Asianet Suvarna News Asianet Suvarna News

ಉಡುಪಿ ಬೀಚ್ ಫೋಟೋ ಶೇರ್ ಮಾಡಿದ ಬಿಲಿಯನೇರ್‌ ನಿಖಿಲ್ ಕಾಮತ್, ನಮ್ಮೂರೆ ಬೆಸ್ಟ್ ಅಂತಿದ್ದಾರೆ ಖ್ಯಾತ ಉದ್ಯಮಿ!

ಭಾರತ ಹಾಗೂ ಮಾಲ್ಡೀವ್ಸ್ ನಡುವಿನ ಸಂಘರ್ಷ ಹೆಚ್ಚಾಗುತ್ತಿದೆ.  ಹಲವು ಸೆಲೆಬ್ರಿಟಿಗಳು, ಉದ್ಯಮಿಗಳು ಬೈಕಾಟ್ ಮಾಲ್ಡೀವ್ಸ್ ಗೆ ಬೆಂಬಲ ನೀಡಿ ಭಾರತದಲ್ಲಿರುವ ಸುಂದರವಾದ ಪ್ರವಾಸಿ ತಾಣಗಳ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಸದ್ಯ ಉದ್ಯಮಿ ನಿಖಿಲ್ ಕಾಮತ್ ಉಡುಪಿಯ ಬೀಚ್ ಫೋಟೋವನ್ನು ಹಂಚಿಕೊಂಡಿದ್ದು, ಎಲ್ಲೆಡೆ ವೈರಲ್‌ ಆಗಿದೆ.

Zerodhas Nikhil Kamath Shares Video Of A Hidden Beach In Udupi Amid Maldives Row Vin
Author
First Published Jan 16, 2024, 12:58 PM IST

ಭಾರತ ಹಾಗೂ ಮಾಲ್ಡೀವ್ಸ್ ನಡುವಿನ ಸಂಘರ್ಷ ಹೆಚ್ಚಾಗುತ್ತಿದೆ. ಸೇನಾ ವಿಚಾರದಲ್ಲೇ ಆರಂಭಗೊಂಡ ಕಿತ್ತಾಟ, ಪ್ರವಾಸೋದ್ಯಮದ ಮಜಲು ಪಡೆದುಕೊಂಡಿದೆ. ಬಾಲಿವುಡ್ ಸೆಲೆಬ್ರಿಟಿಗಳು ಬೈಕಾಟ್ ಮಾಲ್ಡೀವ್ಸ್ ಅಭಿಯಾನಕ್ಕೆ ಬೆಂಬಲ ನೀಡುತ್ತಿದ್ದಾರೆ. ಲಕ್ಷದ್ವೀಪ ಟೂರ್‌ಗೆ ಸಪೋರ್ಟ್ ಮಾಡುತ್ತಿದ್ದಾರೆ. ಇವೆಲ್ಲದರ ಮಧ್ಯೆ ExploreIndia ಅನ್ನೋ ಕಾನ್ಸೆಪ್ಟ್ ಸಾಕಷ್ಟು ವೈರಲ್ ಆಗುತ್ತಿದೆ. ಹಲವು ಸೆಲೆಬ್ರಿಟಿಗಳು, ಉದ್ಯಮಿಗಳು ಭಾರತದಲ್ಲಿರುವ ಸುಂದರವಾದ ಪ್ರವಾಸಿ ತಾಣಗಳ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ.

ಹಾಗೆಯೇ ಇತ್ತೀಚಿಗೆ Zerodhaನ ಸಹ ಸಂಸ್ಥಾಪಕರಾದ ನಿಖಿಲ್ ಕಾಮತ್, ತಮ್ಮ ತವರೂರು ಜಿಲ್ಲೆ ಉಡುಪಿ ಬೀಚ್‌ನ ಸುಂದರ ಪೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಎಲ್ಲರಿಂದಲೂ ನಿರ್ಲಕ್ಷಿಸಲ್ಪಟ್ಟ ಕರಾವಳಿಯ ಕಡಲ ತೀರದಲ್ಲಿ ಓಡಾಡುವ ವೀಡಿಯೋವನ್ನು ಶೇರ್ ಮಾಡಿದ್ದಾರೆ.

