ಬಿಗ್ ಬಾಸ್ ಮನೆಯಲ್ಲಿ ಕೂಡ ತಮ್ಮತನವನ್ನು ಬಿಟ್ಟುಕೊಡದ ಅಶ್ವಿನಿ ಶುರುವಿನಿಂದಲೇ ಮಾತು-ಜಗಳದ ಮೂಲಕ ಮಿಕ್ಕ ಸ್ಪರ್ಧಿಗಳಿಗಿಂತ ಹೆಚ್ಚಿನ ಮೈಲೇಜ್ ತೆಗೆದುಕೊಂಡಿದ್ದರು. ಅದು ಎಷ್ಟರಮಟ್ಟಿಗೆ ಹೋಗಿತ್ತು ಎಂದರೆ, ಅಶ್ವಿನಿಯನ್ನು ಮಾತಿನಲ್ಲಿ ಸೋಲಿಸಿದರೆ ಮಾತ್ರ ಅಂಥವರು ಗೆಲ್ಲೋದಕ್ಕೆ ಸಾಧ್ಯ ಎಂಬಂತೆ ಆಗಿತ್ತು.

ಗಿಲ್ಲಿ ಗೆಲುವಿಗೆ ಅಶ್ವಿನಿ ಗೌಡ ಕಾರಣವೇ?

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಮುಗಿದಿದೆ. ಮಂಡ್ಯದ ಹೈದ ಗಿಲ್ಲಿ ನಟ ನಟರಾಜ್ (Gilli Nata Nataraj) ಗೆದ್ದು, ತುಳುನಾಡು ಹುಡುಗಿ ರಕ್ಷಿತಾ ಶೆಟ್ಟಿ (Rakshita Shetty) ರನ್ನರ್ ಅಪ್ ಆಗಿದ್ದೂ ಆಗಿದೆ. ಈಗ ಎಲ್ಲೆಲ್ಲೂ ಬಿಗ್ ಬಾಸ್ ಕನ್ನಡ ವಿನ್ನರ್ ಹಾಗೂ ರನ್ನರ್ ಅಪ್ ಬಗ್ಗೆಯೇ ಸುದ್ದಿ, ಚರ್ಚೆ ನಡಿತಾ ಇದೆ. ಈ ಸಮಯದಲ್ಲಿ ಕೇಳಿಬರುತ್ತಿರೋ ಮತ್ತೊಂದು ಮಾತು ಎಂದರೆ, ಅದು 'ಗಿಲ್ಲಿ ವಿನ್ನರ್, ರಕ್ಷಿತಾ ರನ್ನರ್ ಅಪ್ ಆಗೋದಕ್ಕೆ ಅಶ್ವಿನಿ ಗೌಡ (Ashwini Gowda) ಕಾರಣ' ಎಂಬುದು. ಆದರೆ, ಈ ಮಾತಿನ ಹಿನ್ನೆಲೆ ಏನು? ಇದಕ್ಕೇನಾದ್ರೂ ರೀಸನ್ ಇದೆಯಾ?

ಹೌದು, ಸೋಷಿಯಲ್ ಮೀಡಿಯಾದಲ್ಲಿ (Social Media) ಹಲವರು 'ಗಿಲ್ಲಿ ಗೆಲ್ಲಿಸಿದ್ದು ಅಶ್ವಿನಿ ಗೌಡ ಅವರೇ' ಎನ್ನುತ್ತಿದ್ದಾರೆ. ಅದಕ್ಕೆ ಅವರು ಕೊಡುವ ಕಾರಣ ವಿಚಿತ್ರ ಎನ್ನಿಸಿದರೂ ಒಮ್ಮೆ ಯೋಚಿಸಿದರೆ 'ಹೌದಲ್ವಾ' ಎನ್ನುವಂತಾಗುತ್ತದೆ. ಕಾರಣ, ಸೋಷಿಯಲ್ ಮೀಡಿಯಾಗಳಲ್ಲಿ ಹಲವರು 'ಅಶ್ವಿನಿ ಗೌಡ ಪ್ರಚೋದನೆಯಿಂದಲೇ ಗಿಲ್ಲಿ ನಟ ಹೆಚ್ಚಿನ ಟಾಸ್ಕ್, ಹೆಚ್ಚಿನ ಮನರಂಜನೆ ಕೊಡುವಂತಾಯ್ತು. ರಕ್ಷಿತಾ ಕೂಡ ಅಶ್ವಿನಿ ಗೌಡ ದೆಸೆಯಿಂದಲೇ ಹೆಚ್ಚು ಹೆಚ್ಚು ಮಾತನಾಡುವಂತೆ ಆಯ್ತು. ಗಿಲ್ಲಿ ಅಥವಾ ರಕ್ಷಿತಾ ಗೆಲ್ಲಲೇಬೇಕು ಎಂದರೆ ಅಶ್ವಿನಿಯನ್ನು ಸೋಲಿಸಲೇಬೇಕು ಎಂಬ ಒತ್ತಡ ಸೃಷ್ಟಿಯಾಯ್ತು ಎಂಬ ಮಾತುಗಳು ಈಗ ಕೇಳಿ ಬರುತ್ತಿವೆ.

