ಟ್ರಾಫಿಕ್​ ಜಾಂನಲ್ಲಿ ಸಿಲುಕಿದಾಗ ತಾವು ಹೀಗಿರುವುದಾಗಿ ನಟಿ ಸುಧಾರಾಣಿ, ಶ್ರೀರಸ್ತು-ಶುಭಮಸ್ತು ತುಳಸಿ ರೀಲ್ಸ್​  ಮಾಡಿದ್ದಾರೆ. ಇದಕ್ಕೆ  ಥರಹೇವಾರಿ ಕಮೆಂಟ್ಸ್​ ಸುರಿಮಳೆಯಾಗಿದೆ. 

ಸುಧಾರಾಣಿ ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಶ್ರೀರಸ್ತು-ಶುಭಮಸ್ತುವಿನಲ್ಲಿ ಎಲ್ಲರ ಬಾಯಲ್ಲೂ ತುಳಸಿಯಮ್ಮಾನೇ ಆಗಿದ್ದಾರೆ. 54 ವರ್ಷದ ನಟಿ, ಸೀರಿಯಲ್​ನಲ್ಲಿ ಮದುವೆಯಾದ ಮಕ್ಕಳ ಅಮ್ಮ. ಇನ್ನೇನು ಅಜ್ಜಿಯಾಗುವ ಕಾಲ. ಆದರೆ ರಿಯಲ್​ ಆಗಿ ಅವರನ್ನು ನೋಡಿದರೆ ಅವರಿನ್ನೂ ಸಿಂಪಲ್​ ಬ್ಯೂಟಿ. ವಯಸ್ಸು ಎನ್ನುವುದು ಒಂದು ಸಂಖ್ಯೆಯಷ್ಟೇ ಎನ್ನುವುದು ಸುಧಾರಾಣಿ ಅವರಿಗೆ ನೋಡಿದರೆ ತಿಳಿಯುತ್ತದೆ. ತಮ್ಮ ಅದ್ಭುತ ನಟನೆಯಿಂದ ಮನಸೂರೆಗೊಳ್ಳುತ್ತಿದ್ದಾರೆ ನಟಿ ಸುಧಾರಾಣಿ.

Add Asianetnews Kannada as a Preferred SourcegooglePreferred

ನಟಿ ಈಗ ಟ್ರಾಫಿಕ್​ ಜಾಂನಲ್ಲಿ ಸಿಲುಕಿದಾಗ ತಾವು ಹೇಗಿರುತ್ತೇವೆ ಎನ್ನುವ ಕುರಿತು ರೀಲ್ಸ್​ ಮಾಡಿದ್ದಾರೆ. ಕಾರಿನಲ್ಲಿ ಸೀಟು ಬೆಲ್ಟ್​ ಧರಿಸಿ ಕುಳಿತಿರೋ ನಟಿಯ ಹಿನ್ನೆಲೆಯಲ್ಲಿ ನೀಲಮೇಘ... ಹಾಡು ಬಂದಿದೆ. ನಟಿ ಸ್ಮೈಲ್​ ಮಾಡುತ್ತಿದ್ದಾರೆ. ಬೆಂಗಳೂರಿನ ಟ್ರಾಫಿಕ್​ ಜಾಂನಲ್ಲಿ ಇಷ್ಟೊಂದು ಕೂಲ್​ ಆಗಿರಲು ಸಾಧ್ಯವೇ ಇಲ್ಲ ಎನ್ನುವುದು ಅಭಿಮಾನಿಗಳ ಅಭಿಮತ. ನೀವು ನಿಜಕ್ಕೂ ಹೀಗೆ ಕೂಲ್​ ಆಗಿದ್ದರೆ ಅದು ಗ್ರೇಟ್​ ಎಂದು ಹಲವರು ಹೇಳುತ್ತಾರೆ. ಇನ್ನು ಸೀರಿಯಲ್​ ಪ್ರೇಮಿಗಳು ಇವರ ನಟನೆಯನ್ನು ಶ್ಲಾಘಿಸುತ್ತಿದ್ದರೆ, ಇಲ್ಲಿ ನಿಮ್ಮನ್ನು ನೋಡಿದರೆ ಸುಧಾ ಬ್ಯೂಟಿ ಆಗಿದ್ದೀರಿ, ಅಲ್ಲಿ ತುಳಸಿ ಅಮ್ಮಾ ಆಗಿದ್ದೀರಿ. ನಿಮ್ಮನ್ನು ಹೇಗೆ ಕರೆಯುವುದು ಎಂದು ಪ್ರಶ್ನಿಸುತ್ತಿದ್ದಾರೆ.