ಮಾಲ್ಡೀವ್ಸ್‌ ಪ್ರವಾಸ ಕ್ಯಾನ್ಸಲ್‌ ಮಾಡಿದ ಖ್ಯಾತ ನಟ ನಾಗಾರ್ಜುನ ಕುಟುಂಬ: ಲಕ್ಷದ್ವೀಪಕ್ಕೆ ಹೋಗಲು ಪ್ಲ್ಯಾನ್!

ಕರಾವಳಿಯ ಸುಂದರ ಕಡಲ ತೀರವನ್ನು ವರ್ಣಿಸಿದ ನಿಖಿಲ್ ಕಾಮತ್‌
ಬಾಲಿ ಮತ್ತು ಥೈಲ್ಯಾಂಡ್‌ನಂತಹ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಜನರು ಕಿಕ್ಕಿರಿದು ಸೇರುತ್ತಾರೆ. ಆದರೆ ಉಡುಪಿ ಬೀಚ್‌ನಲ್ಲಿ ಶಾಂತವಾದ ವಾತಾವರಣವಿರುವುದನ್ನು ನೋಡಬಹುದು. ಕಾಮತ್, ಜನಸಂದಣಿಯಿಲ್ಲದ, ಹೆಚ್ಚು ಲಗುಬಗೆಯಿಲ್ಲದ ದೃಶ್ಯಗಳು ಮತ್ತು ಅಂತರರಾಷ್ಟ್ರೀಯ ಕಡಲತೀರಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸುಂದರವಾದ ದೃಶ್ಯವನ್ನು ವರ್ಣಿಸಿದ್ದಾರೆ. 

ನಿಖಿಲ್‌ ಕಾಮತ್ ತಮ್ಮ ಎಕ್ಸ್‌ ಖಾತೆಯಲ್ಲಿ, 'ಭಾರತವು ಕೆಲವು ಅದ್ಭುತವಾದ ಗುಪ್ತ ಕಡಲತೀರಗಳನ್ನು ಹೊಂದಿದೆ. ಅದರಲ್ಲೊಂದು ಉಡುಪಿ ಬೀಚ್. ಇದು ಉಡುಪಿಯ ನನ್ನ ಊರಿನ ಸಮೀಪದಲ್ಲಿದೆ. ವಿದೇಶದ ಕಡಲತೀರಗಳಂತೆ, ಯಾವುದೇ ಜನಸಂದಣಿ, ಅವ್ಯವಸ್ಥೆ ಇಲ್ಲ, ಬಾಲಿ ಮತ್ತು ಥೈಲ್ಯಾಂಡ್‌ನಂತಹ ಕಸದಿಂದ ತುಂಬಿದ ಬೀಚ್‌ಗಳಿಲ್ಲ. ಇಲ್ಲಿನ ರುಚಿಕರವಾದ ಆಹಾರವು ಮನಸ್ಸಿಗೆ ಮುದ ನೀಡುತ್ತದೆ. ಅಲ್ಲದೆ ಯಾವುದೇ ದುಬಾರಿ ಸೀಪ್ಲೇನ್‌ಗಳು, ದೋಣಿ ಸವಾರಿಗಳು, ವಲಸೆ, ವೀಸಾಗಳು ಅಥವಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಸಾಲುಗಳಲ್ಲಿ ಕಾಯುವುದಿಲ್ಲ' ಎಂದಿದ್ದಾರೆ.

ಮಾಲ್ಡೀವ್ಸ್‌ ಬುಕ್ಕಿಂಗ್ ಕ್ಯಾನ್ಸಲ್‌ ಬಳಿಕ ‘ದೇಶ ಮೊದಲು ವ್ಯಾಪಾರ ನಂತರ’ ಎಂಬ ಸಂದೇಶ ಕಳಿಸಿದ Ease My Trip

ಲಕ್ಷದ್ವೀಪಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಮಾಲ್ಡೀವ್ಸ್ ನಡುವಿನ ರಾಜತಾಂತ್ರಿಕ ಸಂಘರ್ಷ ನಡೆಯುತ್ತಿರುವ ಕಾರಣ ಭಾರತದ ಪ್ರವಾಸಿತಾಣಗಳ ಬಗ್ಗೆ ಮಾಹಿತಿ ನೀಡಿರುವ ನಿಖಿಲ್ ಕಾಮತ್ ಪೋಸ್ಟ್ ವೈರಲ್ ಆಗಿದೆ. ನೆಟ್ಟಿಗರು ಇದಕ್ಕೆ ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.

