Asianet Suvarna News Asianet Suvarna News

ಪ್ರವಾಸಿಗರ ಅಚ್ಚುಮೆಚ್ಚಿನ ಪ್ರವಾಸಿ ತಾಣ ವಿಯೆಟ್ನಾಂ ಮುಡಿಗೆ ಮತ್ತೊಂದು ಗರಿ!

ಭಾರತೀಯ ಪ್ರವಾಸಿಗರ ಮೊದಲ ಆಯ್ಕೆ ವಿಯೆಟ್ನಾಂ ಅಂದ್ರೆ ತಪ್ಪಾಗೋದಿಲ್ಲ. ಅಗ್ಗದ ಬಜೆಟ್ ನಲ್ಲಿ ಪ್ರಯಾಣ ಬೆಳೆಸಬಹುದಾದ, ಸುಂದರ ತಾಣವಾದ ವಿಯೆಟ್ನಾಂ, ಜಾಗತಿಕ ಪ್ರವಾಸೋದ್ಯಮ ವಲಯದಲ್ಲಿ ಮತ್ತಷ್ಟು ಎತ್ತರಕ್ಕೆ ಏರಿದೆ.

Vietnam Bags The Prestigious Title Of The Worlds Leading Heritage Destination roo
Author
First Published Feb 15, 2024, 3:12 PM IST

ವಿಯೆಟ್ನಾಂ ವಿಶ್ವದ ಪ್ರಮುಖ ಪರಂಪರೆಯ ತಾಣ 2023 ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವಿಶ್ವ ಪ್ರವಾಸ ಪ್ರಶಸ್ತಿಗಳಲ್ಲಿ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದುಕೊಳ್ಳುವ ಮೂಲಕ ವಿಶ್ವದ ಪ್ರಮುಖ ಪರಂಪರೆಯ ತಾಣವಾಗಿ ಜಾಗತಿಕ ಮನ್ನಣೆಯನ್ನು ಪಡೆದಿದೆ. ಪರ್ವತಗಳು, ಕಾಡುಗಳು ಮತ್ತು ದ್ವೀಪಗಳ ನೈಸರ್ಗಿಕ ಭೂದೃಶ್ಯಗಳಲ್ಲದೆ  ವಿಯೆಟ್ನಾಂನ ಸಾಂಸ್ಕೃತಿಕ ಪರಂಪರೆಯು ಅಸಂಖ್ಯಾತ ಪ್ರವಾಸಿಗರನ್ನು ಆಕರ್ಷಿಸುತ್ತದೆ.  

ನೀಲಿ ಸಮುದ್ರ, ಸಣ್ಣ ಪರ್ವತಗಳು ಮತ್ತು ಸುತ್ತಲೂ ಹಚ್ಚ ಹಸಿರಿನ ಭತ್ತದ ಗದ್ದೆಗಳಿಂದ ಕೂಡಿರುವ ಪುಟ್ಟ ದೇಶವಾದ ವಿಯೆಟ್ನಾಂ (Vietnam) ತುಂಬಾ ಸುಂದರವಾಗಿ ಕಾಣುತ್ತದೆ. ವಿಯೆಟ್ನಾಂ ಅನ್ನು ಪ್ರವಾಸಿಗರ ಸ್ವರ್ಗ ಎಂದೇ ಕರೆಯಬಹುದು. ವಿಯೆಟ್ನಾಂ ಅತ್ಯಂತ ಶಾಂತಿಯುತ ಮತ್ತು ಸುಂದರವಾದ ದೇಶವಾಗಿದ್ದು, ಭಾರತೀಯ (Indian) ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಇದರ ಹಿಂದಿನ ಮುಖ್ಯ ಕಾರಣವೆಂದರೆ ವಿಯೆಟ್ನಾಂ ಅತ್ಯಂತ ಅಗ್ಗದ ಪ್ರವಾಸಿ (Tourist) ಸ್ಥಳವಾಗಿದೆ. ವೀಸಾ ಇಲ್ಲದೆ ಭಾರತೀಯರು ಈ ದೇಶಕ್ಕೆ ಪ್ರಯಾಣ ಬೆಳೆಸಬಹುದಾಗಿದೆ. 2023 ರಲ್ಲಿ ಭಾರತೀಯರು ಅತಿ ಹೆಚ್ಚು ಸರ್ಜ್ ಮಾಡಿದ ಪ್ರವಾಸಿ ತಾಣ ವಿಯೆಟ್ನಾಂ. ಕಡಿಮೆ ಖರ್ಚಿನಲ್ಲಿ ನೀವು ಪ್ರವಾಸ ಮುಗಿಸಬಹುದು. 1 ರಿಂದ 2 ಲಕ್ಷಕ್ಕೆ ವಿಯೆಟ್ನಾಂ ಪ್ರವಾಸವನ್ನು ನೀವು ಆನಂದಿಸಬಹುದು. ವಿಯೆಟ್ನಾಂ ಎಲ್ಲ ಪ್ರವಾಸಿಗರನ್ನು ಸೆಳೆಯುತ್ತದೆ. ಸಮುದ್ರದಲ್ಲಿ ಮೋಜು ಮಾಡಲು ಅವಕಾಶವಿದೆ. ಕಾಡಿನಲ್ಲಿ ಪ್ರವಾಸ ಕೈಗೊಳ್ಳಲೂ ಇಲ್ಲಿ ಅವಕಾಶವಿದೆ. ಸಾಹಸಿಗಳ ಅಚ್ಚುಮೆಚ್ಚಿನ ಜಾಗ ವಿಯೆಟ್ನಾಂ. 

