BBK 12: Kavya Shaiva's Sweet Warning to Gilli Natraj Goes Viral ಬಿಗ್‌ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಸನಿಹದಲ್ಲಿರುವಾಗ, ದೊಡ್ಮನೆಯಲ್ಲಿ ಭಾವುಕ ಕ್ಷಣಗಳು ಮರುಕಳಿಸಿವೆ. ಕಾವ್ಯಾ ಶೈವ ಮತ್ತು ಗಿಲ್ಲಿ ನಟರಾಜ್ ನಡುವಿನ ಕಿತ್ತಾಟ, ಮುನಿಸು ಈಗ 'ಕ್ಷಮೆ'ಯ ರೂಪ ಪಡೆದಿದೆ. 

ಬೆಂಗಳೂರು (ಜ.16): ಬಿಗ್‌ಬಾಸ್ ಸೀಸನ್ 12 ಮುಕ್ತಾಯಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಹಂತದಲ್ಲಿ ಬಿಗ್‌ಬಾಸ್ ಸ್ಪರ್ಧಿಗಳಿಗೆ ಹಳೆಯ ಕಹಿ ಘಟನೆಗಳನ್ನು ಮರೆತು, ಪರಸ್ಪರ ಕ್ಷಮೆ ಕೇಳುವ 'ವಿಶಿಷ್ಟ ಚಟುವಟಿಕೆ'ಯನ್ನು ನೀಡಿದ್ದರು. ಈ ಟಾಸ್ಕ್ ವೇಳೆ ಕಾವ್ಯಾ ಶೈವ ಅವರು ಗಿಲ್ಲಿ ನಟರಾಜ್ ಅವರ ಬಳಿ ಹಳೆಯ ವರ್ತನೆಗಾಗಿ ಕ್ಷಮೆ ಕೋರಿದ್ದಾರೆ. ಗಿಲ್ಲಿಯ ಮನಸ್ಸು ನೋಯಿಸಿದ್ದಕ್ಕೆ ಕ್ಷಮೆ ಕೇಳಿದ ಕಾವ್ಯಾ ಕೊನೆಯಲ್ಲಿ ಸ್ವೀಟ್‌ ವಾರ್ನಿಂಗ್‌ ಕೂಡ ನೀಡಿದರು. ನನಗೆ ರೇಗಿಸೋದು ಇಷ್ಟ ಆಗೋದಿಲ್ಲ. ಹೀಗೇ ಮುಂದುವರಿದರೆ ಬ್ಲಾಕ್‌ ಮಾಡ್ತೀನಿ ಎಂದು ನಗುತ್ತಲೇ ವಾರ್ನಿಂಗ್‌ ನೀಡಿದರು. ಇದಕ್ಕೆ ಗಿಲ್ಲಿ ಐ ಆಮ್‌ ವೇಟಿಂಗ್‌ ಎಂದು ಕೌಂಟರ್‌ ಕೊಟ್ಟರು.

ದಯವಿಟ್ಟು ನನ್ನ ಕ್ಷಮಿಸು

ಟಾಸ್ಕ್‌ನ ಭಾಗವಾಗಿ ಪತ್ರ ಬರೆದ ಕಾವ್ಯಾ, ಗಿಲ್ಲಿಯನ್ನು ಉದ್ದೇಶಿಸಿ ಮಾತನಾಡುತ್ತಾ, "ಗಿಲ್ಲಿ, ನಾನು ನಿನಗೆ ಸಾಕಷ್ಟು ಬಾರಿ ಬೇಜಾರು ಮಾಡಿದ್ದೇನೆ. ನೀನು ನನಗೆ ಇರಿಟೇಟ್ ಮಾಡಿದಾಗಲೆಲ್ಲಾ ಇದು ಒಂದು ಶೋ, ಜನರು ನೋಡುತ್ತಿರುತ್ತಾರೆ ಎನ್ನುವುದನ್ನೂ ಮರೆತು ನಿನ್ನ ಈಗೋ ಹರ್ಟ್ ಮಾಡಿದ್ದೇನೆ. ಸಿಟ್ಟಿನಲ್ಲಿ ನಿನ್ನ ಮೇಲೆ ಕೂಗಾಡಿದ್ದೇನೆ ಮತ್ತು ಕೆಲವೊಮ್ಮೆ ಬೇರೆಯವರ ಮುಂದೆ ನಿನ್ನನ್ನು ಬಿಟ್ಟುಕೊಟ್ಟಿದ್ದೇನೆ. ಒಬ್ಬ ಗೆಳತಿಯಾಗಿ ನಾನು ಮಾಡಿದ್ದು ತಪ್ಪು, ದಯವಿಟ್ಟು ನನ್ನನ್ನು ಕ್ಷಮಿಸು" ಎಂದು ಭಾವುಕರಾಗಿ ನುಡಿದರು.

