ಸಂಗಾತಿ ಜತೆ ಈ ದೇವಾಲಯಕ್ಕೆ ಹೋಗಿ ಪ್ರಾರ್ಥಿಸಿದ್ರೆ ಏಳು ಜನ್ಮದಲ್ಲೂ ಜೊತೆಯಾಗುತ್ತಾರಂತೆ
ಪ್ರೇಮಿಗಳ ದಿನದಂದು, ನಿಮ್ಮ ಸಂಗಾತಿಯೊಂದಿಗೆ ಈ ಅಪರೂಪದ ಶಿವಲಿಂಗದ ಮುಂದೆ ತಲೆ ಬಾಗಿಸಿ ನಮಸ್ಕರಿಸಿದರೆ, ದೇವರ ಅಶೀರ್ವಾದದಿಂದ ನೀವು ಆದಷ್ಟು ಬೇಗನೆ ಸತಿಪತಿಗಳಾಗುತ್ತೀರಂತೆ. ಅಂತಹ ಶಿವಲಿಂಗ ಎಲ್ಲಿದೆ ಅದರ ಬಗ್ಗೆ ತಿಳಿಯೋಣ
ವ್ಯಾಲೆಂಟೈನ್ಸ್ ಡೇ ಇನ್ನೇನು ಬರುತ್ತಿದೆ, ಆ ದಿನ ನೀವು ಸಂಗಾತಿ ಜೊತೆ ಯಾವುದಾದರು ಸ್ಪೆಷಲ್ ಸ್ಥಳಕ್ಕೆ ಹೋಗಿ ಅಲ್ಲಿ ಅವರೊಂದಿಗೆ ಸಮಯ ಕಳೆಯೋದಕ್ಕೆ ಇಷ್ಟಪಡುತ್ತೀರಿ ಅಲ್ವಾ? ನೀವು ನಿಮ್ಮ ಸಂಗಾತಿಯೊಂದಿಗೆ ಏಳು ಜನ್ಮಗಳು ಜೊತೆಯಾಗಿರಲು ಬಯಸಿದರೆ ನೀವು ಈ ಶಿವನ ದೇಗುಲಕ್ಕೆ (Shiva Temple) ಭೇಟಿ ನೀಡಲೇಬೇಕು. ಅಲ್ಲೇನಿದೆ ವಿಶೇಷತೆ ಅನ್ನೋದನ್ನು ನಾವು ನಿಮಗೆ ಹೇಳ್ತೀವಿ ಕೇಳಿ.
ಜಾರ್ಖಂಡ್ ನಲ್ಲಿ ಅಪರೂಪದ ಶಿವಲಿಂಗದ ದೇವಾಲಯವಿದೆ. ಇಲ್ಲಿ ತಲೆ ಬಾಗಿ ನಮಸ್ಕರಿಸಿದರೆ ಅಥವಾ ದೇವರನ್ನು ಬೇಡಿಕೊಂಡರೆ, ಆ ಜನರ ಇಷ್ಟಾರ್ಥಗಳೆಲ್ಲ ಈಡೇರುತ್ತದೆ ಎಂದು ನಂಬಲಾಗಿದೆ. ಈ ಜ್ಯೋತಿರ್ಲಿಂಗವನ್ನು ಮಾನಸ ಸರೋವರ ಮತ್ತು ಅಮರನಾಥದ ನಂತರ ಮೂರನೇ ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ.
shivling
ಝಾರ್ಖಂಡ್ ನ ಪಲಮು ಗರ್ಹ್ವಾ ಗಡಿಯಲ್ಲಿರುವ ಈ ಅಪರೂಪದ ಶಿವಲಿಂಗವನ್ನು ಖೊನ್ಹರ್ನಾಥ್ ಬಾಬಾ (Khonhar Baba Temple)ಎಂದು ಕರೆಯಲಾಗುತ್ತದೆ. ತಮ್ಮ ಪೂರ್ವಜರು 500 ವರ್ಷಗಳಿಂದ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ ಎಂದು ದೇವಾಲಯದ ಅರ್ಚಕ ಸಂತೋಷ್ ಬಾಬಾ ಹೇಳಿದ್ದಾರೆ. ಇಲ್ಲಿ ಶಿವನು ಗಂಗಾ ಮಾತೆಯೊಂದಿಗೆ ಸ್ಪಷ್ಟ ರೂಪದಲ್ಲಿ ಕುಳಿತಿದ್ದಾನೆ. ಈ ದೇವಾಲಯದ ಪ್ರಾಮುಖ್ಯತೆ ಎಷ್ಟಿದೆಯೆಂದರೆ ಭಕ್ತರ ಪ್ರತಿಯೊಂದು ಆಸೆಯೂ ಇಲ್ಲಿ ಈಡೇರುತ್ತದೆ. ಈ ಪ್ರೇಮಿಯಂದು, ದಂಪತಿಗಳು ಈ ದೇವಾಲಯಕ್ಕೆ ಬಂದು ಬೇಡಿಕೊಂಡರೆ ಅವರ ಆಸೆಯೂ ಈಡೇರುತ್ತಂತೆ.
