Asianet Suvarna News Asianet Suvarna News

World Tourism Day 2022: ವಿಶ್ವ ಪ್ರವಾಸೋದ್ಯಮ ದಿನದ ಇತಿಹಾಸ ಮತ್ತು ಮಹತ್ವವೇನು ?

ಸೆಪ್ಟೆಂಬರ್ 27ರಂದು ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ. ಪ್ರವಾಸ ಒತ್ತಡವನ್ನು ನಿವಾರಿಸುವ ಮೂಲಕ ಹೊಸತವನ್ನು ನೀಡುತ್ತದೆ. ಹೀಗಾಗಿ ಒತ್ತಡದ ಜೀವನಶೈಲಿಯಿಂದ ಹೊರಬರಲು ಅನೇಕರು ಆಗಾಗ ಪ್ರವಾಸಕ್ಕೆ ತೆರಳುತ್ತಾರೆ. ವಿಶ್ವಸಂಸ್ಥೆಯ ವಿಶ್ವ ವ್ಯಾಪಾರ ಸಂಸ್ಥೆ ಆರಂಭಿಸಿದ ಈ ದಿನದ ಮಹತ್ವ, ಉದ್ದೇಶ, ಥೀಮ್‌ ವಿವರಣೆ ಸೇರಿದಂತೆ ಹೆಚ್ಚಿನ ವಿವರ ಇಲ್ಲಿ ನೀಡಲಾಗಿದೆ.

World Tourism Day 2022: History And Importance Of Tourism Day Vin
Author
First Published Sep 27, 2022, 9:43 AM IST

ಪ್ರವಾಸೋದ್ಯಮವು ವಿಶ್ವದ ಪ್ರಮುಖ ಉದ್ಯಮಗಳಲ್ಲಿ ಒಂದಾಗಿದೆ. ಇದು ಪ್ರವಾಸೋದ್ಯಮದಲ್ಲಿ ಮಾತ್ರವಲ್ಲದೆ ಅದನ್ನು ಸೇವೆ ಮಾಡುವ ವ್ಯವಹಾರಗಳಲ್ಲಿಯೂ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಜೊತೆಗೆ ದೇಶಗಳ ಆರ್ಥಿಕತೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಪ್ರಪಂಚದ ವಿವಿಧ ಭಾಗಗಳಿಗೆ ಭೇಟಿ ನೀಡುವ ಮೂಲಕ ಪ್ರವಾಸಿಗರು ಸಾಂಸ್ಕೃತಿಕ ಪರಂಪರೆ ಮತ್ತು ನೈಸರ್ಗಿಕ ಪರಿಸರ ವ್ಯವಸ್ಥೆಗಳನ್ನು ಸಂರಕ್ಷಿಸಲು ಸಹಾಯ ಮಾಡುತ್ತಾರೆ. ಪ್ರಪಂಚದಾದ್ಯಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವಲ್ಲಿ ಪ್ರಯಾಣ ಕ್ಷೇತ್ರದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುವುದು. ಸೆಪ್ಟೆಂಬರ್ 27, ವಿಶ್ವ ಪ್ರವಾಸೋದ್ಯಮ ದಿನದ (World Tourism Day 2022) ಮುಖ್ಯ ಉದ್ದೇಶವಾಗಿದೆ. ಪ್ರವಾಸೋದ್ಯಮದ ಕುರಿತು ಪುನರ್‌ವಿಮರ್ಶೆ ಅಥವಾ ಮರು ಅವಲೋಕನ (Rethinking tourism) ಈ ವರ್ಷದ ಘೋಷವಾಕ್ಯವಾಗಿದೆ. 

