ಫಾರಿನ್ ಟ್ರಿಪ್ ಆಸೆ ಈಡೇರಿಸಿಕೊಳ್ಳಲ್ಲೊಂದು ಅವಕಾಶ, ಐಲ್ಯಾಂಡ್ ಟ್ರಿಪ್ ಉಚಿತ! ಶ್, ಇದು ಬ್ಲೈಂಡ್ ಡೇಟ್!

ಇಪ್ಪತ್ತು, ಇಪ್ಪತ್ತೈದು ಲಕ್ಷ ಹೊಂದಿಸಿ ಪ್ರವಾಸಕ್ಕೆ ಹೋಗೋದು ಸುಲಭವಲ್ಲ. ಈ ಯಾವ ಖರ್ಚಿಲ್ಲದೆ ನೀವು ಫ್ಲೋರಿಡಾವನ್ನು ಪುಕ್ಕಟ್ಟೆಯಾಗಿ ಸುತ್ತಿ ಬರ್ಬಹುದು. ಆದ್ರೆ ಕೆಲ ಕಂಡಿಷನ್ ಪಾಲಿಸ್ಬೇಕು. 

You Are Getting A Free Beautiful Island Holiday Trip roo

ವಿದೇಶಕ್ಕೆ ಹೋಗ್ಬೇಕು, ಅಲ್ಲಿನ ಸಂಸ್ಕೃತಿ, ಪರಿಸರವನ್ನು ಆಸ್ವಾದಿಸಬೇಕು ಎನ್ನುವವರು ಅನೇಕ ಮಂದಿ. ಆದ್ರೆ ಕೈನಲ್ಲಿ ಕಾಸಿರೋದಿಲ್ಲ. ಹಾಗಾಗಿ ವಿದೇಶಿ ಪ್ರವಾಸ ಕನಸಾಗೆ ಇರುತ್ತೆ. ಬೇರೆ ಬೇರೆ ದೇಶಗಳನ್ನು ಸುತ್ತಾಡೋದು ಸುಲಭದ ಕೆಲಸವಲ್ಲ. ಕಷ್ಟಪಟ್ಟು ಹಣ ಹೊಂದಿಸಿ ಕೆಲವೊಂದು ಸುಂದರ ಸ್ಥಳಗಳಿಗೆ ಹೋದಾಗ ನಮಗೆ ವಾಪಸ್ ಬರಲು ಮನಸ್ಸಾಗೋದಿಲ್ಲ. ಇಲ್ಲೇ ಇನ್ನೊಂದೆರಡು ದಿನ ಇರೋಕೆ ಅವಕಾಶ ಸಿಕ್ಕಿದ್ರೆ ಎಷ್ಟು ಚೆನ್ನಾಗಿರ್ತಾಯಿತ್ತು ಎಂದು ನಾವು ಅಂದುಕೊಳ್ತೇವೆ. ನಾಲ್ಕೈದು ದಿನ ಒಂದೇ ಕಡೆ ಇರಲು, ಹೊಟೇಲ್ ಬಿಲ್ ಪಾವತಿಸಲು ಹಣ ಸಾಕಾಗೋದಿಲ್ಲ ಎನ್ನುವ ಕಾರಣಕ್ಕೆ ಪೆಚ್ಚು ಮೋರೆ ಹಾಕಿಕೊಂಡು ವಾಪಸ್ ಬರ್ತೇವೆ.  ಆದ್ರೆ ನಿಮಗೀಗ ಒಂದು ಒಳ್ಳೆ ಅವಕಾಶವಿದೆ. ನೀವು ಒಂದೇ ಜಾಗದಲ್ಲಿ ಒಂಭತ್ತು ದಿನ ತಂಗಬಹುದು.  ಎಲ್ಲ ಸೌಲಭ್ಯಗಳನ್ನು ನೀವು ಅಲ್ಲಿ ಉಚಿತವಾಗಿ ಪಡೆಯಬಹುದು. ಅದ್ಯಾವ ಜಾಗ ಮತ್ತೆ ಉಚಿತ ಪ್ರಯಾಣಕ್ಕೆ ಯಾವೆಲ್ಲ ಷರತ್ತುಗಳಿವೆ ಎಂಬುದನ್ನು ನಾವಿಂದು ನಿಮಗೆ ಹೇಳ್ತೇವೆ.

