Asianet Suvarna News Asianet Suvarna News

ತುಳಸಿ, ಮಾಧವ್​ ಕುಟುಂಬಕ್ಕೆ ಅದ್ಭುತ ಡಾನ್ಸ್​ ಹೇಳಿಕೊಟ್ಟದ್ದೇ 'ಲೇಡಿ ವಿಲನ್'! ಮೇಕಿಂಗ್​ ವಿಡಿಯೋ ವೈರಲ್​

ತುಳಸಿ ಅಂದರೆ ಸುಧಾರಾಣಿಯವರಿಗೆ ಸೀರಿಯಲ್​ನಲ್ಲಿ ಅದ್ಭುತ ನೃತ್ಯ ಹೇಳಿಕೊಟ್ಟ ಗುರುಗಳು ಲೇಡಿ ವಿಲನ್​. ಸೀರಿಯಲ್​ ಮೇಕಿಂಗ್​ ವಿಡಿಯೋ ವೈರಲ್​ ಆಗಿದೆ.
  
 

Shreerastu Shubhamastu villain Deepika is choreographer for Tulsi Sudharani Bharatanatyam suc
Author
First Published Jun 17, 2024, 4:06 PM IST

ಶ್ರೀರಸ್ತು ಶುಭಮಸ್ತುವಿನಲ್ಲಿ ತುಳಸಿ ಅರ್ಥಾತ್​ ಸುಧಾರಾಣಿಯವರ ಭರತನಾಟ್ಯಕ್ಕೆ ಮನಸೋತವರೇ ಎಲ್ಲಾ. ಈ ಸೀರಿಯಲ್​ನಲ್ಲಿ ಮಗನ ಪ್ರೀತಿಯನ್ನು ಗಳಿಸಲು ತುಳಸಿ ಡಾನ್ಸ್​ ಕಲಿತಳು. ಸೀರಿಯಲ್​ನಲ್ಲಿ ಅವಳಿಗೆ ಭರತನಾಟ್ಯ ಹೇಳಿಕೊಟ್ಟದ್ದು ಸೊಸೆ ಪೂರ್ಣಿ. ಅಷ್ಟಕ್ಕೂ ತುಳಸಿ ಅಂದರೆ ಸುಧಾರಾಣಿಯವರು ಖುದ್ದು ಭರತನಾಟ್ಯ ಮತ್ತು ಕೂಚಿಪುಡಿ ಕಲಾವಿದೆಯೂ ಹೌದು. ಆದರೆ ಈ ಸೀರಿಯಲ್​ಗೆ ತಕ್ಕಂತೆ ಡಾನ್ಸ್​ ಕೋರಿಯೋಗ್ರಫಿ ಮಾಡಿರುವುದು ಸೀರಿಯಲ್​ ಪ್ರಕಾರ ಪೂರ್ಣಿ. ಇದೇ ಕಾರಣಕ್ಕೆ ತುಳಸಿ ತನ್ನ ನೃತ್ಯಗುರುವಾಗಿರುವ ಸೊಸೆಯ ಕಾಲಿಗೆ ಬೀಳುತ್ತಾಳೆ. ಗುರು ಎಂದ ಮೇಲೆ ಅವರು ಗುರು ಅಷ್ಟೇ. ಅಲ್ಲಿ ವಯಸ್ಸಿನ ಗಣನೆ ಬರುವುದೇ ಇಲ್ಲ. ಇದು ನಮ್ಮ ಸಂಪ್ರದಾಯ. ಇದೇ ಕಾರಣಕ್ಕೆ ವೇದಿಕೆ ಮೇಲೆ ಸೊಸೆ ಪೂರ್ಣಿಯ ಕಾಲಿಗೆ ಬೀಳುವ ದೃಶ್ಯ ಕಂಡು ಸೀರಿಯಲ್​ ಪ್ರೇಮಿಗಳು ಭಾವುಕರಾಗಿದ್ದರು. ಆದರೆ ರಿಯಲ್​ ಆಗಿ ತುಳಸಿಗೆ ಡಾನ್ಸ್​ ಕೋರಿಯೋಗ್ರಫಿ ಮಾಡಿದ್ದು ಸೀರಿಯಲ್​ ಲೇಡಿ ವಿಲನ್​ ದೀಪಿಕಾ!