ಕಾವ್ಯಾ ಶೈವ ನೀಡಿದ ಆ 'ಸ್ವೀಟ್ ವಾರ್ನಿಂಗ್'!

ಕ್ಷಮೆ ಕೇಳುವ ಜೊತೆಗೆ ಕಾವ್ಯಾ ತಮ್ಮ ಎಂದಿನ ಸ್ಟೈಲ್‌ನಲ್ಲಿ ಗಿಲ್ಲಿಗೆ ಒಂದು ವಾರ್ನಿಂಗ್ ಕೂಡ ನೀಡಿದ್ದಾರೆ. "ನಾವಿಲ್ಲಿ ಇರೋದು ಇನ್ನು ಮೂರ್ನಾಲ್ಕು ದಿನ ಮಾತ್ರ. ಇನ್ಮೇಲಾದರೂ ರೇಗಿಸುವುದನ್ನು ನಿಲ್ಲಿಸು. ಇಲ್ಲದಿದ್ದರೆ ಹೊರಗೆ ಹೋದಮೇಲೆ ನಿನ್ನನ್ನು ಪಕ್ಕಾ ಬ್ಲಾಕ್ ಮಾಡ್ತೀನಿ" ಎಂದು ತಮಾಷೆಯಲ್ಲೇ ಎಚ್ಚರಿಕೆ ನೀಡಿದರು.

ಗಿಲ್ಲಿಯ 'ಸಪ್ತಪದಿ' ಹಾಡು ಮತ್ತು ಕೌಂಟರ್!

ಕಾವ್ಯಾ ಅವರ ಕ್ಷಮೆಯಾಚನೆಗೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ ಗಿಲ್ಲಿ ನಟ, "I Am Waiting.." ಎಂದು ನಗುನಗುತಲೇ ಹೇಳಿದರು. ನಂತರ ಕಾವ್ಯಾ ಬರೆದ ಪತ್ರವನ್ನು ಬೆಂಕಿಗೆ ಹಾಕಿ ಹಳೆಯ ಕಹಿ ನೆನಪುಗಳನ್ನು ಸುಟ್ಟು ಹಾಕುವ ಪ್ರಕ್ರಿಯೆ ನಡೆಸಿದರು. ಈ ವೇಳೆ ಗಿಲ್ಲಿ ನಟರಾಜ್, "ಸಪ್ತಪದಿ ಇದು ಸಪ್ತಪದಿ.." ಎಂದು ಹಾಡು ಹಾಡುವ ಮೂಲಕ ಕಾವ್ಯಾರನ್ನು ಮತ್ತೆ ರೇಗಿಸಿ ಕಾಲೆಳೆದಿದ್ದಾರೆ.

ಕೈಕೊಟ್ಟು ಅಭ್ಯಾಸ ಇಲ್ಲ ನನಗೆ ಎಂದ ಕಾವ್ಯಾ

ವೇದಿಕೆಯಿಂದ ಇಳಿದ ಬಳಿಕ ಗಿಲ್ಲಿ ಕಾವ್ಯಾಳತ್ತ ಕೈ ಕೊಟ್ಟು, ಕೈಕೊಡು ಈಗ ಎಂದು ಹೇಳಿದ್ದಾರೆ. ಅದಕ್ಕೆ ಕಾವ್ಯಾ ನನಗೆ ಕೈಕೊಟ್ಟು ಅಭ್ಯಾಸ ಇಲ್ಲ ಎಂದಿದ್ದಾರೆ. ಅದಕ್ಕೆ ಗಿಲ್ಲಿ, ಓಹ್‌ ಹಾಗಾದರೆ ಕೈ ಹಿಡಿದ ಅಭ್ಯಾಸ ಅಲ್ವಾ ಎಂದಿದ್ದಾರೆ. ಕೊನೆಗೆ ಬಿಗ್‌ಬಾಸ್‌ ನಮ್ಮಿಬ್ಬರ ಒಂದು ಫೋಟೋ ತೆಗೆಯಿರಿ ಎನ್ನುತ್ತಾರೆ. ಒಟ್ಟಿನಲ್ಲಿ, ಮನೆಯೊಳಗೆ ಕಾವ್ಯಾ ಮತ್ತು ಗಿಲ್ಲಿ ನಡುವಿನ 'ಟಾಮ್ ಅಂಡ್ ಜೆರ್ರಿ' ಆಟ ಫಿನಾಲೆ ವಾರದಲ್ಲೂ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡುತ್ತಿದೆ.

Scroll to load tweet…