ಉಚಿತ ಪ್ರವಾಸ (Trip) ಕ್ಕೆ ಅವಕಾಶ : ಉಚಿತ ಅಂದ್ರೆ ಯಾರು ಬಿಡ್ತಾರೆ ಹೇಳಿ. ಅದ್ರಲ್ಲೂ ಒಂದು ಐಲ್ಯಾಂಡ್ (Island) ಗೆ ಉಚಿತವಾಗಿ ಹೋಗುವ ಅಲ್ಲೇ ಒಂಭತ್ತು ದಿನ ತಂಗುವ ಅವಕಾಶವಿದ್ರೆ? ಪ್ಲೋರಿಡಾ (Florida) ಕ್ಕೆ ಉಚಿತವಾಗಿ ಹೋಗುವ ಅವಕಾಶವೊಂದು ನಿಮಗೆ ಸಿಗ್ತಿದೆ. ನೀವು ಇಲ್ಲಿನ ಸುಂದರ ದ್ವೀಪದಲ್ಲಿ ಐಷಾರಾಮಿ ವಿಲ್ಲಾದಲ್ಲಿ ವಾಸವಾಗ್ಬಹುದು. ಸುಂದರ ಥೀಮ್ ಪಾರ್ಕ್, ಈಜುಕೊಳ, ಬೀಚ್ ನ ಸೌಂದರ್ಯವನ್ನು ನೀವಲ್ಲಿ ಸವಿಯಬಹುದು.

ವಿಶ್ವದ ಅತಿ ಸುದೀರ್ಘ 8 ದಿನಗಳ ರೈಲು ಪ್ರಯಾಣವಿದು, ಆದ್ರೂ ಮೂರು ದೇಶ ನೋಡ್ಬೋದು ಗೊತ್ತಾ?

ಈ ಎಲ್ಲ ಸ್ಥಳ ವೀಕ್ಷಣೆ : ಈ ಪ್ರವಾಸದ ವಿಶೇಷವೇನೆಂದ್ರೆ ನೀವು ಎಲ್ಲ ಆಹಾರ ಹಾಗೂ ಪ್ರಯಾಣವನ್ನು ಉಚಿತವಾಗಿ ಮಾಡಬಹುದು. ವಿಮಾನ ನಿಲ್ದಾಣಕ್ಕೆ ಮಾತ್ರ ನಿಮ್ಮ ಖರ್ಚಿನಲ್ಲಿ ಬರ್ಬೇಕಾಗುತ್ತದೆ. ನಿಮ್ಮ ಗಮ್ಯಸ್ಥಾನ ತಲುಪಿದ ನಂತ್ರ ನಿಮ್ಮನ್ನು ಅನೇಕ ಸ್ಥಳಗಳಿಗೆ ಕರೆದೊಯ್ಯಲಾಗುತ್ತದೆ. ನೀವು ಯಾವುದೇ ಖರ್ಚಿಲ್ಲದೆ ಒರ್ಲಾಂಡೋ, ಅನ್ನಾ ಮರಿಯಾ ದ್ವೀಪ, ಸೆಂಟ್ರಲ್ ಫ್ಲೋರಿಡಾಗೆ ನೀಡಬಹುದು. ಅಲ್ಲದೆ ಜೆಟ್ ಸ್ಕೀಯಿಂಗ್ ಮತ್ತು ಡಾಲ್ಫಿನ್ ಸ್ಪಾಟಿಂಗ್ ಕ್ರೂಸ್ ಆನಂದವನ್ನೂ ನೀವು ಪಡೆಯಬಹುದು.

ವಿಶ್ವದ ದೊಡ್ಡ ಗುಹೆ ಇದು, ಇದ್ರಲ್ಲಿಯೇ ತನ್ನದೇ ಆದ ವಿಶ್ವವೇ ಇದೆ!

