ಅಪರೂಪದ ಅಲ್ಬಿನೋ ಜಿಂಕೆ ಪೋಟೋ ಸೆರೆ ಹಿಡಿದ ಎಂ.ಬಿ.ಪಾಟೀಲ್ ಮಗ ಧ್ರುವ ಪಾಟೀಲ್

ವನ್ಯಜೀವಿ ಫೋಟೋಗ್ರಾಫರ್‌ಗಳ ಕ್ಯಾಮರಾದಲ್ಲಿ ಸೆರೆ ಸಿಕ್ಕಿ ಹಲವಾರು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತವೆ. ಹಾಗೆಯೇ ಸದ್ಯ, ವನ್ಯಜೀವಿ ಛಾಯಾಗ್ರಾಹಕ ಧ್ರುವ ಪಾಟೀಲ್ ಅಪರೂಪದ ಅಲ್ಬಿನೋ ಜಿಂಕೆಯ ಛಾಯಾಚಿತ್ರವನ್ನು ಸೆರೆಹಿಡಿದ್ದಾರೆ. 

Wildlife photographer Dhruva Patil clicks Rare deer photo Vin

20 ವರ್ಷದ ವೃತ್ತಿಪರ ವನ್ಯಜೀವಿ ಛಾಯಾಗ್ರಾಹಕ ಧ್ರುವ ಪಾಟೀಲ್, ಕಬಿನಿ ಅರಣ್ಯದಿಂದ ಮತ್ತೊಂದು ಅಪರೂಪದ ಫೋಟೋವನ್ನು ಸೆರೆಹಿಡಿದಿದ್ದಾರೆ. ಜೂನ್ 7, 2023 ರಂದು ಕಬಿನಿಗೆ ತೆರಳಿದ್ದ ಅವರ ಇತ್ತೀಚಿನ ಪ್ರವಾಸದಲ್ಲಿ, ಅವರು ಅಪರೂಪದ ಅಲ್ಬಿನೋ ಜಿಂಕೆಯ ಛಾಯಾಚಿತ್ರವನ್ನು ಸೆರೆಹಿಡಿದ್ದಾರೆ. ಈ ಹಿಂದೆ ಅವರು ಅಪರೂಪದಲ್ಲಿ ಅಪರೂಪದ ಕಪ್ಪು ಪ್ಯಾಂಥರ್‌ನ ಚಿತ್ರಗಳನ್ನು ಕ್ಲಿಕ್ ಮಾಡಿದ್ದರು. ಧ್ರುವ ಪಾಟೀಲ್ ಅವರು ಸಚಿವ ಎಂ ಬಿ ಪಾಟೀಲ್ ಅವರ ಪುತ್ರ. ವನ್ಯಜೀವಿಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡು ನಾಡಿನ ಉದಯೋನ್ಮುಖ ಛಾಯಾಗ್ರಾಹಕರಾಗಿ ಗುರುತಿಸಿಕೊಂಡಿದ್ದಾರೆ. 

