ಹೋಟೆಲ್‌ಗಳಲ್ಲಿ ಗ್ರಾಹಕರಿಗೆ ವಿಶೇಷ ಅನುಭವ ನೀಡಲು, ಒತ್ತಡ ತಪ್ಪಿಸಲು ಮತ್ತು ಹೆಚ್ಚಿನ ವಿಶ್ರಾಂತಿ ಪಡೆಯಲು ರೂಮ್‌ಗಳಲ್ಲಿ ಗಡಿಯಾರ ಇರಿಸುವುದಿಲ್ಲ. 

ಪ್ರವಾಸದ ಸಂದರ್ಭದಲ್ಲಿ ಬಹುತೇಕರು ಹೋಟೆಲ್‌ಗಳಲ್ಲಿ ಉಳಿದುಕೊಂಡಿರುತ್ತಾರೆ. ಪ್ರವಾಸಿ ಸ್ಥಳ, ತೀರ್ಥಕ್ಷೇತ್ರ, ಮಹಾನಗರಗಳಲ್ಲಿ ಹೋಟೆಲ್ ಉದ್ಯಮ ಒಳ್ಳೆಯ ವ್ಯವಹಾರವಾಗಿದೆ. ನೀವು ನೀಡುವ ಹಣದ ಆಧಾರದ ಮೇಲೆ ಹೋಟೆಲ್‌ನಲ್ಲಿ ನಿಮಗೆ ಸೌಲಭ್ಯಗಳು ಸಿಗುತ್ತವೆ. ಹೋಟೆಲ್‌ ರೂಮ್‌ಗಳಲ್ಲಿಂದು ಟಿವಿ, ಸ್ವಚ್ಛ ಹಾಸಿಗೆ, ಟೆಲಿಫೋನ್, ಫ್ಯಾನ್, ಎಸಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತದೆ. ಆದರೆ ಹೋಟೆಲ್ ರೂಮ್‌ಗಳಲ್ಲಿ ಗಡಿಯಾರ ಹಾಕಿರಲ್ಲ. ಹೋಟೆಲ್‌ನಲ್ಲಿ ಉಳಿದುಕೊಂಡಾಗ ಇದು ನಿಮ್ಮ ಗಮನಕ್ಕೂ ಬಂದಿರುತ್ತದೆ.

ಹಲವು ಸೌಲಭ್ಯಗಳನ್ನು ನೀಡುವ ಹೋಟೆಲ್‌ಗಳಿಗೆ ಪುಟ್ಟ ಗಡಿಯಾರ ಇರಿಸೋದು ದುಬಾರಿಯಾಗಲ್ಲ. ಆದರೂ ಹೋಟೆಲ್ ಮಾಲೀಕರು ಗಡಿಯಾರ ಅಥವಾ ಪುಟ್ಟ ಅಲಾರಂ ಸಹ ಕೋಣೆಯಲ್ಲಿ ಇರಿಸಲ್ಲ. ಈ ನಿರ್ಧಾರ ಯಾಕೆ ಎಂಬುದನ್ನು ಹೋಟೆಲ್ ಮಾಲೀಕರೇ ಹೇಳುತ್ತಾರೆ.