ಪೋಸ್ಟ್ ಅನ್ನು ಇಲ್ಲಿ ನೋಡಿ:


ಒಬ್ಬ ಬಳಕೆದಾರರು, ಬೀಚ್ ಎಲ್ಲಿದೆ ಮತ್ತು ಅದನ್ನು ಹೇಗೆ ಭೇಟಿ ಮಾಡುವುದು ಎಂಬುದರ ಕುರಿತು ಮಾಹಿತಿ ಕೇಳಿದರು. ಹಲವಾರು ಬಳಕೆದಾರರು ಹೊಸ ಬೀಚ್ ತಾಣಗಳನ್ನು ಅನ್ವೇಷಿಸಲು ಎಕ್ಸೈಟೆಡ್ ಆಗಿರುವುದಾಗಿ ತಿಳಿಸಿದರು. ಇನ್ನೊಬ್ಬ ಬಳಕೆದಾರರು, 'ಜನಸಂದಣಿ ಮತ್ತು ಅವ್ಯವಸ್ಥೆಯ ಅನುಪಸ್ಥಿತಿಯು ಜಾಗರೂಕ ಪ್ರವಾಸೋದ್ಯಮದ ಸಂಭಾವ್ಯತೆಯ ಬಲವಾದ ಚಿತ್ರವನ್ನು ಚಿತ್ರಿಸುತ್ತದೆ. ಈ ಗುಪ್ತ ಸ್ವರ್ಗಗಳು ಅಸ್ಪೃಶ್ಯವಾಗಿ ಉಳಿಯಲು ನಾವು ಪರಿಶೋಧನೆ ಮತ್ತು ಸಂರಕ್ಷಣೆಯ ನಡುವೆ ಸಮತೋಲನವನ್ನು ಸಾಧಿಸಬಹುದೇ' ಎಂದರು.

ಮತ್ತೊಬ್ಬ ಬಳಕೆದಾರರು, 'ನೀರು ದೋಸೆಯೊಂದಿಗೆ ಉತ್ತಮವಾದ ಮಟನ್ ಮತ್ತು ಪ್ರಾನ್ಸ್ ಗೀ ರೋಸ್ಟ್ ಇಲ್ಲಿ ಅತ್ಯುತ್ತಮವಾಗಿರುತ್ತದೆ. ನಾನು ಕರಾವಳಿ ಕರ್ನಾಟಕವನ್ನು ಪ್ರೀತಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬರು, 'ಭಾರತದಲ್ಲಿ ಹಲವಾರು ಅನ್ವೇಷಿಸದ ಮತ್ತು ಸುಂದರವಾದ ಸ್ಥಳಗಳಿವೆ. ಆದರೆ ಬೇಸರದ ವಿಷಯವೆಂದರೆ ಒಮ್ಮೆ ಜನಪ್ರಿಯವಾದ ಸ್ಥಳವು ತುಂಬಾ ಜನದಟ್ಟಣೆಯಿಂದ ಕೊಳಕಾಗಿ ಪರಿಣಮಿಸುತ್ತದೆ' ಎಂದಿದ್ದಾರೆ

'ಉಡುಪಿ ಭಾರತದ ಅದ್ಭುತ ಸ್ಥಳವಾಗಿದೆ. ಮನೋಹರವಾದ ಕಡಲತೀರಗಳು. ಸಾಂಸ್ಕೃತಿಕ ಹಾಟ್‌ಸ್ಪಾಟ್‌ಗಳು. ಉತ್ತಮ ಆಹಾರ. ಮತ್ತು ಗೋವಾದಂತಹ ಸ್ಥಳಗಳಿಗೆ ಹೋಲಿಸಿದರೆ ಇದು ಸಾಕಷ್ಟು ಅಗ್ಗವಾಗಿದೆ' ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

Follow Us:
Download App:
  • android
  • ios