ಸ್ವರ್ಗದಂತಹ ಈ ಸುಂದರ ಸ್ಥಳದಲ್ಲಿ ಹುಟ್ಟೋದು, ಸಾಯೋದು ಎರಡೂ ಕಾನೂನು ಬಾಹಿರ!

ಡಿಜಿಟಲ್ ಕ್ಷೇತ್ರದ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ದೇಶವು ತನ್ನ ಪ್ರಯಾಣ ಕ್ಷೇತ್ರದಲ್ಲಿ ಕ್ರಾಂತಿ ಉಂಟು ಮಾಡುವ ಗುರಿಯನ್ನು ಹೊಂದಿದೆ. ಈಗ ವಿಯೆಟ್ನಾಂ ಮುಡಿಗೆ ಸಿಕ್ಕಿರುವ ಈ ಗರಿ, ಜಾಗತಿಕ ಪ್ರವಾಸೋದ್ಯಮ ವಲಯದಲ್ಲಿ ವಿಯೆಟ್ನಾಂನ ಸ್ಥಾನವನ್ನು ಮತ್ತಷ್ಟು ಎತ್ತರಕ್ಕೆ ಏರಿಸಿದೆ. ಅದರ ವಿಶಿಷ್ಟ ಸಾಂಸ್ಕೃತಿಕ ಕೊಡುಗೆ ಮತ್ತು ಐತಿಹಾಸಿಕ ಮಹತ್ವವನ್ನು ಒತ್ತಿಹೇಳುತ್ತದೆ. 

ಸಂಗಾತಿ ಜತೆ ಈ ದೇವಾಲಯಕ್ಕೆ ಹೋಗಿ ಪ್ರಾರ್ಥಿಸಿದ್ರೆ ಏಳು ಜನ್ಮದಲ್ಲೂ ಜೊತೆಯಾಗುತ್ತಾರಂತೆ

ಪ್ರವಾಸಿಗರಿಗೆ ನೋಡಲು ವಿಯೆಟ್ನಾಂನಲ್ಲಿ ಏನಿದೆ? : ವಿಯೆಟ್ನಾಂ, ಇತಿಹಾಸ, ಸಂಸ್ಕೃತಿ ಮತ್ತು ನೈಸರ್ಗಿಕ ಸೌಂದರ್ಯದಿಂದ ಸಮೃದ್ಧವಾಗಿರುವ ದೇಶ.  ಹನೋಯಿಯ ಗದ್ದಲದ ಬೀದಿಗಳಿಂದ ಹಾ ಲಾಂಗ್ ಕೊಲ್ಲಿಯ ಶಾಂತ ನೀರಿನವರೆಗೆ, ವಿಯೆಟ್ನಾಂ ಪ್ರವಾಸಿಗರಿಗೆ ಹಲವಾರು ಅನುಭವಗಳನ್ನು ನೀಡುತ್ತದೆ. ಅದರ ಪುರಾತನ ದೇವಾಲಯಗಳು, ಗದ್ದಲದ ಮಾರುಕಟ್ಟೆಗಳು ಮತ್ತು ಸೊಂಪಾದ ಭತ್ತದ ಗದ್ದೆಗಳು ಹಿಂದಿನ ಗತಕಾಲದ ನೋಟವನ್ನು ನೀಡುತ್ತದೆ. 