ಈ ಹಿಂದೆ ಧ್ರುವ ಪಾಟೀಲ್ ಅತ್ಯಂತ ಅಪರೂಪದ ಕರಿಚಿರತೆಯ (ಬ್ಲ್ಯಾಕ್ ಪಾಂಥರ್) ಚಿತ್ರವನ್ನು ಕಬಿನಿ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿದಿದ್ದರು. ಅಷ್ಟೇ ಅಲ್ಲ ಪಶ್ಚಿಮಘಟ್ಟದ ಕಾಡಿನಲ್ಲಿ (Forest) ಮಾತ್ರ ಕಾಣಸಿಗುವ 'ಪ್ಯಾರಡೈಸ್ ಫ್ರೈ ಕ್ಯಾಚರ್ ' ಎಂಬ ವಿರಳವಾದ ಸುಂದರ ಪಕ್ಷಿಯ ಚಿತ್ರವನ್ನು ವಿಜಯಪುರದಲ್ಲಿ ಸೆರೆ ಹಿಡಿದಿದ್ದರು. ಮಾತ್ರವಲ್ಲ ಆಫ್ರಿಕಾದ ಮಸಾಯಿಮಾರಾ, ರಾಜಸ್ಥಾನದ ರಣತಂಬೂರ್ ಸೇರಿದಂತೆ ರಾಜ್ಯದ ಕಬಿನಿ, ಬಂಡೀಪುರ, ದಾಂಡೇಲಿ, ಅಣಸಿ ಮೊದಲಾದ ಕಡೆಗಳಿಂದ ಹತ್ತು ಸಾವಿರಕ್ಕೂ ಅಧಿಕ ಛಾಯಾಚಿತ್ರಗಳನ್ನು (Photographs) ತಮ್ಮ ನಿಕಾನ್ ಜಿ7 ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.

ಕ್ಯಾಮರಾಗೆ ಹಿಮ ಚಿರತೆಯ ಸಖತ್ ಫೋಸ್: ಕ್ಲೋಸ್ ಅಪ್ ವಿಡಿಯೋ ವೈರಲ್

ಕಬಿನಿ ಅರಣ್ಯ ಪ್ರದೇಶ ಎಲ್ಲಿದೆ?
ಕಪಿಲಾ ಎಂದು ಕರೆಸಿಕೊಳ್ಳುವ ಕಬಿನಿ ನದಿ ಕೇರಳದ ವಯನಾಡ್ ಜಿಲ್ಲೆಯ ಪನಮರಮ್ ಮತ್ತು ಮಾನಂತವಾಡಿ ನದಿಗಳ ಸಂಗಮದಿಂದ ಹುಟ್ಟಿಕೊಂಡಿದೆ ಎಂದು ಹೇಳುತ್ತಾರೆ. ಪೂರ್ವಾಭಿಮುಖವಾಗಿ ಹರಿದು ಕರ್ನಾಟಕದಲ್ಲಿ ಕಾವೇರಿ ನದಿ (Kaveri River)ಯನ್ನು ಸೇರುತ್ತದೆ. ಕಬಿನಿ ನದಿ ಪಕ್ಕದಲ್ಲಿರುವುದರಿಂದ ಉದ್ಯಾನಕ್ಕೂ ಇದೇ ಹೆಸರನ್ನು ಇಡಲಾಗಿದೆ. ಕರ್ನಾಟಕದ ಪ್ರಸಿದ್ಧ ಅಭಯಾರಣ್ಯಗಳಲ್ಲಿ ಕಬಿನಿ ಅರಣ್ಯ ಪ್ರದೇಶವೂ ಒಂದು. ಈ ರಾಷ್ಟ್ರೀಯ ಉದ್ಯಾನವು (National Park) ಮೈಸೂರಿನಿಂದ 80 ಕಿ.ಮೀ. ಮತ್ತು ಬೆಂಗಳೂರಿನಿಂದ 208 ಕಿ.ಮೀ. ದೂರದಲ್ಲಿದೆ. ನೀರಾವರಿಗಾಗಿ 1974ರಲ್ಲಿ ನದಿಗೆ ಇಲ್ಲಿ ಅಣೆಕಟ್ಟು (Dam) ಕಟ್ಟಲಾಗಿದೆ.

