ವಿಶ್ವದ ದೊಡ್ಡ ಗುಹೆ ಇದು, ಇದ್ರಲ್ಲಿಯೇ ತನ್ನದೇ ಆದ ವಿಶ್ವವೇ ಇದೆ!
ಭೂಮಿಯಲ್ಲಿ ಸಾಕಷ್ಟು ರಹಸ್ಯಗಳು ಅಡಗಿವೆ. ಕೆಲವೊಂದು ನಮ್ಮ ಕಣ್ಣಿಗೆ ಕಂಡ್ರೆ ಮತ್ತೆ ಕೆಲವೊಂದು ಈಗ್ಲೂ ನಮಗೆ ತಿಳಿದಿಲ್ಲ. ಎಷ್ಟೆಷ್ಟೋ ವರ್ಷಗಳ ಹಿಂದೆ ರೂಪಗೊಂಡ ನಿಸರ್ಗ ನಿರ್ಮಿತ ಅಧ್ಬುತಗಳು ನಮ್ಮಲ್ಲಿವೆ. ಅದರಲ್ಲಿ ಈ ಗುಹೆ ಕೂಡ ಒಂದು.
ವಿಶ್ವದಲ್ಲಿರುವ ಕೆಲ ಪ್ರದೇಶಗಳು ಗುಪ್ತವಾಗಿವೆ. ಅವುಗಳ ಬಗ್ಗೆ ಜನರಿಗೆ ತಿಳಿದೇ ಇರೋದಿಲ್ಲ, ಇಲ್ಲ ಅಲ್ಪಸ್ವಲ್ಪ ತಿಳಿದಿರುತ್ತದೆ. ಕೆಲವೊಂದು ಸ್ಥಳಗಳು ಅಲ್ಲಿನ ವಾತಾವರಣದಿಂದ ಎಲ್ಲರನ್ನು ಬೆರಗುಗೊಳಿಸುತ್ತವೆ. ವಿಯೆಟ್ನಾಂನ ಫೋಂಗ್ ನ್ಹಾ ಕೆ-ಬಾಂಗ್ ರಾಷ್ಟ್ರೀಯ ಉದ್ಯಾನವನದಲ್ಲಿ ಅಂತಹ ಒಂದು ಸ್ಥಳವಿದೆ. ಅದರ ಹೆಸರು ಹ್ಯಾಂಗ್ ಸನ್ ಡೂಂಗ್. ಇದು ವಿಶ್ವದ ಅತ್ಯಂತ ವಿಶಾಲವಾದ ಗುಹೆ. ಈ ಗುಹೆ ಸಂಪೂರ್ಣ ಭಿನ್ನವಾಗಿದ್ದು, ಅಲ್ಲಿ ಹೊಸ ಪ್ರಪಂಚ ತೆರೆದುಕೊಳ್ಳುತ್ತದೆ.
