ಚೈತ್ರಾ ಕುಂದಾಪುರ, ಬಟ್ಟೆ ಆಯ್ಕೆ ವೈಯಕ್ತಿಕ ಸ್ವಾತಂತ್ರ್ಯ ಎನ್ನುತ್ತಾರೆ. ಮೈತುಂಬಾ ಬಟ್ಟೆ ತೊಡುವುದು ತಮಗೆ ಆರಾಮದಾಯಕ ಎಂದೂ, ಅರೆಬರೆ ಉಡುಗೆ ತೊಟ್ಟು ಮುಜುಗರ ಅನುಭವಿಸುವುದರಲ್ಲಿ ಅರ್ಥವಿಲ್ಲ ಎಂದೂ ಅಭಿಪ್ರಾಯಪಟ್ಟಿದ್ದಾರೆ. ಸಂಸ್ಕೃತಿಯನ್ನು ಗೌರವಿಸಿ ಉಡುಗೆ ತೊಡುವುದರಿಂದ ಗೌರವ ಗಳಿಸಿದ್ದಾಗಿ ಹೇಳಿಕೊಂಡಿದ್ದಾರೆ. ಫ್ಯಾಷನ್ ವೈಯಕ್ತಿಕ ಆಯ್ಕೆ ಎಂದೂ ಪ್ರತಿಪಾದಿಸಿದ್ದಾರೆ.

ಫೈರ್​ ಬ್ರ್ಯಾಂಡ್​ ಭಾಷಣಗಾರ್ತಿ ಚೈತ್ರಾ ಕುಂದಾಪುರ, ಬಿಗ್​ಬಾಸ್​​ನಿಂದ ಹೊರಕ್ಕೆ ಬಂದ ಮೇಲೆ ದೊಡ್ಡ ಸೆಲೆಬ್ರಿಟಿ ಆಗಿದ್ದಾರೆ. ಇವರು ತಮ್ಮ ಭಾಷಣದ ಮೂಲಕವಷ್ಟೇ ಖ್ಯಾತಿ ಪಡೆದವರು ಅಲ್ಲದೇ, ಹಾಕುವ ಬಟ್ಟೆಯಿಂದಲೂ ಗೌರವ ಉಳಿಸಿಕೊಂಡವರು. ಸದಾ ಮೈತುಂಬಾ ಬಟ್ಟೆ ತೊಡುವ ಚೈತ್ರಾ ಕುಂದಾಪುರ ಬಿಗ್​ಬಾಸ್​​ನಲ್ಲಿ ಕೂಡ ಸೀರೆಯಲ್ಲಿಯೇ ಮಿಂಚಿದವರು. ಕೆಲವೊಮ್ಮೆ ಬಿಗ್​ಬಾಸ್​​ನಲ್ಲಿ ಬೇರೆ ಬಟ್ಟೆ ಹಾಕಿಕೊಳ್ಳಿ ಎಂದು ಹೇಳಿದರೂ ಅದನ್ನು ತಾವು ಕೇಳಲಿಲ್ಲ. ನನಗೆ ಮೈತುಂಬಾ ಬಟ್ಟೆ ಹಾಕುವುದೇ ಕನ್​ಫರ್ಟ್​ ಎನ್ನಿಸುತ್ತದೆ. ಅದಕ್ಕಾಗಿ ನಾನು ಯಾರೋ ಹೇಳಿದರು ಎಂದು ನನ್ನತನವನ್ನು ಬಿಟ್ಟುಕೊಡುವುದಿಲ್ಲ ಎಂದಿದ್ದಾರೆ ಚೈತ್ರಾ . ಇವರ ಬಟ್ಟೆಯ ಬಗ್ಗೆಯೂ ಬಿಗ್​ಬಾಸ್​ನಲ್ಲಿ ಇದಾಗಲೇ ಸಾಕಷ್ಟು ಚರ್ಚೆಯಾಗಿದೆ.