ವಿಶ್ವ ಪ್ರವಾಸೋದ್ಯಮ ದಿನದ ಇತಿಹಾಸ
ವಿಶ್ವಸಂಸ್ಥೆಯ ವರ್ಲ್ಡ್‌ ಟೂರಿಸಂ ಆರ್ಗನೈಜೇಷನ್‌(ಯುಎನ್‌ಡಬ್ಲ್ಯುಟಿಒ) 1970 ಸೆಪ್ಟೆಂಬರ್‌ 27ರಂದು ಮೊದಲ ಬಾರಿಗೆ ವಿಶ್ವ ಪ್ರವಾಸೋದ್ಯಮ ದಿನ ಆಚರಿಸಲು ಶಾಸನಗಳನ್ನು ರಚಿಸಿತು. ಯುಎನ್‌ಡಬ್ಲ್ಯುಟಿಒ 1980 ಸೆಪ್ಟೆಂಬರ್‌ 27ರಂದು ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲು ಅಂಗೀಕರಿಸಿತು. ಪ್ರವಾಸೋದ್ಯಮವನ್ನು ಜಾಗತಿಕವಾಗಿ ಪ್ರಚಾರಗೊಳಿಸುವ ಉದ್ದೇಶದಿಂದ ಈ ದಿನವನ್ನು ಆರಂಭಿಸಲಾಗಿದೆ. ಅಂದಿನಿಂದ ಪ್ರತಿ ವರ್ಷ ಆ ದಿನದಂದು ಪ್ರವಾಸೋದ್ಯಮ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಜನವರಿ ಹದಿನೈದು ಭಾರತದ ರಾಷ್ಟ್ರೀಯ ಪ್ರವಾಸೋದ್ಯಮ ದಿನವಾಗಿದೆ.

Travel Plan: ಪ್ರವಾಸಕ್ಕೆ ಹೋಗ್ತೀರಾ? ಈ ತಪ್ಪುಗಳನ್ನ ಮಾಡ್ಲೇಬೇಡಿ

World Tourism Day 2022: History And Importance Of Tourism Day Vin

ವಿಶ್ವ ಪ್ರವಾಸೋದ್ಯಮ ದಿನದ ಮಹತ್ವ 
ವಿಶ್ವ ಪ್ರವಾಸೋದ್ಯಮ ದಿನದ ಉದ್ದೇಶ ಸಾಮಾಜಿಕ (Social), ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ಮೌಲ್ಯಗಳ ಮೇಲೆ ಪರಿಣಾಮ ಬೀರುವ ಬಗ್ಗೆ ಜಾಗೃತಿ (Awareness) ಮೂಡಿಸುವುದಾಗಿದೆ. ಕೊರೊನಾ ಕಾರಣ 90% ವಿಶ್ವ ಪರಂಪರೆಯ ತಾಣಗಳನ್ನು ಮುಚ್ಚಲಾಯಿತು. ಇದರಿಂದಾಗಿ ಹಲವಾರು ಜನ ನಿರುದ್ಯೋಗಿಗಳಾದರು. 20201 ರಲ್ಲಿ ಹೆಚ್ಚುವರಿ 32 ಮಿಲಿಯನ್ ಜನರು ತೀವ್ರ ಬಡತನಕ್ಕೆ ತಳ್ಳಲ್ಪಟ್ಟರು. ಗ್ರಾಮೀಣ ಸಮುದಾಯಗಳಲ್ಲಿನ ಯುವಕರು ನಿರುದ್ಯೋಗಿಗಳಾಗಿರುವುದರಿಂದ ಪ್ರವಾಸೋದ್ಯಮ ಕ್ಷೇತ್ರದ ಬಗ್ಗೆ ಜಾಗೃತಿ ಮೂಡಿಸುವುದು ಮುಖ್ಯವಾಗಿದೆ.