ಇಲ್ಲಿರುವ ಮಸ್ತಿಗುಡಿ ಸರೋವರ  ಪ್ರವಾಸಿಗರ (Tourist) ಇನ್ನೊಂದು ಆಕರ್ಷಣೀಯ ಕೇಂದ್ರ. ಬೃಹತ್ ಸರೋವರ ನಿರ್ಮಾಣವಾಗಿ, ಮಸ್ತಿಗುಡಿ ಹಳ್ಳಿ ಮುಳುಗಿತು. ಹೀಗಾಗಿ ಇದಕ್ಕೆ ಮಸ್ತಿಗುಡಿ ಸರೋವರ ಎಂದೇ ಕರೆಯಲಾಗುತ್ತದೆ. ಬೇಸಿಗೆಯಲ್ಲಿ ಜಲಾಶಯ ಬತ್ತುವುದರಿಂದ, ನೀರಿನಿಂದ ಮುಳುಗಿದ್ದ ಮಸ್ತಿಗುಡಿ ದೇವಸ್ಥಾನ (Temple) ನೋಡಬಹುದು. ಕಬಿನಿ ನದಿಯು ನಾಗರಹೊಳೆ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನವನವನ್ನು ಪ್ರತ್ಯೇಕಿಸುತ್ತದೆ. ಕಬಿನಿ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದರೆ ಬಂಡೀಪುರ, ನಾಗರಹೊಳೆ ಅಭಯಾರಣ್ಯಕ್ಕೂ ಹೋಗಿ ಬರಬಹುದು. 

ಹಿಮ ಶಿಖರದ ಮೇಲೇರಿ ಕುಳಿತ ಚಿರತೆ... ಮನಮೋಹಕ ಫೋಟೋ ವೈರಲ್

ಏನೇನು ಮಾಡಬಹುದು?
ಕಬಿನಿ ಅರಣ್ಯ ಪ್ರದೇಶಕ್ಕೆ ಹೋದರೆ ದಿನವನ್ನು ಹಲವು ರೀತಿಯಲ್ಲಿ ಎಂಜಾಯ್ ಮಾಡಬಹುದು. ಕಬಿನಿ ನದಿಯಲ್ಲಿ ಬೋಟಿಂಗ್ ಮಾಡಬಹುದು. ಬಿದಿರಿನಿಂದ ತಯಾರಿಸಿದ ದೋಣಿ, ಮೋಟಾರ್ ಬೋಟ್‌ನ್ನು ಬಳಸಿಕೊಳ್ಳಬಹುದು. ಸೈಕ್ಲಿಂಗ್ ಮಾಡಬಹುದು. ಮಾತ್ರವಲ್ಲ ಆದಿವಾಸಿ ಗ್ರಾಮಗಳಿಗೆ ಭೇಟಿ ನೀಡಬಹುದು. ಇಲ್ಲಿ ಕಾಣಸಿಗುವ ನಾನಾ ಬಗೆಯ ಪ್ರಾಣಿ-ಪಕ್ಷಿಗಳನ್ನು ನೋಡಿ ಆನಂದಿಸಬಹುದು. ತೆರೆದ ಜೀಪ್‌ನಲ್ಲಿ ಸಫಾರಿ ನಡೆಸುವ ಮೂಲಕ ಇಲ್ಲಿನ ವನ್ಯಜೀವಿಗಳನ್ನು ಹತ್ತಿರದಿಂದ ನೋಡಲು ಸಾಧ್ಯವಾಗುತ್ತದೆ. ಇಲ್ಲಿ 150ಕ್ಕೂ ಹೆಚ್ಚು ಆನೆಗಳಿವೆ. ಪರಿಸರ ಪ್ರೇಮಿ ಪ್ರವಾಸೋದ್ಯಮಕ್ಕೆ ಕಬಿನಿ ರಾಷ್ಟ್ರೀಯ ಉದ್ಯಾನವನ ಪ್ರೇರಣೆ ನೀಡುತ್ತದೆ

ಸೂರ್ಯಾಸ್ತದಲ್ಲಿ ಕಂಡ ಅಪರೂಪದ ದೃಶ್ಯ ಕಾವ್ಯ... ಸೆರೆ ಹಿಡಿದ ಹವ್ಯಾಸಿ ಛಾಯಾಗ್ರಾಹಕ

Latest Videos
Follow Us:
Download App:
  • android
  • ios