ಉಚಿತ ಫ್ಲೋರಿಡಾ ಪ್ರವಾಸದ ಷರತ್ತೇನು? : ನಾವು ಮೊದಲೇ ಹೇಳಿದಂತೆ ನೀವು ಉಚಿತವಾಗಿ ಫ್ಲೋರಿಡಾ ಪ್ರವಾಸ ಕೈಗೊಳ್ಳಬೇಕೆಂದ್ರೆ ಕೆಲ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ನೀವು ನಿಮ್ಮ ಸಂಗಾತಿ ಜೊತೆ ಆರಾಮವಾಗಿ ಸುತ್ತಲು ಇಲ್ಲಿ ಅವಕಾಶವಿಲ್ಲ. ಈಗಾಗಲೇ ನೀವು ಮದುವೆಯಾಗಿದ್ದರೆ, ಸಂಗಾತಿ ಹೊಂದಿದ್ದರೆ ರೇಸ್ ನಿಂದ ಹೊರಗಿರ್ತೀರಿ.  25 ರಿಂದ 60 ವರ್ಷ ವಯಸ್ಸಿನ ಒಂಟಿ ಜನರು ಮಾತ್ರ ಈ ಪ್ರವಾಸದ ಲಾಭ ಪಡೆಯಬಹುದು. ಈ ಕೊಡುಗೆ ಮುಂದಿನ ವರ್ಷ ಫೆಬ್ರವರಿ 12 ರಿಂದ 21 ರವರೆಗೆ ಮಾನ್ಯವಾಗಿರುತ್ತದೆ.

ಇದನ್ನು ಬ್ಲೈಂಡ್ ಡೇಟ್ ಎಂದು ಕರೆಯಲಾಗ್ತಿದೆ. ಈ ಪ್ರವಾಸಕ್ಕೆ ನೀವು ಒಂಟಿಯಾಗಿ ಆಯ್ಕೆಯಾಗ್ತೀರಿ. ಅಲ್ಲಿ ನಿಮಗೊಂದು ಸಂಗಾತಿಯನ್ನು ನೀಡಲಾಗುತ್ತದೆ. ನೀವಿಬ್ಬರು ಫ್ಲೋರಿಡಾ ಸೌಂದರ್ಯವನ್ನು ಒಟ್ಟಿಗೆ ಸವಿಯಬೇಕು. ನಿಮ್ಮಿಬ್ಬರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. 

ಡೇಟಿಂಗ್ ಕಂಪನಿಯೊಂದು ನಿಮಗೆ ಈ ಕೊಡುಗೆ ನೀಡ್ತಿದೆ. ಇಗ್ನೈಟ್ ಡೇಟಿಂಗ್‌ ಹೆಸರಿನ ಡೇಟಿಂಗ್ ಕಂಪನಿ ಸಂಸ್ಥಾಪಕ ಮೈಕೆಲ್ ಬೇಗಿ ಅವರು ಈ ಕೊಡುಗೆಯನ್ನು ನೀಡುತ್ತಿದ್ದಾರೆ. ಡೇಟಿಂಗ್ ಬಗ್ಗೆ ಪ್ರಚಾರ ಮಾಡುವುದು ಅವರ ಉದ್ದೇಶವಾಗಿದೆ. ಇಂಥಹ ಬ್ಲೈಂಡ್ ಡೇಟಿಂಗ್  ಜನರಲ್ಲಿ ಡೇಟಿಂಗ್ ಭಯವನ್ನು ಹೋಗಲಾಡಿಸುತ್ತದೆ ಎಂಬ ನಂಬಿಕೆ ಅವರದ್ದು. ನೀವೂ ಒಂಟಿಯಾಗಿದ್ದು, ಬ್ಲೈಂಡ್ ಡೇಟಿಂಗ್ ನಲ್ಲಿ ಆಸಕ್ತಿ ಹೊಂದಿದ್ದರೆ ಇದ್ರ ಲಾಭ ಪಡೆಯಬಹುದು. 

Latest Videos
Follow Us:
Download App:
  • android
  • ios