ವಿದೇಶಕ್ಕೆ ಪ್ರಯಾಣಿಸುವ ಮೊದಲು ಈ ದೇಶಗಳ ಹೆಸರನ್ನು ಸರಿಯಾಗಿ ಹೇಳೋದು ಕಲೀರಿ
ನಾವೆಲ್ಲರೂ ವಿದೇಶಕ್ಕೆ ಹೋಗುವ ಕನಸು ಕಾಣುತ್ತೇವೆ, ಆದರೆ ನೀವು ಹೋಗುವ ಕನಸು ಕಾಣುತ್ತಿರುವ ದೇಶದ ಹೆಸರನ್ನು ನೀವು ಸರಿಯಾಗಿ ಹೇಳ್ತಾ ಇದ್ದೀರಾ ಇಲ್ವಾ ಅಂತ ನಿಮಗೆ ತಿಳಿದಿದೆಯೇ? ಇಲ್ಲದಿದ್ದರೆ, ನಾವೆಲ್ಲರೂ ಸರಿಯಾಗಿ ಉಚ್ಚರಿಸುವಲ್ಲಿ ಎಡವುತ್ತಿರುವ ದೇಶಗಳು ಮತ್ತು ಸ್ಥಳಗಳ ಬಗ್ಗೆ ತಿಳಿದುಕೊಳ್ಳೋಣ.
ನಾವು ವಿದೇಶಕ್ಕೆ ಪ್ರಯಾಣಿಸಲು ಇಷ್ಟಪಡುತ್ತೇವೆ. ಆದರೆ ಕೆಲವೊಮ್ಮೆ ಅಲ್ಲಿನ ಹೆಸರುಗಳನ್ನು ತಪ್ಪಾಗಿ ಉಚ್ಚಾರಣೆ ಮಾಡುತ್ತೇವೆ. ಆದರೆ ನೀವು ಅದನ್ನೇ ಸರಿ ಎಂದು ಅಂದುಕೊಂಡಿರುತ್ತೀರಿ. ಹಾಗಾಗಿಯೇ ನೀವು ವಿದೇಶಕ್ಕೆ ಪ್ರಯಾಣಿಸುವ ಮೊದಲು, ಈ ದೇಶಗಳ ಹೆಸರುಗಳನ್ನು ಹೇಗೆ ಕರೆಯಲಾಗುತ್ತದೆ ಎಂದು ತಿಳಿದುಕೊಳ್ಳಿ. ನೀವು ಆ ತಾಣಕ್ಕೆ ಹೋಗಿ, ಅಲ್ಲಿನ ಹೆಸರನ್ನು ತಪ್ಪು ತಪ್ಪಾಗಿ ಹೇಳಿದ್ರೆ ಅಲ್ಲಿನ ಜನಕ್ಕೂ ಇಷ್ಟ ಆಗಲ್ಲ, ಆದುದರಿಂದ ಈಗಲೇ ಆ ಬಗ್ಗೆ ತಿಳಿದುಕೊಂಡು ಸರಿಯಾಗಿ ಹೆಸರಿಸೋದನ್ನು ತಿಳ್ಕೊಂಡ್ರೆ ಒಳ್ಳೇದು.
ಕೆಲವೊಮ್ಮೆ ವಿದೇಶಿ ಹೆಸರುಗಳು ಎಷ್ಟು ಟ್ರಿಕಿಯಾಗಿರುತ್ತವೆ ಎಂದರೆ ಅವುಗಳನ್ನು ಸರಿಯಾಗಿ ಹೇಳಲು ಏಳು ಜನ್ಮಗಳನ್ನು ತೆಗೆದುಕೊಳ್ಳುತ್ತದೆ. ಸರಿ, ಹೆಚ್ಚಿನ ಹೆಸರುಗಳು ಅಷ್ಟು ಕಷ್ಟಕರವಲ್ಲ, ಆದರೆ ನೀವು ಅವುಗಳನ್ನು ತಪ್ಪಾಗಿ ಹೇಳುವ ಮೊದಲು ಅವುಗಳ ಸರಿಯಾದ ಉಚ್ಚಾರಣೆಯನ್ನು ತಿಳಿದುಕೊಳ್ಳುವುದು ಉತ್ತಮ. ಬನ್ನಿ ಇಲ್ಲಿದೆ ಕೆಲವು ದೇಶಗಳು, ತಾಣಗಳ ಸರಿಯಾದ ಉಚ್ಚಾರಣೆ.
ಮಾಲ್ಡೀವ್ಸ್ (MOHL-Deevs) (Maldives - Mohl Deeves)
ಇಂತಹ ಸುಂದರವಾದ ಸ್ಥಳಕ್ಕೆ ಭೇಟಿ ನೀಡುವುದನ್ನು ನೀವು ಯಾವತ್ತೂ ಮಿಸ್ ಮಾಡಿಕೊಳ್ಳೋದಿಲ್ಲ ಅಲ್ವಾ?, ಆದರೆ ನೀವು ವಿದ್ಯಾವಂತ ಜನರ ಮುಂದೆ ಅದರ ಹೆಸರನ್ನು ಸರಿಯಾಗಿ ಹೇಳದಿದ್ದರೆ, ಬಹುಶಃ ನೀವು ಮತ್ತೆ ತಲೆತಗ್ಗಿಸಬೇಕಾಗಬಹುದು. ವಾಸ್ತವವಾಗಿ, ಈ ಹೆಸರನ್ನು MOHL-deevs ಅಂದರೆ ಮೌಲ್ ದೀವ್ಸ್ ಎಂದು ಕರೆಯಲಾಗುತ್ತದೆ. ಇಷ್ಟೇ ಅಲ್ಲ, ಅದರ ರಾಜಧಾನಿ ಮಾಲೆಯನ್ನು ಮೇಲ್ ಅಲ್ಲ Mah Lay ಎಂದು ಕರೆಯಲಾಗುತ್ತದೆ.
