Travel Tips: ಮಕ್ಕಳಿಗೆ ಪಾಲಕರು ಕಲಿಸ್ಬೇಕು ಈ ಮ್ಯಾನರ್ಸ್
ಮಕ್ಕಳು ಹೆಚ್ಚೆಚ್ಚು ಮಾರ್ಕ್ಸ್ ತಂದ್ರೆ ಸಾಲೋದಿಲ್ಲ. ಮಕ್ಕಳು ಸಾಮಾಜಿಕ ಜ್ಞಾನ ಹೊಂದಿರಬೇಕು. ಮನೆ ಹಾಗೂ ಮನೆ ಹೊರಗೆ ಹೇಗೆ ವರ್ತಿಸಬೇಕು ಎಂಬುದನ್ನು ತಿಳಿದಿರಬೇಕು. ಪಾಲಕರಾದವರು ಮಕ್ಕಳಿಗೆ ಪ್ರತಿಯೊಂದು ವಿಷ್ಯವನ್ನೂ ಕಲಿಸಬೇಕು.
ಮಕ್ಕಳಿಗೆ ಪಾಲಕರು ಅನೇಕ ವಿಷ್ಯಗಳನ್ನು ಕಲಿಸ್ತಾರೆ. ಓದಿನ ಜೊತೆ ಮಕ್ಕಳು, ದೊಡ್ಡವರ ಜೊತೆ ಹೇಗೆ ವರ್ತಿಸಬೇಕು, ಹೇಗೆ ಆಹಾರ ಸೇವನೆ ಮಾಡ್ಬೇಕು ಎನ್ನುವುದ್ರಿಂದ ಹಿಡಿದು ದೇವರ ಪೂಜೆಯವರೆಗೆ ಮಕ್ಕಳಿಗೆ ಮುಂದೆ ಕಷ್ಟವಾಗಬಾರದು ಎನ್ನುವ ಕಾರಣಕ್ಕೆ ಸಾಧ್ಯವಾದಷ್ಟು ವಿಷ್ಯವನ್ನು ಅವರಿಗೆ ಕಲಿಸುವ ಪ್ರಯತ್ನವನ್ನು ಪಾಲಕರು ಮಾಡ್ತಾರೆ. ಹೇಗೆ ಕುಳಿತುಕೊಳ್ಬೇಕು, ಹೇಗೆ ನಿಲ್ಲಬೇಕು ಎಂಬದನ್ನ ಕೂಡ ಮಕ್ಕಳಿಗೆ ತಿಳಿಸುವ ಪಾಲಕರು ಕೆಲ ವಿಷ್ಯವನ್ನು ನಿರ್ಲಕ್ಷ್ಯ ಮಾಡ್ತಾರೆ. ಅದ್ರಲ್ಲಿ ಟ್ರಾವೆಲ್ ಮ್ಯಾನರ್ಸ್ ಕೂಡ ಒಂದು. ಪ್ರವಾಸಕ್ಕೆ ಹೋದಾಗ ಹೇಗಿರಬೇಕು ಎಂಬುದನ್ನು ಪಾಲಕರು, ಮಕ್ಕಳಿಗೆ ಕಲಿಸಬೇಕು. ಇದ್ರಿಂದ ಮಕ್ಕಳು ಸಾಕಷ್ಟು ವಿಷ್ಯಗಳನ್ನು ಕಲಿಯಬಹುದು ಜೊತೆಗೆ ಅವರ ಪ್ರಯಾಣವನ್ನು ಸುಲಭಗೊಳಿಸಬಹುದು. ಮಕ್ಕಳಿಗೆ ಪ್ರವಾಸಕ್ಕೆ ಹೋದಾಗ ಪಾಲಕರು ಏನೆಲ್ಲ ಕಲಿಸಬೇಕು ಎಂಬುದನ್ನು ನಾವು ಹೇಳ್ತೇವೆ.
