ಒಬ್ಬ ನಟ ಆದವನು ಫ್ಯಾನ್ಸ್‌ಗಳು ಕಿತ್ತಾಡ್ತಾ ಇದ್ರೆ ಬುದ್ಧಿ ಹೇಳಬೇಕೋ ಹೊರತೂ ಕಿತ್ತಾಡಿ ಅಂತ ಹೇಳಬಾರದು. ಆದ್ದರಿಂದಲೇ ನಟ ಸುದೀಪ್ ಅವರು ಕಿತ್ತಾಡುತ್ತಿರೋರಿಗೆ ಬುದ್ಧಿ ಹೇಳಿದ್ದಾರೆ. ಧ್ರುವಂತ್‌ಗೆ ಕೊಟ್ಟ ಚಪ್ಪಾಳೆಯ ಬಗ್ಗೆಯೂ ಸೂಕ್ತ ಕ್ಲಾರಿಟಿ ಕೊಟ್ಟಿದ್ದಾರೆ. ಆದರೂ ಯಾಕೆ ಆರೋಪ-ಪ್ರತ್ಯಾರೋಪ?

ಕಿಚ್ಚ ಸುದೀಪ್ ಮೇಲೆ ಯಾಕೆ ಆರೋಪ?

ಬಿಗ್ ಬಾಸ್ ಕನ್ನಡ ಸೀಸನ್ 12 ಶೋ (Bigg Boss Kannada 12) ಗ್ರಾಂಡ್‌ ಆಗಿ ಮುಗಿದಿದೆ. ಗಿಲ್ಲಿ ನಟ ನಟರಾಜ್ ವಿನ್ನರ್ ಅಗಿ ಹೊರಹೊಮ್ಮಿದ್ದಾರೆ. ಆದರೆ, ಹಲವರು ಸೋಷಿಯಲ್ ಮೀಡಿಯಾಗಳಲ್ಲಿ ಬಿಗ್ ಬಾಸ್ ಶೋ ನಿರೂಪಕರಾದ ಕಿಚ್ಚ ಸುದೀಪ್ ಅವರನ್ನು ಮನಸ್ಸಿಗೆ ಬಂದಂತೆ ಬೈಯುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅಷ್ಟೂ ದಿನಗಳಲ್ಲಿ ಮಾಡಿದ್ದ, ಮಾತಾಡಿದ್ದ ಕೆಲಸಗಳಲ್ಲಿ ಅವರಿಗೆ ತೋಚಿದಂತೆ ತಪ್ಪು ಹುಡುಕಿ ಹುಡುಕಿ ಕಿಚ್ಚ ಸುದೀಪ್ ಅವರಿಗೆ ಬೈಯುತ್ತ ಕಾಮೆಂಟ್ ಮಾಡುತ್ತಿದ್ದಾರೆ.

