ಒಂದು, ಎರಡೋ ಮಕ್ಕಳೇ ಈಗಿನ ಕಾಲದಲ್ಲಿ ಕಷ್ಟವಾಗಿರುವಾಗ 44 ಮಕ್ಕಳನ್ನು ಸಾಕೋದು ಸುಲಭವಲ್ಲ. ಬಡತನ, ಅಪರೂಪದ ಖಾಯಿಲೆ ಜೊತೆ ಜೀವನ ನಡೆಸುತ್ತಿರುವ ಈ ಮಹಿಳೆ 44 ಮಕ್ಕಳಿಗೆ ಜನ್ಮ ನೀಡಿದ್ದಲ್ಲದೆ ಅವರನ್ನು ಸಾಕುವ ಹೊಣೆ ಹೊತ್ತಿದ್ದಾಳೆ.
ಮನೆಯಲ್ಲಿರುವ ಒಂದು ಮಗುವನ್ನೇ ಸಂಭಾಳಿಸೋದು ಬಹಳ ಕಷ್ಟ. ಎರಡು ಮಕ್ಕಳಾದ್ರೆ ಮನೆಯಲ್ಲಿ ಇಡೀ ದಿನ ಗಲಾಟೆ, ಯಾರನ್ನು ಸಂಭಾಳಿಸೋದು ಅನ್ನೋದೇ ತಿಳಿಯಲ್ಲ ಎನ್ನುವ ಪಾಲಕರಿದ್ದಾರೆ. ಅಪ್ಪಿತಪ್ಪಿ ಮೂರು ಮಕ್ಕಳಾದ್ರೆ ಈಗಿನ ಕಾಲದಲ್ಲಿ ಪಾಲಕರ ಕಷ್ಟ ಕೇಳಲೇಬೇಡಿ. ಹಿಂದಿನ ಕಾಲದಲ್ಲಿ ಹತ್ತು –ಹನ್ನೆರಡು ಮಕ್ಕಳನ್ನು ಹೆರುತ್ತಿದ್ದ ಮಹಿಳೆಯರಿದ್ದರು. ಹೆಚ್ಚು ಅಂದ್ರೆ ಒಂದು 18 ಮಕ್ಕಳನ್ನು ಹೆತ್ತು ಅದ್ರಲ್ಲಿ ಒಂದಿಷ್ಟು ಶಿಶು ಹುಟ್ಟುವಾಗ್ಲೇ ಸತ್ತು ಉಳಿಯೋದು 10 – 15 ಮಕ್ಕಳಾಗಿದ್ರು. ಆದ್ರೆ ಇಲ್ಲೊಬ್ಬ ಮಹಾತಾಯಿ ಇದ್ದಾಳೆ. ಆಕೆ 10 – 12 ಮಕ್ಕಳಲ್ಲ ಬದಲಿದೆ 44 ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಆಕೆ ಯಾರು ಎಂಬುದನ್ನು ನಾವಿಂದು ಹೇಳ್ತೇವೆ.
ಚಿಕ್ಕ ವಯಸ್ಸಿನಲ್ಲೇ 44 ಮಕ್ಕಳಿಗೆ ಈಕೆ ತಾಯಿ : ಅಚ್ಚರಿಯ ಸಂಗತಿ ಎಂದರೆ ನಾವು ಹೇಳ್ತಿರೋ ಈ ತಾಯಿ (Mother) 40ನೇ ವಯಸ್ಸಿನಲ್ಲಿಯೇ ಮಹಿಳೆ 44 ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಆಕೆ ಇರೋದು ಉಗಾಂಡಾದಲ್ಲಿ. ಈ ಮಹಿಳೆ ಹೆಸರು ಮರಿಯಮ್ ನಬಾಟೆಂಜಿ. ಉಗಾಂಡಾ (Uganda) ದ ಮುನೊಕೊದಲ್ಲಿ ವಾಸಿಸುವ ಮೇರಿಯಮ್ (Mariam ) ತನ್ನ ಜೀವನದ 18 ವರ್ಷಗಳನ್ನು ಗರ್ಭಾವಸ್ಥೆಯಲ್ಲಿ ಕಳೆದಿದ್ದಾಳೆ. ಮೂರು ಬಾರಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ನಾಲ್ಕು ಬಾರಿ ತ್ರಿವಳಿ ಮಕ್ಕಳಿಗೆ ಮತ್ತು 6 ಬಾರಿ ಒಟ್ಟಿಗೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಅಬ್ಬಬ್ಬಾ..165 ಕೋಟಿಯ ರಾಣಿಹಾರದ ಒಡತಿ ಇಶಾ ಅಂಬಾನಿ, ಬೆರಗುಗೊಳಿಸುತ್ತೆ ಜ್ಯುವೆಲ್ಲರಿ ಕಲೆಕ್ಷನ್
ಮೇರಿಯಮ್ ಗೆ ಈ ವಯಸ್ಸಿನಲ್ಲಾಗಿತ್ತು ಮದುವೆ : ಮೇರಿಯಮ್ ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿದ್ದಳು. ಆಕೆ ಕೇವಲ 12 ವರ್ಷದಲ್ಲಿರುವಾಗ ಮದುವೆಯಾಗಿತ್ತು. ಮದುವೆಯಾದ ಒಂದು ವರ್ಷಕ್ಕೆ ಅಂದ್ರೆ 13ನೇ ವಯಸ್ಸಿಗೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಇದಾದ ನಂತರ ಆಕೆ ಮಕ್ಕಳಿಗೆ ಜನ್ಮ ನೀಡುತ್ತಲೇ ಇದ್ದಳು.
