ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಪಾತ್ರಧಾರಿ ಬದಲಾದರೂ, ವೀಕ್ಷಕರು ಇನ್ನೂ ಹಳೆಯ ಮಲ್ಲಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ರಾಧಾ ಭಗವತಿ ಮತ್ತು ರಾವಣ್ ಗೌಡ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ರಾಧಾ ಅವರನ್ನು ಮತ್ತೆ ಧಾರಾವಾಹಿಗೆ ಮರಳಲು ಕೋರಿದ್ದಾರೆ. ರಾಧಾ ಭಗವತಿ ಈಗ ಸಿನಿಮಾಗಳಲ್ಲಿಯೂ ಸಕ್ರಿಯರಾಗಿದ್ದಾರೆ.

ಮಲ್ಲಿ ಎಂದರೆ ಸಾಕು, ಸದ್ಯ ಸೀರಿಯಲ್​ ಪ್ರಿಯರು ಕಣ್ಣೆದುರಿಗೆ ಬರುವುದು ಅಮೃತಧಾರೆಯ ಕೆಲಸದಾಕೆ ಪೆದ್ದಿ ಮಲ್ಲಿ. ಮಾಲೀಕ ಜೈದೇವನಿಂದಲೇ ಗರ್ಭಿಣಿಯಾಗಿರುವ ಕೆಲಸದಾಕೆ ಈಕೆ. ಭೂಮಿಕಾಳ ಕೃಪೆಯಿಂದ ಜೈದೇವನ ಜೊತೆಯಲ್ಲಿಯೇ ಮದುವೆಯಾದರೂ ಯಾವ ಕ್ಷಣದಲ್ಲಾದರೂ ಏನಾದರೂ ಆಗಬಹುದು ಎನ್ನುವ ಆತಂಕದ ಜೀವನ ನಡೆಸುತ್ತಿದ್ದಾಳೆ ಮಲ್ಲಿ. ಜೈದೇವ ಸದ್ಯ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ನಾಟಕ ಮಾಡುತ್ತಿದ್ದಾನೆ. ಆದರೆ, ತನ್ನ ಪತಿಯ ಬಂಡವಾಳ ತಿಳಿದಿದ್ದರೂ ಅದನ್ನು ಸಹಿಸಿಕೊಂಡು ಇದ್ದಾಳೆ ಮಲ್ಲಿ. ಆದರೆ ಇಂದಿಗೂ ಮಲ್ಲಿ ಎಂದಾಕ್ಷಣ, ಎಲ್ಲರ ಗಮನ ಹೋಗುವುದು ನಟಿ ರಾಧಾ ಭಗವತಿ ಅವರ ಮೇಲೆಯೇ. ಈ ಪಾತ್ರಕ್ಕೆ ಈಕೆ ಜೀವ ತುಂಬಿದ್ದರು. ಪೆದ್ದುಪೆದ್ದಾಗಿ ಮಾತನಾಡುತ್ತಿದ್ದ ರಾಧಾ ಅವರು ಜನರ ಮನಸ್ಸಿಗೆ ಹತ್ತಿರವಾಗಿದ್ದರು. ಅಷ್ಟಕ್ಕೂ ಒಂದು ಪಾತ್ರವನ್ನು ಮೊದಲಿನಿಂದಲೂ ನೋಡಿದವರಿಗೆ ಆ ಪಾತ್ರಧಾರಿ ಇಷ್ಟವಾಗುವುದು ಸಹಜವೇ.

ಆದರೆ ಭಾರ್ಗವಿ ಎಲ್​ಎಲ್​ಬಿ ಸೀರಿಯಲ್​ನಲ್ಲಿ ನಾಯಕಿ ರೋಲ್​ ಸಿಕ್ಕಿದ್ದರಿಂದ ರಾಧಾ ಭಗವತಿ ಅವರು ಅಮೃತಧಾರೆ ಬಿಟ್ಟು ಹೋದರು. ಅಲ್ಲಿ ಅವರು ರಾಧಾ ಪಾತ್ರಕ್ಕೆ ತದ್ವಿರುದ್ಧ ಆಗಿರೋ ಖಡಕ್​ ನಾಯಕಿ ರೋಲ್​ ಮಾಡುತ್ತಿದ್ದಾರೆ. ಸೀರಿಯಲ್​ನ ಯಾವುದೇ ಪಾತ್ರಕ್ಕೆ ಬೇರೆಯವರು ಬಂದರೆ ಅದನ್ನು ವೀಕ್ಷಕರು ಸಹಿಸಿಕೊಳ್ಳುವುದಿಲ್ಲ. ಆ ಪಾತ್ರಕ್ಕೆ ಬಂದವರು ಎಷ್ಟೇ ಚೆನ್ನಾಗಿನಟನೆ ಮಾಡಿದರೂ ಆ ಪಾತ್ರಕ್ಕೆ ಒಗ್ಗಿಕೊಳ್ಳಲು ವೀಕ್ಷಕರಿಗೆ ಬಹಳ ಸಮಯ ಹಿಡಿಯುವುದು ಇದೆ. ಅದೇ ರೀತಿ ಮಲ್ಲಿ ಪಾತ್ರಧಾರಿ ಬದಲಾಗಿದ್ದರೂ, ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ರಾಧಾ ಭಗವತಿ ಅವರನ್ನು ಮಿಸ್​ ಮಾಡಿಕೊಳ್ಳುತ್ತಲೇ ಇದ್ದಾರೆ. 'ಗಟ್ಟಿಮೇಳ' ಧಾರಾವಾಹಿಯಲ್ಲಿ ಆದ್ಯಾ ಆಗಿ ನಟಿಸಿ ಕಿರುತೆರೆ ಲೋಕದಲ್ಲಿ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಅನ್ವಿತಾ ಸಾಗರ್ ಮಲ್ಲಿ ಪಾತ್ರಧಾರಿಯಾಗಿದ್ದಾರೆ. ಇವರನ್ನು ಆದ್ಯಾ ರೂಪದಲ್ಲಿ ನೋಡಿದವರಿಗೆ ಯಾಕೋ ಮಲ್ಲಿಯ ರೂಪದಲ್ಲಿ ನೋಡಲು ಇಷ್ಟವಾಗುತ್ತಿಲ್ಲ. ಆದ್ದರಿಂದ ಇಂದಿಗೂ ಹಳೆಯ ಮಲ್ಲಿಯ ನೆನಪೇ ಮಾಡಿಕೊಳ್ಳುತ್ತಿದ್ದಾರೆ ವೀಕ್ಷಕರು.

