Asianet Suvarna News Asianet Suvarna News

ಸೈಕಲ್‌ನಿಂದ ಕೆಳಗೆ ಬಿದ್ದ ಅಮೆರಿಕಾ ಅಧ್ಯಕ್ಷ : ವಿಡಿಯೋ ವೈರಲ್

ನ್ಯೂಯಾರ್ಕ್‌: ಸೈಕಲ್ ತುಳಿಯುವಾಗ, ಅಥವಾ ಸೈಕಲ್ ತುಳಿಯೋದು ಕಲಿಯುವಾಗ ನಾವು ನೀವೆಲ್ಲಾ ಏಳೋದು ಬೀಳೋದು ಸಾಮಾನ್ಯ. ಆದರೆ ಅಮೆರಿಕಾದಲ್ಲಿ ಅಧ್ಯಕ್ಷರೇ ಸೈಕಲ್ ತುಳಿಯಲು ಹೋಗಿ ಬಿದ್ದು ಬಿಟ್ಟಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

US President  Joe Biden falling off a bycical video goes viral akb
Author
Bangalore, First Published Jun 30, 2022, 10:33 AM IST

ನ್ಯೂಯಾರ್ಕ್‌: ಸೈಕಲ್ ತುಳಿಯುವಾಗ, ಅಥವಾ ಸೈಕಲ್ ತುಳಿಯೋದು ಕಲಿಯುವಾಗ ನಾವು ನೀವೆಲ್ಲಾ ಏಳೋದು ಬೀಳೋದು ಸಾಮಾನ್ಯ. ಆದರೆ ಅಮೆರಿಕಾದಲ್ಲಿ ಅಧ್ಯಕ್ಷರೇ ಸೈಕಲ್ ತುಳಿಯಲು ಹೋಗಿ ಬಿದ್ದು ಬಿಟ್ಟಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಜನ ತಮಾಷೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಅಮೆರಿಕಾದ ಡೆಲವೇರ್‌ನ ಬೀಚ್‌ನಲ್ಲಿ ಈ ಘಟನೆ ನಡೆದಿದೆ. ಸೈಕಲ್‌ ತುಳಿಯುತ್ತಿದ್ದಾಗ ಅವರ ಬೂಟುಗಳು ಸೈಕಲ್‌ ಗಾಲಿಯ ಕಡ್ಡಿಗಳಿಗೆ ಸಿಲುಕಿದ ಪರಿಣಾಮ ಸೈಕಲ್‌ ನಿಯಂತ್ರಣ ತಪ್ಪಿ ಅಧ್ಯಕ್ಷ ಜೋ ಬೈಡೆನ್ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ. 

ಜೋ ಬೈಡೆನ್ ಅವರು ತಮ್ಮ ಸೈಕಲ್‌ನಿಂದ ಕೆಳಗೆ ಬೀಳುತ್ತಿರುವುದನ್ನು ನನ್ನ ಸ್ನೇಹಿತ ಸೆರೆ ಹಿಡಿದಿದ್ದಾನೆ. ಇದು ತಮಾಷೆ ಅಲ್ಲ.  ರೆಹೋಬೋತ್ ಬೀಚ್‌ನಲ್ಲಿ ಈ ಘಟನೆ ಸಂಭವಿಸಿದೆ ಎಂದು ಬರೆದು ಸೋಶಿಯಲ್ ಮೀಡಿಯಾ ಟ್ವಿಟ್ಟರ್‌ನಲ್ಲಿ ಜಾನ್‌ಬಾಯ್ ಎಂಬುವವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಡೆಲವೇರ್‌ನಲ್ಲಿರುವ ರೆಹೋಬೋತ್ ಬೀಚ್‌ನಲ್ಲಿ ಜೂನ್‌ 18 ರಂದು ನಡೆದ ಘಟನೆ ಇದಾಗಿದ್ದು, ವಿಡಿಯೋ ಬಳಿಕ ವೈರಲ್ ಆಗಿದೆ. 

ಪ್ರಧಾನಿ ಮೋದಿ ಮಾತನಾಡಿಸಲು ಓಡೋಡಿ ಬಂದ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ವಿಡಿಯೋ ವೈರಲ್!

ಇಂತಹ ಅವಘಡಗಳು ಸಾಮಾನ್ಯ ಎಂದು ಈ ವಿಡಿಯೋ ನೋಡಿದ ನೆಟ್ಟಿಗರು ಹೇಳಿದ್ದಾರೆ. ಬೈಡೆನ್‌ ಅವರ ಬಲ ಕಾಲಿನ ಚಪ್ಪಲಿ ಸೈಕಲ್‌ನ ಪೆಡಲ್‌ನಲ್ಲಿ ಸಿಲುಕಿತ್ತು. ಅವರು ಪೆಡಲ್‌ನಿಂದ ಕಾಲು ಎತ್ತಿ ನೆಲದ ಮೇಲೆ ಇರಿಸಲು ಯತ್ನಿಸಿದಾಗ ಈ ಅನಾಹುತ ಸಂಭವಿಸಿತ್ತು. ಕಳೆದ ವಾರ ನನ್ನ ಮಗ ಉದ್ಯಾನವನದಲ್ಲಿ ಸೈಕಲ್‌ ನಿಲ್ಲಿಸಲು ಬಂದಾಗ ಇದೇ ರೀತಿ ಆಗಿತ್ತು. ಇದು ಸಾಮಾನ್ಯ ಅಪಘಾತ ಎಂದು ಒಬ್ಬರು ನೋಡುಗರು ಕಾಮೆಂಟ್ ಮಾಡಿದ್ದಾರೆ. 

