ಮಾಲ್ಡೀವ್ಸ್ ಬುಕ್ಕಿಂಗ್ ಕ್ಯಾನ್ಸಲ್ ಬಳಿಕ ‘ದೇಶ ಮೊದಲು ವ್ಯಾಪಾರ ನಂತರ’ ಎಂಬ ಸಂದೇಶ ಕಳಿಸಿದ Ease My Trip
Ease My Trip ಮಾಲ್ಡೀವ್ಸ್‌ಗೆ ವಿಮಾನ ಟಿಕೆಟ್ ಬುಕ್ಕಿಂಗ್ ಆಯ್ಕೆಯನ್ನೇ ಸ್ಥಗಿತಗೊಳಿಸಿತ್ತು. ಇದೀಗ ತನ್ನ ಬಳಕೆದಾರರಿಗೆ ವಾಟ್ಸಾಪ್ ಸಂದೇಶ ನೀಡಿದೆ.
ನವದೆಹಲಿ (ಜನವರಿ 13, 2024): ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿದ ನಂತರ ಮಾಲ್ಡೀವ್ಸ್ ಸಚಿವರು ಸಾಮಾಜಿಕ ಮಾಧ್ಯಮದಲ್ಲಿ ಭಾರತ ಹಾಗೂ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ನಂತರ ಭಾರತದಲ್ಲಿ ಅನೇಕರು ಮಾಲ್ಡೀವ್ಸ್ ಪ್ರವಾಸ ರದ್ದುಗೊಳಿಸಿದ್ದರು ಹಾಗೂ ಅನೇಕರು ಭಾರತದ ಪ್ರವಾಸೋದ್ಯಮ ಸ್ಥಳಗಳ ಪ್ರಚಾರ ಮಾಡಿದ್ದರು.
ಈ ಉದ್ವಿಗ್ನತೆಯ ಬಳಿಕ ವಿವಿಧ ಆನ್‌ಲೈನ್ ಟ್ರಾವೆಲ್ ಏಜೆನ್ಸಿಗಳ ಮೂಲಕ ವಿಮಾನಗಳು ಮತ್ತು ಹೋಟೆಲ್ ಬುಕಿಂಗ್‌ಗಳನ್ನು ಕೆಲ ಪ್ರವಾಸಿಗರು ರದ್ದುಗೊಳಿಸಿದ್ದರು. ಈ ನಡುವೆ Ease My Trip ಮಾಲ್ಡೀವ್ಸ್‌ಗೆ ವಿಮಾನ ಟಿಕೆಟ್ ಬುಕ್ಕಿಂಗ್ ಆಯ್ಕೆಯನ್ನೇ ಸ್ಥಗಿತಗೊಳಿಸಿತ್ತು. ಈ ನಂತರ ಹೆಚ್ಚು ಚರ್ಚೆಗೀಡಾಗ್ತಿರೋ ಈಸ್ ಮೈ ಟ್ರಿಪ್ ಇದೀಗ ತನ್ನ ಬಳಕೆದಾರರಿಗೆ ವಾಟ್ಸಾಪ್ ಸಂದೇಶ ನೀಡಿದೆ.
ಇದನ್ನು ಓದಿ: ಪ್ರಧಾನಿ ಭೇಟಿ ನಂತರ MakeMyTripನಲ್ಲಿ ಲಕ್ಷದ್ವೀಪ ಸರ್ಚ್‌ನಲ್ಲಿ 3,400% ಏರಿಕೆ: ನೂತನ ಅಭಿಯಾನ ಪ್ರಾರಂಭ!
ಈಸ್ ಮೈ ಟ್ರಿಪ್ ಟ್ರಾವೆಲ್ ಏಜೆನ್ಸಿಯು ‘ದೇಶ ಮೊದಲು ವ್ಯಾಪಾರ ನಂತರ’ ಎಂಬ ನೀತಿ ನಮ್ಮದು ಎಂದು ಹೇಳಿದೆ. ಹಾಗೂ, ಈ ನಿಟ್ಟಿನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಜನರ ಬೆಂಬಲವು ರಾಷ್ಟ್ರದ ಮೇಲಿನ ಹಂಚಿಕೆಯ ಪ್ರೀತಿಯ ಪ್ರತಿಬಿಂಬವಾಗಿದೆ ಎಂದೂ ಹೇಳಿದೆ. ಹಾಗೂ, ಜನರನ್ನು ಈ ಪ್ರಯಾಣದಲ್ಲಿ ಒಗ್ಗಟ್ಟಿನಿಂದಿರಿ ಎಂದೂ ಈಸ್ ಮೈ ಟ್ರಿಪ್ ತನ್ನ ಸಂದೇಶದ ಮೂಲಕ ಮನವಿ ಮಾಡಿಕೊಂಡಿದೆ.
