Travel Tips : ಹೊಟೇಲ್ ರೂಮ್ ಚೆಕ್ ಔಟ್ ಮಾಡುವಾಗ ಇವೆಲ್ಲಾ ನೆನಪಲ್ಲಿರಲಿ!
ಹೊಟೇಲ್‌ಗಳಲ್ಲಿ ಬೇರೆ ಬೇರೆ ನಿಯಮ ಇರುತ್ತದೆ. ಸದಾ ಪ್ರವಾಸಕ್ಕೆ ಹೋಗುವವರು ಕೂಡ ಕೆಲವೊಮ್ಮೆ ಹೊಟೇಲ್ ಮೋಸಕ್ಕೆ ಬಲಿಯಾಗ್ತಾರೆ. ಚೆಕ್ ಇನ್ ಜೊತೆ ಚೆಕ್ ಔಟ್ ಮಾಡುವಾಗ ಕೂಡ ಕೆಲ ವಿಷ್ಯ ಗಮನಿಸಬೇಕು.
ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಸಂಪೂರ್ಣ ಸ್ಥಬ್ಧವಾಗಿದ್ದ ಪ್ರವಾಸಿ ತಾಣಗಳು ಈಗ ಗಿಜಿಗುಡುತ್ತಿವೆ. ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗ್ತಿದೆ. ಹೊಟೇಲ್ ರೂಮ್ ಗಳು ಫುಲ್ ಆಗ್ತಿವೆ. ಪ್ರವಾಸಕ್ಕೆ ಹೋದವರು ಮಾತ್ರವಲ್ಲ ಬೇರೆ ಬೇರೆ ಕೆಲಸಕ್ಕೆ ಹೋದವರು ಕೂಡ ಹೊಟೇಲ್ ನಲ್ಲಿ ಉಳಿದುಕೊಳ್ತಾರೆ. ಹೊಟೇಲ್ ರೂಮ್ ಬುಕ್ ಮಾಡೋದು ಈಗ ಸುಲಭ. ಹೊಟೇಲ್ ಗೆ ಹೋಗಿ, ರೂಮ್ ಖಾಲಿ ಇದ್ಯೆ ಎಂಬುದನ್ನು ಚೆಕ್ ಮಾಡಿ ನಂತ್ರ ರೂಮ್ ಬುಕ್ ಮಾಡ್ಬೇಕಾಗಿಲ್ಲ. ಆರಾಮವಾಗಿ ಮನೆಯಲ್ಲಿಯೇ ಕುಳಿತು ರೂಮ್ ಬುಕ್ ಮಾಡಬಹುದು.
ಹೊಟೇಲ್ (Hotel) ರೂಮಿನ ಬಗ್ಗೆ ಇತ್ತೀಚಿನ ದಿನಗಳಲ್ಲಿ ಅನೇಕ ವಂಚನೆ ಸುದ್ದಿಗಳು ಕೇಳಿ ಬರ್ತಿವೆ. ಹೊಟೇಲ್ ನವರು ಹೆಚ್ಚಿನ ಹಣ ತೆಗೆದುಕೊಂಡಿದ್ದಾರೆ. ಕ್ಯಾಮರಾ (Camera) ಫಿಕ್ಸ್ ಮಾಡಿದ್ದಾರೆ ಹೀಗೆ ಅನೇಕ ವಂಚನೆ ಸುದ್ದಿಗಳು ಕೇಳಿ ಬರ್ತವೆ. ಹೊಟೇಲ್ ಮೋಸಕ್ಕೆ ನೀವೂ ಒಳಗಾಗಬಾರದು ಎಂದಾದ್ರೆ ಕೆಲ ಎಚ್ಚರಿಕೆ ತೆಗೆದುಕೊಳ್ಳಬೇಕು. ಹೊಟೇಲ್ ಚೆಕ್ ಔಟ್ ಮಾಡುವ ವೇಳೆ ಕೆಲ ವಿಷ್ಯ ನೆನೆಪಿಟ್ಟುಕೊಳ್ಳಬೇಕು.