ಹೌದು. ದೀಪಿಕಾ ತುಳಸಿ ಮಾತ್ರವಲ್ಲದೇ ಮಾಧವ್​ ಇಡೀ ಕುಟುಂಬಕ್ಕೆ ಡಾನ್ಸ್​ ಕೋರಿಯೋಗ್ರಫಿ ಮಾಡಿದ್ದಾಳೆ. ಕಂಪೆನಿಯ 25ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಇಡೀ ಕುಟುಂಬದವರು ನೃತ್ಯ ಕಾರ್ಯಕ್ರಮ ಮಾಡಿದ್ದು, ಅಭಿಮಾನಿಗಳ ಮನತಣಿಸಿದ್ದರು. ಡಾನ್ಸ್​ ಬಲ್ಲವರಿಗೆ ಅದನ್ನು ಹೇಳಿಕೊಡುವುದು ಸುಲಭ. ಆದರೆ ನೃತ್ಯದ ಗಂಧಗಾಳಿಯೇ ಇಲ್ಲದವರಿಗೆ ಅದನ್ನು ಕಲಿಸುವುದು ಕಷ್ಟವೇ. ಆದರೆ ಮಾಧವ್​ ಕುಟುಂಬದ ಎಲ್ಲರೂ ವೇದಿಕೆ ಮೇಲೆ ಡಾನ್ಸ್​ ಮಾಡುವ ಹಾಗೆ ಮಾಡಿದವರು ಇದೇ ದೀಪಿಕಾ. ಅಷ್ಟಕ್ಕೂ ದೀಪಿಕಾ ರಿಯಲ್​ ಹೆಸರು ದರ್ಶಿನಿ ಡೆಲ್ಟಾ. ದರ್ಶಿನಿ ಅವರು ಖುದ್ದು ಡಾನ್ಸ್​ ಕೋರಿಯೋಗ್ರಫರ್​. ಈ ಸೀರಿಯಲ್​ನಲ್ಲಿ ಅವರದ್ದು ವಿಲನ್​ ರೋಲ್​. ಅಷ್ಟಕ್ಕೂ ಈ ಸೀರಿಯಲ್​ನಲ್ಲಿ ಡಾನ್ಸ್​ ಹೇಳಿಕೊಡಲು ಬೇರೊಬ್ಬ ಕೋರಿಯೋಗ್ರಫರ್​ ಬಂದಾಗ ಡಾನ್ಸ್ ಬರದಂತೆ ಮಾಡುವುದೇ ದರ್ಶಿನಿ ಅವರಿಗೆ ಚಾಲೆಂಜಿಂಗ್​ ಆಗಿತ್ತು. ಅಸಲಿಗೆ ಎಲ್ಲರಿಗೂ ಡಾನ್ಸ್​ ಹೇಳಿಕೊಟ್ಟವರು ಇವರೇ.

