ಈ ಏರ್ ಇಂಡಿಯಾ ಅದೆಷ್ಟು ಬಾರಿ ಕೆಟ್ಟ ಕಾರಣಗಳಿಗಾಗಿ ಸುದ್ದಿಯಾಗುತ್ತೋ! ವಿಮಾನದೊಳಗಿನ ಸ್ವಚ್ಛತೆ, ಅದರ ವಿಳಂಬತೆ ಎಲ್ಲದರಿಂದ ರೋಸಿ ಹೋದ ಪುಣೆ ಮೂಲದ ಲೇಖಕರೊಬ್ಬರು ಏರ್‌ಲೈನ್ಸ್ ಮೇಲೆ ಸಿಕ್ಕಾಪಟ್ಟೆ ಹರಿಹಾಯ್ದಿದ್ದಾರೆ. 

ಪುಣೆ ಮೂಲದ ಲೇಖಕ ಆದಿತ್ಯ ಕೊಂಡವಾರ್, ಬೆಂಗಳೂರಿನಿಂದ ಪುಣೆಗೆ ಏರ್‌ಲೈನ್‌ನಲ್ಲಿ ಇತ್ತೀಚಿನ ಅನುಭವದ ನಂತರ ಏರ್ ಇಂಡಿಯಾ ವಿಮಾನದಲ್ಲಿ ಇನ್ನೆಂದಿಗೂ ಹಾರುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. 'ಎತ್ತಿನ ಬಂಡಿಯಲ್ಲಿ ಬೇಕಿದ್ರೆ ಹೋಗ್ತೀನಿ ಆದ್ರೆ ಏರ್ ಇಂಡಿಯಾಲಿ ಹೋಗೋಲ್ಲ' ಎನ್ನುವ ಮೂಲಕ ಅವರು ತಮಗಾದ ಕಿರಿಕಿರಿಯನ್ನು ಹೊರ ಹಾಕಿದ್ದಾರೆ. 

ಕಾಂಪ್ಸರ್ಕಲ್‌ನ ಲೇಖಕ ಮತ್ತು ಉಪಾಧ್ಯಕ್ಷರಾದ ಆದಿತ್ಯ ಕೊಂಡವಾರ್ ಅಗತ್ಯವಿದ್ದರೆ ನಾನು 100% ಹೆಚ್ಚುವರಿ ವೆಚ್ಚವನ್ನು ಪಾವತಿಸುತ್ತೇನೆ ಆದರೆ ಸಮಯಕ್ಕೆ ಸರಿಯಾಗಿ ಇರುವ ಇತರ ಏರ್‌ಲೈನ್‌ಗಳನ್ನು ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ. 

ತಮಗಾದ ಸಂಕಟವನ್ನು ನೆನಪಿಸಿಕೊಳ್ಳುತ್ತಾ, ಕೊಂಡವಾರ್ ಎಕ್ಸ್‌ನಲ್ಲಿ 'ಆತ್ಮೀಯ @AirIndiaX, ಕಳೆದ ರಾತ್ರಿ ನನಗೆ ಬಹಳ ಅಮೂಲ್ಯವಾದ ಪಾಠವನ್ನು ಕಲಿಸಿದ್ದಕ್ಕಾಗಿ ಧನ್ಯವಾದಗಳು. 9:50 PM ಫ್ಲೈಟ್ ಟೇಕ್ ಆಫ್ ಆಗಿದ್ದು 12:15/12:20 AMಕ್ಕೆ. ವಿಮಾನವು ಗಬ್ಬು ನಾರುತ್ತಿತ್ತು ಮತ್ತು ಆಸನಗಳು ತುಂಬಾ ಕೊಳಕು ಮತ್ತು ಕಲೆಗಳಿಂದ ತುಂಬಿದ್ದವು (IX 974 BLR ನಿಂದ ಪುಣೆ). ನಿನ್ನೆ ಮುಂಜಾನೆ 1.50ಕ್ಕೆ ಪುಣೆಯಿಂದ ಬೆಂಗಳೂರಿಗೆ ಹಾರುವ ಮೂಲಕ ನನ್ನ ದಿನವನ್ನು ಪ್ರಾರಂಭಿಸಿದ್ದೆ. ಬ್ಯುಸಿ ದಿನದ ಬಳಿಕ ನಾನು ಮತ್ತೆ ಪುಣೆ ತಲುಪಿದ್ದು ಮಧ್ಯರಾತ್ರಿ 3 ಗಂಟೆಗೆ' ಎಂದವರು ಬರೆದಿದ್ದಾರೆ.


