Asianet Suvarna News Asianet Suvarna News

ಉಗಾಂಡಾ ಕಾಡಲ್ಲಿ ಡಾ. ಬ್ರೋಗೆ ಅವ್ರ ಅಜ್ಜಿ ಸಿಕ್ರಂತೆ! ವಿಡಿಯೋ ನೋಡಿ ಫ್ಯಾನ್ಸ್​ ಫುಲ್​ ಖುಷ್​

ವಿವಿಧ ದೇಶಗಳ ವಿಶೇಷತೆ ಕುರಿತು ತಿಳಿಸಿಕೊಡುವ ಡಾ.ಬ್ರೋ, ಈಗ ಉಗಾಂಡಾಕ್ಕೆ ಭೇಟಿ ನೀಡಿ ಅಲ್ಲಿಯ ಜನರು ಮತ್ತು ಗೋರಿಲ್ಲಾಗಳನ್ನು ಪರಿಚಯಿಸಿದ್ದಾರೆ. ಅಲ್ಲಿ ಅವರಿಗೆ ಅಜ್ಜಿನೂ ಸಿಕ್ಕರಂತೆ
 

You tuber Dr Bro fame Gagan Srinivas meets his grandmother in Uganda forests suc
Author
First Published Aug 12, 2023, 1:23 PM IST

ನಮಸ್ಕಾರ​ ದೇವ್ರು... ಎಂದರೆ ಸಾಕು. ಮೊದಲು ನೆನಪಾಗೋದೇ ಡಾ.ಬ್ರೋ (Dr. Bro). ಕನ್ನಡದ ಯುವಕನೊಬ್ಬ ಬಹುತೇಕ ಎಲ್ಲಾ ದೇಶಗಳನ್ನೂ ಸುತ್ತಿ ಅಲ್ಲಿನ ಪರಿಚಯ ಮಾಡುವ ಪರಿ ಅಂತೂ ಅತ್ಯದ್ಭುತವಾದದ್ದೆ. ಕನ್ನಡಿಗರಿಗೇ ಅಂಗೈನಲ್ಲೆ ಇಡೀ  ಜಗತ್ತನ್ನೇ (World) ತೋರಿಸ್ತಿದ್ದಾರೆ ಡಾ.ಬ್ರೋ. ಯೂಟ್ಯೂಬ್​ನಲ್ಲಿ ಅಲ್ಪ ಕಾಲದಲ್ಲಿಯೇ ಕೋಟಿ ಕೋಟಿ ಅಭಿಮಾನಿಗಳನ್ನು ಪಡೆದಿರುವ ಡಾ.ಬ್ರೋ ವಿಶೇಷತೆ ಎಂದರೆ ಯಾವ ದೇಶಕ್ಕೆ ಹೋದರೂ ಅಲ್ಲಿ ಕನ್ನಡದಲ್ಲಿಯೇ ಮಾತನಾಡಿ ಕನ್ನಡಿಗರ ಹೃದಯ ಗೆಲ್ಲುತ್ತಿದ್ದಾರೆ. ತಾಲಿಬಾನ್, ಪಾಕಿಸ್ತಾನ್​ದಂಥ ರಾಷ್ಟ್ರಗಳಿಗೂ ಮುನ್ನುಗ್ಗಿ ಅಲ್ಲಿನವರನ್ನು ಮಾತನಾಡಿಸಿ ಅದರ ವಿಡಿಯೋ ಮಾಡುವ ಸಾಹಸ ಬಹುಶಃ ಸಾಮಾನ್ಯ ಜನರಿಗೆ ಕನಸಿನ ಮಾತೇ. ಇಂಥ ದುಸ್ಸಾಹಸಕ್ಕೂ ಕೈ ಹಾಕಿದವರು ಡಾ.ಬ್ರೋ. ಇವರ ಹೆಸರು ಗಗನ್​. ಅತ್ಯಂತ ಕಾಡು ಮನುಷ್ಯರಿಂದಲೇ ತುಂಬಿ ಹೋಗಿರುವ ದೇಶಗಳಿಗೂ ನುಗ್ಗಿದ್ದಿದೆ. ಇದನ್ನು ನೋಡಿ ಇವರ ಫ್ಯಾನ್ಸ್​ ದಂಗಾದದ್ದೂ ಇದೆ. ದಯವಿಟ್ಟು ನಿಮ್ಮ ಪ್ರಾಣ ಪಣಕ್ಕಿಡಬೇಡಿ ಎಂದಿದ್ದೂ ಇದೆ. ಆದರೂ ಧೈರ್ಯದಿಂದ ಗಗನ್​ ಎಲ್ಲಾ ದೇಶಗಳಿಗೂ ಲಗ್ಗೆ ಇಡುತ್ತಿದ್ದಾರೆ.  

