ವಿಶ್ವದ ಅತಿ ಸುದೀರ್ಘ 8 ದಿನಗಳ ರೈಲು ಪ್ರಯಾಣವಿದು, ಆದ್ರೂ ಮೂರು ದೇಶ ನೋಡ್ಬೋದು ಗೊತ್ತಾ?
ನೀವು ಟ್ರಾವೆಲ್ ಪ್ರಿಯರಾಗಿದ್ದರೆ, ರೈಲಿನಲ್ಲಿ ಪ್ರಯಾಣಿಸಲು ಖಂಡಿತವಾಗಿಯೂ ಇಷ್ಟಪಡುತ್ತೀರಿ ಅಲ್ವಾ? ಕಡಿಮೆ ಬಜೆಟ್‌ನಲ್ಲಿ ಪ್ರಯಾಣಿಸಲು ಇಷ್ಟ ಪಡುವವರಿಗೆ ರೈಲು ಅತ್ಯಂತ ಅನುಕೂಲಕರ ವಾಹನ. ಆದರೆ ನೀವು ಒಂದೇ ರೈಲಿನಲ್ಲಿ 3 ದೇಶಗಳಿಗೆ ಪ್ರಯಾಣಿಸಿದ್ರೆ ಏನಾಗುತ್ತೆ?
ರೈಲಿನಲ್ಲಿ ಟ್ರಾವೆಲ್ (Train journey) ಮಾಡೋದು ಅಂದ್ರೆ ನಿಮಗೆ ಇಷ್ಟಾನ? ಅದರಲ್ಲೂ ವಿದೇಶದಲ್ಲಿ ರೈಲು ಪ್ರವಾಸ ಮಾಡುತ್ತಾ ಪ್ರಕೃತಿ ಸೌಂದರ್ಯ ಎಂಜಾಯ್ ಮಾಡಬೇಕು ಅನ್ನೋದಾದ್ರೆ ನಾವು ನಿಮಗೊಂದು ವಿಶೇಷ ರೈಲಿನ ಬಗ್ಗೆ ಹೇಳುತ್ತೇವೆ. ಇದು ಜಗತ್ತಿನ ಅತ್ಯಂತ ಉದ್ದವಾದ ರೈಲು ಪ್ರಯಾಣ. ಅದರಲ್ಲೂ ವಿಶೇಷತೆ ಅಂದ್ರೆ, ಈ ರೈಲು ಮೂರು ದೇಶಗಳನ್ನು ಕವರ್ ಮಾಡುತ್ತೆ.
ಹೌದು ನೀವು ಕೇಳಿದ್ದು ಸುಳ್ಳಲ್ಲ, ಮೂರು ದೇಶಗಳನ್ನು ಸುತ್ತುವ ಜಗತ್ತಿನ ಅತ್ಯಂತ ಉದ್ದ ರೈಲು ಮಾರ್ಗವಿದೆ. ಈ ಮೂರು ದೇಶಗಳನ್ನುಕವರ್ ಮಾಡಲು ಮಾತ್ರ ನೀವು ವಾರಗಳನ್ನು ಕಳೆಯಲೇ ಬೇಕು. ಯಾಕಂದ್ರೆ ಇದು ಸುಮಾರು 8 ದಿನಗಳ ರೈಲು ಪ್ರಯಾಣ.
ಯಾವ ರೈಲಿನಲ್ಲಿ ಮೂರು ದೇಶಗಳಿಗೆ ಪ್ರಯಾಣಿಸಬಹುದು?
ಟ್ರಾನ್ಸ್-ಸೈಬೀರಿಯನ್ ರೈಲ್ವೆ ನೆಟ್ವರ್ಕ್ (Trans-Siberian Railway Network) ಎಂಬ ಹೆಸರಿನಿಂದ ಪ್ರಸಿದ್ಧವಾಗಿರುವ ಈ ರೈಲು 3 ದೇಶಗಳಿಗೆ ಪ್ರಯಾಣಿಸುತ್ತದೆ, ಒಟ್ಟು 10,214 ಕಿ.ಮೀ ದೂರವನ್ನು ಕ್ರಮಿಸುತ್ತದೆ. ಈ ರೈಲು ರಷ್ಯಾದ ರಾಜಧಾನಿ ಮಾಸ್ಕೋದಿಂದ ಪೂರ್ವ ನಗರ ವ್ಲಾಡಿವೋಸ್ಟಾಕ್ ಗೆ (Vladivostok) ಹೋಗುತ್ತದೆ.
ಇದನ್ನು ವಿಶ್ವದ ಅತಿದೊಡ್ಡ ರೈಲು ಪ್ರಯಾಣ ಎಂದು ಕರೆಯಲಾಗುತ್ತದೆ. ಏಕೆಂದರೆ ಅಂತಹ ದೀರ್ಘ ಪ್ರಯಾಣವನ್ನು (longest journey) ಯಾವುದೇ ದೇಶದಲ್ಲಿ ರೈಲಿನಲ್ಲಿ ಮಾಡಲಾಗುವುದಿಲ್ಲ. ಈ ದೀರ್ಘ ರೈಲು ಪ್ರಯಾಣ 7 ದಿನ 20 ಗಂಟೆ 25 ನಿಮಿಷಗಳಲ್ಲಿ ಕ್ರಮಿಸುತ್ತದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು.
