ಆಂಡ್ರಾಯ್ಡ್‌ ಫೋನ್‌ ಗಿಂತ ಐಫೋನ್‌ ಉಬರ್ ಕ್ಯಾಬ್‌ ಬುಕ್‌ ಮಾಡೋದು ದುಬಾರಿ! ಎಂದಾದ್ರೂ ಗಮನಿಸಿದ್ದೀರಾ?

ಆಂಡ್ರಾಯ್ಡ್ ಫೋನ್ ಹಾಗೂ ಐಫೋನ್ ಮಧ್ಯೆ ಸಾಕಷ್ಟು ವ್ಯತ್ಯಾಸವಿದೆ. ಆದ್ರೆ ಐಫೋನ್ ಹಾಗೂ ಆಂಡ್ರಾಯ್ಡ್ ಫೋನ್ ನಲ್ಲಿ ನೀವು ಏನು ಬುಕ್ ಮಾಡ್ತೀರಿ ಎಂಬುದು ಮಹತ್ವ ಪಡೆಯುತ್ತದೆ. ಉಬರ್ ನಲ್ಲಿ ಒಂದೇ ಜಾಗಕ್ಕೆ ಎರಡು ಫೋನ್ ನಿಂದ ಒಂದೇ ಬಾರಿ ಕ್ಯಾಬ್ ಬುಕ್ ಮಾಡಿದಾಗ ಏನೆಲ್ಲ ವ್ಯತ್ಯಾಸವಾಯ್ತು ಗೊತ್ತಾ? 
 

uber cab booking from iphone costly than booking via android phone roo

ಈಗಿನ ದಿನಗಳಲ್ಲಿ ಪ್ರಯಾಣ ಸುಲಭವಾಗಿದೆ. ಮನೆಯವರೆಗೂ ಕ್ಯಾಬ್, ಆಟೋ, ಬೈಕ್ ಸೌಲಭ್ಯ ಈಗ ಲಭ್ಯವಿದೆ. ಮೊಬೈಲ್ ಅಪ್ಲಿಕೇಶನ್ (Mobile application) ಮೂಲಕ ಜನರು ಓಲಾ (Ola), ಉಬರ್ (Uber), ನಮ್ಮ ಯಾತ್ರಿ (Namma Yatri) ಸೇರಿದಂತೆ ಮೊಬೈಲ್ ಅಪ್ಲಿಕೇಷನ್ ಬಳಸಿ ಸಾರಿಗೆ ಸೌಲಭ್ಯ ಪಡೆಯುತ್ತಿದ್ದಾರೆ. ಆದ್ರೆ ಈ ಸೇವೆಯಲ್ಲೂ ಅನೇಕ ಮೋಸಗಳು ಆಗೋದಿದೆ. ಜೊತೆಗೆ ಶುಲ್ಕದಲ್ಲೂ ವ್ಯತ್ಯಾಸವನ್ನು ನಾವು ಕಾಣ್ಬಹುದು.