ಗ್ರಾಂಡ್ ಫಿನಾಲೆಯಲ್ಲಿ ಗಿಲ್ಲಿ ನಟ ಗೆದ್ದಿರಬಹುದು. ಆದರೆ, ಆಯಾದಿನಗಳ ಟಾಕ್ಸ್, ಚರ್ಚೆ, ಮಾತುಕಥೆಗಳ ಕುರಿತು ಕಿಚ್ಚ ಸುದೀಪ್ ಮಾತನ್ನಾಡಿದ್ದಾರೆ. ಅದು ಸಹಜವಾಗಿ ನಡೆಯಲೇಬೇಕು. ಎಲ್ಲವನ್ನೂ ಗ್ರಾಂಡಪ್ ಫಿನಾಲೆಯಲ್ಲೇ ಹೇಳೋದೇನೂ ಅಲ್ಲವಲ್ಲ. ಆದರೆ, ಎಲ್ಲೋ ಆಗೊಮ್ಮೆ ಈಗೊಮ್ಮೆ ಸಮಯಕ್ಕೆ ಸೂಕ್ತವಾಗಿ ಕಿಚ್ಚ ಸುದೀಪ್ ಅವರು ಅಶ್ವಿನಿಯನ್ನು ಹೊಗಳಿದ್ದಕ್ಕೆ, ರಕ್ಷಿತಾ ಹಾಗೂ ಗಿಲ್ಲಿಯ ಬಗ್ಗೆ ಹೊಗಳಿದೇ ಇದ್ದಿದ್ದಕ್ಕೆ ಕೆಲವರು ಈಗ ಸುದೀಪ್ ಅವರಿಗೆ ಬಾಯಿಗೆ ಬಂದಂತೆ ಮಾತನ್ನಾಡುತ್ತಿದ್ದಾರೆ. ಒಮ್ಮೆ ಮಾತ್ರ ಎಂಬಂತೆ, ನಟ ಧ್ರುವಂತ್ ಅವರಿಗೆ ಕೊಟ್ಟ ಚಪ್ಪಾಳೆಯ ಬಗ್ಗೆ ಕೆಲವರು ಅದೆಷ್ಟು ಕೆಂಡಾಮಂಡಲ ಆಗಿದ್ದಾರೆ ಎಂದರೆ ಕೆಲಸವಿಲ್ಲದವರು ಎಂದು ಹೇಳಲೇಬೇಕು ಎಂಬಷ್ಟು.

ಎಲ್ಲರೂ ಆಗ-ಈಗ ಎಂಬಂತೆ ತಪ್ಪುಗಳನ್ನು ಮಾಡಿದ್ದಾರೆ

ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಆಗ-ಈಗ ಎಂಬಂತೆ ತಪ್ಪುಗಳನ್ನು ಮಾಡಿದ್ದಾರೆ, ತಿದ್ದಿಕೊಂಡಿದ್ದಾರೆ. ಆದರೆ ಕೆಲವರು ಹೆಚ್ಚು ಹಾಗೂ ಕೆಲವರು ಕಡಿಮೆ ತಪ್ಪು ಮಾಡಿರಬಹುದು. ಗಿಲ್ಲಿ ವೀಕ್ಷಕರಿಗೆ ಹಚ್ಚು ಮನರಂಜನೆ ಕೊಟ್ಟಿದ್ದಾರೆ. ಆ ಕಾರಣಕ್ಕೆ ಗಿಲ್ಲಿ ಸಹಜವಾಗಿಯೇ ಗೆದ್ದಿದ್ದಾರೆ. ಪ್ರತಿಭೆ, ಸಮಯಪ್ರಜ್ಞೆ, ಗೆಲ್ಲಲೇಬೇಕೆಂಬ ತುಡಿತ, ಸೂಕ್ತ ಪ್ಲಾನ್ ಹಾಗೂ ಅದನ್ನು ಸರಿಯಾದ ಸಮಯದಲ್ಲಿ ಅಳವಡಿಸಿಕೊಂಡವರು ಗೆಲ್ಲುತ್ತಾರೆ. ಉಳಿದವರು 2ನೇ, 3ನೇ ಹೀಗೆ ಆಯಾ ಸ್ಥಾನಗಳನ್ನು ಪಡೆಯುತ್ತಾರೆ. ಅದು ಎಲ್ಲಾ ಗೇಮ್‌ಗಳಿಗೂ ಅನ್ವಯ ಆಗುತ್ತೆ. ಗಿಲ್ಲಿ ಗೆದ್ದಿದ್ದಾರೆ ಸಂತೋಷ, ಉಳಿದವರಿಗೂ ಅವರದೇ ಆದ ರ್ಸತಾನಮಾನಗಳು ಇವೆ. ಇಷ್ಟನ್ನು ಅರ್ಥ ಮಾಡಿಕೊಂಡರೆ ಸಾಕು.