ಈ ರೈಲಿನ ಇತಿಹಾಸ
ಸಾರಿಗೆ ಇತಿಹಾಸದಲ್ಲಿ ರೈಲು ಪ್ರಮುಖ ಪಾತ್ರ ವಹಿಸುತ್ತದೆ. ಈ ರೈಲಿನ ನಿರ್ಮಾಣವು 1891 ರಲ್ಲಿ ಪ್ರಾರಂಭವಾಯಿತು. ಇದು ಪೂರ್ಣಗೊಳ್ಳಲು ಒಟ್ಟು 25 ವರ್ಷಗಳನ್ನು ತೆಗೆದುಕೊಂಡಿತು ಮತ್ತು ಇದು 1916 ರಲ್ಲಿ ಪೂರ್ಣಗೊಂಡಿತು ಎನ್ನುವ ಮಾಹಿತಿ ಇದೆ.
ಈ 3 ದೇಶಗಳ ಪ್ರಯಾಣ
ಈ ರೈಲು ಮಾಸ್ಕೋ - ವ್ಲಾಡಿವೋಸ್ಟಾಕ್, ಮಾಸ್ಕೋ - ಉಲಾನ್ ಬಾತರ್, ಮಾಸ್ಕೋ - ಬೀಜಿಂಗ್ ಸೇರಿದಂತೆ 3 ದೇಶಗಳ ಮೂಲಕ ಹಾದುಹೋಗುತ್ತದೆ. ಅದರ ಮಾರ್ಗದಲ್ಲಿ 18 ನಿಲ್ದಾಣಗಳಿವೆ. ಅದರಲ್ಲಿ ಪ್ರಯಾಣಿಸುವಾಗ, ನೀವು ಎಲ್ಲಿ ಇಳಿಯಬೇಕು ಎಂಬುದನ್ನು ಮುಂಚಿತವಾಗಿ ನಿರ್ಧರಿಸಬೇಕು.
ನಂತರ ನೀವು ಮಾರ್ಗಕ್ಕೆ ಅನುಗುಣವಾಗಿ ವೀಸಾ ತೆಗೆದುಕೊಳ್ಳಬೇಕು. ನೀವು ರಷ್ಯಾದಿಂದ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದರೆ ಮತ್ತು ನೀವು ಚೀನಾಕ್ಕೆ ಹೋಗಲು ಬಯಸಿದರೆ, ಇದಕ್ಕಾಗಿ ನೀವು ರಷ್ಯಾ ಮತ್ತು ಚೀನಾಕ್ಕೆ ವೀಸಾ ಖರೀದಿಸಬೇಕು. ಅಲ್ಲದೆ, ಟಿಕೆಟ್ ಗಳನ್ನು ಮಾಸ್ಕೋ ರೈಲ್ವೆ ನಿಲ್ದಾಣದಲ್ಲಿ ಅಥವಾ ಆನ್ ಲೈನ್ ನಲ್ಲಿ (Online ticket) ಖರೀದಿಸಬಹುದು.
ಮೂರು ದೇಶಗಳಿಗೆ ಟಿಕೆಟ್ ಬೆಲೆ
ಮಾಸ್ಕೋದಿಂದ ವ್ಲಾಡಿವೋಸ್ಟಾಕ್‌ಗೆ ಮೂರು ರೀತಿಯ ಟಿಕೆಟ್ ಲಭ್ಯವಿದೆ. ಫಸ್ಟ್ ಕ್ಲಾಸ್ ರೈಲು ಭೋಗಿಯ ಬೆಲೆ 175 ಡಾಲರ್ ಅಂದರೆ ಭಾರತೀಯರಿಗೆ 13,982 ರೂ. ಇದರ ನಂತರ, ಇನ್ನೊಂದು ರೂಟ್ ಟಿಕೆಟ್ ಬೆಲೆ $ 213 ಅಂದರೆ 17018 ರೂ. ಅಲ್ಲದೆ, ರೈಲಿನಲ್ಲಿ ನೀವು ಹವಾನಿಯಂತ್ರಣ, ರೆಸ್ಟೋರೆಂಟ್, ಹಾಸಿಗೆ (Bed), ಬಾರ್ (Bar), ಸೀಟಲ್ಲಿ ಸೌಂಡ್ ಸಿಸ್ಟಮ್ ಇತ್ಯಾದಿಗಳನ್ನು ಪಡೆಯುತ್ತೀರಿ. ಖಾಸಗಿ ಐಷಾರಾಮಿ ಕೊಠಡಿಯೂ ಲಭ್ಯವಿದೆ.