ಲೇಹ್‌ನಿಂದ ಮನಾಲಿಗೆ ಸೈಕಲ್ ತುಳಿದ ಮಹಿಳೆ : 55 ಗಂಟೆಗಳಲ್ಲಿ 430 ಕಿಮೀ ಕ್ರಮಿಸಿದ ಪ್ರೀತಿ

ಪುಣೆ: ಎರಡು ಮಕ್ಕಳ ತಾಯಿಯೂ ಆಗಿರುವ ಮಹಿಳಾ ಸೈಕ್ಲಿಸ್ಟ್‌ ಒಬ್ಬರು ಲೇಹ್‌ನಿಂದ ಲಡಾಕ್‌ಗೆ 55 ಗಂಟೆಗಳಲ್ಲಿ 430 ಕಿಮೀ ಏಕಾಂಗಿಯಾಗಿ ಸೈಕಲ್ ತುಳಿದು ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಪುಣೆಯ ಪ್ರೀತಿ ಮಾಸ್ಕೆ ಎಂಬುವವರೇ ಈ ಸಾಧನೆ ಮಾಡಿದವರು.

Woman cyclist Preeti Maske setting a new world record by ride  Cycles 430 km From Leh to Manali in 55 Hours akb

ಪುಣೆ: ಎರಡು ಮಕ್ಕಳ ತಾಯಿಯೂ ಆಗಿರುವ ಮಹಿಳಾ ಸೈಕ್ಲಿಸ್ಟ್‌ ಒಬ್ಬರು ಲೇಹ್‌ನಿಂದ ಲಡಾಕ್‌ಗೆ 55 ಗಂಟೆಗಳಲ್ಲಿ 430 ಕಿಮೀ ಏಕಾಂಗಿಯಾಗಿ ಸೈಕಲ್ ತುಳಿದು ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಪುಣೆಯ ಪ್ರೀತಿ ಮಾಸ್ಕೆ ಎಂಬುವವರೇ ಈ ಸಾಧನೆ ಮಾಡಿದವರು. ಪ್ರೀತಿ ಮಾಸ್ಕೆ ಅವರು 55 ಗಂಟೆ 13 ನಿಮಿಷಗಳಲ್ಲಿ ಲೇಹ್‌ನಿಂದ (Leh) ಮನಾಲಿಗೆ (Manali) ಏಕಾಂಗಿಯಾಗಿ ಸವಾರಿ ಮಾಡಿದ ಮೊದಲ ಮಹಿಳೆಯಾಗಿದ್ದಾರೆ. ಈ ಮೂಲಕ ಅಲ್ಟ್ರಾ-ಸೈಕ್ಲಿಂಗ್ ಎಂದು ಪರಿಗಣಿಸಬಹುದಾದ ಹೊಸ ವಿಶ್ವ ದಾಖಲೆಯನ್ನು ಅವರು ನಿರ್ಮಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಪ್ರೀತಿ ಅವರು ಗಿನ್ನೆಸ್ ವಿಶ್ವ ದಾಖಲೆಗೆ ಬೇಕಾದ ಅಗತ್ಯೆಗಳನ್ನು ಪೂರೈಸಿದ್ದಾರೆ. ಲೇಹ್‌ನಲ್ಲಿರುವ ಬಾರ್ಡರ್ ರೋಡ್ಸ್ ಆರ್ಗನೈಸೇಶನ್‌ನ ಮುಖ್ಯ ಇಂಜಿನಿಯರ್ ಬ್ರಿಗೇಡಿಯರ್ ಗೌರವ್ ಕರ್ಕಿ (Gaurav Karki) ಅವರು ಜೂನ್ 22 ರಂದು ಬೆಳಗ್ಗೆ 6 ಗಂಟೆಗೆ ಪ್ರೀತಿ ಅವರ ಈ ಸಾಹಸಕ್ಕೆ ಹಸಿರು ನಿಶಾನೆ ತೋರಿದರು. 