ಮನೆಯ ಅನುಭವಕ್ಕಿಂತ ಭಿನ್ನ

ಹೋಟೆಲ್ ಮಾಲೀಕರು ತಮ್ಮ ಗ್ರಾಹಕರಿಗೆ ವಿಶೇಷ ಅನುಭವ ನೀಡಲು ಪ್ರಯತ್ನಿಸುತ್ತಾರೆ. ಹೋಟೆಲ್‌ ವಾಸ್ತವ್ಯ ಮನೆಗಿಂತ ಭಿನ್ನವಾಗಿರಬೇಕು. ಹಾಗಾಗಿ ಮನೆಯಲ್ಲಿರುವ ಸಾಮಾನ್ಯ ವಸ್ತುಗಳನ್ನು ಹೋಟೆಲ್‌ನಲ್ಲಿಡಲ್ಲ. ಹೋಟೆಲ್‌ನಲ್ಲಿ ಉಳಿಯುವ ಮುಖ್ಯ ಉದ್ದೇಶ ಸೌಕರ್ಯ ಮತ್ತು ವಿಶ್ರಾಂತಿಯಾಗಿರುತ್ತದೆ. ಒಂದು ವೇಳೆ ಕೋಣೆಯಲ್ಲಿ ಗಡಿಯಾರವಿದ್ರರೆ ಅದನ್ನು ನೋಡಿದಾಗ ಮನಸ್ಸಿನಲ್ಲಿ ಮುಂದಿನ ಕೆಲಸಗಳು ನೆನಪಿಗೆ ಬರುತ್ತವೆ. ವಿಶ್ರಾಂತಿಗೆ ಬಂದಿರುವ ಗ್ರಾಹಕರು ಒತ್ತಡದಲ್ಲಿದಂತೆ ಆಗುತ್ತದೆ.

ಮುಕ್ತವಾಗಿ ಬಯಸಿದಷ್ಟು ಕಾಲ ವಿಶ್ರಾಂತಿ

ಗಡಿಯಾರ ನೋಡುತ್ತಿದ್ದರೆ ಯಾವಾಗ ಎಚ್ಚರಗೊಳ್ಳಬೇಕು, ಯಾವಾಗ ಹೊರಡಬೇಕು, ಸಭೆ ಯಾವಾಗ, ಬಸ್ ಸಮಯ ಯಾವಾಗ ಎಂಬಿತ್ಯಾದಿ ಪ್ರಶ್ನೆಗಳು ಗ್ರಾಹಕರನ್ನು ಕಾಡುತ್ತಿರುತ್ತವೆ. ಸಾಮಾನ್ಯವಾಗಿ ಗಡಿಯಾರ ನೋಡಿದಾಗ ಇಂತಹ ಪ್ರಶ್ನೆಗಳು ಎಲ್ಲರ ಮನದಲ್ಲಿ ಬರುತ್ತವೆ. ಹೋಟೆಲ್ ಮಾಲೀಕರು ಈ ಒತ್ತಡವನ್ನು ತೆಗೆದುಹಾಕಲು ಬಯಸೋದರಿಂದ ಕೋಣೆಯಲ್ಲಿ ಗಡಿಯಾರ ಇರಿಸಲ್ಲ. ಇದರಿಂದ ಗ್ರಾಹಕರ ಮುಕ್ತವಾಗಿ ಬಯಸಿದಷ್ಟು ಕಾಲ ವಿಶ್ರಾಂತಿ ಪಡೆಯಬಹುದು.

ದಿನನಿತ್ಯದ ಲೈಫ್‌ಸ್ಟೈಲ್‌ನಲ್ಲಿ ಬದಲಾವಣೆ

ಗಡಿಯಾರವಿಲ್ಲದ ಕಾರಣ ಗ್ರಾಹಕರು ನಿಧಾನವಾಗಿ ನಿದ್ದೆಯಿಂದ ಏಳಬಹುದು. ಹಾಗೆಯೇ ಸಮಯ ನೋಡುತ್ತಿದ್ರೆ ಇದು ತಿಂಡಿ, ಊಟದ ಸಮಯ ಅಂತ ಗೊತ್ತಾಗುತ್ತಲೇ ಹಸಿವಿನ ಅನುಭವ ಉಂಟಾಗುತ್ತದೆ. ಹೀಗಾದ್ರೆ ಪ್ರತಿದಿನದ ಜೀವನಶೈಲಿಯಂತೆ ಹೋಟೆಲ್‌ನಲ್ಲಿರುವ ದಿನವಾಗುತ್ತದೆ. ಹೋಟೆಲ್ ಮತ್ತು ಮನೆಯಲ್ಲಿರುವ ನಡುವೆ ಯಾವುದೇ ವ್ಯತ್ಯಾಸವಿರಲ್ಲ. ಗಡಿಯಾರ ಇಲ್ಲದಿದ್ರೆ ಎಚ್ಚರಗೊಂಡು ತಮ್ಮ ದಿನವನ್ನು ತಮ್ಮದೇ ಆದ ವೇಗದಲ್ಲಿ ಪ್ರಾರಂಭಿಸುತ್ತಾರೆ ಮತ್ತು ಯಾವುದೇ ವೇಳಾಪಟ್ಟಿಯ ಅವಶ್ಯಕತೆ ಇರಲ್ಲ. ಹೋಟೆಲ್‌ನಲ್ಲಿ ಹೆಚ್ಚು ಸಮಯ ಆನಂದಿಸಲು ಈ ಟ್ರಿಕ್ ಸಹಾಯ ಮಾಡುತ್ತದೆ.