ನೀವು ಇಷ್ಟಪಡುತ್ತಿರುವ ವ್ಯಕ್ತಿಯ ಜೊತೆ ಏಳೇಳು ಜನ್ಮದಲ್ಲೂ ಜೊತೆಯಾಗಿರಲು ಬಯಸಿದ್ರೆ, ಅಥವಾ ನಿಮ್ಮ ವೈವಾಹಿಕ ಜೀವನವನ್ನು ಸಂತೋಷಕರವಾಗಿಸಲು ಬಯಸಿದರೆ, ಈ ದೇವಾಲಯದಲ್ಲಿ ನಮಸ್ಕರಿಸುವ ಮೂಲಕ, ದೇವರಲ್ಲಿ ಬೇಡಿಕೊಂಡರೆ, ಆ ಸಂಬಂಧ ಅನೇಕ ಜನ್ಮಗಳವರೆಗೆ ಸಂಬಂಧವನ್ನು ಗಟ್ಟಿಯಾಗಿರಿಸುತ್ತೆ.
ತಾಯಿ ಗಂಗಾ ಕೂಡ ಶಿವನೊಂದಿಗೆ ಕುಳಿತಿದ್ದಾಳೆ: ಭಗವಾನ್ ಭೋಲೆನಾಥನು ಗಂಗಾ ಮಾತೆಯೊಂದಿಗೆ ಸುತ್ತಲೂ ಬಂಡೆಗಳ ನಡುವೆ ಲಿಂಗ ರೂಪದಲ್ಲಿ ಕುಳಿತಿದ್ದಾನೆ. ಇಲ್ಲಿನ ಪೂಜಾರಿಗಳು ಹೇಳುವಂತೆ ಅವರ ಪೂರ್ವಜರು ಇಲ್ಲಿಯವರೆಗೆ ಹತ್ತು ತಲೆಮಾರುಗಳಿಂದ ಈ ದೇವಾಲಯದಲ್ಲಿ ಪೂಜಿಸುತ್ತಿದ್ದಾರೆ. ಈ ದೇವಾಲಯವು ವಿಶ್ವದ ಮೂರನೇ ವಿಶಿಷ್ಟ ಜ್ಯೋತಿರ್ಲಿಂಗವಾಗಿದ್ದು (jyothirlinga), ಇದು ಖೋನ್ಹರ್ನಾಥ್ ದೇವಾಲಯ ಎಂದು ಪ್ರಸಿದ್ಧವಾಗಿದೆ,
ಮಾನಸ ಸರೋವರ ಮತ್ತು ಅಮರನಾಥದ ನಂತರ ಮೂರನೇ ವಿಶಿಷ್ಟ ಜ್ಯೋತಿರ್ಲಿಂಗ ಇದಾಗಿದೆ. ಕೇರಳ ಮತ್ತು ದೆಹಲಿಯಿಂದ ಜನರು ಇಲ್ಲಿಗೆ ಬಂದು ಏಳು ಬಾರಿ ಪ್ರದಕ್ಷಿಣೆ ಹಾಕುವ ಮೂಲಕ ದೇವರನ್ನು ಬೇಡಿಕೊಳ್ಳುತ್ತಾರೆ. ಇದಲ್ಲದೇ, ಜನರು ಇಲ್ಲಿಗೆ ಬಂದು ತಮ್ಮ ಸಂತೋಷ ಮತ್ತು ಸಮೃದ್ಧ ಜೀವನಕ್ಕಾಗಿ ಭಗವಾನ್ ಭೋಲೆನಾಥನನ್ನು ಪೂಜಿಸುತ್ತಾರೆ. ನೀವು ನಿಮ್ಮ ಸಂಗಾತಿ ಜೊತೆ ಏಳು ಜನ್ಮ ಜೊತೆಯಾಗಿ ಬಾಳಬೇಕೆಂದು ಬಯಸಿದ್ರೆ ಅಲ್ಲಿ ಹೋಗೋದು ಉತ್ತಮ.
ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಏಕತೆಗೆ ಈ ಖೊನ್ಹಾರ್ ನಾಥ್ ದೇವಾಲಯ ಸಾಕ್ಷಿಯಾಗಿದೆ. ಹಲವು ವರ್ಷಗಳ ಹಿಂದೆ ಜನರು ದೇವಾಲಯವನ್ನು ತಲುಪಲು ಹೊಲಗಳು ಮತ್ತು ಕಲ್ಲು ಮುಳ್ಳು ಹಾದಿಗಳ ಮೂಲಕ ಹಾದುಹೋಗುತ್ತಿದ್ದರೆ, ಆದರೆ ನಂತರ ಗ್ರಾಮದ ಮುಸ್ಲಿಮರು ಸ್ವತಃ ಕ್ರಮ ಕೈಗೊಂಡು ರಸ್ತೆ ನಿರ್ಮಾಣಕ್ಕೆ ಭೂಮಿಯನ್ನು ನೀಡಿ, ರಸ್ತೆ ನಿರ್ಮಾಣ ಕಾರ್ಯ ಕೂಡ ಮಾಡಿದರು. ಇಂದು ಜನರು ಈ ರಸ್ತೆಯ ಮೂಲಕ ಖೋನ್ಹಾರ್ ನಾಥ್ ದೇವಾಲಯವನ್ನು ತಲುಪುತ್ತಾರೆ. ಅಲ್ಲದೆ, ಮುಸ್ಲಿಮರು ಸಹ ಈ ದೇವಾಲಯದ ಮೇಲೆ ಆಳವಾದ ನಂಬಿಕೆಯನ್ನು ಹೊಂದಿದ್ದಾರೆ ಎಂದು ಜನರು ಹೇಳುತ್ತಾರೆ. (file photos)