ಹಾಗಾದ್ರೆ, ಈಸ್ ಮೈ ಟ್ರಿಪ್ ಕಂಪನಿ ಬಳಕೆದಾರರಿಗೆ ವಾಟ್ಸಾಪ್ ಸಂದೇಶ ಕಳಿಸಿರೋದೇನು ನೋಡಿ.. ‘ದೇಶ ಮೊದಲು, ವ್ಯಾಪಾರ ನಂತರ. 2ನೇ ಅತಿದೊಡ್ಡ ಮತ್ತು ಹೆಮ್ಮೆಯ ಸ್ವದೇಶಿ ಟ್ರಾವೆಲ್ ಕಂಪನಿಯಾಗಿರುವ ಈಸ್ ಮೈ ಟ್ರಿಪ್ ತನ್ನ ರಾಷ್ಟ್ರದ ಘನತೆಗೆ ಆಳವಾದ ಬದ್ಧತೆ ಹೊಂದಿದೆ. ಭಾರತ, ತನ್ನ ನಾಗರಿಕರು ಮತ್ತು ನಮ್ಮ ಗೌರವಾನ್ವಿತ ಪ್ರಧಾನಿಯವರ ಬಗ್ಗೆ ಮಾಲ್ಡೀವ್ಸ್‌ನ ಅನೇಕ ಮಂತ್ರಿಗಳು ಇತ್ತೀಚಿನ ಅನುಚಿತ ಮತ್ತು ಅಪ್ರಚೋದಿತ ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ ನಾವು ಒಂದು ನಿಲುವನ್ನು ತೆಗೆದುಕೊಂಡಿದ್ದೇವೆ.
ಮಾಲ್ಡೀವ್ಸ್ ಸಚಿವರ ಜನಾಂಗೀಯ ಟ್ವೀಟ್: ಸಾಮಾಜಿಕ ಜಾಲತಾಣದಲ್ಲಿ #BoycottMaldives ಟ್ರೆಂಡ್
ಜನವರಿ 8 ರಿಂದ, ನಾವು ಮಾಲ್ಡೀವ್ಸ್‌ಗೆ ಎಲ್ಲಾ ಪ್ರಯಾಣ ಬುಕಿಂಗ್‌ಗಳನ್ನು ಅನಿರ್ದಿಷ್ಟವಾಗಿ ಸ್ಥಗಿತಗೊಳಿಸಿದ್ದೇವೆ. ನಮಗೆ, ಲಾಭಕ್ಕಿಂತ ನಮ್ಮ ರಾಷ್ಟ್ರವೇ ಆದ್ಯತೆಯನ್ನು ಪಡೆಯುತ್ತದೆ.
ಭಾರತದ ಬೆರಗುಗೊಳಿಸುವ ಕಡಲತೀರಗಳ ಬಗ್ಗೆ ನಮಗೆ ಅಪಾರ ಹೆಮ್ಮೆಯಿದೆ. ಲಕ್ಷದ್ವೀಪ, ಅಂಡಮಾನ್, ಗೋವಾ, ಕೇರಳ ಇತ್ಯಾದಿ ಅದ್ಭುತಗಳನ್ನು ಒಳಗೊಂಡಿರುವ ನಮ್ಮ ದೇಶವು 7,500 ಕಿಲೋಮೀಟರ್ ವಿಸ್ತಾರವಾದ ಕರಾವಳಿಯನ್ನು ಹೊಂದಿದೆ.
‘ಇಂಡಿಯಾ ಫಸ್ಟ್' ನಿಲುವಿನೊಂದಿಗೆ ಮಾಲ್ಡೀವ್ಸ್‌ನಿಂದ ಕಾಲ್ತೆಗೆದ ಭಾರತ!
ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮ ಬೆಂಬಲವು ರಾಷ್ಟ್ರದ ಮೇಲಿನ ನಮ್ಮ ಹಂಚಿಕೆಯ ಪ್ರೀತಿಯ ಪ್ರತಿಬಿಂಬವಾಗಿದೆ. ಈ ಪಯಣದಲ್ಲಿ ಒಗ್ಗಟ್ಟಾಗಿ ಇರೋಣ.
ಜೈ ಹಿಂದ್!’ ಎಂಬ ವಿವರವಾದ ಸಂದೇಶವನ್ನು ವಾಟ್ಸಾಪ್ ಮೂಲಕ ಕಳಿಸಿದೆ.
ಪ್ರಯಾಣದ ರಿಯಾಯಿತಿಗಳಿಗಾಗಿ EaseMyTrip ಕೋಡ್!
ಇತ್ತೀಚೆಗೆ, EaseMyTrip ನ CEO ನಿಶಾಂತ್ ಪಿಟ್ಟಿ, ರಿಯಾಯಿತಿಗಳನ್ನು ಪಡೆಯಲು ಪ್ರಯಾಣಿಕರು ಬಳಸಬಹುದಾದ ಕೋಡ್‌ಗಳನ್ನು X (ಈ ಹಿಂದಿನ ಟ್ವಿಟ್ಟರ್) ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
ಮಾಲ್ಡೀವ್ಸ್ ಬಗ್ಗೆ ಹಸ್ತಕ್ಷೇಪ ಸಲ್ಲ: ಮುಯಿಜು ಭೇಟಿ ಬೆನ್ನಲ್ಲೇ ಭಾರತಕ್ಕೆ ಚೀನಾ ಪರೋಕ್ಷ ಟಾಂಗ್
"ಈಗ ಉತ್ತಮ ರಿಯಾಯಿತಿಗಳನ್ನು ಪಡೆಯಲು EaseMyTrip ನಲ್ಲಿ NATIONFIRST ಅಥವಾ BHARATFIRST ರಿಯಾಯಿತಿ ಕೋಡ್‌ಗಳನ್ನು ಬಳಸಿ" ಎಂದು ಅವರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಮಾಲ್ಡೀವ್ಸ್‌ಗೆ ಎಲ್ಲಾ ವಿಮಾನ ಮತ್ತು ಹೋಟೆಲ್ ಬುಕಿಂಗ್ ಅನ್ನು ಅಮಾನತುಗೊಳಿಸಿದ ಮೊದಲ ಕಂಪನಿಗಳಲ್ಲಿ EaseMyTrip ಕೂಡ ಸೇರಿದೆ.