ಎಡಿನ್ಬರ್ಗ್, ಸ್ಕಾಟ್ಲೆಂಡ್ (eh-din-BRUH) - Edinburgh, Scotland (eh-din-BRUH)
ಎಡಿನ್ಬರ್ಗ್ ಸ್ಕಾಟ್ಲೆಂಡ್ನ ಒಂದು ಸುಂದರವಾದ ಸ್ಥಳವಾಗಿದೆ, ಇಲ್ಲಿನ ಅತ್ಯುತ್ತಮ ವಾಸ್ತುಶಿಲ್ಪವನ್ನು ಜನರು ಇಷ್ಟಪಡುತ್ತಾರೆ. ಈ ಸ್ಥಳದ ಹೆಸರಿನ ಸರಿಯಾದ ಉಚ್ಚಾರಣೆಯು ಎ-ಡೀನ್-ಬರ್ಗ್ ಅಲ್ಲ, ಆದರೆ ಎ-ಡೀನ್-ಬ್ರೂವಾ. ಆಗಿದೆ ಅಂದರೆ ಇಂಗ್ಲೀಷ್ ನಲ್ಲಿ ಹೇಳೋದಾದರೆ eh-din-BRUH ಆಗಿದೆ.
ಬುಡಾಪೇಸ್ಟ್- Budapest
ಈ ಸುಂದರ ಜಾಗವನ್ನು ನೀವು ಒಂದು ಬಾರಿಯಾದರೂ ನೋಡಬೇಕು ಎಂದು ಅಂದುಕೊಳ್ಳುತ್ತೀರಿ ಅಲ್ವಾ? ಆದರೆ ಇದರ ಹೆಸರು…. ನೀವು ಈ ಹೆಸರಿನಲ್ಲಿ ಸರಿಯಾಗಿ ಹೇಳಬಹುದು ಏಕೆಂದರೆ ಹಂಗೇರಿಯನ್ ಭಾಷೆಯಲ್ಲಿ ಇದನ್ನು ಬೂ-ದಾ-ಪೆಶ್ಟ್ (boo da pesth) ಎಂದು ಉಚ್ಚರಿಸಲಾಗುತ್ತದೆ, ಆದರೆ ಇದನ್ನು ಬುಡಾಪೆಸ್ಟ್ ಎಂದು ಹೇಳುವುದು ಸಹ ಸರಿಯಾಗಿದೆ.
ಲೀಸೆಸ್ಟರ್ ಸ್ಕ್ವೇರ್, ಲಂಡನ್ (ಲೆಸ್-ತಾಹ್) - Leicester Square, London (LES - tuh)
ನೀವು ಎಂದಾದರೂ ಲಂಡನ್ ಗೆ ಹೋಗಿದ್ದರೆ, ನೀವು ಲೀಸೆಸ್ಟರ್ ಸ್ಕ್ವೇರ್ ಗೆ ಹೋಗಿರಬೇಕು, ಅದು ನ್ಯೂಯಾರ್ಕ್ ನ ಪ್ರಸಿದ್ಧ ಸ್ಥಳಗಳಿಂದ ಬಹಳ ದೂರವಿಲ್ಲ. ಈ ಸ್ಥಳದ ಸರಿಯಾದ ಹೆಸರನ್ನು ಲೆಸ್ತಾ (LES - tuh) ಎಂದು ಉಚ್ಚರಿಸಲಾಗುತ್ತದೆ.
ಮ್ಯೂನಿಕ್, ಜರ್ಮನಿ (MEW-nik) - Munich, Germany (MEW-nik)
ಅದನ್ನು ಮ್ಯೂನಿಚ್ ಎಂದು ಕರೆಯುವುದು ಸರಿಯೇ? ಬಹುಶಃ ಇಲ್ಲ, ಏಕೆಂದರೆ ಅದು ಈ ಸ್ಥಳದ ಸರಿಯಾದ ಹೆಸರಲ್ಲ. ಜರ್ಮನಿಯ ಈ ಸುಂದರವಾದ ಸ್ಥಳವನ್ನು MEW-nik ಎಂದು ಕರೆಯಲಾಗುತ್ತದೆ ಮತ್ತು ನೀವು ಜರ್ಮನ್ ಭಾಷೆಯಲ್ಲಿ ತಿಳಿಯಲು ಬಯಸಿದರೆ, ಅದನ್ನು ಮೂನ್-ಚೆರ್ನ್ (Moon Chern) ಎಂದು ಕರೆಯಲಾಗುತ್ತದೆ.
ಚಿಲೆ - ಚಿಲಿ (Chile - Chilli)
ಚಿಲಿ ಬಗ್ಗೆ ನೀವು ಸಾಕಷ್ಟು ಕೇಳಿರಬಹುದು ಅಲ್ವಾ? ನೀವು ಈ ಪದವನ್ನು ನೋಡಿದರೆ ಸರಿಯಾಗಿ ಹೇಳ್ತಾ ಇದ್ದೀರಾ? ಇಲ್ವಾ ಅನ್ನೋದು ಗೊತ್ತಾಗುತ್ತೆ. ಈ ಸ್ಥಳವನ್ನು ಚಿಲಿ ಅಥವಾ ಚಯಿಲ್ ಎಂದು ಕರೆಯಲಾಗುತ್ತದೆ ಎಂದು ನೀವು ಭಾವಿಸಿದರೆ ಅದು ತಪ್ಪು, ಯಾಕಂದ್ರೆ ಈ ಸ್ಥಳವನ್ನು ಚಿಲಿ (Chilley) ಎಂದು ಕರೆಯಲಾಗುತ್ತೆ.