ನವಿಲುಗರಿ ವಿವಾದದ ಬಳಿಕ ರಸ್ತೆಯಲ್ಲೇ ಹಸುವಿನ ಹಾಲು ಕರೆದು ಖುಷಿಪಟ್ಟ ನಿವೇದಿತಾ ಗೌಡ
ನವಿಲುಗರಿ ವಿವಾದದ ನಂತರ, ಬಿಗ್‌ಬಾಸ್ ಖ್ಯಾತಿಯ ನಿವೇದಿತಾ ಗೌಡ ಮತ್ತೆ ರೀಲ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ರಸ್ತೆ ಬದಿಯಲ್ಲಿ ಹಸು ಹಾಲು ಕರೆಯುವ ವಿಡಿಯೋ ಹಂಚಿಕೊಂಡಿದ್ದು, ಇದು ವೈರಲ್ ಆಗಿ ಮೆಚ್ಚುಗೆಯ ಜೊತೆಗೆ ಟ್ರೋಲ್‌ಗೆ ಕಾರಣವಾಗಿದೆ.

ನವಿಲುಗರಿ ಇದ್ದ ಡ್ರೆಸ್ ಧರಿಸಿ ರೀಲ್ಸ್‌ಮಾಡಿದ್ದ ಕೇಸ್‌ನಲ್ಲಿ ಕಾನೂನು ಸಮಸ್ಯೆಗೆ ಸಿಲುಕುವ ಹಾದಿಯಲ್ಲಿ ಬಿಗ್‌ಬಾಸ್ ಮಾಜಿ ಸ್ಪರ್ಧಿ ನಿವೇದಿತಾ ಗೌಡ, ತಕ್ಷಣವೇ ಈ ವಿಚಾರದಲ್ಲಿ ಕ್ಷಮೆ ಕೇಳಿ ಎಲ್ಲವನ್ನೂ ತಣ್ಣಗೆ ಮಾಡಿದ್ದರು. ಈಗ ಎಂದಿನ ತಮ್ಮ ರೀಲ್ಸ್ ಮೋಡ್‌ಗೆ ಅವರು ಮರಳಿದ್ದಾರೆ.
ವೀಕೆಂಡ್ ಮಜಾದಲ್ಲಿರುವ ನಿವೇದಿತಾ ಗೌಡ ಬೆಂಗಳೂರಿನ ಹೊರವಲಯಕ್ಕೆ ಟ್ರಿಪ್‌ಗೆ ಹೋಗಿದ್ದಾರೆ. ಈ ವೇಳೆ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಹಸುವನ್ನು ಕಂಡು ಖುಷಿ ಪಟ್ಟಿದ್ದು ಮಾತ್ರವಲ್ಲ ರಸ್ತೆಯಲ್ಲೇ ಹಸುವಿನ ಕೆಚ್ಚಲಿಗೆ ಕೈ ಹಾಕಿ ಹಾಲು ಕರೆದು ಸಂಭ್ರಮಿಸಿದ್ದಾರೆ.
ಎಸ್‌ಪಿಬಿ ಹಾಡಿರುವ 'ಹಳ್ಳಿ ಹಾಡು..' ಗೀತೆಯೊಂದಿಗೆಈ ರೀಲ್ಸ್‌ಅನ್ನು ಪೋಸ್ಟ್ ಮಾಡಿದ್ದು, ಪೋಸ್ಟ್ ಮಾಡಿದ ಎರಡೇ ಗಂಟೆಯಲ್ಲಿ 4.5 ಲಕ್ಷ ವೀಕ್ಷಣೆ ಕಂಡಿದೆ. ಹೆಚ್ಚಿನವರು ನಿವೇದಿತಾ ಗೌಡ ಅವರ ಸರಳತೆಯನ್ನು ಮೆಚ್ಚಿಕೊಂಡಿದ್ದಾರೆ.
17 ಸಾವಿರಕ್ಕೂ ಅಧಿಕ ಲೈಕ್ಸ್‌ಗಳು ಬಂದಿದ್ದು ಎಂದಿನಂತೆ ನಿವೇದಿತಾ ಅವರ ವಿಡಿಯೋಗೆ ಸಾಕಷ್ಟು ಭಿನ್ನ ವಿಭಿನ್ನ ಕಾಮೆಂಟ್‌ಗಳೂ ಬಂದಿವೆ. ಗುಲಾಬಿ ಬಣ್ಣದ ಟಾಪ್ ಹಾಗೂ ತಿಳಿ ನೀಲಿ ಜೀನ್ಸ್ ತೊಟ್ಟಿರುವ ನಿವೇದಿತಾ ಗೌಡ ಅವರ ಡ್ರೆಸ್ಸಿಂಗ್ ಸೆನ್ಸ್ ಅನ್ನೂ ಹಲವರು ಮೆಚ್ಚಿದ್ದಾರೆ.
ಈಕೆಯ ವಿಡಿಯೋಗೆ ಕಾಮೆಂಟ್ ಮಾಡಿರುವ ವ್ಯಕ್ತಿ, 'ಕೇವಲ ಲೈಕ್ಗೋಸ್ಕರ ಹಸುನಾ ಮುಟ್ಟಿ ವಿಡಿಯೋ ಮಾಡಿಕೊಂಡ ತಕ್ಷಣ ಹಳ್ಳಿಯ ಸೊಗಡು ಬರುವುದಿಲ್ಲ , ನಿಜವಾಗಲೂ ಹಳ್ಳಿಗೆ ಹೋಗಿ ಅಲ್ಲಿಯೇ ಜೀವಿಸಿ ರೈತರ ಕಷ್ಟ ಸುಖ ನೋಡಿ ,ಹಸು ಮೇಯಿಸಿ ಸಗಣಿ ಬಾಚ್ಚಿ ಗಂಜಲದ ವಾಸನೆ ಸೇವಿಸಿ, ಹಾಲು ಕರೆದಿದ್ದರೆ ಒಪ್ಪಬಹುದು ಅಲ್ವಾ ನಿವೇದಿತಾ ಅವರೇ ಬರಿ ಗಂಜಲ ಮತ್ತೆ ಸಗಣಿ ವಾಸನೆ ಆದ್ರೂ ಗೊತ್ತಾ ನಿಮಗೆ ನೀವು ಹಾಕುವ ಸುಗಂಧ ದ್ರವ್ಯಕ್ಕಿಂತ ನ್ಯಾಚುರಲ್ ಆ ಪರಿಮಳ ಒಂದು ದಿನ ಆದ್ರೂ ಹಳ್ಳಿಯ ಸೊಗಡನ್ನು ಸವಿಯಿರಿ. ಇದೆಲ್ಲ ಅಸಾಧ್ಯ ಅಂತ ಗೊತ್ತು ನನಗೆ ಸಾಧ್ಯವಾದ್ರೆ ಒಮ್ಮೆ ಪ್ರಯತ್ನ ಪಡಲಿ ಅಂತ ನಮ್ಮ ಆಕಾಂಕ್ಷೆ ಅಷ್ಟೇ' ಎಂದು ಬರೆದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