ಇನ್ನು ಕಿಚ್ಚ ಸುದೀಪ್ ಅವರು ಮಾಡಿದ್ದರಲ್ಲಿ, ನಡೆದುಕೊಂಡಿದ್ದರಲ್ಲಿ ಅದೇನು ತಪ್ಪಿದೆ. ಅವರೇನೂ ಸ್ವತಂತ್ರವಾಗಿ ಈ ಶೋ ನಡೆಸಿಕೊಡುವುದಿಲ್ಲ. ಅವರಿಗೂ ಕೆಲವು ಸೂಚನೆ-ಸಲಹೆಗಳನ್ನು ಕೊಡಲಾಗುತ್ತದೆ. ಅದನ್ನು ಅವರೂ ಕೂಡ ಫಾಲೋ ಮಾಡಲೇಬೇಕಾಗುತ್ತದೆ. ಹೀಗಿರುವಾಗ ಎಲ್ಲದಕ್ಕೂ ಕಿಚ್ಚ ಸುದೀಪ್ ಅವರೇ ಕಾರಣವಲ್ಲ. ಅಷ್ಟಕ್ಕೂ ಸುದೀಪ್ ಶೋನ ನಿರೂಪಕರಷ್ಟೇ. ಅದನ್ನು ಸಂಪೂರ್ಣವಾಗಿ ನಡೆಸುವ ಕಾಣದ ಕೈಗಳು ಅನೇಕ ಇವೆ. ಅದೆಲ್ಲವನ್ನೂ ಅರ್ಥ ಮಾಡಿಕೊಳ್ಳುವವರು ಯಾರು?

ಹೊರಗಡೆ ಕಿತ್ತಾಡುವವರಿಗೆ ಗೆದ್ದವರು ದುಡ್ಡ ಕೊಡಲ್ಲ

ಇನ್ನು ಸುದೀಪ್ ಮಾತುಗಳನ್ನು ಸಮರ್ಥಿಸಿಕೊಳ್ಳುತ್ತಿರುವವರು ಕೆಲವರು.. 'ಕಿಚ್ಚ ಸುದೀಪ್ ಅವರು ಕ್ಲಿಯರ್ ಆಗಿ ಹೇಳಿದ್ದು- ಹೊರಗಡೆ ಕಿತ್ತಾಡುವವರಿಗೆ ಗೆದ್ದವರು ದುಡ್ಡ ಕೊಡಲ್ಲ ಅಂತ.. ಬಿಗ್ ಬಾಸ್ ಫಿನಾಲೆಗೆ ಕ್ಷಣಗಣನೆ ಆರಂಭ ಆಗುತ್ತಿದ್ದಂತೆ ಕೆಲವರು ಬಿಗ್ ಬಾಸ್ ಮನೆಗೆ ಕಲ್ಲು ಹೊಡತೀನಿ ಅಂತಾರೆ.. ಇನ್ನೊಬ್ಬರು ಬಿಗ್ ಬಾಸ್ ಮನೆಗೆ ಬೆಂಕಿ ಇಡ್ತೀನಿ ಅಂತ.. ಇನ್ಯಾರೋ ಕಿಚ್ಚ ಸುದೀಪ್ ಅವರು ಮಂಡ್ಯಗೆ ಕಾಲು ಇಡೋ ಹಾಗಿಲ್ಲ ಅಂತ.. ಇನ್ಯಾರೋ ಮುಂದೆ ಬಿಗ್ ಬಾಸ್ ನಡೆಯೋಕೆ ಬಿಡಲ್ಲ ಅಂತ..' ಯಾವುದೋ ಒಂದು ರಿಯಾಲಿಟಿ ಗೇಮ್‌ ಶೋವನ್ನು ಇಷ್ಟು ವೈಯಕ್ತಿಕ ಸೋಲು-ಗೆಲುವು ಎಂಬಂತೆ ತೆಗೆದುಕೊಳ್ಳುವುದು ಯಾಕೆ ಅಂತಿದಾರೆ ಹಲವರು!

