ಮೊಬೈಲ್ ಏರ್ ಪ್ಲೇನ್ ಮೋಡ್ ಆನ್ ಆಗಿಲ್ಲ ಅಂದ್ರೆ ವಿಮಾನ ಕ್ರ್ಯಾಶ್ ಆಗುತ್ತಾ?
ವಿಮಾನ ಪ್ರಯಾಣಿಕರಿಗೆ ಗಗನ ಸಖಿಯರು, ಫೋನನ್ನು ಏರ್ ಪ್ಲೇನ್ ಮೋಡ್ ಗೆ ಹಾಕುವಂತೆ ಸಲಹೆ ನೀಡ್ತಾರೆ. ವಿಮಾನ ಹತ್ತುತ್ತಿದ್ದಂತೆ ಕಡ್ಡಾಯವಾಗಿ ಈ ಕೆಲಸವನ್ನು ಪ್ರಯಾಣಿಕರು ಮಾಡ್ಬೇಕು. ಒಂದ್ವೇಳೆ ಏರ್ ಪ್ಲೇನ್ ಮೋಡ್ ಆನ್ ಆಗಿಲ್ಲ ಅಂದ್ರೆ ಏನ್ ಆಗುತ್ತೆ? ಮಾಹಿತಿ ಇಲ್ಲಿದೆ.
ಮೊಬೈಲ್ (Mobile) ಬಳಕೆದಾರರಿಗೆ ಮೊಬೈಲ್ ನ ಸೈಲೆಂಟ್ ಮೋಡ್ (silent mode) , ಏರ್‌ಪ್ಲೇನ್ ಮೋಡ್ (Airplane Mode) ಬಗ್ಗೆ ತಿಳಿದಿರುತ್ತೆ. ಏರ್‌ಪ್ಲೇನ್ ಮೋಡ್ ಎಲ್ಲ ಮೊಬೈಲ್ ಫೋನ್ ನ ಒಂದು ಸೆಟ್ಟಿಂಗ್ ಆಗಿದೆ. ಇದನ್ನು ಆಫ್ ಲೈನ್ ಮೋಡ್, ಫ್ಲೈಟ್ ಮೋಡ್ ಎಂದೂ ಕರೆಯಲಾಗುತ್ತದೆ. ಬಹುತೇಕ ಜನರಿಗೆ ಸೈಲೆಂಟ್ ಮೋಡ್ ಬಗ್ಗೆ ಅರಿವಿರುತ್ತದೆ. ಅವಶ್ಯಕತೆ ಬಿದ್ದಾಗ ಅದನ್ನು ಬಳಸ್ತಾರೆ ಕೂಡ. ಆದ್ರೆ ಏರ್ ಪ್ಲೇನ್ ಮೋಡ್ ಬಗ್ಗೆ ಜನರಿಗೆ ಮಾಹಿತಿ ಬಹಳ ಕಡಿಮೆ. ಇದನ್ನು ಅನೇಕರು ಬಳಸೋದಿಲ್ಲ. ವಿಮಾನದಲ್ಲಿ ಪ್ರಯಾಣ ಬೆಳೆಸುವ ವೇಳೆ ಏರ್ ಪ್ಲೇನ್ ಮೋಡ್ ಕಡ್ಡಾಯವಾಗಿದೆ. ಆದ್ರೆ ಇದನ್ನು ಬಳಸದ ಜನರಿಗೆ ಹೇಗೆ ಏರ್ ಪ್ಲೇನ್ ಮೋಡ್ ಆನ್ ಮಾಡ್ಬೇಕು ಎಂಬುದು ಗೊತ್ತಾಗೋದಿಲ್ಲ. ಅದನ್ನು ಏಕೆ ಆನ್ ಮಾಡಬೇಕು ಎಂಬುದರ ಅರಿವಿರೋದಿಲ್ಲ.