ಪ್ರವಾಸ (Trip) ದ ವೇಳೆ ಮಕ್ಕಳಿ (Children) ಗೆ ಈ ವಿಷ್ಯ ಕಲಿಸಿ :
ಸ್ವಚ್ಛತೆ (Clean) ಬಗ್ಗೆ ಮಕ್ಕಳಿಗೆ ತಿಳಿಸಿ, ಕಸ ಎಲ್ಲಿ ಹಾಕ್ಬೇಕು ಹೇಳಿಕೊಡಿ : ಮಕ್ಕಳು ಮನೆಯಲ್ಲಿರಲಿ ಅಥವಾ ಮನೆಯ ಹೊರಗಿರಲಿ ಕಸ (Garbage) ವನ್ನು ಕಸದ ತೊಟ್ಟಿಗೆ ಹಾಕಲು ಯಾವಾಗಲೂ ಕಲಿಸಬೇಕು. ಪ್ರವಾಸಕ್ಕೆ ಹೋದಾಗ ಚಿಪ್ಸ್ ತಿಂದು, ನೀರನ್ನು ಕುಡಿದು ಬಾಟಲಿ, ಪ್ಲಾಸ್ಟಿಕ್ ಕವರ್ ಗಳನ್ನು ಮಕ್ಕಳು ಕಂಡ ಕಂಡಲ್ಲಿ ಎಸೆಯುತ್ತಾರೆ. ಇದು ಪರಿಸರಕ್ಕೆ ಒಳ್ಳೆಯದಲ್ಲ. ಕಂಡಲ್ಲಿ ಕಸ ಹಾಕ್ಬಾರದು, ಸ್ವಚ್ಛತೆ ಮುಖ್ಯ ಎಂಬುದನ್ನು ನೀವು ಮಕ್ಕಳಿಗೆ ತಿಳಿಸಬೇಕು. ನೀವು ಪ್ರತಿ ಬಾರಿ ಕಸವನ್ನು ಡಸ್ಟ್ ಬಿನ್ ಗೆ ಹಾಕಿದ್ರೆ ಮಕ್ಕಳು ಕೂಡ ನಿಮ್ಮನ್ನು ಅನುಸರಿಸುತ್ತಾರೆ. ಒಂದ್ವೇಳೆ ನಿಮ್ಮ ಕಣ್ಣಿಗೆ ಕಸದ ಬುಟ್ಟಿ ಕಾಣಿಸಿಲ್ಲವೆಂದ್ರೆ ಕಸವನ್ನು ಒಂದು ಕವರ್ ನಲ್ಲಿ ಹಾಕಿಟ್ಟುಕೊಂಡು ನಂತ್ರ ಬುಟ್ಟಿಗೆ ಹಾಕೋದನ್ನು ಮಕ್ಕಳಿಗೆ ಅಭ್ಯಾಸ ಮಾಡಿ. ಈಗಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬುದು ನೆನಪಿನಲ್ಲಿರಲಿ.
ಸುರಕ್ಷತೆ ಬಗ್ಗೆ ನೀವು ಮಕ್ಕಳಿಗೆ ಕಲಿಸ್ಬೇಕು : ಪ್ರಯಾಣದ ಮೊದಲು ಮಕ್ಕಳಿಗೆ ಏನು ಮಾಡಬೇಕು, ಏನು ಮಾಡಬಾರದು ಎಂಬುದನ್ನು ನೀವು ತಿಳಿಸಬೇಕು. ಪ್ರಯಾಣದ ಸಂದರ್ಭದಲ್ಲಿ ಸದಾ ಪಾಲಕರ ಜೊತೆ ಇರಬೇಕೆಂದು ಮಕ್ಕಳಿಗೆ ಹೇಳಿ. ಮಕ್ಕಳಿಗೆ ಪಾಲಕರ ಫೋನ್ ನಂಬರ್ ಹಾಗೂ ವಿಳಾಸವನ್ನು ತಿಳಿಸಿ. ಯಾವುದೇ ಅಪರಿಚಿತ ವ್ಯಕ್ತಿ ಜೊತೆ ಸಲಿಗೆಯಿಂದ ವರ್ತಿಸದಂತೆ ತಿಳಿಸಿ. ಅಪರಿಚಿತ ವ್ಯಕ್ತಿ ಯಾವುದೇ ವಸ್ತು ನೀಡಿದ್ರೂ ಅದನ್ನು ಸ್ವೀಕರಿಸಬಾರದು ಎಂದು ಮಕ್ಕಳಿಗೆ ಹೇಳಿ. ಅಪರಿಚಿತರ ಜೊತೆ ಎಲ್ಲಿಗೂ ಹೋಗಬಾರದು ಎಂದು ಮಕ್ಕಳಿಗೆ ತಿಳಿಸಿ ಹೇಳಿ.