ಅಪ್ಲಿಕೇಷನ್ ಮೂಲಕ ನಾವು ಗಮ್ಯ ಸ್ಥಾನ ಬುಕ್ ಮಾಡಿದಾಗ ತೋರಿಸುವ ದರ ಅನೇಕ ಬಾರಿ ಗಮ್ಯ ಸ್ಥಾನ ತಲುಪಿದ ನಂತ್ರ ಇರೋದಿಲ್ಲ. ಅದ್ರಲ್ಲಿ ಏರಿಕೆ ಕಂಡು ಬರುತ್ತದೆ. ಸುತ್ತಿಬಳಸಿ ಬಂದ ಕಾರಣ ರೇಟ್ ಜಾಸ್ತಿಯಾಗಿದೆ ಎನ್ನುತ್ತ ಚಾಲಕರು ಹೆಚ್ಚಿನ ಶುಲ್ಕ ಪಾವತಿಸಿಕೊಳ್ಳೋದು ಇದೆ. ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ವೇಳೆಯಲ್ಲಿ ನೀವು ಕ್ಯಾಬ್ ಅಥವಾ ಆಟೋ ಬುಕ್ ಮಾಡಿದಾಗ್ಲೂ ಒಂದೇ ಸ್ಥಳಕ್ಕೆ ಬೇರೆ ಬೇರೆ ದರ ವಿಧಿಸಲಾಗುತ್ತದೆ. ಆದ್ರೆ ಈಗ ನೀವು ಯಾವ ಫೋನ್ ಮೂಲಕ ಕ್ಯಾಬ್ ಬುಕ್ ಮಾಡ್ತೀರಿ ಎಂಬುದು ಮಹತ್ವ ಪಡೆಯುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದು ವೈರಲ್ ಆಗಿದೆ. ಅದ್ರ ಪ್ರಕಾರ, ಆಂಡ್ರಾಯ್ಡ್ ಫೋನ್ (Android Phone) ಹಾಗೂ ಐಫೋನ್ (iPhone) ಈ ಎರಡರಲ್ಲೂ ಒಂದೇ ಬಾರಿ ನೀವು ಒಂದೇ ಸ್ಥಳವನ್ನು ಬುಕ್ ಮಾಡಿದಾಗ ದರ ಮಾತ್ರ ಬೇರೆ ಬೇರೆಯಾಗಿರುತ್ತದೆ.

ಜಿಯೋ ಗ್ರಾಹಕರಿಗೆ ವರ್ಷವಿಡಿ ಅನ್‌ಲಿಮಿಟೆಡ್ 5ಜಿ ಗಿಫ್ಟ್ ವೋಚರ್ ಕೊಡುಗೆ, ಕೇವಲ 601 ರೂ!

ವ್ಯಕ್ತಿಯೊಬ್ಬರು ಐಫೋನ್ ಮತ್ತು ಆಂಡ್ರಾಯ್ಡ್ ಫೋನ್‌ನಿಂದ ಉಬರ್ ಕಂಪನಿಯ ಕ್ಯಾಬ್ ಬುಕಿಂಗ್‌ನ ಸ್ಕ್ರೀನ್‌ಶಾಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಸ್ಕ್ರೀನ್‌ಶಾಟ್ ನೋಡಿ ಬಳಕೆದಾರರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಎರಡೂ ಫೋನ್‌ಗಳಿಂದ ಬುಕ್ ಮಾಡಿದಾಗ ಕ್ಯಾಬ್‌ನ ದರವು ವಿಭಿನ್ನವಾಗಿತ್ತು.  

ಸುಧೀರ್ ಎಂಬ ವ್ಯಕ್ತಿ ತನ್ನ X ಹ್ಯಾಂಡಲ್ @seriousfunnyguy ನಲ್ಲಿ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ. ಇದರಲ್ಲಿ, ಐಫೋನ್ ಮೂಲಕ ಕ್ಯಾಬ್ ಬುಕಿಂಗ್ ಮತ್ತು ಆಂಡ್ರಾಯ್ಡ್ ಫೋನ್ ಮೂಲಕ ಕ್ಯಾಬ್ ಬುಕಿಂಗ್ ನಡುವಿನ ದರದ ವ್ಯತ್ಯಾಸವನ್ನು ತೋರಿಸಿದ್ದಾರೆ. ಸುಧೀರ್ ಐಫೋನ್ ಮೂಲಕ ಕ್ಯಾಬ್ ಬುಕ್ ಮಾಡಿದಾಗ ದರ 342 ರೂಪಾಯಿ ತೋರಿಸಿದೆ. ಅದೇ ಆಂಡ್ರಾಯ್ಡ್ ಫೋನ್ ಮೂಲಕ ಕ್ಯಾಬ್ ಬುಕ್ ಮಾಡಿದಾಗ ದರ 290 ರೂಪಾಯಿ ತೋರಿಸಿದೆ. ಒಂದು ನನ್ನ ಫೋನ್ ಮತ್ತು ಇನ್ನೊಂದು ತನ್ನ ಮಗಳ ಫೋನ್ ಎಂದು ಸುಧೀರ್ ಶೀರ್ಷಿಕೆ ಹಾಕಿದ್ದಾರೆ.