ವಿಯೆಟ್ನಾಂನ ಅತ್ಯಂತ ಸುಂದರವಾದ ಸ್ಥಳ ಹ್ಯಾಲೊಂಗ್ ಬೇ. ಈ ಪ್ರಸಿದ್ಧ ಪ್ರವಾಸಿ ಸ್ಥಳವನ್ನು 'ಬೇ ಆಫ್ ಡಿಸೆಂಡಿಂಗ್ ಡ್ರ್ಯಾಗನ್' ಎಂದೂ ಕರೆಯುತ್ತಾರೆ. ಎಲ್ಲಾ ಕಡೆಗಳಲ್ಲಿ ಸಣ್ಣ ಪರ್ವತಗಳಿಂದ ಆವೃತವಾಗಿರುವ ನೀಲಿ ಸಮುದ್ರವು ನಿಮ್ಮನ್ನು ಸಂಪೂರ್ಣವಾಗಿ ರಿಫ್ರೆಶ್ ಮಾಡುತ್ತದೆ. ವಿಯೆಟ್ನಾಂನ ರಾಜಧಾನಿ ಹನೋಯಿ. ಕೆಂಪು ನದಿಯ ದಡದಲ್ಲಿರುವ ಈ ನಗರವು ವಿಶ್ವದ ಅತ್ಯಂತ ಹಳೆಯ ನಗರಗಳಲ್ಲಿ ಒಂದಾಗಿದೆ. ಇಲ್ಲಿನ ಕಟ್ಟಡಗಳು, ಗೋಲ್ಡನ್ ಪಗೋಡಗಳು, ವಸ್ತುಸಂಗ್ರಹಾಲಯಗಳು ಮತ್ತು ಸಾಂಪ್ರದಾಯಿಕ ಮಾರುಕಟ್ಟೆ ಪ್ರವಾಸಿಗರಿಗೆ ಹತ್ತಿರವಾಗುತ್ತದೆ. ವಿಯೆಟ್ನಾಂನ ಹೋಯಿ ಆನ್-ಹೊಯಿ ಆನ್ ಏಷ್ಯಾದ ಅತ್ಯಂತ ಹಳೆಯ ನಗರಗಳಲ್ಲಿ ಒಂದಾಗಿದೆ . ಹಾ ಗಿಯಾಂಗ್ ವಿಯೆಟ್ನಾಂನ ಅತ್ಯಂತ ಸುಂದರವಾದ ಸ್ಥಳ. ಅದರ ಸೌಂದರ್ಯವನ್ನು ಪದಗಳಲ್ಲಿ ವಿವರಿಸೋದು ಕಷ್ಟ. ಹಾ ಗಿಯಾಂಗ್ ನಗರದ ತಾಜಾ ಗಾಳಿ ಮತ್ತು ಪರ್ವತಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. 

ಪ್ರವಾಸಿ ತಾಣಗಳಿಗೆ ಮಾತ್ರವಲ್ಲ ವಿಯೆಟ್ನಾಂ ಆಹಾರದ ವಿಷ್ಯದಲ್ಲೂ ಪ್ರವಾಸಿಗರನ್ನು ಸೆಳೆಯುತ್ತದೆ. ವಿಯೆಟ್ನಾಮೀಸ್ ಆಹಾರವು ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಫೋ ನ ಬಿಸಿ ಬಟ್ಟಲ ಸವಿ ಇರಬಹುದು ಅಥವ ಕುರುಕುಲಾದ ಬಾನ್‌ಮೈ ರುಚಿ ಇರಲಿ ಎಲ್ಲವೂ ಪ್ರವಾಸಿಗರಿಗೆ ಇಷ್ಟವಾಗುತ್ತದೆ.   

Follow Us:
Download App:
  • android
  • ios