ಸಾಧಿಸುವ ಛಲ ಇದ್ದರೆ ಸಾಕು, ಜೀವನವನ್ನು ಹೇಗೆ ಬೇಕಾದರೂ ಸಾಗಿಸಬಹುದು ಎನ್ನುವುದಕ್ಕೆ ಈ 22ರ ಹರೆಯದ ಯುವಕನೇ ಸಾಕ್ಷಿ. ಇದೀಗ ಉಗಾಂಡಾಕ್ಕೆ ಹೋಗಿರುವ ಗಗನ್​ ಅವರು, ಅಲ್ಲಿಯ ಜನಜೀವನದ ಕುರಿತು ಮನಮುಟ್ಟುವಂತೆ ಮಾತನಾಡಿದ್ದಾರೆ. ಹೋದ ಕಡೆಗಳಲ್ಲೆಲ್ಲಾ ಹಾಸ್ಯದ ತುಣುಕನ್ನು ಬಿತ್ತರಿಸುತ್ತಾ ತಮ್ಮದೇ ಆದ ವಿಶೇಷ ಶೈಲಿಯಲ್ಲಿ ಮಾತನಾಡುವುದೇ ಇವರ ಹೈಲೈಟ್​. ಅರೆಬರೆ ಹಿಂದಿ, ಇಂಗ್ಲಿಷ್​ ಮಾತನಾಡುತ್ತಲೇ ಕೋಟಿ ಕೋಟಿ ಮಂದಿಯ ಹೃದಯ ಗೆಲ್ಲುವುದು ಬಹುಶಃ ಗಗನ್​ಗೆ ಅಲ್ಲದೇ ಬೇರೆ ಯಾರಿಗೂ ಸಾಧ್ಯವೇ ಇಲ್ಲವೆನ್ನಬಹುದೇನೋ. ಇದೀಗ ಉಗಾಂಡಾದ (Uganda) ಕಾಡಿನ ಪರಿಚಯ ಮಾಡಿಸಿರುವ ಡಾ.ಬ್ರೋ. ಅಲ್ಲಿಯ ಗೋರಿಲ್ಲಾಗಳನ್ನು ನೋಡಿ ಹಾಸ್ಯದ ಚಟಾಕಿ ಹಾರಿಸಿದ್ದಾರೆ.

Mama Uganda : 44 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ ಪರಿಚಯಿಸಿದ ಡಾ.ಬ್ರೋ