ಹೊಟೇಲ್ ಚೆಕ್ ಔಟ್ (Check Out) ಮಾಡುವ ಮುನ್ನ ಇದನ್ನು ಗಮನಿಸಿ : ಹೊಟೇಲ್ ಕೋಣೆಯಿಂದ ಹೊರಡುವ ಮೊದಲು ನೀವು ಮಿನಿ ಫ್ರಿಜ್ ಮತ್ತು ಎಲೆಕ್ಟ್ರಿಕ್ ಕೆಟಲ್ ಅನ್ನು ಸಂಪೂರ್ಣವಾಗಿ ಪರಿಶೀಲಿಸಿ. ಅದು ಸರಿಯಾಗಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಇತ್ತೀಚಿನ ದಿನಗಳಲ್ಲಿ ಹೊಟೇಲ್ ವಂಚನೆ ಪ್ರವಾಸಿ ಸ್ಥಳಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಹೊಟೇಲ್ ನಿಂದ ಹೊರಡುವ ಮುನ್ನ ಮಿನಿ ಫ್ರಿಜ್ ಹಾಗೂ ಎಲೆಕ್ಟ್ರಿಕ್ ಕೆಟಲ್ ಏಕೆ ನೋಡ್ಬೇಕು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಆದ್ರೆ ಈ ವಿಷ್ಯದಲ್ಲೂ ಹೊಟೇಲ್ ನವರು ಮೋಸ ಮಾಡ್ತಾರೆ. ಹೊಟೇಲ್ ಚೆಕ್ ಔಟ್ ಮಾಡಿದ ಸಂದರ್ಭದಲ್ಲಿ ಕೆಟಲ್ ಹಾಳಾಗಿದೆ, ಮಿನಿ ಫ್ರಿಜ್ ಹಾಳಾಗಿದೆ ಎಂದು ಹೆಚ್ಚುವರಿ ಹಣ ಪಾವತಿಸಿಕೊಳ್ತಾರೆ. ಹಾಗಾಗಿ ಚೆಕ್ ಔಟ್ ಮಾಡುವ ಮೊದಲು ನೀವು ನಿಮ್ಮ ರೂಮಿನ ಕೆಟಲ್ ಪರೀಕ್ಷಿಸಿ. ಸಾಧ್ಯವಾದ್ರೆ ವಿಡಿಯೋ ಮಾಡಿಟ್ಟುಕೊಳ್ಳಿ. ನೀವು ಹೊಟೇಲ್ ನಿಂದ ಹೊರ ಬಂದು ಬಿಲ್ ಪಾವತಿ ಮಾಡುವ ಸಂದರ್ಭದಲ್ಲಿ ಹಾಳಾದ ವಸ್ತುಗಳನ್ನು ಬದಲಿಸಿ ನಿಮಗೆ ಮೋಸ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಅನೇಕ ಇಂಥ ಪ್ರಕರಣಗಳು ಇತ್ತೀಚಿಗೆ ವರದಿಯಾಗಿವೆ. ಹೊಟೇಲ್ ನವರ ಈ ಮೋಸಕ್ಕೆ ಬಲಿಯಾಗ್ಬಾರದು ಎಂದಾದ್ರೆ ನೀವು ಹೊಟೇಲ್ ರೂಮಿನಿಂದ ಹೊರ ಬರುವ ಮುನ್ನ ವಸ್ತುಗಳ ಫೋಟೋ ತೆಗೆದಿಟ್ಟುಕೊಳ್ಳಿ. ಹಾಳಾಗಿದೆ ಎಂದು ದೂರಿದಾಗ ನೀವು ವಿಡಿಯೋ ಅಥವಾ ಫೋಟೋ ತೋರಿಸಬಹುದು.