ಮಕ್ಕಳ ಪ್ರಶ್ನೆಗಳನ್ನು ನಿರ್ಲಕ್ಷ್ಯ ಮಾಡ್ಬೇಡಿ : ಪ್ರವಾಸಕ್ಕೆ ಹೋಗ್ಲಿ ಇಲ್ಲ ಮನೆಯಲ್ಲಿರಲಿ ಮಕ್ಕಳ ಮನಸ್ಸಿನಲ್ಲಿ ನಾನಾ ಪ್ರಶ್ನೆಗಳಿರುತ್ತವೆ. ಪಾಲಕರು ಮಕ್ಕಳ ಪ್ರಶ್ನೆಗಳನ್ನು ನಿರ್ಲಕ್ಷ್ಯ ಮಾಡ್ತಾರೆ. ಆದ್ರೆ ಎಂದೂ ಈ ತಪ್ಪನ್ನು ಪಾಲಕರು ಮಾಡಬಾರದು. ಪ್ರಯಾಣದ ವೇಳೆ ಅವರು ಕೇಳುವ ಹೊಸ ಪ್ರಶ್ನೆಗೆ ಉತ್ತರ ನೀಡುವ ಪ್ರಯತ್ನ ಮಾಡಿ. ಮಕ್ಕಳಿಗೆ ಹೊಸ ಹೊಸ ವಿಷ್ಯಗಳನ್ನು ನೀವು ತಿಳಿಸಿಕೊಡಿ. ಇದ್ರಿಂದ ಮಕ್ಕಳ ಜ್ಞಾನ ವೃದ್ಧಿಯಾಗುತ್ತದೆ.
ಎಲ್ಲಿಗಾದರೂ ಹೋಗಿ, ಕಾರಲ್ಲಿ ಮಾತ್ರ ಈ ವಸ್ತುಗಳು ಇರುವಂತೆ ನೋಡಿಕೊಳ್ಳಿ
ಕೇಳಿದ್ದೆಲ್ಲ ಕೊಡಿಸಬೇಡಿ : ಪ್ರವಾಸಕ್ಕೆ ಹೋದಾಗ ಅನೇಕ ವಸ್ತುಗಳು ಮಕ್ಕಳ ಕಣ್ಣಿಗೆ ಕಾಣುತ್ತವೆ. ಎಲ್ಲ ವಸ್ತುಗಳು ಬೇಕು ಎಂದು ಮಕ್ಕಳು ಹಠ ಮಾಡ್ತಾರೆ. ಆದ್ರೆ ಹೋದಲ್ಲೆಲ್ಲ ಮಕ್ಕಳಿಗೆ ಅವರು ಹೇಳಿದ್ದೆಲ್ಲ ಕೊಡಿಸಬೇಡಿ. ಅನಾವಶ್ಯಕ ವಸ್ತುಗಳಿಗೆ ಬೇಡಿಕೆ ಇಡುವುದು ಒಳ್ಳೆಯದಲ್ಲ ಎಂದು ಮಕ್ಕಳಿಗೆ ವಿವರಿಸಿ.
ದೇಶದ ಈ ಗ್ರಾಮದಲ್ಲಿ ಗಡಿಯಾರ ಮುಳ್ಳು ತಿರುಗೋದು ಉಲ್ಟಾ, ಸಪ್ತಪದಿಯೂ ಉಲ್ಟಾ
ಮಕ್ಕಳಿಗೆ ಇದನ್ನೂ ಕಲಿಸಿ : ಪ್ರಯಾಣದ ವೇಳೆ ಅದ್ರಲ್ಲೂ ಸಾರ್ವಜನಿಕ ಪ್ರದೇಶಗಳಲ್ಲಿ, ಸಾರ್ವಜನಿಕ ಸಾರಿಗೆಯಲ್ಲಿ ಸಭ್ಯವಾಗಿ ವರ್ತಿಸಬಾರದೆಂದು ಮಕ್ಕಳಿಗೆ ತಿಳಿಸಿ. ಈ ಪ್ರದೇಶದಲ್ಲಿ ಶಾಂತವಾಗಿರುವಂತೆ ಮಕ್ಕಳಿಗೆ ಕಲಿಸಿ. ಕೆಲ ಮಕ್ಕಳು ಗಲಾಟೆ ಮಾಡಿ ಸಹ ಪ್ರಯಾಣಿಕರಿಗೆ ಕಿರಿಕಿರಿ ಮಾಡ್ತಾರೆ.