ಇದೀಗ ಬಟ್ಟೆ, ಫ್ಯಾಷನ್​, ಅರೆಬರೆ ಡ್ರೆಸ್​ ಇತ್ಯಾದಿಗಳ ಕುರಿತು ಯೂಟ್ಯೂಬ್​ ಒಂದರಲ್ಲಿ ಚೈತ್ರಾ ಕುಂದಾಪುರ ಮಾತನಾಡಿದ್ದಾರೆ. ಸದಾ ಯಾಕೆ ಇಂಥ ಬಟ್ಟೆ ಧರಿಸುತ್ತೀರಿ ಎನ್ನುವ ಪ್ರಶ್ನೆಗೆ ಉತ್ತರವಾಗಿ ಚೈತ್ರಾ ಕುಂದಾಪುರ ಅವರು, ಬಟ್ಟೆ, ಫ್ಯಾಷನ್​ ಬಗ್ಗೆ ಬಹಳ ವರ್ಷಗಳಿಂದ ಮಾತನಾಡುತ್ತಾ ಬಂದವಳು ನಾನು. ಪರ-ವಿರೋಧ ಚರ್ಚೆಗಳು ಇದಾಗಲೇ ಸಾಕಷ್ಟು ಆಗಿವೆ. ಯಾರೇ ಧರಿಸುವ ಬಟ್ಟೆಗಳ ಬಗ್ಗೆ ನನಗೆ ತಕರಾರು ಇಲ್ಲ. ಬಟ್ಟೆ ಎನ್ನುವುದು ಅವರವರ ವೈಯಕ್ತಿಯ ವಿಷಯ. ವೈಯಕ್ತಿಯ ಸ್ವಾತಂತ್ರ್ಯದ ಬಗ್ಗೆ ಎಂದಿಗೂ ಅಡ್ಡಿ ಪಡಿಸುವ ಮಾತನಾಡುವವಳಲ್ಲ ನಾನು. ನಿಮ್ಮ ವ್ಯಕ್ತಿತ್ವವನ್ನು ಜನರು ನಿಮ್ಮ ಬಟ್ಟೆ ನೋಡಿ ಅಳೆಯಬೇಕು ಎನ್ನುವ ವಿಚಾರವನ್ನು ಕೂಡ ನಾನು ಖಂಡಿಸುತ್ತಲೇ ಬಂದವಳು ಎಂದಿರುವ ಚೈತ್ರಾ ಇದೇ ವೇಳೆ ಅರೆ ಬರೆ ಡ್ರೆಸ್​ ಹಾಕುವವರ ಬಗ್ಗೆ ಮಾತನಾಡಿದ್ದಾರೆ.

ಕಿರಿಕ್​ ಕೀರ್ತಿ ವಿರುದ್ಧ ಚೈತ್ರಾ ಕುಂದಾಪುರ ಪೊಲೀಸ್​ ಕಂಪ್ಲೇಂಟ್​! ಕಣ್ಣೀರಿಟ್ಟು ಎಫ್​ಬಿ ಪೋಸ್ಟ್​ ಡಿಲೀಟ್: ನಡೆದದ್ದೇನು?

ನೋಡಿ, ಯಾರು, ಯಾವುದೇ ರೀತಿಯ ಬಟ್ಟೆ ಹಾಕಬಹುದು. ಅದು ಅವರ ವೈಯಕ್ತಿಯ ವಿಷಯ. ಆದರೆ ನಾನು ಹೇಳುವುದು ಏನೆಂದರೆ, ನೀವು ಹಾಕುವ ಬಟ್ಟೆ ನಿಮಗೆ ಹಾಕಿದ ಮೇಲೆ ಕನ್​ಫರ್ಟ್​ ಎನ್ನಿಸಬೇಕು ಅಷ್ಟೆ. ನನಗೆ ಮೈತುಂಬಾ ಬಟ್ಟೆ ಇದ್ದರೆ ಕನ್​ಫರ್ಟ್​ ಎನ್ನಿಸುತ್ತದೆ, ಎಲ್ಲಿಯೂ ಮುಜುಗರ ಎನ್ನಿಸುವುದಿಲ್ಲ. ಆದರೆ ನಾನು ಹಲವರನ್ನು ನೋಡಿದ್ದೇನೆ. ಅರೆಬರೆ ಡ್ರೆಸ್ ಹಾಕಿಕೊಳ್ತಾರೆ, ಅದು ಅನ್​ಕಫರ್ಟ್​ ಎನಿಸಿ ಮುಚ್ಚಿಕೊಳ್ಳಲು ಏನೇನೋ ಸರ್ಕಸ್​ ಮಾಡ್ತಾರೆ. ಮಿಡಿ, ಮಿನಿ ಹಾಕಿಕೊಳ್ತಾರೆ, ಹಾಕಿಕೊಂಡ ಮೇಲೆ ದಿಂಬಿನಿಂದ ಮುಚ್ಚಿಕೊಳ್ತಾರೆ. ಅದೆಲ್ಲಾ ಯಾಕೆ, ನಿಮಗೆ ಯಾವ ಡ್ರೆಸ್​ ಮುಜುಗರ ಎನ್ನಿಸ್ತದೆಯೋ ಅದನ್ನು ಹಾಕಿಕೊಳ್ಳಬೇಡಿ ಎನ್ನುವುದು ನನ್ನ ಅನಿಸಿಕೆ. ಯಾವುದೇ ಡ್ರೆಸ್​ ಹಾಕಿ, ಅದು ಹಾಕಿದ ಮೇಲೆ ನಿಮಗೇ ಮುಜುಗರ ಅನ್ನಿಸಬಾರದು ಎಂದಿದ್ದಾರೆ. 