ಹೋಟೆಲ್ ಆದಾಯದಲ್ಲಿ ಹೆಚ್ಚಳ

ಗಡಿಯಾರ ಇರಿಸೋದರ ಹಿಂದಿನ ಮತ್ತೊಂದು ಉದ್ದೇಶ ಹೋಟೆಲ್ ಆದಾಯ. ನಿದ್ದೆಯಲ್ಲಿ ಗಡಿಯಾರ ಕಾಣಿಸುತ್ತಿದ್ದಂತೆ ನಾನು ಇಷ್ಟು ಸಮಯಕ್ಕೆ ಚೆಕ್‌ಔಟ್ ಆಗಬೇಕು ಎಂಬ ಯೋಚನೆ ಬರುತ್ತದೆ. ಇದರಿಂದ ಗ್ರಾಹಕರು ಸರಿಯಾದ ಸಮಯಕ್ಕೆ ಹೋಟೆಲ್‌ನಿಂದ ಹೊರಡುತ್ತಾರೆ. ಗಡಿಯಾರ ಇರದಿದ್ದರೆ ಗ್ರಾಹಕರು ಹೆಚ್ಚು ನಿದ್ದೆ ಮಾಡಿ, ಹೆಚ್ಚಿನ ಅವಧಿ ಹೋಟೆಲ್‌ನಲ್ಲಿ ಉಳಿಯುವಂತಾಗುತ್ತದೆ. ಇದರಿಂದ ಹೋಟೆಲ್ ಆದಾಯ ಏರಿಕೆಯಾಗುತ್ತೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ.

ಇದು ಡಿಜಿಟಲ್ ಯುಗ, ಗಡಿಯಾರ ಏಕೆ?

ಇದು ಡಿಜಿಟಲ್ ಯುಗವಾಗಿದ್ದು, ಹೋಟೆಲ್‌ನಲ್ಲಿ ಗಡಿಯಾರದ ಅವಶ್ಯಕತೆ ಇಲ್ಲ ಎಂದು ಕೆಲವರು ಹೇಳಬಹುದು. ಕೈಯಲ್ಲಿ ಮೊಬೈಲ್ ಇರುತ್ತೆ, ಅಲ್ಲಿಯೇ ಸಮಯ ನೋಡಬಹುದು ಮತ್ತು ಅಲಾರಂ ಸಹ ಸೆಟ್ ಮಾಡಿಕೊಳ್ಳಬಹುದು ಒಂದಿಷ್ಟು ಜನ ಹೇಳ್ತಾರೆ. ಆದ್ರೆ ಗೋಡೆಯಲ್ಲಿನ ಗಡಿಯಾರ ನೀಡುವ ಅನುಭವ ಮತ್ತು ಅದನ್ನು ನೋಡಿದ ನಂತರ ಮನಸ್ಸಿನಲ್ಲಿ ಬರುವ ಯೋಚನೆಗಳು ತುಂಬಾ ಭಿನ್ನವಾಗಿರುತ್ತವೆ. ಗೋಡೆ ಗಡಿಯಾರ ಮನೆಯ ಅನುಭವ ನೀಡುತ್ತೆ ಅನ್ನೋ ವಾದವಿದೆ.