ವಿಶಾಲವಾದ ಗುಹೆ (Cave) ಯಲ್ಲಿ ಏನೆಲ್ಲ ಇದೆ? : ಹ್ಯಾಂಗ್ ಸನ್ ಡೂಂಗ್ (Hang Sun Doong) ಗುಹೆ ಎಷ್ಟು ವಿಶಾಲವಾಗಿದೆ ಅಂದ್ರೆ ಬೀಚ್, ನದಿ ಮತ್ತು ಅರಣ್ಯವನ್ನು ಇದು ಹೊಂದಿದೆ. ವಾಸ್ತವವಾಗಿ ರೈತ ಹೋ ಖಾನ್ ಎಂಬುವವನು ಈ ಗುಹೆಯನ್ನು ಮೊದಲ ಬಾರಿ ಪತ್ತೆ ಮಾಡಿದ್ದ. ಆತ ತನ್ನ ಬಾಲ್ಯದಲ್ಲಿ ಮರವನ್ನು ಸಂಗ್ರಹಿಸಲು ಇಲ್ಲಿಗೆ ಹೋಗಿದ್ದ. 1990 ರಲ್ಲಿ ಮೊದಲ ಬಾರಿಗೆ ಇಂಥ ಪ್ರದೇಶವೊಂದಿದೆ ಎಂಬುದು ಗೊತ್ತಾಗಿತ್ತು. 14 ವರ್ಷಗಳ ಹಿಂದೆ, ಅಂದರೆ 2009 ರಲ್ಲಿ, ಬ್ರಿಟಿಷ್ ಕೇವರ್ಸ್ ಅದರೊಳಗೆ ಪ್ರವೇಶಿಸಿ ಅದರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಪ್ರಾರಂಭಿಸಿದ್ದರು. ಈ ಗುಹೆ ಅನೇಕ ವರ್ಷಗಳಿಂದ ಅಸ್ತಿತ್ವದಲ್ಲಿದೆ ಎಂಬುದನ್ನು ಅವರು ಪತ್ತೆ ಮಾಡಿದ್ದಾರೆ. ಈ ಗುಹೆ ಅನೇಕ ರಹಸ್ಯಗಳನ್ನು ತನ್ನಲ್ಲಿ ಅಡಗಿಸಿಕೊಂಡಿದೆ ಎಂಬುದನ್ನು ಅವರು ಕಂಡು ಹಿಡಿದಿದ್ದಾರೆ.
ಚೀನಾದಲ್ಲಿ ಪ್ರಸಿದ್ಧಿಯಾದ ಗ್ರಿಲ್ಡ್ ಐಸ್ ಕ್ಯೂಬ್ ಸ್ಟ್ರೀಟ್ ಫುಡ್, ಏನಪ್ಪಾ ಇದು?
ಗುಹೆ ವಿಸ್ತಾರ ಎಷ್ಟಿದೆ ಗೊತ್ತಾ? : ಈ ಗುಹೆಯು 660 ಅಡಿ ಎತ್ತರ, 500 ಅಡಿ ಅಗಲ ಮತ್ತು ಮೂರು ಮೈಲುಗ ಉದ್ದವಿದೆ. ಎರಡು ದೊಡ್ಡ ಬಿರುಕುಗಳ ಮೂಲಕ ಮಾತ್ರ ಸೂರ್ಯನ ಬೆಳಕು ಇದರೊಳಗೆ ಪ್ರವೇಶಿಸುತ್ತದೆ. ನದಿ, ಕಾಡುಗಳನ್ನು ಈ ಗುಹೆ ಹೊಂದಿದ್ದು, ಇಲ್ಲಿಗೆ ಮಂಗಗಳು ಬರ್ತಿರುತ್ತವೆ. 2013 ರ ಅಂತ್ಯದಿಂದ ಪ್ರವಾಸಿಗರಿಗೆ ಇದು ತೆರೆದುಕೊಂಡಿದೆ. ಸಾಹಸವನ್ನು ಇಷ್ಟಪಡುವ ಜನರು ವಿಯೆಟ್ನಾಂನ ಹ್ಯಾಂಗ್ ಸನ್ ಡಂಗ್ ಅನ್ನು ತಲುಪಲು ಎರಡು ಮೈಲಿ ಮಾರ್ಗದಲ್ಲಿ ಪ್ರಯಾಣಿಸುತ್ತಾರೆ ಮತ್ತು ಇಲ್ಲಿ ಕ್ಯಾಂಪಿಂಗ್ ಮಾಡುತ್ತಾರೆ.
ಈ ದೇಶದಲ್ಲಿ ಆಫೀಸಿಗೇ ಹಲ್ಲುಜ್ಜೋ ಬ್ರಷ್ ತೆಗೆದುಕೊಂಡು ಹೋಗ್ತಾರಂತೆ! ಅದ್ಯಾಕೆ?