ಅಷ್ಟಕ್ಕೂ ಡಾ.ಬ್ರೋ ಅವ್ರಿಗೆ ಈ ಕಾಡಿನಲ್ಲಿ ಹೋದಾಗ ಅಜ್ಜಿಯ ನೆನಪಾಯ್ತಂತೆ. ನಮ್​ ಅಜ್ಜಿ ಸಿಕ್ಕಷ್ಟೇ ಖುಷಿಯಾಯ್ತು ಎಂದಿದ್ದಾರೆ. ಅಷ್ಟಕ್ಕೂ ಅಲ್ಲಿ ಅವ್ರು ನೋಡಿದ್ದು ಬೇರೆ ಯಾರನ್ನೂ ಅಲ್ಲ, ಬದಲಿಗೆ ಭಾರಿ ಭಾರಿ ಗಾತ್ರದ ಗೋರಿಲ್ಲಾಗಳನ್ನು. ಸಾಮಾನ್ಯವಾಗಿ ಗೋರಿಲ್ಲಾ ಯಾರೇ ಬಂದರೂ ಗುರ್​ ಎಂದು ನೋಡುತ್ತದೆ.  ಆದರೆ ಉಗಾಂಡಾದಲ್ಲಿ ಗೋರಿಲ್ಲಾ ಮತ್ತು ಜನರ ವಹಿವಾಟು ಸಾಮಾನ್ಯ. ಆದ್ದರಿಂದ ಮನುಷ್ಯರನ್ನು ಕಂಡರೆ ಅವುಗಳಿಗೆ ಭಯವೇ ಇಲ್ಲ. ಸಾಕು ಪ್ರಾಣಿಗಳಂತೆ ಅವು ಯಾವುದೇ ತಲೆ ಕೆಡಿಸಿಕೊಳ್ಳದೇ ನಿರ್ಭೀತಿಯಿಂದ ಇರುತ್ತವೆ. ನಮ್ಮ ಪೂರ್ವಜರು ಕೂಡ ಗೋರಿಲ್ಲಾ (Gorilla) ಎನ್ನುತ್ತಾರೆ. ಇದರ ಬಗ್ಗೆ ವಾದ-ಪ್ರತಿವಾದ ನಡೆಯುತ್ತಲೇ ಇದೆ.  ಅದೇನೇ ಇದ್ದರೂ ಮಂಗ, ಗೋರಿಲ್ಲಾಗಳಿಗೂ ಮಾನವರಿಗೂ ಹೆಚ್ಚಿಗೆ ವ್ಯತ್ಯಾಸ ಇಲ್ಲದೇ ಇರುವುದಂತೂ ನಿಜವೇ. ಅದೇ ರೀತಿ ಡಾ.ಬ್ರೋ ಹೋದಾಗ ಗೋರಿಲ್ಲಾ ಒಂದು ಮೆಲ್ಲುತ್ತಾ ಇರುವುದನ್ನು ನೋಡಿ, ನಮ್ಮಜ್ಜಿ ಕೂಡ ಇದೇ ರೀತಿ ಎಲೆ-ಅಡಿಕೆ ಮೆಲ್ಲುತ್ತಾರೆ. ಅಜ್ಜಿಯ (Granny) ನೆನಪಾಯ್ತು ಎಂದು ಚಟಾಕಿ ಹಾರಿಸಿದ್ದಾರೆ ಗಗನ್​. 

ಕೆಲ ದಿನಗಳ ಹಿಂದಷ್ಟೇ ಡಾ. ಬ್ರೋ ಉಗಾಂಡಾದ ಅಚ್ಚರಿಯ ಮಹಿಳೆಯರೊಬ್ಬರನ್ನು ಪರಿಚಯಿಸಿದ್ದರು.  ಈ ತಾಯಿ (Mother) 40ನೇ ವಯಸ್ಸಿನಲ್ಲಿಯೇ  ಮಹಿಳೆ 44 ಮಕ್ಕಳಿಗೆ ಜನ್ಮ ನೀಡಿದ್ದಾಳೆ.  ಹೆಸರು ಮರಿಯಮ್ ನಬಾಟೆಂಜಿ. ಉಗಾಂಡಾದ ಮುನೊಕೊದಲ್ಲಿ ವಾಸಿಸುವ ಮೇರಿಯಮ್ (Mariam ) ತನ್ನ ಜೀವನದ 18 ವರ್ಷಗಳನ್ನು ಗರ್ಭಾವಸ್ಥೆಯಲ್ಲಿ ಕಳೆದಿದ್ದಾಳೆ. ಮೂರು ಬಾರಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ನಾಲ್ಕು ಬಾರಿ ತ್ರಿವಳಿ ಮಕ್ಕಳಿಗೆ ಮತ್ತು 6 ಬಾರಿ ಒಟ್ಟಿಗೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
 

Follow Us:
Download App:
  • android
  • ios