ಬ್ಯಾಗ್​ಗಳೇ ನನ್ನ ಮಕ್ಕಳು ಎಂದು ಕೈಚೀಲಗಳ ಪ್ರಪಂಚನೇ ತೆರೆದಿಟ್ಟ ಸೀತಾರಾಮ ಪ್ರಿಯಾ!

ಅದರ ನಡುವೆಯೇ, ರಾಧಾ ಭಗವತಿ ಮತ್ತು ಜೈದೇವ್​ ಪಾತ್ರಧಾರಿ ರಾವಣ್​ ಗೌಡ ಸೋಷಿಯಲ್​ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದಾರೆ. ರಾಧಾ ಭಗವತಿ ಅವರು ಈ ರೀಲ್ಸ್​ ಶೇರ್​ ಮಾಡಿದ್ದಾರೆ. ಇವತ್ತಷ್ಟೇ ಈ ರೀಲ್ಸ್​ ಶೇರ್​ ಮಾಡಿದ್ದು, ಇದು ಹಳೆಯದ್ದೋ, ಹೊಸತೋ ಗೊತ್ತಿಲ್ಲ. ಆದರೆ ಜೈದೇವ್​ ಜೊತೆ ಹಳೆಯ ಮಲ್ಲಿಯನ್ನು ನೋಡಿ ನೀವು ವಾಪಸ್​ ಬಂದ್ರಾ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಮಲ್ಲಿ ಪಾತ್ರದಲ್ಲಿ ನಿಮ್ಮನ್ನೇ ಮತ್ತೆ ನೋಡಬೇಕು ಎನ್ನುವ ಹಂಬಲ ಎಂದು ಹೇಳುತ್ತಿದ್ದಾರೆ. ಮತ್ತೆ ಕೆಲವರು ನಿಜಕ್ಕೂ ರಾಧಾ ಭಗವತಿ ವಾಪಸ್​ ಈ ಸೀರಿಯಲ್​ಗೂ ಬಂದರು ಎಂದುಕೊಂಡು ಕಮೆಂಟ್​ ಮಾಡುತ್ತಿದ್ದಾರೆ. ಇವರ ಜೊತೆ ಪುಟಾಣಿ ಲಚ್ಚಿ ಕೂಡ ಕಾಣಿಸಿಕೊಂಡಿದ್ದಾಳೆ. 

ಅಂದಹಾಗೆ, ರಾಧಾ ಅವರು ನಟಿ ರಾಧಾ ಭಗವತಿ ಅವರು ‘ಆ 90 ದಿನಗಳು’, ‘ವಸಂತ ಕಾಲದ ಹೂಗಳು’, ‘ಅಪಾಯವಿದೆ ಎಚ್ಚರಿಕೆ’ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ‘ಉಘೇ ಉಘೇ ಮಾದೇಶ್ವರ’ ಧಾರಾವಾಹಿಯಲ್ಲಿಯೂ ನಟಿಸಿದ್ದರು. ಇನ್ನು ‘ಬಾನಿಗೊಂದು ತಾರೆ’ ಮ್ಯೂಸಿಕ್ ವಿಡಿಯೋದಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ. ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ 'ಅಪಾಯವಿದೆ ಎಚ್ಚರಿಕೆ' ಸಿನಿಮಾದಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಎಸ್. ನಾರಾಯಣ್ ನಿರ್ದೇಶನದ 'ಒಂದ್ಸಲ ಮೀಟ್ ಮಾಡೋಣ' ಸಿನಿಮಾದಲ್ಲಿ ನಾಯಕನ ತಂಗಿಯಾಗಿ ನಟಿಸುತ್ತಿದ್ದಾರೆ. ಸದ್ಯ ಒಂದಾದ ಮೇಲೆ ಒಂದರಂತೆ ಅವಕಾಶಗಳನ್ನು ಪಡೆಯುತ್ತಿದ್ದಾರೆ.

ಸೀತಾರಾಮ ಶೂಟಿಂಗ್​ ವೇಳೆ ಸೆಟ್​ನಲ್ಲಿಯೇ ರೊಚ್ಚಿಗೆದ್ದ ಪ್ರಿಯಾ: ನಟಿಯರ ಗಲಾಟೆ ವಿಡಿಯೋ ವೈರಲ್

View post on Instagram