ನಾನು ಮೊದಲು ಆಂಡ್ರಾಯ್ಡ್ ಫೋನ್ ನಿಂದ ಉಬರ್ ಕ್ಯಾಬ್ ಬುಕ್ ಮಾಡಿದೆ. ಆಗ ಅದ 290 ರೂಪಾಯಿ ಎಂದು ತೋರಿಸಿತ್ತು. ಕಾರಣಾಂತರಗಳಿಂದ ನನಗೆ ಕ್ಯಾಬ್ ಬುಕ್ ಆಗ್ಲಿಲ್ಲ. ಆಗ ನಾನು ನನ್ನ ಮಗಳ ಐಫೋನ್ ಬಳಸಿ ಅದೇ ಸ್ಥಳಕ್ಕೆ ಕ್ಯಾಬ್ ಬುಕ್ ಮಾಡುವ ಪ್ರಯತ್ನ ನಡೆಸಿದ್ದೆ. ಆಗ ದರ 342 ರೂಪಾಯಿ ಎಂದು ತೋರಿಸಲಾಗಿದೆ. ಎರಡರ ಗಮ್ಯಸ್ಥಾನ ಒಂದೇ ಆಗಿದ್ದರೂ ಒಂದೇ ಕಂಪನಿಯ ದರಗಳು ಒಂದೇ ಸಮಯದಲ್ಲಿ ಹೇಗೆ ಭಿನ್ನವಾಗಿರುತ್ತವೆ ಎಂದು ಸುದೀರ್ ಕೇಳಿದ್ದಾರೆ. 

ಕ್ರಿಸ್ಮಸ್‌ ಪಾರ್ಟಿಯಲ್ಲಿ ಅಂಬಾನಿ ಸೊಸೆ ಹವಾ, ಹೊಸ ಲುಕ್‌ ನಲ್ಲಿ ಮಿಂಚಿದ ರಾಧಿಕಾ ಮರ್ಚೆಂಟ್‌

ಇವರ ಪೋಸ್ಟ್ ಗೆ ಸಾಕಷ್ಟು ಕಮೆಂಟ್ ಬಂದಿದೆ. ಅಲ್ಗಾರಿದಮ್ ಕಾರಣದಿಂದಾಗಿ ಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.  ಅಲ್ಗಾರಿದಮ್ ವಿವಿಧ ಡೇಟಾ ಪಾಯಿಂಟ್‌ಗಳ ಆಧಾರದ ಮೇಲೆ ದರವನ್ನು ನಿರ್ಧರಿಸುತ್ತದೆ. ಹೆಚ್ಚಿನ ದರಗಳನ್ನು ವಿಧಿಸುವ ಏಕೈಕ ಉದ್ದೇಶದಿಂದ ಆಪಲ್ ಫೋನ್‌ಗಳಲ್ಲಿ ಬೆಲೆ ಅಲ್ಗಾರಿದಮ್ ಪ್ರೋಗ್ರಾಂಗಳನ್ನು ಸ್ಥಾಪಿಸಲಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅನೇಕ ಕಂಪನಿಗಳು ಇದನ್ನು ಮಾಡುತ್ವೆ. ಆದ್ರೆ ಅದು ಜನಸಾಮಾನ್ಯರಿಗೆ ತಿಳಿದಿಲ್ಲ ಎಂದು ತಜ್ಞರು ಹೇಳಿದ್ದಾರೆ. ಈ ಪ್ರಕ್ರಿಯೆಯು ಸ್ವಯಂಚಾಲಿತವಾಗಿದೆ. ಗ್ರಾಹಕರ ಅನುಕೂಲ ಮತ್ತು ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ಸೇವೆಯನ್ನು ಒದಗಿಸುವುದು ಇದರ ಉದ್ದೇಶವಾಗಿದೆ ಎಂದು ಉಬರ್ ಕಂಪನಿ ಸ್ಪಷ್ಟಪಡಿಸಿದೆ.

Latest Videos
Follow Us:
Download App:
  • android
  • ios