ಒಂದು ತಿದ್ದುಪಡಿ. ನೀವು ಹತ್ತಿರದಿಂದ ನೋಡಿದರೆ ಅವರು ತನ್ನ ಎಡ ಪಾದವನ್ನು ನೆಲದ ಮೇಲೆ ಇರಿಸಿದ್ದಾರೆ ಮತ್ತು ತನ್ನ ಬಲಗಾಲಿನ ಮೇಲೆ ತನ್ನ ತೂಕವನ್ನು ಇಡಲು ಹೋದಾಗ ಅದು ಪಡೆಲ್‌ಗೆ ಸಿಲುಕಿಕೊಂಡಿದೆ ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. ನೀನು ಯಾಕೆ ನಗುತ್ತಿರುವೆ? ಅವರಿಗೆ 79 ವರ್ಷ. ಸ್ವಲ್ಪ ಗೌರವವನ್ನು ಕೊಡಿ, ಅವರ ಕಾಲು ಪೆಡಲ್‌ನಲ್ಲಿ ಸಿಲುಕಿಕೊಂಡಂತೆ ತೋರುತ್ತಿದೆ. ನಿಮಗೂ ಈ ರೀತಿ ಆಗಬಹುದು. ನನ್ನ ಮಾಜಿ ಗಂಡನ ಅಜ್ಜ 80 ವರ್ಷಕ್ಕಿಂತ ಮೇಲ್ಪಟ್ಟವರು ಪ್ರತಿದಿನ ಬೈಕು ಓಡಿಸುತ್ತಿದ್ದರು. ಆದರೆ ಸೈಕಲ್‌ ನಿಲ್ಲಿಸಲು ಯತ್ನಿಸಿದಾಗ ಆಗಾಗ್ಗೆ ಬೀಳುತ್ತಿದ್ದರು. ಆದರ ಸವರಿಸಿಕೊಂಡು ಮತ್ತೆ ಸೈಕಲ್‌ ಸವಾರಿ ಮಾಡುತ್ತಲೇ ಇದ್ದರು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

'ಅಂತಾರಾಷ್ಟ್ರೀಯ ಸಂಬಂಧದಲ್ಲಿ ವೋಟ್ ಬ್ಯಾಂಕ್ ರಾಜಕಾರಣ', ಅಮೆರಿಕದ ವರದಿಗೆ ಭಾರತದ ತೀಕ್ಷ್ಣ ಪ್ರತಿಕ್ರಿಯೆ!
 

ಕೆಲದಿನಗಳ ಹಿಂದಷ್ಟೇ ಜರ್ಮನಿಯಲ್ಲಿ ಜಿ7 ಶೃಂಗಸಭೆಯಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿಯವರನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹುಡುಕಿಕೊಂಡು ಬಂದ ಮಾತನಾಡಿಸಿದ ವಿಡಿಯೋ ವೈರಲ್ ಆಗಿತ್ತು. ಸಭೆಗೂ ಮುನ್ನ ಆಹ್ವಾನಿತ ದೇಶದ ನಾಯಕರ ಜೊತೆ ಪ್ರಧಾನಿ ಮೋದಿ ಅನೌಪಚಾರಿಕ ಮಾತುಕತೆ ನಡೆಸಿದ್ದರು. ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಜೊತೆ ಮಾತನಾಡುತ್ತಿದ್ದ ವೇಳೆ, ಜೋ ಬೈಡೆನ್ ಮೋದಿಯನ್ನು ಹುಡುಕುತ್ತಾ ಬಂದಿದ್ದಾರೆ.

ಮೋದಿ ಹಾಗೂ ಜಸ್ಟಿನ ಟ್ರುಡೋ ಕೈಲುಕುತ್ತಾ ಮಾತನಾಡುತ್ತಿದ್ದಂತೆ ಹಿಂಬಾಗದಿಂದ ಬಂದ ಜೋ ಬೈಡೆನ್ ಮೋದಿಯ ಹೆಗಲು ತಟ್ಟಿ ಕರೆದಿದ್ದಾರೆ. ಅತ್ತ ಜೈ ಬೈಡೆನ್ ನೋಡಿ ಮೋದಿ ಅತೀವ ಸಂತಸದಿಂದ ಕೈಕುಲುಕಿ ಮಾತನಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾರತ ಬದಲಾಗಿದೆ. ಇದೀಗ ಅಮೆರಿಕ ಅಧ್ಯಕ್ಷರೇ ಪ್ರಧಾನಿ ಮೋದಿಯನ್ನು ಹುಡುಕಿಕೊಂಡು ಬಂದು ಮಾತನಾಡಿಸುವ ಮಟ್ಟಿಗೆ ಭಾರತ ಬದಲಾಗಿದೆ ಎಂದು ಹಲವರು ಪ್ರತಿಕ್ರಿಯೆಸಿದ್ದಾರೆ. ಇನ್ನು ಕೆಲವರು ಭಾರತ ವಿಶ್ವ ಗುರು ಎಂದು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ.
 

Follow Us:
Download App:
  • android
  • ios