ಇನ್ನು ಬಟ್ಟೆ ಧರಿಸುವುದು ಅವರು ಬೆಳೆದು ಬಂದಿರುವ ವಾತಾವರಣದ ಮೇಲೆ ಹೋಗುತ್ತದೆ. ಜನರು ನಿಮ್ಮನ್ನು ಹೇಗೆ ನೋಡಬೇಕು ಎಂದು ನೀವು ಬಯಸುತ್ತೀರೋ, ಅಂಥ ಬಟ್ಟೆ ಹಾಕಬೇಕು ಅಷ್ಟೇ. ನಾನು ಬೆಳೆದ ವಾತಾವರಣ ನನ್ನನ್ನು ಈ ರೀತಿಯ ಬಟ್ಟೆ ಹಾಕಲು ಪ್ರೇರೇಪಿಸಿದೆ. ಈ ನೆಲದ ಸಂಸ್ಕೃತಿ, ಮುಂದಿನ ಪೀಳಿಗೆಗೂ ಇದರ ಬಗ್ಗೆ ಹೇಳುತ್ತಲೇ ಇರುವ ನಾನು, ಅದನ್ನು ಗೌರವಿಸುತ್ತೇನೆ, ಆದ್ದರಿಂದ ಇಂಥ ಉಡುಗೆ ತೊಡುತ್ತಿದ್ದೇನೆ ಅಷ್ಟೇ ಎಂದಿದ್ದಾರೆ ಚೈತ್ರಾ ಕುಂದಾಪುರ. ಇದೇ ಕಾರಣಕ್ಕೆ, ನನಗಿಂತ ವಯಸ್ಸಿನಲ್ಲಿ ದೊಡ್ಡವರು ಕೂಡ ನನ್ನನ್ನು ಅಕ್ಕ ಎಂದು ಪ್ರೀತಿಯಿಂದ ಕರೆಯುತ್ತಾರೆ. ಅಷ್ಟು ಗೌರವ, ಮರ್ಯಾದೆ ಉಳಿಸಿಕೊಂಡಿದ್ದೇನೆ ಎಂದಿದ್ದಾರೆ. ಫ್ಯಾಷನ್​ ಎನ್ನುವುದು ನೀವು ಕನ್ನಡ ಮುಂದೆ ನಿಂತಾಗ ನಿಮಗೆ ನೀವು ಹೇಗೆ ಕಾಣಿಸುತ್ತೀರಿ ಎನ್ನುವುದು ಮುಖ್ಯವಾಗುತ್ತದೆ. ಉಳಿದವರ ಕಣ್ಣಿಗೆ ಹೇಗೆ ಕಾಣಬೇಕು ಎನ್ನುವುದಕ್ಕಾಗಿ ಫ್ಯಾಷನ್​ ಮಾಡುವುದಿಲ್ಲ. ಕೆಲವರಿಗೆ ದೊಡ್ಡ ಕುಂಕುಮ ಚೆನ್ನಾಗಿ ಕಾಣಿಸಬಹುದು, ಕೆಲವರಿಗೆ ಕುಂಕುಮ ಇಡದೇ ಚೆನ್ನಾಗಿ ಕಾಣಿಸಬಹುದು. ಅದು ಅವರವರ ವೈಯಕ್ತಿಕ ವಿಷಯ ಅಷ್ಟೇ. ಹೀಗೆಯೇ ಎಂದು ಹೇಳಲಾಗದು. ನಿಮಗೆ ಅದು ಮುಜುಗರ ತರದಿದ್ದರೆ ಸಾಕು ಎಂದಿದ್ದಾರೆ.

ಸಿನಿಮಾಕ್ಕೆ ಚೈತ್ರಾ ಕುಂದಾಪುರ ಎಂಟ್ರಿ? ಶಿವಣ್ಣ ಜೊತೆ ಫಿಲ್ಮ್​ ಹೆಸರೂ ಘೋಷಣೆ! ಇಲ್ಲಿದೆ ನೋಡಿ ಡಿಟೇಲ್ಸ್​