ಏರ್ ಪ್ಲೇನ್ ಮೋಡ್ ಅಂದ್ರೇನು? : ಸ್ವಿಚ್ ಆಫ್ (Switch Off) ಮಾಡದೆಯೇ ಫೋನ್ ಅನ್ನು ಮರುಹೊಂದಿಸಲು ಏರ್‌ಪ್ಲೇನ್ ಮೋಡ್ ಒದಗಿಸಲಾಗಿದೆ. ಈ ಮೋಡ್ ಸಕ್ರಿಯಗೊಳಿಸಿದ್ರೆ ನಿಮ್ಮ ಫೋನ್‌ನಲ್ಲಿ ಯಾವುದೇ ನೆಟ್‌ವರ್ಕ್ ಬರೋರಿಲ್ಲ. ಇದರಿಂದಾಗಿ ಫೋನ್ ಮಾಡಲು ನಿಮಗೆ ಸಾಧ್ಯವಾಗೋದಿಲ್ಲ. ವಿಮಾನಗಳಲ್ಲಿ ಏರ್ ಪ್ಲೇನ್ ಮೋಡ್ ಬಳಸೋದು ಬಹಳ ಮುಖ್ಯ.
ಆಂಡ್ರಾಯ್ಡ್ ಫೋನ್ ಗಿಂತ ಐಫೋನ್ ಉಬರ್ ಕ್ಯಾಬ್ ಬುಕ್ ಮಾಡೋದು ದುಬಾರಿ! ಎಂದಾದ್ರೂ ಗಮನಿಸಿದ್ದೀರಾ?
ವಿಮಾನದಲ್ಲಿ ಪ್ಲೈಟ್ ಮೋಡ್ ಸಕ್ರಿಯಗೊಳಿಸದಿದ್ರೆ ಏನಾಗುತ್ತೆ? : ವಿಮಾನದಲ್ಲಿ ಫ್ಲೈಟ್ ಮೋಡ್ ಆನ್ ಮಾಡೋದು ಕಡ್ಡಾಯವಾಗಿದೆ. ಅದನ್ನು ಆನ್ ಮಾಡದಿದ್ದರೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಫೋನ್ ಫ್ಲೈಟ್ ಮೋಡ್‌ನಲ್ಲಿ ಇಟ್ಟಿಲ್ಲ ಎಂದಾದ್ರೆ ವಿಮಾನ ಅಪಘಾತಕ್ಕೀಡಾಗುತ್ತದೆ ಎಂದಲ್ಲ. ಆದ್ರೆ ಪೈಲಟ್ ಗೆ ಇದು ಸಮಸ್ಯೆ ಉಂಟುಮಾಡುತ್ತದೆ. ಹಾರಾಟದ ಸಮಯದಲ್ಲಿ ಮೊಬೈಲ್ ಸಂಪರ್ಕವನ್ನು ಇಟ್ಟುಕೊಳ್ಳುವುದರಿಂದ ವಿಮಾನದ ಸಂವಹನ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು. ಇದು ಪೈಲಟ್ ಕೆಲಸಕ್ಕೆ ಅಡ್ಡಿಯಾಗುತ್ತದೆ.