ವಿಶ್ವ ಪ್ರವಾಸೋದ್ಯಮ ದಿನ 2022ರ ಥೀಮ್‌
ಪ್ರತಿ ವರ್ಷ ಒಂದೊಂದು ಥೀಮ್‌ ಇಟ್ಟುಕೊಂಡು ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ Rethinking Tourism ಎಂಬ ಥೀಮ್‌ನಡಿ World Tourism Day 2022 ಆಚರಿಸಲಾಗುತ್ತದೆ. ಬಹುತೇಕ ದೇಶಗಳಿಗೆ ಪ್ರವಾಸೋರದ್ಯಮವೇ ಆಧಾರ, ಪ್ರವಾಸೋದ್ಯಮವೇ ಆರ್ಥಿಕತೆ. ಅಭಿವೃದ್ಧಿಗಾಗಿ ಪ್ರವಾಸೋದ್ಯಮದ ಮರು ಅವಲೋಕನವೆಂಬ ಘೋಷವಾಕ್ಯವನ್ನು ಇದೇ ಕಾರಣಕ್ಕೆ ಈ ವರ್ಷ ಇಡಲಾಗಿದೆ. ಇದೇ ಮೊದಲ ಬಾರಿಗೆ ಇಂತಹ ವಿಷಯವೊಂದನ್ನು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಚರ್ಚೆಗೆತ್ತಿಕೊಳ್ಳಲಾಗಿತ್ತು.

ಮಕ್ಕಳ ಜೊತೆ ಟ್ರಿಪ್ ಪ್ಲಾನ್ ಮಾಡಿದ್ರೆ ಇಷ್ಟೆಲ್ಲಾ ಬೆನಿಫಿಟ್ ಸಿಗುತ್ತೆ

ಭಾರತದಲ್ಲಿ ಪ್ರವಾಸೋದ್ಯಮದ ಮಹತ್ವ
ಭಾರತದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚು ಮಹತ್ವ (Importance) ನೀಡಲಾಗುತ್ತಿದೆ. ಇಲ್ಲಿನ ಪ್ರತಿರಾಜ್ಯದಲ್ಲಿಯೂ ಪ್ರವಾಸಿ ತಾಣಗಳು ಸಾಕಷ್ಟಿವೆ. ಇವುಗಳನ್ನು ಪ್ರವಾಸಿಸ್ನೇಹಿಯಾಗಿ ಅಭಿವೃದ್ಧಿಪಡಿಸುವ ಮೂಲಕ ಪ್ರವಾಸಿಗರನ್ನು ಸೆಳೆಯಬೇಕಿದೆ. ಕರ್ನಾಟಕದಲ್ಲಿ ಹಲವು ಪ್ರದೇಶಗಳು ಪ್ರವಾಸಿಗರನ್ನು (Tourists) ಸೆಳೆಯಲು ಸೂಕ್ತವಾಗಿದ್ದರೂ ಕೆಲವೇ ಪ್ರದೇಶಗಳಿಗೆ ಮಾತ್ರ ಇದಕ್ಕೆ ಮಹತ್ವ ನೀಡಲಾಗಿದೆ. ಭಾರತದಲ್ಲಿ ಪ್ರವಾಸೋದ್ಯಮವು ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸುತ್ತಿದೆ. ಇದು ವಿದೇಶಿ ವಿನಿಮಯದ ಎರಡನೇ ಅತಿದೊಡ್ಡ ಗಳಿಕೆಯಾಗಿದೆ. ಪ್ರವಾಸೋದ್ಯಮ ಕ್ಷೇತ್ರು ಕೌಶಲ ಮತ್ತು ಕೌಶಲರಹಿತವುಳ್ಳ ಲಕ್ಷಾಂತರ ಜನರಿಗೆ ಉದ್ಯೋಗವನ್ನು ಒದಗಿಸಿದೆ.

ಈ ವರ್ಷ ವಿಶ್ವ ಪ್ರವಾಸೋದ್ಯಮ ದಿನದ ಆಯೋಜಕ ದೇಶ ಇಂಡೋನೇಷ್ಯಾ.ವಿಶ್ವಸಂಸ್ಥೆಯ ವರ್ಲ್ಡ್‌ ಟೂರಿಸಂ ಆರ್ಗನೈಜೇಷನ್‌ ಇಂದು ಇಂಡೋನೇಷ್ಯದ ಬಾಲಿಯಲ್ಲಿ ಈ ದಿನವನ್ನು ಆಚರಿಸುತ್ತದೆ.

Follow Us:
Download App:
  • android
  • ios