ಅಶ್ವಿನಿಗೆ ಬಿಗ್ ಬಾಸ್ ಮನೆಯ ರಾಜಮಾತೆ ಪಟ್ಟ

ಅಶ್ವಿನಿಗೆ ಬಿಗ್ ಬಾಸ್ ಮನೆಯ ರಾಜಮಾತೆ ಪಟ್ಟ ಸಿಕ್ಕಿತ್ತು. ಕಾರಣ, ಹುಟ್ಟು ಶ್ರೀಮಂತೆಯಾಗಿರುವ ನಟಿ ಅಶ್ವಿನಿ ಗೌಡ ಅವರದು ರೆಬೆಲ್ ವ್ಯಕ್ತಿತ್ವ. ಬಿಗ್ ಬಾಸ್ ಮನೆಯಲ್ಲಿ ಕೂಡ ತಮ್ಮತನವನ್ನು ಬಿಟ್ಟುಕೊಡದ ಅಶ್ವಿನಿ ಶುರುವಿನಿಂದಲೇ ಮಾತು-ಜಗಳದ ಮೂಲಕ ಮಿಕ್ಕ ಸ್ಪರ್ಧಿಗಳಿಗಿಂತ ಹೆಚ್ಚಿನ ಮೈಲೇಜ್ ತೆಗೆದುಕೊಂಡಿದ್ದರು. ಅದು ಎಷ್ಟರಮಟ್ಟಿಗೆ ಹೋಗಿತ್ತು ಎಂದರೆ, ಅಶ್ವಿನಿಯನ್ನು ಮಾತಿನಲ್ಲಿ ಸೋಲಿಸಿದರೆ ಮಾತ್ರ ಅಂಥವರು ಗೆಲ್ಲೋದಕ್ಕೆ ಸಾಧ್ಯ ಎಂಬಷ್ಟು ಬಿಗ್ ಬಾಸ್ ಮನೆ ಅಶ್ವಿನಿ ಸುತ್ತ ಕೇಂದ್ರೀಕರಣ ಹೊಂದಿತ್ತು.

ಆದರೆ, ಅಶ್ವಿನಿ ಹವಾ ಮೀರಿ ಹೋಗೋದಕ್ಕೆ ಸಾಧ್ಯವಾಗಿದ್ದು ಗಿಲ್ಲಿ ನಟ ನಟರಾಜ್ ಹಾಗೂ ರಕ್ಷಿತಾ ಶೆಟ್ಟಿಗೆ ಮಾತ್ರ ಎನ್ನಬಹುದು. ಆ ಕಾರಣಕ್ಕೇ$ ಅವರಿಬ್ಬರೂ ಅಶ್ವಿನಿ ಗೌಡ ಅವರನ್ನು ಮೂರನೇ ಸ್ಥಾನಕ್ಕೆ ತಳ್ಳಿ ಗಿಲ್ಲಿ ನಟ-ರಕ್ಷಿತಾ ಕ್ರಮವಾಗಿ ಮೊದಲ-ಎರಡನೇ ಸ್ಥಾನ ಪಡೆಯಲು ಸಾಧ್ಯವಾಯಿತು. ಇದೇ ಕಾರಣಕ್ಕೆ ಅಶ್ವಿನಿ ಗೌಡ ಇಲ್ಲದಿದ್ರೆ ಗಿಲ್ಲಿ ನಟ, ರಕ್ಷಿತಾ ಗೆಲ್ಲುತ್ತಿರಲಿಲ್ಲ ಎಂಬ ಮಾತು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಇದು ನಿಜ ಅಂತ ಒಮ್ಮೆ ಅನ್ನಿಸಿದರೂ ಕೂಡ ವಾಸ್ತವದಲ್ಲಿ ಅದನ್ನು ಬೇರೆಯದೇ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬೇಕು ಎನ್ನುಬಹುದು.

ಅಶ್ವಿನಿ ಗೌಡ ಸ್ಟ್ರಾಂಗ್ ಕಂಟೆಸ್ಟಂಟ್ ಹೌದು

ಹೌದು, ಅಶ್ವಿನಿ ಗೌಡ ಅವರು ಸ್ಟ್ರಾಂಗ್ ಕಂಟೆಸ್ಟಂಟ್ ಹೌದು. ಆ ಕಾರಣಕ್ಕೇ ಅವರಿಗೆ 23 ಸ್ಪರ್ಧಿಗಳಲ್ಲಿ 3ನೇ ಸ್ಥಾನ ಸಿಕ್ಕಿದೆ. ಆದರೆ, ಬಿಗ್ ಬಾಸ್ ಕನ್ನಡ ಶೋ ಗೆಲ್ಲಲು ಬೇಕಾದ ಸಕಲ ಸಿದ್ಧತೆ ಅಶ್ವಿನಿ ಅವರಿಗಿಂತ ಹೆಚ್ಚಾಗಿ ಗಿಲ್ಲಿ ನಟ ಹಾಗೂ ರಕ್ಷಿತಾ ಶೆಟ್ಟಿ ಅವರಲ್ಲಿತ್ತು. ಈ ಕಾರಣಕ್ಕೆ ಅವರಿಬ್ಬರೂ ಅಶ್ವಿನಿ ಗೌಡ ಅವರನ್ನು ಮೀರಿಸಿ ಗೆಲ್ಲಲು ಸಾಧ್ಯವಾಯ್ತು. ಹಾಗೆ ನೋಡಿದರೆ ಅಶ್ವಿನಿ ಗೌಡ ಮಾತ್ರವಲ್ಲ, ಉಳಿದ ಎಲ್ಲ ಸ್ಪರ್ಧಿಗಳು ಸೇರಿ ಗಿಲ್ಲಿ ನಟ ಹಾಗೂ ರಕ್ಷಿತಾ ಶೆಟ್ಟಿ ಅವರನ್ನು ಕ್ರಮವಾಗಿ ವಿನ್ನರ್-ರನ್ನರ್ ಅಪ್ ಆಗುವಂತೆ ಮಾಡಿದ್ದಾರೆ ಎಂಬುದು ಸೂಕ್ತ.