ಮಕ್ಕಳಿಗೆ ಜನ್ಮ ನೀಡೋದು ನಿಲ್ಲಿಸಿದ್ರೆ ಅಪಾಯ..! : ಮಹಿಳೆ ಜನನ ನಿಯಂತ್ರಣಕ್ಕೆ ಪ್ರಯತ್ನ ನಡೆಸಿಲ್ಲ ಎಂದಲ್ಲ. ಆಕೆ ಜನನ ನಿಯಂತ್ರಣದ ಬಗ್ಗೆ ವೈದ್ಯರೊಂದಿಗೆ ಮಾತನಾಡಿದಾಗ, ಯಾವುದೇ ಕುಟುಂಬ ಯೋಜನೆಯು ಅವಳ ಮೇಲೆ ಕೆಲಸ ಮಾಡುವುದಿಲ್ಲ ಎಂದು ಅವರು ಹೇಳಿದ್ದರು. ಮಕ್ಕಳಿಗೆ ಜನ್ಮ ನೀಡುವುದನ್ನು ನಿಲ್ಲಿಸಿದರೆ, ಅವರು ಗಂಭೀರ ಕಾಯಿಲೆಗಳಿಗೆ ಒಳಗಾಗಬಹುದು ಅಥವಾ ಸಾಯಬಹುದು ಎಂದು ವೈದ್ಯರು ಎಚ್ಚರಿಸಿದ್ದರು.
ಮೇರಿಯಮ್ ಗೆ ಅಂಡಾಶಯ ಅಸಹಜವಾಗಿ ದೊಡ್ಡ ಗಾತ್ರದಲ್ಲಿದೆ. ಒಂದು ಸೈಕಲ್ ಗೆ ಹೆಚ್ಚು ಎಗ್ ಬಿಡುಗಡೆಯಾಗಿ ಸಮಸ್ಯೆಯುಂಟಾಗುವ ಕಾರಣ ಅದನ್ನು ತಡೆಯಲು ಇವರು ಮಗುವಿಗೆ ಜನ್ಮ ನೀಡ್ತಿದ್ದಾರೆ. ಇದೇ ಕಾರಣಕ್ಕೆ ಆಕೆಗೆ ಜನನ ನಿಯಂತ್ರಣ ಚಿಕಿತ್ಸೆ ಫಲ ನೀಡ್ತಿರಲಿಲ್ಲ. ಮೇರಿಯಮ್ ಗೆ ಆರು ಮಕ್ಕಳು ಹುಟ್ಟುವಾಗಲೇ ಸಾವನ್ನಪ್ಪಿದ್ದಾರೆ. ಜೀವಂತವಾಗಿರುವ 38 ಮಕ್ಕಳಲ್ಲಿ 20 ಗಂಡು ಮಕ್ಕಳು ಮತ್ತು 18 ಹೆಣ್ಣುಮಕ್ಕಳು. ಈ ಮಕ್ಕಳನ್ನು ಮೇರಿಯಮ್ ಒಬ್ಬಂಟಿಯಾಗಿ ಸಾಕುತ್ತಿದ್ದಾರೆ. ವರದಿಗಳ ಪ್ರಕಾರ, ಮರಿಯಮ್ ಳನ್ನು ಅವಳ ಪತಿ ಬಿಟ್ಟು ಹೋಗಿದ್ದಾನೆ. ಹಾಗಾಗಿ ಅವಳೆ ಎಲ್ಲರನ್ನೂ ನೋಡಿಕೊಳ್ಳುತ್ತಿದ್ದಾಳೆ.
ಮಹಿಳೆ ನಿಯಮಿತವಾಗಿ ಸಂಭೋಗ ಮಾಡಿದ್ರೆ ಈ ಯಾವ ಕಾಯಿಲೆನೂ ಕಾಡಲ್ಲ
ಮಹಾತಾಯಿ ಭೇಟಿಯಾದ ಡಾ. ಬ್ರೋ : ಯುಟ್ಯೂಬ್ ಚಾನೆಲ್ ಮೂಲಕ ಜನಮನ ಮೆಚ್ಚುಗೆ ಗಳಿಸಿದ ಡಾ. ಬ್ರೋ ಕೂಡ ಉಗಾಂಡಾದ ಈ ತಾಯಿಯನ್ನು ಭೇಟಿಯಾಗಿದ್ದಾರೆ. ಮೇರಿಯಮ್ ಗೆ ಮೊಮ್ಮಕ್ಕಳು ಕೂಡ ಇವೆ. ಮನೆಯಲ್ಲಿ ಹಾಸ್ಟೆಲ್ ರ್ಯಾಕ್ ಹಾಕಲಾಗಿದೆ. ಅದ್ರ ಮೇಲೆ ಮಕ್ಕಳು ಮಲಗಿಕೊಳ್ತಾರೆ. ಕೊನೆ ಮಗನಿಗೆ ಜಗದೀಶ್ ಎಂದು ಹೆಸರಿಟ್ಟಿದ್ದಾರಂತೆ. ಧಾರಾವಾಹಿ, ಸಿನಿಮಾ ನೋಡಿ ಮಕ್ಕಳಿಗೆ ಹೆಸರಿಡುತ್ತಾರಂತೆ ಇವರು. ಬಾಲಿಕಾ ವಧು ಧಾರಾವಾಹಿ ನೋಡಿ ಹೆಸರಿಟ್ಟಿದ್ದಾಳೆ.

