೇಳುವುದಾದರೆ, ಇವರು ತುಮಕೂರಿನವರು. ಬೆಂಗಳೂರಿನ ಆಚಾರ್ಯ ಇನ್​ಸ್ಟಿಟ್ಯೂಟ್​ ಆಫ್ ಟೆಕ್ನಾಜಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಕಾಲೇಜಿನಲ್ಲಿ ಇರುವಾಗಲೇ ಮಾಡೆಲಿಂಗ್​ ಮಾಡಿ ಫೇಮಸ್​ ಆದವರು. 2016ರಲ್ಲಿ 'ಬೆಸ್ಟ್ ಮಾಡೆಲ್ ಆಫ್ ಕರ್ನಾಟಕ' ಎಂಬ ಬಿರುದು ಕೂಡ ಸಿಕ್ಕಿದೆ.

ಕಿರುತೆರೆ ಮತ್ತು ಬೆಳ್ಳಿತೆರೆಗಳಲ್ಲಿ ಇವರು ಗುರುತಿಸಿಕೊಂಡಿದ್ದಾರೆ. ಅಣ್ಣಯ್ಯ, ಸರಯೂ, ರಾಜಕುಮಾರಿ ಸೇರಿದಂತೆ ಹಲವು ಸೀರಿಯಲ್​ಗಳಲ್ಲಿ ಅಭಿನಯಿಸಿದ್ದಾರೆ. 2017ರಲ್ಲಿ ಬಿಡುಗಡೆಯಾದ `ಮಹಾನುಭಾವರು' ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟರು. ಆ ಬಳಿಕ ಗೋಸಿ ಗ್ಯಾಂಗ್, ಬಿಎಂಡಬ್ಲ್ಯೂ, ದಮಯಂತಿ, ರೈಡರ್, ಖಡಕ್, ಪೆಂಟಗನ್, ಧೈರ್ಯಂ ಸರ್ವತ್ರ ಸಾಧನಂ, ಅಬ್ಬಬ್ಬ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. 'ನಾಗಕನ್ನಿಕೆ' ಹಾಗೂ 'ರಾಜಕುಮಾರಿ' ಸಿನಿಮಾಗಳಿಗೂ ಬಣ್ಣ ಹಚ್ಚಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿರುವ ಇವರು ಹಾಟ್ ಫೋಟೋಶೂಟ್​ಗಳಿಂದಲೇ ಫೇಮಸ್​. 

ಅರೆಬರೆ ಡ್ರೆಸ್​ ಹಾಕ್ಕೊಂಡು ಏನೇನೋ ಮಾಡ್ತಾರೆ... ಚೈತ್ರಾ ಕುಂದಾಪುರ ವಿಡಿಯೋ ವೈರಲ್​: ಶ್ಲಾಘನೆಗಳ ಮಹಾಪೂರ