ತುಳಸಿ, ಮಾಧವ್​ ಕುಟುಂಬಕ್ಕೆ ಅದ್ಭುತ ಡಾನ್ಸ್​ ಹೇಳಿಕೊಟ್ಟದ್ದೇ 'ಲೇಡಿ ವಿಲನ್'! ಮೇಕಿಂಗ್​ ವಿಡಿಯೋ ವೈರಲ್​

ಇನ್ನು ಸುಧಾರಾಣಿ ಅವರ ಕುರಿತು ಹೇಳುವುದಾದರೆ, ಈಕೆ ಭರತನಾಟ್ಯ ಕಲಾವಿದೆ ಕೂಡ ಹೌದು. ಭರತನಾಟ್ಯ ಮಾತ್ರವಲ್ಲದೇ ಕೂಚುಪುಡಿ ಕಲಾವಿದೆ ಕೂಡ. ಇವರು ಕನ್ನಡ ಚಿತ್ರರಂಗವಲ್ಲದೇ, ಮಲಯಾಳಂ, ತೆಲುಗು ಹಾಗೂ ತಮಿಳಿನಲ್ಲೂ ನಟಿಸಿದ್ದಾರೆ. 'ಕಿಲಾಡಿ ಕಿಟ್ಟು', 'ರಂಗನಾಯಕಿ' ಮುಂತಾದ ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿರುವ ಇವರು ಕೂಚಿಪುಡಿ ಹಾಗೂ ಭರತನಾಟ್ಯ ಕಲಾವಿದೆ. ತಮ್ಮ 13ನೇ ವಯಸ್ಸಿನಲ್ಲೇ ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ನಟಿ ರಾಜ್ ನಿರ್ಮಾಣ ಸಂಸ್ಥೆಯ ಮೂಲಕವಾಗಿ ಶಿವರಾಜಕುಮಾರ್ ನಟನೆಯ 'ಆನಂದ್' ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಮನ ಮೆಚ್ಚಿದ ಹುಡುಗಿ, ಆಸೆಗೊಬ್ಬ ಮೀಸೆಗೊಬ್ಬ, ಸಿರಿಗಂಧ, ಪಂಚಮವೇದ, ಮನೆದೇವ್ರು, ಅರಗಿಣಿ, ಸ್ವಾತಿ, ಅವನೇ ನನ್ನ ಗಂಡ, ಮೈಸೂರು ಮಲ್ಲಿಗೆ, ಮಿಡಿದ ಶೃತಿ, ಮಹಾಕ್ಷತ್ರಿಯ, ಅನುರಾಗ ಸಂಗಮ, ದೇವತಾ ಮನುಷ್ಯ, ಜೀವನ ಚೈತ್ರ, ಮನ ಮೆಚ್ಚಿದ ಹುಡುಗಿ, ಸಮರ, ಅಸೆಗೊಬ್ಬ ಮೀಸೆಗೊಬ್ಬ ಮುಂತಾದ ಹಲವಾರು ಯಶಸ್ವಿ ಚಿತ್ರಗಳಲ್ಲಿ ಸುಧಾರಾಣಿ ನಟಿಸಿದ್ದಾರೆ.

ಸುಧಾರಾಣಿ ಮತ್ತು ಗೋವರ್ಧನ್ ವಿವಾಹ 2000 ನೇ ಇಸವಿಯಲ್ಲಿ ನಡೆಯಿತು. 2001ರಲ್ಲಿ ಜನಿಸಿದ ಪುತ್ರಿ ನಿಧಿ ಜನಿಸಿದ್ದು, ಕಳೆದ ವರ್ಷವಷ್ಟೇ ಅವರ ಭರತನಾಟ್ಯ ರಂಗಪ್ರವೇಶ ಆಗಿದೆ. ಸುಧಾರಾಣಿಯವರು ತಮ್ಮ ಮುದ್ದಿನ ಮಗಳನ್ನು ಪ್ರೀತಿಯಿಂದ ಸುಬ್ಬಿ ಕುಟ್ಟಿ ಎನ್ನುತ್ತಾರೆ. ಸಂಗೀತ, ನೃತ್ಯದಲ್ಲಿ ಪ್ರವೀಣೇಯಾಗಿದ್ದಾರೆ. ಇದೀಗ ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿ ಸುಧಾರಾಣಿಯವರು ಮಗ ಅಭಿಗಾಗಿ ಡ್ರೈವಿಂಗ್​, ನೃತ್ಯ, ಇಂಗ್ಲಿಷ್​ ಎಲ್ಲಾ ಕಲಿತು ಸೀರಿಯಲ್​ ಪ್ರೇಮಿಗಳ ಮನಸ್ಸನ್ನು ಕದಿಯುತ್ತಿದ್ದಾರೆ. ಮಗನಿಗಾಗಿ ಮನೆ ಬಿಡಲು ರೆಡಿಯಾಗಿರೋ ತುಳಸಿಯನ್ನು ನೋಡಿ ಹಾಗೆ ಮಾಡಬೇಡಿ ಎನ್ನುತ್ತಿದ್ದಾರೆ ಅಭಿಮಾನಿಗಳು. 

ತುಳಸಿಯ ಮನಮೋಹಕ ನೃತ್ಯಕ್ಕೆ ಮನಸೋತ ಫ್ಯಾನ್ಸ್​: ಸೊಸೆಯ ಕಾಲಿಗೇ ಬಿದ್ದ ಕ್ಷಣಕ್ಕೆ ನೆಟ್ಟಿಗರು ಭಾವುಕ

View post on Instagram