ತಲೆಮೇಲೆ ಸೂಟ್ಕೇಸ್ ಇಟ್ಕೊಂಡು ಬಿಂದಾಸ್ ಆಗಿ ಸೈಕಲ್ ತುಳಿಯುತ್ತಿರುವ ವ್ಯಕ್ತಿ: ವಿಡಿಯೋ ವೈರಲ್

ಜೂನ್ 22 ರಂದು ಲೇಹ್‌ನಿಂದ ಹೊರಟ ಪ್ರೀತಿ ಜೂನ್ 24 ರಂದು ಮಧ್ಯಾಹ್ನ 1:13 ಕ್ಕೆ ಮನಾಲಿಯಲ್ಲಿ ತಮ್ಮ ಈ ಪ್ರಯಾಣವನ್ನು ಕೊನೆಗೊಳಿಸಿದರು.  ಬಾರ್ಡರ್ ರೋಡ್ಸ್ ಆರ್ಗನೈಸೇಶನ್‌ನ (BRO) ಕಮಾಂಡರ್ ಕರ್ನಲ್ ಶಬರೀಶ್ ವಛಲಿ (Shabarish Vachali) ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.  ತಮ್ಮ ಈ ಸಾಧನೆ ಬಗ್ಗೆ ಮಾತನಾಡಿದ ಪ್ರೀತಿ, ತುಂಬಾ ಎತ್ತರದ ಸ್ಥಳಗಳಲ್ಲಿ ಉಸಿರಾಟದ ತೊಂದರೆಯಿಂದಾಗಿ ನಾನು ಪ್ರಯಾಣ ಮಾಡುವಾಗ ಎರಡು ಬಾರಿ ಆಮ್ಲಜನಕವನ್ನು ಬಳಸಬೇಕಾಯಿತು ಎಂದು ಹೇಳಿದರು.

ತಜ್ಞರ ಪ್ರಕಾರ, 8,000 ಮೀ ಎತ್ತರದ ಈ ಮಾರ್ಗವು ತುಂಬಾ ಕಠಿಣವಾಗಿತ್ತು. ಪ್ರೀತಿಯವರು ಶಾಖ, ಬಲವಾದ ಗಾಳಿ, ಹಿಮಪಾತ ಮತ್ತು ಘನೀಕರಿಸುವ ತಾಪಮಾನದ ವಿರುದ್ಧ ಹೋರಾಡುವ ಎಲ್ಲಾ ಎತ್ತರದ ಪ್ರದೇಶದ ಕಠಿಣವಾದ ವಿಭಿನ್ನ ಹವಾಮಾನದಲ್ಲಿಯೂ ಸೈಕಲ್ ತುಳಿದರು. BRO ಸಹಾಯವಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ಪ್ರೀತಿ ಅವರ ಸಹಾಯಕ ಸಿಬ್ಬಂದಿ ಸದಸ್ಯ ಆನಂದ್ ಕನ್ಸಾಲ್ (Anand Kansal) ನೆನಪಿಸಿಕೊಂಡರು. 

ಸೈಕಲ್‌ನಿಂದ ಕೆಳಗೆ ಬಿದ್ದ ಅಮೆರಿಕಾ ಅಧ್ಯಕ್ಷ : ವಿಡಿಯೋ ವೈರಲ್
 

ಹಾಗಂತ ಇದು ಪ್ರೀತಿ ಅವರ ಮೊದಲ ದಾಖಲೆಯಲ್ಲ. ತುಂಬಾ ದೂರದ ಅಂತರಗಳ ಸೈಕ್ಲಿಂಗ್‌ನಲ್ಲಿ ಹಲವಾರು ದಾಖಲೆಗಳನ್ನು ಹೊಂದಿದ್ದಾರೆ. ಪ್ರೀತಿಯ ಈ ಸಾಧನೆಯನ್ನು ಬಾರ್ಡರ್ ರೋಡ್ಸ್ ಆರ್ಗನೈಸೇಶನ್‌ ತನ್ನ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದೆ. 'ಅಭಿನಂದನೆಗಳು ಪ್ರೀತಿ ಮಾಸ್ಕೆ, ಇದು ಗಿನ್ನೆಸ್ ದಾಖಲೆ. 55 ಗಂಟೆಗಳು ಮತ್ತು 13 ನಿಮಿಷಗಳು, ಆಕೆಗೆ ಲೇಹ್‌ನಿಂದ ಮನಾಲಿಗೆ ಸುಮಾರು 430 ಕಿಮೀ ಕ್ರಮಿಸಲು ತೆಗೆದುಕೊಂಡ ಸಮಯವಾಗಿದೆ. ಕಡಿಮೆ ಆಮ್ಲಜನಕದ ಲಭ್ಯತೆಯೊಂದಿಗೆ ಎತ್ತರದ ಭೂಪ್ರದೇಶದಲ್ಲಿ ಅಲ್ಟ್ರಾ ಸೈಕ್ಲಿಂಗ್ ಪ್ರಯತ್ನವು ಅವಳ ದೃಢತೆ ಮತ್ತು ಮನೋ ಸಂಕಲ್ಪವನ್ನು ಹೇಳುತ್ತದೆ' ಎಂದು ಬರೆದುಕೊಂಡು ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. 
 

 

Latest Videos
Follow Us:
Download App:
  • android
  • ios