ವಿದೇಶಕ್ಕೆ ಪ್ರಯಾಣಿಸುವ ಮೊದಲು ಈ ದೇಶಗಳ ಹೆಸರನ್ನು ಸರಿಯಾಗಿ ಹೇಳೋದು ಕಲೀರಿ
ಹೊಟೇಲ್ ಬಿಡುವ ಮುನ್ನ ಚೆಕ್ ಔಟ್ ಮಾಡಲು ಮರೆಯಬೇಡಿ : ಹೊಟೇಲ್ ರೂಮ್ ಬುಕ್ ಈಗ ಆನ್ಲೈನ್ ಆಗಿದೆ. ಬಹುತೇಕರು ರೂಮ್ ಬುಕ್ ಆನ್ಲೈನ್ ಮೂಲಕ ಮಾಡ್ತಾರೆ. ಆದ್ರೆ ರೂಮ್ ಚೆಕ್ ಔಟ್ ಮಾಡಲು ಮರೆಯುತ್ತಾರೆ. ಆನ್ಲೈನ್ ನಲ್ಲಿಯೇ ಪೇಮೆಂಟ್ ಆಗುವ ಕಾರಣ ರೂಮ್ ನಿಂದ ಹೊರಗೆ ಹೋಗುವ ಮುನ್ನ ಅಧಿಕೃತವಾಗಿ ಚೆಕ್ ಔಟ್ ಮಾಡೋದಿಲ್ಲ. ಇದು ತಪ್ಪು. ಯಾಕೆಂದ್ರೆ ಹೊಟೇಲ್ ನವರು ಹೆಚ್ಚುವರಿ ಹಣವನ್ನು ನಿಮ್ಮಿಂದ ವಸೂಲಿ ಮಾಡಬಹುದು. ಹೋಟೆಲ್ ನವರ ಬಳಿ ವೈಯಕ್ತಿಕ ವಿವರಗಳು ಮತ್ತು ಐಡಿ ನಕಲು ಇರುತ್ತವೆ. ಹಾಗಾಗಿ ಅವರು ನಿಮಗೆ ಮೋಸ ಮಾಡುವ ಸಾಧ್ಯತೆಯಿರುತ್ತದೆ. ಹೊಟೇಲ್ ನಿಂದ ಯಾವುದೇ ಮೋಸಕ್ಕೆ ನೀವು ಗುರಿಯಾಗಬಾರದು ಎಂದಾದ್ರೆ ಅಧಿಕೃತವಾಗಿ ಚೆಕ್ ಔಟ್ ಮಾಡಿ ಬನ್ನಿ.
Travel Tips: ಮಕ್ಕಳಿಗೆ ಪಾಲಕರು ಕಲಿಸ್ಬೇಕು ಈ ಮ್ಯಾನರ್ಸ್
ಚೆಕ್ ಔಟ್ ಸಮಯದ ಬಗ್ಗೆ ಗಮನವಿರಲಿ : ಸಾಮಾನ್ಯವಾಗಿ ಹೊಟೇಲ್ ನಲ್ಲಿ ಚೆಕ್ ಇನ್ ಸಮಯ ಮಧ್ಯಾಹ್ನ 12 ಗಂಟೆಯಾಗಿರುತ್ತದೆ. ಮರುದಿನ 12 ಗಂಟೆಯವರೆಗೆ ರೂಮ್ ನಲ್ಲಿ ಇಡಬಹುದು. ಮಧ್ಯಾಹ್ನ 12 ಗಂಟೆ ನಂತ್ರ ಎರಡನೇ ದಿನದ ಶುಲ್ಕ ಕೌಂಟ್ ಆಗುತ್ತದೆ. ಒಂದ್ವೇಳೆ 12 ಗಂಟೆಗೆ ಚೆಕ್ ಔಟ್ ಮಾಡಲು ಸಾಧ್ಯವಾಗಿಲ್ಲ ಎಂದಾದ್ರೆ ನೀವು ಹೊಟೇಲ್ ನವರ ಜೊತೆ ಮಾತನಾಡಿ. ಹೊಟೇಲ್ ಕೆಲವು ಬಾರಿ ಒಂದೆರಡು ಗಂಟೆ ರೂಮಿನಲ್ಲಿರಲು ಅವಕಾಶ ನೀಡುತ್ತದೆ. ಕೆಲ ಹೊಟೇಲ್ ತಕ್ಷಣ ಖಾಲಿ ಮಾಡಲು ಹೇಳುತ್ತದೆ. ಮತ್ತೆ ಕೆಲ ಹೊಟೇಲ್ ಗಳು ಗಂಟೆಗೆ ತಕ್ಕಂತೆ ಶುಲ್ಕ ವಿಧಿಸುತ್ತವೆ. ಇದನ್ನು ತಿಳಿದುಕೊಳ್ಳುವುದು ಮುಖ್ಯ.