ವಿಮಾನ ಹಾರಾಟದ ಸಮಯದಲ್ಲಿ, ಪೈಲಟ್ ಯಾವಾಗಲೂ ರಾಡಾರ್ ಮತ್ತು ನಿಯಂತ್ರಣ ಕೊಠಡಿಯೊಂದಿಗೆ ಸಂಪರ್ಕದಲ್ಲಿರುತ್ತಾರೆ. ನಿಮ್ಮ ಫೋನ್, ಫ್ಲೈಟ್ ಮೋಡ್ ಗೆ ಹೋಗಿಲ್ಲ ಎಂದಾದ್ರೆ ಪೈಲಟ್ ಗೆ ಸರಿಯಾಗಿ ಸಂಪರ್ಕ ಸಿಗೋದಿಲ್ಲ. ಸೂಚನೆಗಳನ್ನು ಸ್ಪಷ್ಟವಾಗಿ ಪಡೆಯಲು ಸಾಧ್ಯವಾಗುವುದಿಲ್ಲ. ನಿಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಹಾರಾಟದ ಸಮಯದಲ್ಲಿ ಆನ್ ಆಗಿದ್ದರೆ, ಪೈಲಟ್ ಸ್ವೀಕರಿಸಿದ ರೇಡಿಯೊ ಆವರ್ತನಕ್ಕೆ ಅಡ್ಡಿಯಾಗುತ್ತದೆ. ವಿಮಾನದಲ್ಲಿ ಪ್ರಯಾಣಿಸುವ ಅನೇಕರು ಏರ್ ಪ್ಲೇನ್ ಮೋಡ್ ಆನ್ ಮಾಡದೆ ಇದ್ರೆ ಕಷ್ಟವಾಗುತ್ತದೆ. ಇದ್ರಿಂದ ವಿಮಾನ ಅಪಘಾತಕ್ಕೀಡಾಗುವ ಸಾಧ್ಯತೆ ಇರುತ್ತದೆ. ಪೈಲಟ್ ಗೆ ತೊಂದರೆ ಆಗ್ಬಾರದು, ನಿಮ್ಮ ಪ್ರಯಾಣ ಸುಖಕರವಾಗಿರಬೇಕು ಎಂದಾದ್ರೆ ವಿಮಾನ ಹತ್ತಿದ ತಕ್ಷಣ ಫೋನ್ ಅನ್ನು ಫ್ಲೈಟ್ ಮೋಡ್‌ನಲ್ಲಿ ಇರಿಸಿ.
ಇದು ರೈಲ್ವೆ ಪ್ರಯಾಣಿಕರ ಗಮನಕ್ಕೆ, ಇನ್ಮುಂದೆ IRCTC ಬಂದ್ ಮಾಡಲಿದೆ ಈ ಸರ್ವಿಸ್, ನಿಮ್ಮ
ಅನೇಕ ದೇಶಗಳಲ್ಲಿ ಇದನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ. ನಿಯಮ ಮುರಿದ ಪ್ರಯಾಣಿಕರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ನೀವು ಫ್ಲೈಟ್ ಮೋಡ್ ಆನ್ ಮಾಡದಿದ್ದರೆ ನಿಮ್ಮನ್ನು ಅನುಮಾನಾಸ್ಪದವಾಗಿ ನೋಡಲಾಗುತ್ತದೆ. ಫ್ಲೈಟ್ ಮೋಡ್ ಆನ್ ಮಾಡಿದ ತಕ್ಷಣ ನಿಮ್ಮ ಮೊಬೈಲ್ ಸ್ವಿಚ್ ಆಫ್ ಆಗೋದಿಲ್ಲ. ನೀವು ಈಗಾಗಲೇ ಡೌನ್ಲೋಡ್ ಮಾಡಿದ ವಿಡಿಯೋ, ಸಿನಿಮಾಗಳನ್ನು ವೀಕ್ಷಣೆ ಮಾಡಬಹುದು. ಮೊಬೈಲ್ ಬಳಸಬಹುದು. ಆದ್ರೆ ಆನ್ಲೈನ್ ನಲ್ಲಿ ವಿಡಿಯೋ ವೀಕ್ಷಣೆ ಸಾಧ್ಯವಾಗೋದಿಲ್ಲ.
ನಿಮಗೆ ನೆಟ್ವರ್ಕ್ ಸರಿಯಾಗಿ ಸಿಗ್ತಿಲ್ಲ ಎನ್ನುವ ಸಮಯದಲ್ಲಿ ನೀವು ಈ ಫ್ಲೈಟ್ ಮೋಡ್ ಸಹಾಯ ಪಡೆಯಬಹುದು. ನೀವು ಮೊದಲು ಫ್ಲೈಟ್ ಮೋಡ್ ಆನ್ ಮಾಡಿ. ನಂತ್ರ ಅದನ್ನು ಆಫ್ ಮಾಡಿ. ಆಗ ನಿಮಗೆ ನೆಟ್ವರ್ಕ್ ಸರಿಯಾಗಿ ಸಿಗುತ್ತದೆ.