ದರ್ಶನಿ ಅವರು ಡಾನ್ಸ್​ ಹೇಳಿಕೊಡುತ್ತಿರುವ ವಿಡಿಯೋ ಅನ್ನು ಖುದ್ದು ಅವರೇ ತಮ್ಮ ಇನ್ಸ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಇದರಲ್ಲಿ ಸುಧಾರಾಣಿ ಹಾಗೂ ಕುಟುಂಬದ ಇತರ ಸದಸ್ಯರಿಗೆ ಅವರು ಡಾನ್ಸ್​ ಹೇಳಿಕೊಡುವುದನ್ನು ಇದರಲ್ಲಿ ನೋಡಬಹುದು. ಒಂದೇ ಸೀರಿಯಲ್​ನಲ್ಲಿ ನಟನೆ ಮತ್ತು ಕೋರಿಯೋಗ್ರಫಿ ಮಾಡಲು ಅವಕಾಶ ಸಿಕ್ಕಿರುವುದು ನನ್ನ ಪುಣ್ಯ, ಜೊತೆಗೆ ಎರಡೆರಡು ಪೇಮೆಂಟ್​ ಕೂಡ ಎಂದು ದರ್ಶಿನಿ ಬರೆದುಕೊಂಡಿದ್ದಾರೆ. ಸುಧಾರಾಣಿ ಹಾಗೂ ಇತರರಿಗೆ ಡಾನ್ಸ್​ ಹೇಳಿಕೊಡುವ ಭಾಗ್ಯ ನನಗೆ ಸಿಕ್ಕಿರುವುದಕ್ಕೆ ಇಡೀ ಟೀಂಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದರ ಮೇಕಿಂಗ್​ ವಿಡಿಯೋ ಅನ್ನು ಅವರು ಹಂಚಿಕೊಂಡಿದ್ದಾರೆ. ಮೊದಲೇ ಹೇಳಿದಂತೆ ಸುಧಾರಾಣಿ ಭರತನಾಟ್ಯ ಮತ್ತು ಕೂಚಿಪುಡಿ ಕಲಾವಿದೆ. ಅವರ ಮಗಳು ನಿಧಿ ಕೂಡ ನೃತ್ಯ ಪ್ರವೀಣೆ.  ಕಳೆದ ವರ್ಷವಷ್ಟೇ ಅವರ ಭರತನಾಟ್ಯ ರಂಗಪ್ರವೇಶ ಆಗಿದೆ.  

ಇನ್ನು ದರ್ಶಿನಿ ಕುರಿತು ಹೇಳುವುದಾದರೆ,  ಇವರು ನಟಿಯಾಗೋ ಮೊದಲು ಮಾಡೆಲ್ (Model),  ಜೊತೆಗೆ ಕೊರಿಯೋಗ್ರಾಫರ್ ಆಗಿ ಗುರುತಿಸಿಕೊಂಡವರು. ನಟ ಪ್ರಭುದೇವ, ಜಾನಿ ಮಾಸ್ಟರ್ ಮೊದಲಾದ ಜನಪ್ರಿಯ ಕೊರಿಯೋಗ್ರಫರ್ ಜೊತೆ ಅಸಿಸ್ಟಂಟ್ ಕೊರಿಯೋಗ್ರಫರ್ ಆಗಿ ಇವರು ಕೆಲಸ ಮಾಡಿದ್ದಾರೆ. ದರ್ಶಿನಿ ಶರಣ್ ನಟನೆಯ ಛೂ ಮಂತರ್ ಹಾಡಿಗೆ ಕೊರಿಯೋಗ್ರಫಿ ಮಾಡುವ ಮೂಲಕ ಅಸಿಸ್ಟೆಂಟ್ ಕೊರಿಯೋಗ್ರಫರ್ ಆಗಿ ಬಡ್ತಿ ಪಡೆದರು. ಈ ಡ್ಯಾನ್ಸ್ ಬೀಟ್ (Dence Beat) ಸಖತ್ ಸದ್ದು ಮಾಡಿತ್ತು. ಇದೀಗ ಕನ್ನಡದ ಉಪಾಧ್ಯಕ್ಷ ಸಿನಿಮಾದಲ್ಲೂ ಕೊರಿಯೋಗ್ರಫರ್ ಆಗಿ ಕೆಲಸ ಮಾಡಿದ್ದಾರೆ. ಉಪಾಧ್ಯಕ್ಷ ಸಿನಿಮಾದ ಹಾಡುಗಳಿಗೆ ಚಿಕ್ಕಣ್ಣ ಮತ್ತು ಮಲೈಕಾ ವಸುಪಾಲ್ ಗೆ ಸಖತ್ತಾಗಿ ಡ್ಯಾನ್ಸ್ ಹೇಳಿಕೊಡುವ ಮೂಲಕ ಜನಪ್ರಿಯತೆ ಪಡೆದಿದ್ದಾರೆ.

Latest Videos
Follow Us:
Download App:
  • android
  • ios