ಇಂಥ ಜಾಗ ವಿಶ್ವದಲ್ಲಿ ಮತ್ತೊಂದಿಲ್ಲ : ಜಗತ್ತಿನಲ್ಲಿ ಎಲ್ಲಿಯೂ ಇಂಥ ಮತ್ತೊಂದು ಗುಹೆ ಇಲ್ಲ. ಗುಹೆಯಲ್ಲಿ ಅಸಮಾನ್ಯ ಹಾಗೂ ರಹಸ್ಯ ಜಾಗಗಳಿವೆ. ಕತ್ತಲೆಯಲ್ಲಿ ಸ್ವಿಮ್ಮಿಂಗ್ ಫೂಲ್ ಹಾಗೂ 400 ಮಿಲಿಯನ್ ವರ್ಷ ಹಳೆಯ ಪಳೆಯುಳಿಕೆ ಇಲ್ಲಿದೆ ಎಂದು ಹ್ಯಾಂಗ್ ಸನ್ ಡೂಂಗ್ ಅನ್ನು ಮ್ಯಾಪ್ ಮಾಡಿದ ಕೇವಿಂಗ್ ತಂಡದ ನಾಯಕ ಹೊವಾರ್ಡ್ ಲಿಂಬರ್ಟ್ ಹೇಳಿದ್ದಾರೆ. ಮಲೇಷ್ಯಾದ ಡಿಯರ್ ಕೇವ್ ಗಿಂತ ಇದು ಐದು ಪಟ್ಟು ದೊಡ್ಡದಾಗಿದೆ. ಮೊದಲು ಮಲೇಷ್ಯಾದ ಈ ಗುಹೆಯನ್ನು ವಿಶ್ವದ ದೊಡ್ಡ ಗುಹೆ ಎಂದು ಕರೆಯಲಾಗುತ್ತಿತ್ತು. ಇದು ಲಕ್ಷಾಂತರ ವರ್ಷಗಳ ಹಿಂದೆ ರೂಪಗೊಂಡಿದೆ ಎಂದು ಅಂದಾಜಿಸಲಾಗಿದೆ.
ಆಸ್ಟ್ರೇಲಿಯಾದ ಛಾಯಾಗ್ರಾಹಕ ಜಾನ್ ಸ್ಪಿಯರ್ಸ್ 2015 ರಲ್ಲಿ ಗುಹೆಗೆ ಭೇಟಿ ನೀಡಿದ್ದರು. ಗುಹೆಯನ್ನು ನೋಡಿ ಅವರು ಅಚ್ಚರಿ ವ್ಯಕ್ತಪಡಿಸಿದ್ದರು. ಗುಹೆಯ ಆಯಾಮಗಳು ನಂಬಲಾಗದವು ಎಂದಿದ್ದರು. ಐದು ದಿನಗಳ ಕಾಲ ಈ ಗುಹೆಯಲ್ಲಿ ವಾಸಿಸುವ ನಿರ್ಧಾರ ಮಾಡಿದ್ದು ನನ್ನ ಜೀವನದ ದೊಡ್ಡ ಅನುಭವ ಎಂದು ಅವರು ಹೇಳಿದ್ದರು.
ಇದಲ್ಲದೆ ಸ್ವಿಸ್ ಛಾಯಾಗ್ರಾಹಕ ಉರ್ಸ್ ಜಿಲ್ಮನ್ ಅವರು 2016 ರಲ್ಲಿ ಗುಹೆಗೆ ಭೇಟಿದ್ದರು. ನಾವು ಪ್ರವೇಶ ದ್ವಾರವನ್ನು ಸಮೀಪಿಸುತ್ತಿದ್ದಂತೆ ಮೋಡಗಳು ಗುಹೆಯಿಂದ ಸುತ್ತಮುತ್ತಲಿನ ಕಾಡಿನ ಕಡೆಗೆ ಚಲಿಸುತ್ತಿದ್ದವು. ಹಗ್ಗಗಳ ಸಹಾಯದಿಂದ ಕಡಿದಾದ ಗೋಡೆಯ ಕೆಳಗೆ 262 ಅಡಿ ಇಳಿಯಬೇಕಾಗಿತ್ತು ಎಂದು ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.