ಒಬ್ಬ ನಟ ಆದವನು ಫ್ಯಾನ್ಸ್‌ಗಳು ಕಿತ್ತಾಡ್ತಾ ಇದ್ರೆ ಬುದ್ಧಿ ಹೇಳಬೇಕೋ ಹೊರತೂ ಕಿತ್ತಾಡಿ ಅಂತ ಹೇಳಬಾರದು. ಆದ್ದರಿಂದಲೇ ನಟ ಸುದೀಪ್ ಅವರು ಕಿತ್ತಾಡುತ್ತಿರೋರಿಗೆ ಬುದ್ಧಿ ಹೇಳಿದ್ದಾರೆ. ಧ್ರುವಂತ್‌ಗೆ ಕೊಟ್ಟ ಚಪ್ಪಾಳೆಯ ಬಗ್ಗೆಯೂ 'ಈ ಚಪ್ಪಾಳೆನ ಒಬ್ಬ ಪ್ರತಿಭೆಗೆ ಪ್ರೋತ್ಸಾಹ ನೀಡಲು ಕೊಟ್ಟಿದ್ದು ಅಂತ..' ಕ್ಲಿಯರ್ ಆಗಿ ಹೇಳಿದ್ದಾರೆ. ಆದರೆ ಅದ್ಯಾವುದನ್ನು ತಲೆಗೆ ಹಾಕಿಕೊಳ್ಳದೇ ಯಾರದೋ ಒಬ್ಬಿಬ್ಬರ ಪರ ಬ್ಯಾಟ್ ಮಾಡುತ್ತಾ, ಟ್ರೋಲ್, ಕಾಮೆಂಟ, ಟೀಕೆ ಮಾಡುತ್ತಿರುವವ ಬಗ್ಗೆ ಹೇಳಲು ಸರಿಯಾದ ಪದ ಯಾವುದು ಎಂದು ಹಲವರು ಮಾತನ್ನಾಡತೊಡಗಿದ್ದಾರೆ.

ಸೋಷಿಯಲ್ ಮಿಡಿಯಾ ಮಾತುಕತೆಗಳು

ಇಲ್ಲಿ ಬರೆದಿರುವುದೆಲ್ಲಾ ಸೋಷಿಯಲ್ ಮಿಡಿಯಾ ಮಾತುಕತೆಗಳು, ವೈಯಕ್ತಿಕ ಅಭಿಪ್ರಾಯವಲ್ಲ. ಆದರೆ, ಮಾಡಲು ಬೇಕಾದಷ್ಟು ಕೆಲಸ ಇರುವಾಗ, ಸಮಯವನ್ನು ಅಲ್ಲಿ ಆಡುವ ಸ್ಪರ್ಧಿಗಳಂತೆ ಹೊರಗಡೆ ಇರುವವರಿಗೂ ತಮ್ಮತಮ್ಮ ಕಾರ್ಯಕ್ಷೇತ್ರಗಳಲ್ಲಿ ಸದುಪಯೋಗ ಪಡಿಸಿಕೊಳ್ಳಲು ಸೂಕ್ತ ಅವಕಾಶ ಇರುವಾಗ ಬೇಡದ ವಿಷಯಕ್ಕೆ ಕಿತ್ತಾಡುತ್ತಾ ಸಮಯ ವ್ಯರ್ಥ ಮಾಡುತ್ತಿರುವವರಿಗೆ ನಮ್ಮದೊಂದು ವಿಷಾದ ಇರಲಿ ಎಂದಿರುವ ಅದೇ ನೆಟ್ಟಿಗರಲ್ಲೊಬ್ಬರ ಕಾಮೆಂಟ್‌ ಸರಿಯಾಗಿದೆ ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಲೈಕ್ ಮಾಡುತ್ತಿದ್ದಾರೆ. ಇದು ಹೇಳುತ್ತಾ ಹೋದರೆ ಮುಗಿಯದ ಕಥೆ!