'ಟಾಟಾ ಗ್ರೂಪ್ ಮತ್ತು ಅವರ ನಾಯಕರ ಬಗ್ಗೆ ನನಗೆ ಅಪಾರ ಗೌರವವಿದೆ - ನಾನು ಅವರಿಂದ ಪರಿಪೂರ್ಣತೆಯನ್ನು ಯಾವಾಗಲೂ ನಿರೀಕ್ಷಿಸುತ್ತೇನೆ ಮತ್ತು ಪ್ರಾಮಾಣಿಕವಾಗಿ ಹೇಳುವುದಾದರೆ ಇದು ದುರಂತ!' ಎಂದು ಕೊಂಡವಾರ್ ಸೇರಿಸಿದ್ದಾರೆ. 

ವಿಮಾನವು ಮೂರು ಗಂಟೆಗಳಿಗೂ ಹೆಚ್ಚು ಕಾಲ ವಿಳಂಬವಾಗಿದ್ದಲ್ಲದೆ, ಸ್ವಚ್ಛತೆ ಇಲ್ಲದ ಕಾರಣಕ್ಕೆ ಪ್ರಯಾಣಿಕರನ್ನು ಹೈರಾಣಾಗಿಸಿತು. 

ಕ್ಯಾನ್ಸರ್, ತೊನ್ನು, ಡೈವೋರ್ಸ್.. ಬಾಳಲ್ಲಿ ಏನೇ ಬಂದ್ರೂ ಜಗ್ಗದ ಫೈಟರ್ ಈ 'ಮಹಾರಾಜ' ನಟಿ ಮಮತಾ..

ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್, ಅನಿವಾರ್ಯ ಕಾರಣಗಳಿಂದ ಬೆಂಗಳೂರು-ಪುಣೆ ವಿಮಾನ ವಿಳಂಬವಾಗಿದೆ ಎಂದು ಲೇಖಕರ ಕ್ಷಮೆ ಯಾಚಿಸಿದೆ. 'ಹಾಯ್ ಆದಿತ್ಯ! ನಿಮ್ಮ ಫ್ಲೈಟ್ ವೇಳಾಪಟ್ಟಿಯಲ್ಲಿನ ಅಡಚಣೆಯಿಂದಾಗಿ ಉಂಟಾದ ಅನಾನುಕೂಲತೆಗಾಗಿ ನಾವು ಕ್ಷಮೆ ಯಾಚಿಸುತ್ತೇವೆ. ನಮ್ಮ ನಿಯಂತ್ರಣಕ್ಕೆ ಮೀರಿದ ಕಾರಣಗಳಿಂದ ವಿಮಾನ ವಿಳಂಬವಾಗಿದೆ ಎಂಬುದನ್ನು ದಯವಿಟ್ಟು ಗಮನಿಸಿ. ನಿಮ್ಮ ವಿಮಾನದ ಅನುಭವಕ್ಕೆ ಸಂಬಂಧಿಸಿದಂತೆ ಉದ್ಭವಿಸಿರುವ ಸಮಸ್ಯೆಯನ್ನು ನಾವು ಪರಿಶೀಲಿಸುತ್ತೇವೆ ಮತ್ತು ಅದನ್ನು ಸರಿಪಡಿಸುತ್ತೇವೆ' ಎಂದು ಸಂಸ್ಥೆ ಪ್ರತಿಕ್ರಿಯಿಸಿದೆ. 

Scroll to load tweet…